32.7 C
Karnataka
Sunday, April 20, 2025
    Home Blog Page 13

    ಗುರುರಾಘವೇಂದ್ರ ಸಹಕಾರ ಬ್ಯಾಂಕ್‌: ಸಾಲ ಮರುಪಾವತಿ ಮಾಡುವವರಿಗೆ 10 ದಿನದೊಳಗೆ ದಾಖಲೆ ವಾಪಸ್: ಸಚಿವ ಎಸ್.ಟಿ.ಸೋಮಶೇಖರ್

    BENGALURU AUG 17

    ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್‌ ನಲ್ಲಿ ಸಾಲ ಪಡೆದುಕೊಂಡವರು ಸಾಲ ಮರುಪಾವತಿ ಮಾಡಿದ 10 ದಿನದೊಳಗೆ ಅವರ ಆಸ್ತಿ ಪತ್ರದ ದಾಖಲೆಗಳನ್ನು ನೀಡುವ ಬಗ್ಗೆ ಸಮಿತಿ ಸಭೆಯಲ್ಲಿ ತೀರ್ಮಾನವಾಗಿದೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.

    ವಿಕಾಸಸೌಧದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್‌ ನಲ್ಲಿನ ಅವ್ಯವಹಾರಗಳ ಕುರಿತ ತನಿಖಾ ಪ್ರಗತಿ ಹಾಗೂ ಪುನಶ್ಚೇತನ ಕುರಿತು ಪರಾಮರ್ಶಿಸಲು ಇಂದು ಸಭೆ ನಡೆಸಲಾಯಿತು. ಸಂಸದರಾದ ತೇಜಸ್ವಿ ಸೂರ್ಯ, ಶಾಸಕರಾದ ರವಿಸುಬ್ರಹ್ಮಣ್ಯ ಅವರು ಸಾಕಷ್ಟು ಸಲಹೆಗಳನ್ನು ಕೊಟ್ಟಿದ್ದಾರೆ. ಗುರುರಾಘವೇಂದ್ರ ಕೋಆಪರೇಟಿವ್ ಬ್ಯಾಂಕ್ ನಲ್ಲಿ 1294 ಕೋಟಿ ರೂ. ವಂಚನೆ ಆಗಿರುವುದು ಆಡಿಟ್ ನಿಂದ ತಿಳಿದುಬಂದಿದೆ ಎಂದರು.

    ಗುರುರಾಘವೇಂದ್ರ ಕೋಆಪರೇಟಿವ್ ಬ್ಯಾಂಕ್ ನಲ್ಲಿ ಸಾಲ ಮರುಪಾವತಿ ಮಾಡಲು ಇಚ್ಚಿಸುವವರಿಗೆ ದಾಖಲೆಗಳನ್ನು ಹಿಂದಿರುಗಿಸಲು ವಿಳಂಬವಾಗುತ್ತಿರುವ ಸಂಬಂಧ ಆಡಳಿತಾಧಿಕಾರಿ, ಆರ್ ಬಿಐ, ಸಿಒಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು. ಸಾಲ ಮರುಪಾವತಿ ಮಾಡುವವರಿಗೆ 10 ದಿನಗಳ ಒಳಗೆ ದಾಖಲೆ ನೀಡಲು ಸಮಿತಿ ಸಭೆಯಲ್ಲಿ ತೀರ್ಮಾನ ಮಾಡಲಾಯಿತು ಎಂದು ಹೇಳಿದರು.

    ಸಾಲ ಪಡೆದವರ ಎಲ್ಲಾ ದಾಖಲೆ ಇಡಿ ಬಳಿ ಇದೆ. ಸಿಒಡಿ ತನಿಖೆ ನಡೆಯುತ್ತಿರುವುದರಿಂದ ದಾಖಲೆ ನೀಡಲು ವಿಳಂಬವಾಗುತ್ತದೆ ಎಂದು ಹಣ ಪಾವತಿಗೆ ಸಾಲಗಾರರ ಹಿಂದೇಟು ಹಾಕಬಹುದು. ಆದರೆ ಸಾಲ ಮರುಪಾವತಿ ಮಾಡುವವರಿಗೆ ದಾಖಲೆ ನೀಡುವ ಬಗ್ಗೆ ಚರ್ಚೆ ಮಾಡಲಾಯಿತು. ಇಡಿಗೆ 15 ದಿನಗಳೊಳಗೆ ಸಂಪೂರ್ಣ ಮಾಹಿತಿಯನ್ನು ಅಧಿಕಾರಿಗಳು ಸಲ್ಲಿಕೆ ಮಾಡಲಿದ್ದಾರೆ. ಸಾಲ ವಸೂಲಾತಿ ಬಗ್ಗೆ ಕೂಡ ಗಂಭೀರ ಚರ್ಚೆಯಾಗಿದೆ. ಸೆ.5ಕ್ಕೆ ಮತ್ತೆ ಸಭೆ ಸೇರಿ ಏನೆಲ್ಲಾ ಪ್ರಗತಿಯಾಗಿದೆ ಎಂಬುದರ ಕುರಿತು ಪರಾಮರ್ಶೆ ಮಾಡಲಾಗುವುದು ಎಂದು ಹೇಳಿದರು.

    ವಶಿಷ್ಠ ಸೌಹಾರ್ದ ಸಹಕಾರಿ ಯಲ್ಲಿ 282 ಕೋಟಿ ವಂಚನೆ ಆಗಿದೆ. ಸಾಲ ವಸೂಲಾತಿ ಬಗೆಗಿನ ಕೋರ್ಟ್ ನೀಡಿದ್ದ ತಡೆ ತೆರವಾಗಿದೆ. ಸಿಒಡಿ ತನಿಖೆ ನಡೆಯುತ್ತಿದ್ದು, ಸಾಲ ವಸೂಲಿಗೆ ತ್ವರಿತವಾಗಿ ಕ್ರಮವಹಿಸಲಾಗುತ್ತದೆ ಎಂದು ತಿಳಿಸಿದರು.

    ಈ ವರ್ಷ 24 ಸಾವಿರ ಕೋಟಿ ರೂ. ಸಾಲ‌ವನ್ನು 33 ಲಕ್ಷ ರೈತರಿಗೆ 21 ಡಿಸಿಸಿ ಬ್ಯಾಂಕ್ ಮುಖಾಂತರ ವಿತರಣೆ ಮಾಡುವ ಗುರಿ ಹೊಂದಲಾಗಿದೆ. ಯಾರು ಎಷ್ಟು ಸಾಲ‌ ನೀಡಿದ್ದಾರೆ ಎಂದು ಪರಿಶೀಲನೆ ನಡೆಸಲಾಗುತ್ತಿದೆ. 19 ಡಿಸಿಸಿ ಬ್ಯಾಂಕ್ ಗಳಿಗೆ ಅಡಿಷನಲ್ ರಿಜಿಸ್ಟ್ರಾರ್ ಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಕ ಮಾಡಲಾಗಿದೆ ಎಂದರು.

    ಸಾಲ ವಿತರಣೆಯಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂಬ ಆರೋಪಗಳಿರುವ ತುಮಕೂರು ಮತ್ತು ಕೋಲಾರ ಡಿಸಿಸಿ ಬ್ಯಾಂಕ್ ಗೆ ಜಿ‌.ಎಮ್.ರವೀಂದ್ರ ಅವರನ್ನು ಅಡಿಷನಲ್ ರಿಜಿಸ್ಟರ್ ಆಗಿ ತನಿಖೆಗೆ ನೇಮಕ ಮಾಡಲಾಗಿದೆ. ಅಲ್ಲದೆ ಈ ಎರಡು ಬ್ಯಾಂಕ್ ಮೇಲಿನ ಆರೋಪದ ಕುರಿತು ಹದಿನೈದು ದಿನದೊಳಗೆ ತನಿಖೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡುವಂತೆ ಕೂಡ ಸೂಚಿಸಲಾಗಿದೆ ಎಂದು ತಿಳಿಸಿದರು.

    ಕೋಲಾರ ಡಿಸಿಸಿ ಬ್ಯಾಂಕ್ ನಿಂದ ಸ್ವಸಹಾಯ ಗುಂಪುಗಳಿಗೆ ಮನಸೋಇಚ್ಚೆ ಸಾಲ ನೀಡಲಾಗುತ್ತಿದೆ. ಕೆಲವೇ ಕ್ಷೇತ್ರಗಳಿಗೆ ಹೆಚ್ಚು ಸಾಲ ನೀಡಲಾಗುತ್ತಿದೆ ಎಂಬ ದೂರು ಬಂದಿದೆ. ಈ ಬಗ್ಗೆ ಸಂಪೂರ್ಣ ತನಿಖೆ ಮಾಡಿ ವರದಿ ಬಂದ ನಂತರ ಕಾನೂನು ಪ್ರಕಾರ ಕ್ರಮಕೈಗೊಳ್ಳಲಾಗುವುದು ಎಂದರು.

    ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷರು, ಚುನಾವಣೆಯಲ್ಲಿ ಸ್ಪರ್ಧಿಸುವ ತಮ್ಮ ಕ್ಷೇತ್ರಕ್ಕೆ 100 ಕೋಟಿ ರೂ. ಹಣ ನೀಡಿದ್ದಾರೆ ಎಂಬ ದೂರು ಬಂದಿದೆ. ಸಾಲ ನೀಡುವುದಕ್ಕೆ 10% ಷೇರು ಹಣವನ್ನು ಸಂಗ್ರಹ ಮಾಡಲಾಗುತ್ತದೆ. ಇದರಲ್ಲಿ 5% ಡಿಸಿಸಿ, 5% ಫ್ಯಾಕ್ಸ್ ಗೆ ವರ್ಗಾವಣೆ ಮಾಡಬೇಕು. ಆದರೆ 10% ಷೇರು ಹಣವನ್ನು ಡಿಸಿಸಿ ಬ್ಯಾಂಕ್ ನವರೇ ಇಟ್ಟುಕೊಂಡಿದ್ದಾರೆ ಎಂಬ ದೂರು ಬಂದಿದ್ದು ಈ ಬಗ್ಗೆ ಕೂಡ ತನಿಖೆ ಮಾಡಿ ವರದಿ ಬಂದ ಬಳಿಕ ಕಾನೂನು ರೀತ್ಯ ಕ್ರಮ ವಹಿಸಲಾಗುವುದು ಎಂದು ಹೇಳಿದರು.

    ಕೋಲಾರ ಡಿಸಿಸಿ ಬ್ಯಾಂಕ್ ಗೆ 623 ಕೋಟಿ ರೂ., ತುಮಕೂರು ಡಿಸಿಸಿ ಬ್ಯಾಂಕ್ ಗೆ 692 ಕೋಟಿ ರೂ. ಸಾಲ ವಿತರಣೆ ಗುರಿ ನಿಗದಿಪಡಿಸಲಾಗಿದೆ. ಆದರೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಸ್ವಸಹಾಯ ಗುಂಪುಗಳಿಗೆ ಸಮಾನಾಗಿ ಸಾಲ ಹಂಚಿಕೆ ಮಾಡಿಲ್ಲ. ಬಡ್ಡಿ ಸಹಾಯಧನ ಹೆಚ್ಚು ಕ್ಲೈಮ್ ಮಾಡಿದ್ದಾರೆ ಎಂಬ ಆರೋಪದ ಬಗ್ಗೆ ತನಿಖೆ ಮಾಡಿ ವರದಿ ನೀಡಲು ವಿಚರಾಣಾಧಿಕಾರಿಯನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.

    ತುಮಕೂರಿನಲ್ಲಿ ರೈತರಿಂದ ಅನಧಿಕೃತವಾಗಿ 1300 ರೂ. ಹಣ ಸಂಗ್ರಹ ಮಾಡಿರುವುದರ ಬಗ್ಗೆ ಅಧಿಕೃತವಾಗಿ ಯಾರೂ ದೂರು ನೀಡಿಲ್ಲ.ಸಚಿವ ಮಾಧುಸ್ವಾಮಿ ಅವರು ಹೇಳಿದ ನಂತರ ರೈತರಿಂದ ಅನಧಿಕೃತವಾಗಿ ಹಣ ವಸೂಲಿ ಮಾಡುತ್ತಿರುವುದರ ಬಗ್ಗೆ ಸುತ್ತೋಲೆ ಹೊರಡಿಸಲಾಗಿದೆ. ತುಮಕೂರು ಮಾತ್ರವಲ್ಲದೆ ಇತರೆ ಡಿಸಿಸಿ ಬ್ಯಾಂಕ್ ಗಳ ಬಗ್ಗೆ ಕೂಡ ಪರಿಶೀಲನೆ ನಡೆಸಲು ಕ್ರಮವಹಿಸಲಾಗುತ್ತಿದೆ. ಈ ವಿಷಯವನ್ನು ಯಾವಾಗಲೋ ಹೇಳಿದ್ದು ಎಂದು ಮಾಧುಸ್ವಾಮಿ ಅವರೇ ಹೇಳಿದ್ದಾರೆ. ಆದರೆ ಇಲಾಖೆ ಮೇಲೆ ಆರೋಪ ಬಂದಾಗ ಆ ಕುರಿತು ಇಲಾಖೆ ಕ್ರಮಕೈಗೊಳ್ಳಲಿದೆ ಎಂದರು.

    IBPS :ಈ ಬಾರಿಯ ಬ್ಯಾಂಕ್ ಪರೀಕ್ಷೆಯ ಬದಲಾವಣೆಗಳೇನು?

    ಬ್ಯಾಂಕ್  ನಲ್ಲಿ ಅಧಿಕಾರಿ ಯಾಗಬೇಕೆಂದು ಕನಸು ಹೊತ್ತವರಿಗೆ ಇಲ್ಲಿದೆ ಮತ್ತೊಂದು ಸಿಹಿ ಸುದ್ದಿ, ಹಿಂದೆಂದಿಗಿಂತಲೂ ಈ ಸಲ ಅತಿ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. 2017 ರಲ್ಲಿ 3562, 2018 ರಲ್ಲಿ 4102, 2019 ರಲ್ಲಿ 4336,2020 ರಲ್ಲಿ 3517, ಹಾಗು ಕಳೆದ ವರ್ಷ 2021 ರಲ್ಲಿ 4135 ಹುದ್ದೆಗಳಿಗೆ ಅರ್ಜಿ ಅಹ್ವಾನಿಸಿತ್ತು. ಪ್ರಸ್ತುತ ಬ್ಯಾಂಕ ಸಿಬ್ಬಂದಿ ನೇಮಕಾತಿ ಸಂಸ್ಥೆ ದೇಶದ 6 ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ  ಖಾಲಿ ಇರುವ  ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಸರಿ ಸುಮಾರು  6,432 ಹುದ್ದೆಗಳಿಗೆ  ಪೂರ್ವಭಾವಿ ಹಾಗೂ ಮುಖ್ಯ ಪರೀಕ್ಷೆ,ಸಂದರ್ಶನ ನಡೆಸಲು ತೀರ್ಮಾನಿಸಿದೆ. ಪರಿಶಿಷ್ಟ ಜಾತಿಯವರಿಗೆ 996, ಪರಿಶಿಷ್ಟ ಪಂಗಡದವರಿಗೆ 483, ಹಿಂದುಳಿದ ವರ್ಗದವರಿಗೆ 1741, ಸಾಮಾನ್ಯ ವರ್ಗದವರಿಗೆ 2,596, ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ 616 ಹುದ್ದೆಗಳು  ದೇಶಾದ್ಯಂತ ಮೀಸಲಾಗಿವೆ.

    ರಾಜ್ಯದ  14 ಜಿಲ್ಲಾ ಕೇಂದ್ರಗಳಲ್ಲಿ ಪೂರ್ವಭಾವಿ ಪರೀಕ್ಷೆ ಮತ್ತು 3 ಜಿಲ್ಲಾ ಕೇಂದ್ರಗಳಲ್ಲಿ ಮುಖ್ಯ ಪರೀಕ್ಷೆ ಆನ್ ಲೈನ್ ನಲ್ಲಿ ನಡೆಯಲಿದೆ.

    ಮೊದಲ ಬಾರಿಗೆ ಚಿಕ್ಕಬಳ್ಳಾಪುರ ಹಾಗೂ ತುಮಕೂರು ಗಳಲ್ಲಿ ಪೂರ್ವಭಾವಿ ಪರೀಕ್ಷಾ ಕೇಂದ್ರ ಗಳನ್ನು ತೆರೆಯಲಾಗಿದೆ.

    ಯಾವ ಬ್ಯಾಂಕಿನಲ್ಲಿ ಎಷ್ಟು ಹುದ್ದೆ?

    ರಾಜ್ಯ ಮೂಲದ ಕೆನರಾ ಬ್ಯಾಂಕ್ ನಲ್ಲಿ ಗರಿಷ್ಠ 2500,  ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (ಹಿಂದಿನ ಕಾರ್ಪೊರೇಷನ್ ಬ್ಯಾಂಕ್ ಹಾಗೂ ಆಂದ್ರ ಬ್ಯಾಂಕ್  ವಿಲೀನವಾಗಿ) 2094, ಯೂಕೋ ಬ್ಯಾಂಕ್ 550, ಪಂಜಾಬ್ ಎಂಡ್ ಸಿಂಧ ಬ್ಯಾಂಕ್ 253,ಪಂಜಾಬ್  ನ್ಯಾಷನಲ್ ಬ್ಯಾಂಕ್ 500, ಬ್ಯಾಂಕ್ ಆಫ್ ಇಂಡಿಯಾ 535 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವುದಾಗಿ ಪ್ರಕಟಿಸಿವೆ.

    ಶೈಕ್ಷಣಿಕ ಅರ್ಹತೆ:

    ಮಾನ್ಯತೆ ಪಡೆದ ವಿಶ್ವವಿದ್ಯಾಲಯ ದಿಂದ ಯಾವುದೇ ವಿಷಯದಲ್ಲಿ ಪದವಿ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಸಮಾನ ಅರ್ಹತೆ.

    ಒಂದು ವೇಳೆ ಸಂದರ್ಶನಕ್ಕೆ ಕರೆ ಬಂದರೆ, ಅವರು 22 ನೇ ಅಗಸ್ಟ್  2022 ಅಥವಾ ಅದಕ್ಕಿಂತ ಮೊದಲು ಪದವಿ ಪರೀಕ್ಷೆಯಲ್ಲಿ ಉತ್ತೀರ್ಣ ರಾಗಿರುವುದಕ್ಕೆ ಪುರಾವೆಗಳನ್ನು ಒದಗಿಸಬೇಕು.

    ಅರ್ಜಿ ಸಲ್ಲಿಕೆ ವಿಧಾನ: ಆನ್ ಲೈನ್.

    ಅರ್ಜಿ ಸಲ್ಲಿಕೆ ದಿನಾಂಕ: ಆಗಸ್ಟ್ 2 ರಿಂದ  ಆಗಸ್ಟ್ 22 ರವರೆಗೆ.

    ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನಿಮ್ಮ ಆಯ್ಕೆಯ ಬ್ಯಾಂಕಿನ ಆದ್ಯತೆಯ ಆದೇಶವನ್ನು ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಳವಡಿಸಲಾಗಿದೆ. ಅಭ್ಯರ್ಥಿಗಳು ಈ ಹಂತದಲ್ಲಿ ಅವರ ಬ್ಯಾಂಕ್ ಗಳ ಆದ್ಯತೆಯ ಕ್ರಮವನ್ನು ಅಗತ್ಯವಾಗಿ ಸೂಚಿಸಬೇಕು.

    ಯಾವ್ಯಾವ ಬ್ಯಾಂಕ್ ಗಳಲ್ಲಿ ಎಷ್ಟೆಷ್ಟು ಹುದ್ದೆಗಳಿವೆ ಹಾಗೂ ನಮ್ಮ ರಾಜ್ಯದಲ್ಲಿ ಶಾಖೆಗಳಿವೆಯಾ ಎಂಬುದರ ಮೇಲೆ ನಿಮ್ಮ ಆದ್ಯತೆಯ ಆಯ್ಕೆ ಇರಲಿ. ಒಮ್ಮೆ ನೀವು ಆಯ್ಕೆಯಾದರೆ ಬ್ಯಾಂಕ್ ಬದಲಾವಣೆಗೆ/ಸ್ಥಳ ಬದಲಾವಣೆ ಗೆ  ಯಾವುದೇ ವಿನಂತಿಯನ್ನು ನಂತರದ ದಿನಗಳಲ್ಲಿ ಪರಿಗಣಿಸಲಾಗುವುದಿಲ್ಲ. ಆಯ್ಕೆ ಪ್ರಕ್ರಿಯೆಯ ಹಂತದಲ್ಲಿ ಅಥವಾ ಅಪಾಯಿಂಟ್‌ಮೆಂಟ್‌ನ ನಂತರ ನಿಮ್ಮ ಕೈಬರಹದ ಘೋಷಣೆ ಹಾಗೂ ನಿಮ್ಮ ಕೈಬರಹ ದಲ್ಲಿ  ಭಿನ್ನವಾಗಿರುವುದು ತಜ್ಞರ ವಿಶ್ಲೇಷಣೆಯಲ್ಲಿ ಕಂಡುಬಂದರೆ, ಅಭ್ಯರ್ಥಿಯ ಉಮೇದುವಾರಿಕೆಯನ್ನ ರದ್ದುಗೊಳಿಸಲಾಗುವುದು. ಹೀಗಾಗಿ ಅರ್ಜಿ ಸಲ್ಲಿಸುವ ಹಂತದಲ್ಲಿಯೇ ಬಹಳ ಎಚ್ಚರಿಕೆಯಿಂದ ಅರ್ಜಿ ಸಲ್ಲಿಸುವುದು ಒಳಿತು.

    ಪರೀಕ್ಷಾ ಪ್ರಕ್ರಿಯೆ:

    ಮೊದಲ ಹಂತ: ಆನ್ಲೈನ್ ಪೂರ್ವಭಾವಿ ಪರೀಕ್ಷೆಅಕ್ಟೋಬರ್ 2022

    ಎರಡನೇ ಹಂತ: ಆನ್ಲೈನ್ ಮುಖ್ಯ ಪರೀಕ್ಷೆ ನವೆಂಬರ್, 2022

    ಮೂರನೇ ಹಂತ: ಸಂದರ್ಶನ ಜನವರಿ/ಫೆಬ್ರವರಿ,2023

    ನೇಮಕಾತಿ: ಏಪ್ರಿಲ್ 2023

    ವಯೋಮಿತಿ:

    01.08.2022 ಕ್ಕೆ, 20 ವರ್ಷಕ್ಕಿಂತ ಕಡಿಮೆ ಇರಬಾರದು. ಮತ್ತು  30 ವರ್ಷಗಳಿಗಿಂತ ಹೆಚ್ಚಿರಬಾರದು. ಅಂದರೆ 20ವರ್ಷದಿಂದ 30 ವರ್ಷದೊಳಗಿನವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅಂದರೆ ಅಭ್ಯರ್ಥಿಗಳು 02.08.1992 ಕ್ಕಿಂತ ಮುಂಚಿತವಾಗಿ ಮತ್ತು 01.08.2002 ಕ್ಕಿಂತ ನಂತರ ಜನಿಸಿರಬಾರದು. (ಎರಡೂ ದಿನಾಂಕಗಳು ಒಳಗೊಂಡಂತೆ)

    ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ವಿಕಲಚೇತನರಿಗೆ 10 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

    ಶುಲ್ಕಪಾವತಿ:

    ನೋಂದಣಿ ನಂತರ ಅಭ್ಯರ್ಥಿಗಳು ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್/ ಇಂಟರ್ನೆಟ್ ಬ್ಯಾಂಕಿಂಗ್ ಬಳಸಿ ಆನ್‌ಲೈನ್ ಮೋಡ್ ಮೂಲಕ ಅಗತ್ಯವಾದ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

    ಅರ್ಜಿ ಶುಲ್ಕ:

    850 ರೂ. ಉಳಿದೆಲ್ಲ ಅಭ್ಯರ್ಥಿಗಳಿಗೆ [inclusive of GST](ಎಸ್‌ಸಿ/ಎಸ್‌ಟಿ/PWBD/ EXSM ಅಭ್ಯರ್ಥಿಗಳಿಗೆ 175 ರೂ.[ inclusive of GST]

    ಆನ್ಲೈನ್ನಲ್ಲಿಯೇ ಅರ್ಜಿ ಶುಲ್ಕವನ್ನೂ ಪಾವತಿಸಬೇಕಿರುತ್ತದೆ.

    ನೆನಪಿಡಿ: ಒಬಿಸಿ ವರ್ಗಕ್ಕೆ ಸೇರಿದ ಆದರೆ ಕೆನೆ ಪದರದ ಅಡಿಯಲ್ಲಿ ಬರುವ ಅಭ್ಯರ್ಥಿಗಳು ಒಬಿಸಿ ಮೀಸಲಾತಿಗೆಅರ್ಹರಾಗಿರುವುದಿಲ್ಲ.ಅವರು ಆನ್‌ಲೈನ್ ಅರ್ಜಿ ನಮೂನೆಯಲ್ಲಿ ತಮ್ಮ ವರ್ಗವನ್ನು ಸಾಮಾನ್ಯ ಎಂದು ಸೂಚಿಸಬೇಕು. ಅಭ್ಯರ್ಥಿಯು ಕಾಲಕಾಲಕ್ಕೆ ಭಾರತ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಕೆನೆರಹಿತ ಲೇಯರ್ (Non cremy layer) ಷರತ್ತಿನೊಂದಿಗೆ  OBC ಪ್ರಮಾಣಪತ್ರವನ್ನು ಹೊಂದಿರಬೇಕು.

    ಬಾರಿಯ ಬದಲಾವಣೆಗಳೇನು?:

    ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವರ್ಷದಿಂದ ವರ್ಷಕ್ಕೆ ಕೆಲವು ಬದಲಾವಣೆಗಳು ಸಾಮಾನ್ಯ. ಹಾಗೆಯೇ ಈ ಬಾರಿಯ ಬದಲಾವಣೆಗಳು ಕೆಳಗಿನಂತಿವೆ:

    ಈ ಬಾರಿ ಅರ್ಜಿ ಸಲ್ಲಿಸುವಾಗ ಪರೀಕ್ಷೆಗೆ ನೀವು ತರುವ ಐಡಿ ಪ್ರೂಫ್‌ನ ಸಂಖ್ಯೆ ನೀಡುವುದು ಕಡ್ಡಾಯ ಹಾಗೂ ಅದು ನೀವು ಅರ್ಜಿ ಸಲ್ಲಿಸಿದ ಹೆಸರಿನೊಂದಿಗೆ ಹೊಂದಾಣಿಕೆಯಾಗಿರಬೇಕು. ಈ ಬಾರಿ ಪ್ರಿಲಿಮ್ಸ್ ಪರೀಕ್ಷೆಯ ಪ್ರವೇಶ ಪತ್ರವನ್ನು ಪರೀಕ್ಷಾ ಕೇಂದ್ರದಲ್ಲಿ ಸಂಗ್ರಹಿಸಲಾಗುವುದಿಲ್ಲ. ಬದಲಾಗಿ ಇದನ್ನು ಪರೀಕ್ಷಾ ಕೇಂದ್ರದ ಸಿಬ್ಬಂದಿಯಿಂದ ಧೃಡಪಡಿಸಿಕೊಳ್ಳುವ ಅಗತ್ಯವಿದೆ. ಮೇನ್ಸ್ ಪರೀಕ್ಷೆಗೆ ಅರ್ಹಗೊಂಡ ಅಭ್ಯರ್ಥಿಗಳು ಮೇನ್ಸ್ ಪರೀಕ್ಷೆಯ ಪ್ರವೇಶ ಪತ್ರದೊಂದಿಗೆ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ದೃಢೀಕರಣಗೊಂಡ ಪ್ರವೇಶ ಪತ್ರವನ್ನು ಕೂಡ ಸಲ್ಲಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ನೋಡಬಹುದು. ಕನಿಷ್ಠ 8 ಭಾವಚಿತ್ರವನ್ನು (ಅಭ್ಯರ್ಥಿಯು ಕಾಲ್-ಲೆಟರ್‌ನಲ್ಲಿ ಅಂಟಿಸಿದಂತೆಯೇ) ಹಾಗೂ  ಪ್ರಿಲಿಮ್ಸ್ ಹಾಗೂ ಮೇನ್ಸ್ ನ ಕರೆ ಪತ್ರದ  ಝೆರಾಕ್ಸ ಪ್ರತಿಯನ್ನು ಅಥವಾ ಹೆಚ್ಚುವರಿ ಪ್ರಿಂಟ್ ತೆಗೆದಿಟ್ಟುಕೊಳ್ಳಿ. ಕೊನೆಯಲ್ಲಿ ಅದರ ಪ್ರತಿಯನ್ನು ಬ್ಯಾಂಕ್ ಗಳಿಗೆ ಸೇರುವಾಗ ನೀಡಬೇಕು ಎಂಬುದನ್ನು ಮರೆಯಬೇಡಿ.

    ನಂತರದ ದಿನಗಳಲ್ಲಿ ವೆಬ್ ಸೈಟ್ ನಲ್ಲಿ ಸಿಗುವುದಿಲ್ಲ.

    ಅಭ್ಯರ್ಥಿಗಳು ಒಂದು ಹೆಚ್ಚುವರಿ ಛಾಯಾಚಿತ್ರವನ್ನು (ಅಭ್ಯರ್ಥಿಯು ಕಾಲ್ ಲೆಟರ್‌ನಲ್ಲಿ ಅಂಟಿಸಿದಂತೆಯೇ) ಜೊತೆಗೆ ಕರೆ ಪತ್ರ ಮತ್ತು ಇತರ ಅಗತ್ಯ ದಾಖಲೆಗಳೊಂದಿಗೆ “ಮಾಹಿತಿ ಕೈಪಿಡಿ” ಮತ್ತು ಕರೆ ಪತ್ರದಲ್ಲಿ ಸೂಚಿಸಿದ ಮಾಹಿತಿಯಂತೆ ತೆಗೆದುಕೊಂಡು ಹೋಗಬೇಕು.

    ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳ ನೋಂದಣಿ:

    ಎ.ಅಭ್ಯರ್ಥಿಗಳ ನೋಂದಣಿಯನ್ನು ಫೋಟೋ ಕ್ಯಾಪ್ಚರ್ ಮೂಲಕ ಮಾಡಲಾಗುವುದು.

    ಬಿ.ಅಭ್ಯರ್ಥಿಯನ್ನು ಪರೀಕ್ಷಾ ಕೇಂದ್ರದಲ್ಲಿ ನಿಲ್ಲಿಸಿ ಛಾಯಾಚಿತ್ರ ತೆಗೆಯಲಾಗುವುದು.

    ಸಿ. ಅಭ್ಯರ್ಥಿಗಳಿಗೆ ಸೀಟ್ ನಂಬರ್ ನೀಡಲಾಗುತ್ತದೆ.

    ಡಿ. ರಫ್ ಶೀಟ್,(ಗಳನ್ನು) ಪ್ರತಿ ಕ್ಯಾಂಡಿಡೇಟ್ ಡೆಸ್ಕ್ ನಲ್ಲಿ ಇರಿಸಲಾಗಿರುತ್ತದೆ. ಪರೀಕ್ಷೆಯ ಕೊನೆಯಲ್ಲಿ ಅಭ್ಯರ್ಥಿಗಳಿಗೆ  ಸೂಚಿಸಿದಂತೆ ನಿಗದಿತ ಡ್ರಾಪ್ ಬಾಕ್ಸ್‌ನಲ್ಲಿ ರಫ್ ಶೀಟಗಳನ್ನು ಹಿಂತಿರುಗಿಸಬೇಕು.

    ಮುಖ್ಯ ಪರೀಕ್ಷೆಗೆ  ಸ್ಟ್ಯಾಂಪ್ ಮಾಡಿದ ಫೋಟೊ ಕಾಪಿ ಯನ್ನು ತರದೇ ಇರುವ ಅಭ್ಯರ್ಥಿಗಳನ್ನು ಪರೀಕ್ಷೆಗೆ ಹಾಜರಾಗಲು ಅನುಮತಿಸಲಾಗುವುದಿಲ್ಲ.

    ನೇಮಕ ಹೇಗೆ?

    ಮೊದಲ ಹಂತದಲ್ಲಿ ಪೂರ್ವ ಭಾವಿ ಪರೀಕ್ಷೆ (ಪ್ರಿಲಿಮ್ಸ್) ನಡೆಯಲಿದೆ. ಬೆಳಗಾವಿ, ಬೆಂಗಳೂರು, ಬೀದರ್,ದಾವಣಗೆರೆ, ದಾರವಾಡ ಕಲಬುರಗಿ, ಹಾಸನ, ಹುಬ್ಬಳ್ಳಿ, ಮಂಡ್ಯ,ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿಯಲ್ಲಿ ಪೂರ್ವಭಾವಿ ಪರೀಕ್ಷೆ ಪರೀಕ್ಷಾ ಕೇಂದ್ರಗಳಿರಲಿವೆ. ಪೂರ್ವಭಾವಿ ಪರೀಕ್ಷೆ ಒಂದು ಗಂಟೆಗಳ ಕಾಲ ನಡೆಯಲಿದ್ದು,(ಪ್ರತಿ ಪತ್ರಿಕೆಗೂ  20 ನಿಮಿಷಗಳಂತೆ  ಒಟ್ಟಾರೆ 60 ನಿಮಿಷಗಳು) 100 ಅಂಕಗಳಿಗೆ ಕೇಳಲಾಗುತ್ತದೆ. (ಅಂದರೆ ಪ್ರತಿ ಪ್ರಶ್ನೆಗೆ ಒಂದೊಂದು ಅಂಕ ನಿಗದಿಯಾಗಿರುತ್ತದೆ)

    ಇದರಲ್ಲಿ ಇಂಗ್ಲೀಷ್ ಲಾಂಗ್ವೇಜಗೆ 30, ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್ ಗೆ 35 ಹಾಗೂ ರೀಸನಿಂಗ್ ಎಬಿಲಿಟಿಯ 35 ಪ್ರಶ್ನೆಗಳಿರಲಿವೆ. ಪ್ರತಿ ಪರೀಕ್ಷೆಯಲ್ಲೂ ಕನಿಷ್ಟ ಅಂಕ ಗಳಿಸಬೇಕೆಂಬ ನಿಯಮವಿದೆ. ಅದರೆ ಒಟ್ಟಾರೆ ಹೆಚ್ಚು ಅಂಕ ಗಳಿಸುವುದು ಮುಖ್ಯ. ಸೆಕ್ಷನಲ್ ಕಟ್ ಆಪ್ ಜೊತೆಯಲ್ಲಿ ಒವರಾಲ್ ಕಟ್ ಆಪ್ ಇಲ್ಲದೆ ಇರೋದರಿಂದ ವಿದ್ಯಾರ್ಥಿಗಳಿಗೆ ಇದು ಅನುಕೂಲ. ಆಯಾ ವರ್ಗಗಳಿಗೆ ಇರುವ ಹುದ್ದೆಗಳ ಸಂಖ್ಯೆ ಗಿಂತ 10 ಪಟ್ಟು ಹೆಚ್ಚು ಅಭ್ಯರ್ಥಿಗಳನ್ನ ಮುಖ್ಯ ಪರೀಕ್ಷೆಗೆ ಆಯ್ಕೆ ಮಾಡುವುದರಿಂದ 1:10 ಅನುಪಾತ)

    ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮುಂದಿನ ಹಂತದ ಅಂದರೆ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆಯುತ್ತಾರೆ. ಮುಖ್ಯ ಪರೀಕ್ಷೆಯು ಬೆಂಗಳೂರು, ಹುಬ್ಬಳ್ಳಿ ಮತ್ತು ಮಂಗಳೂರಿನಲ್ಲಿ ಮಾತ್ರ ನಡೆಯಲಿದ್ದು, ಪರೀಕ್ಷೆಗಳು ಎರಡು ಹಂತಗಳಲ್ಲಿ ನಡೆಯಲಿದೆ. ನಿಗದಿತ ದಿನದಂದು ಆನ್ ಲೈನ್‌ನಲ್ಲಿಯೇ ಎರಡೂ ಲಿಖಿತ ಪರೀಕ್ಷೆಗಳು ನಡೆಯಲಿವೆ. ಮುಖ್ಯ ಪರೀಕ್ಷೆಯು ಮೂರು ಗಂಟೆ ಗಳ ಕಾಲ ನಡೆಯಲಿದ್ದು, 155 ಪ್ರಶ್ನೆಗಳನ್ನು  200 ಅಂಕಗಳಿಗೆ ಕೇಳಲಾಗುತ್ತದೆ.

    I. Reasoning & Computer Aptitude 45 ಪ್ರಶ್ನೆ  60 ಅಂಕಗಳು 60 ನಿಮಿಷಗಳು,ಪ್ರತಿ ಪ್ರಶ್ನೆಗೆ 80 ಸೆಕೆಂಡ್ ಹಾಗೂ 1.33 ಅಂಕ

    II.General/ Economy/ Banking Awareness 40 ಪ್ರಶ್ನೆ 40 ಅಂಕಗಳು 35 ನಿಮಿಷಗಳು,ಪ್ರತಿ ಪ್ರಶ್ನೆಗೆ 52.5 ಸೆಕೆಂಡ್ ಹಾಗೂ 1.00 ಅಂಕ

    III. English Language 35 ಪ್ರಶ್ನೆ 40 ಅಂಕಗಳು 40 ನಿಮಿಷಗಳು,ಪ್ರತಿ ಪ್ರಶ್ನೆಗೆ 68.57 ಸೆಕೆಂಡ್ ಹಾಗೂ 1.14 ಅಂಕ

    VI.Data Analysis & Interpretation 35 ಪ್ರಶ್ನೆ 60 ಅಂಕಗಳು 45 ನಿಮಿಷಗಳು,ಪ್ರತಿ ಪ್ರಶ್ನೆ ಗೆ 77.14 ಸೆಕೆಂಡ್ ಹಾಗೂ 1.71 ಅಂಕ

    ಹೀಗೆ ಒಟ್ಟಾರೆ 155 ಪ್ರಶ್ನೆಗಳಿಗೆ 200 ಅಂಕಗಳು ನಿಗದಿಯಾಗಿದ್ದು ಹಾಗೂ 180 ನಿಮಿಷದ ಸಮಯ ನಿಗದಿಪಡಿಸಲಾಗಿದೆ. ಇಂಗ್ಲೀಷ್ ಭಾಷೆ ಒಂದನ್ನು ಹೊರತುಪಡಿಸಿ ಮತ್ತೆಲ್ಲಾ ಪ್ರಶ್ನೆಗಳು ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಇರುತ್ತದೆ. ತಪ್ಪು ಉತ್ತರ ಗುರುತಿಸಿದಲ್ಲಿ, ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಳಲ್ಲಿ ಆಯಾ ವಿಷಯಕ್ಕೆ ಪ್ರತಿ ಪ್ರಶ್ನೆಗೆ ನಿಗದಿ ಪಡಿಸಿದ ಅಂಕದ 0.25 ಅಂಕವನ್ನು  ಋಣಾತ್ಮಕ ಮೌಲ್ಯಮಾಪನದ ನಿಯಮದಂತೆ ಗಳಿಸಿದ ಅಂಕದಿಂದ ಕಳೆಯಲಾಗುತ್ತದೆ. ಪ್ರಶ್ನೆಯನ್ನು ಬರೆಯಲು ಪ್ರಯತ್ನಿಸದೆ ಹಾಗೆಯೆ ಬಿಟ್ಟರೆ, ಅಂದರೆ ಯಾವುದೇ ಉತ್ತರವನ್ನು ಗುರುತಿಸಲಾಗಿಲ್ಲದಿದ್ದರೆ ಅಂತಹ ಅಭ್ಯರ್ಥಿಗಳಿಗೆ, ಆ ಪ್ರಶ್ನೆಗೆ ಯಾವುದೇ ರೀತಿಯ ಋಣಾತ್ಮಕ ಮೌಲ್ಯಮಾಪನದ ನಿಯಮದಂತೆ ದಂಡವಿರುವುದಿಲ್ಲ.

    (ಮೇನ್ಸ್) ಮುಗಿಯುತ್ತಿದ್ದಂತೆಯೇ ಡಿಸ್ಸ್ಕ್ರಿಟ್ಟಿವ್ ಟೆಸ್ಟ್ ಇಂಗ್ಲೀಷ್ ಭಾಷೆಗೆ (Letter Writing & Essay- with two questions)ಸಂಬಂಧಿಸಿದಂತೆ 25 ಅಂಕಗಳಿಗೆ ನಡೆಸಲಾಗುತ್ತದೆ. ಅವಧಿ 30 ನಿಮಿಷಗಳು. ಅಭ್ಯರ್ಥಿಗಳು ಕಂಪ್ಯೂಟರ್ ನಲ್ಲಿಯೇ ಉತ್ತರವನ್ನು ಬರೆಯಬೇಕು.

    ಬಹು ಮುಖ್ಯ ಬದಲಾವಣೆ:

    ಇಂಗ್ಲಿಷ್ ಭಾಷೆಯ ವಿವರಣಾತ್ಮಕ ಪೇಪರ್ (ಪತ್ರ ಬರವಣಿಗೆ ಮತ್ತು ಪ್ರಬಂಧ) ಅನ್ನು ಸ್ವಯಂಚಾಲಿತ ಸ್ಕೋರಿಂಗ್ ಮೂಲಕ ಮೌಲ್ಯಮಾಪನ ಮಾಡಲಾಗುತ್ತದೆ. ಬರವಣಿಗೆಯ ಪ್ರಾವೀಣ್ಯತೆಗೆ ಸಂಬಂಧಿಸಿದಂತೆ ವೈಶಿಷ್ಟ್ಯಗಳನ್ನು ಗುರುತಿಸುವುದು ಇದರ ಕಾರ್ಯವಿಧಾನವಾಗಿದೆ. ಆಂಗ್ಲ ಭಾಷೆಯಲ್ಲಿ ಹಾಗೂ ಬರವಣಿಗೆಯಲ್ಲಿ ಪರೀಕ್ಷೆ ಬರೆಯುವವರ ಪ್ರಾವೀಣ್ಯತೆಯನ್ನು ವಸ್ತುನಿಷ್ಠ ರೀತಿಯಲ್ಲಿ ಮೌಲ್ಯಮಾಪನ ಮಾಡುವ ವಿಶಿಷ್ಟ ವಿಧಾನವಾಗಿದೆ.

    ಈ ಎರಡೂ ಪರೀಕ್ಷೆಗಳಲ್ಲಿ ಬ್ಯಾಂಕ್ ನಿಗದಿಪಡಿಸಿದಷ್ಟು ಅಂಕ ಪಡೆದವರು ಮಾತ್ರ ಮೂರನೇ ಹಂತಕ್ಕೆ ಅರ್ಹರಾಗುತ್ತಾರೆ.

    ಅಭ್ಯರ್ಥಿಯು ಆನ್‌ಲೈನ್ ಮುಖ್ಯ ಪರೀಕ್ಷೆಯ ಪ್ರತಿ ಪರೀಕ್ಷೆಯಲ್ಲಿ ಕನಿಷ್ಠ ಅಂಕ ಪಡೆದಿರಬೇಕು ಮತ್ತು ಸಂದರ್ಶನಕ್ಕೆ ಶಾರ್ಟ್‌ಲಿಸ್ಟ್ ಎಂದು ಪರಿಗಣಿಸಬೇಕಾದ ಕನಿಷ್ಠ ಒಟ್ಟು ಅಂಕಗಳನ್ನು ಗಳಿಸಿರಬೇಕು.ಕನಿಷ್ಠ ಅಂಕಗಳು ಖಾಲಿ ಹುದ್ದೆಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ. ಮತ್ತು ಅವುಗಳ ಮೇಲೆ ಕಟ್-ಆಫ್‌ಗಳನ್ನು ನಿರ್ಧರಿಸಲಾಗುವುದು ಮತ್ತು ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.

    ಸಂದರ್ಶನಕ್ಕಾಗಿ ಶಾರ್ಟ್‌ಲಿಸ್ಟ್ ಮಾಡಲಾದ ಅಭ್ಯರ್ಥಿಗಳಿಗೆ ಸಂದರ್ಶನ ಪ್ರಕ್ರಿಯೆ, ಪೂರ್ಣಗೊಳಿಸುವ ಮೊದಲು ಆನ್‌ಲೈನ್ ಮುಖ್ಯ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಅಭ್ಯರ್ಥಿಗಳೊಂದಿಗೆ ಹಂಚಿಕೊಳ್ಳಲಾಗುವುದಿಲ್ಲ.

    ಸಂದರ್ಶನದ ಸಂದರ್ಭದಲ್ಲಿ ‘ಒಬಿಸಿ’ ವರ್ಗದ  ಅಡಿಯಲ್ಲಿ ಹಂತ -3 ಕ್ಕೆ ಅರ್ಹತೆ ಪಡೆದ ಅಭ್ಯರ್ಥಿಗಳು ಒಬಿಸಿ ಪ್ರಮಾಣಪತ್ರವನ್ನು ‘ಕೆನೆರಹಿತ ಪದರ'(‘Non-Creamy layer’) ಷರತ್ತನ್ನು ಒಳಗೊಂಡಿರುವುದನ್ನು ಸಲ್ಲಿಸಬೇಕಾಗುತ್ತದೆ. EWS ವರ್ಗದ ಅಡಿಯಲ್ಲಿ ಹಂತ-3 ಕ್ಕೆ ಅರ್ಹತೆ ಪಡೆದ ಅಭ್ಯರ್ಥಿಗಳು  ಆರ್ಥಿಕ ವರ್ಷದ ಒಟ್ಟು ವಾರ್ಷಿಕ ಆದಾಯದ ಆಧಾರದ ಮೇಲೆ EWS ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ.

    ಆಯ್ಕೆ ಪಟ್ಟಿ:

    ಅಂತಿಮ ಸುತ್ತಿಗೆ ಆಯ್ಕೆಯಾದ ಅಭ್ಯರ್ಥಿಗಳು ಹಂತ-II ಮತ್ತು ಹಂತ-III ಎರಡರಲ್ಲೂ ಪ್ರತ್ಯೇಕವಾಗಿ ಅರ್ಹತೆ ಪಡೆದಿರಬೇಕು.ಸಂದರ್ಶನಕ್ಕೆ ನಿಗದಿಪಡಿಸಿಲಾದ ಒಟ್ಟು ಅಂಕಗಳು 100. ಸಂದರ್ಶನದಲ್ಲಿ ಕನಿಷ್ಠ ಅರ್ಹತಾ ಅಂಕಗಳು 40% (35% SC/ST/OBC/PWBD ಅಭ್ಯರ್ಥಿಗಳಿಗೆ). ಆನ್‌ಲೈನ್ ಮುಖ್ಯ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಪಡೆದ ಅಂಕಗಳನ್ನು ಕ್ರಮವಾಗಿ 80:20 ಅನುಪಾತದ ಆಧಾರದ ಮೇಲೆ ಮೆರಿಟ್ ಪಟ್ಟಿ ತಯಾರಿಸಿ, ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

    ಅರ್ಜಿ ಸಲ್ಲಿಸಲು ಹಾಗೂ

    ನೋಂದಣಿಗೆ ಬಳಸಬೇಕಾದ ಲಿಂಕ್:

    Authorised Website: www.ibps.in

    76 ನೇ ಸ್ವಾತಂತ್ರ್ಯ ದಿನಾಚರಣೆಯಂದು ಮುಖ್ಯ ಮಂತ್ರಿಗಳಿಂದ ನೂತನ ಯೋಜನೆಗಳ ಘೋಷಣೆಗಳು

    BENGALURU AUG 15

    ಸೈನಿಕರು ನಮ್ಮ ದೇಶದ ರಕ್ಷಣೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟು ಕಾರ್ಯನಿರ್ವಹಿಸುತ್ತಾರೆ. ರಾಜ್ಯದ ಸೈನಿಕರು ಕರ್ತವ್ಯ ನಿರತರಾಗಿದ್ದಾಗ ಮೃತ ಪಟ್ಟರೆ, ಅವರ ಕುಟುಂಬದ ಜೀವನಕ್ಕೆ ಭದ್ರತೆ ಒದಗಿಸುವ ಉದ್ದೇಶದಿಂದ ಮೃತ ಸೈನಿಕರ ಕುಟುಂಬದ ಒಬ್ಬ ಸದಸ್ಯರಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಅವರು ಇಂದು ಮಾಣಿಕ್ ಷಾ ಪರೇಡ್ ಮೈದಾನದಲ್ಲಿ 76 ನೇ ಸ್ವಾತಂತ್ರೋತ್ಸವದ ಅಂಗವಾಗಿ ಧ್ವಜಾರೋಹಣ ನೆರೆವರಿಸಿ ಮಾತನಾಡಿದರು.

    ಹೊಸ ಯೋಜನೆಗಳ ಘೋಷಣೆಗಳು

    1. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸುಸಂದರ್ಭದಲ್ಲಿ ಸ್ವಚ್ಛತೆ, ಪೌಷ್ಟಿಕತೆ ಕಾಪಾಡಲು, ರೈತರು, ಶ್ರಮಿಕರ ಅಭ್ಯುದಯಕ್ಕಾಗಿ ಹಾಗೂ ಕೆಚ್ಚೆದೆಯ ಸೈನಿಕರ ಕ್ಷೇಮಾಭಿವೃದ್ಧಿಗಾಗಿ ಕೆಲವು ಕೊಡುಗೆಗಳನ್ನು ನೀಡಲು ಸರ್ಕಾರ ತೀರ್ಮಾನಿಸಿದೆ ಎಂದರು.

    2.ರಾಜ್ಯದ ಎಲ್ಲ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಶೇ. 100 ರಷ್ಟು ಶೌಚಾಲಯಗಳ ನಿರ್ಮಾಣವನ್ನು 250 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುವುದು. ಆ ಮೂಲಕ ಶಾಲೆ, ಕಾಲೇಜುಗಳಲ್ಲಿ ಸ್ವಚ್ಛ-ಆರೋಗ್ಯಕರ ವಾತಾವರಣ ನಿರ್ಮಿಸಲಾಗುವುದು.

    1. ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದಿಂದ ಕುಂಬಾರ, ಕಮ್ಮಾರ, ಬಡಗಿ, ಶಿಲ್ಪಿಗಳು, ಭಜಂತ್ರಿ, ಬುಟ್ಟಿ ಹೆಣೆಯುವವರು, ವಿಶ್ವಕರ್ಮರು, ಮಾದರು ಮತ್ತಿತರ ಕುಶಲ ಕರ್ಮಿಗಳಿಗೆ ತಲಾ 50 ಸಾವಿರ ರೂ. ಗಳ ವರೆಗೆ ಸಾಲ-ಸಹಾಯಧನ ಯೋಜನೆಯನ್ನು ಜಾರಿಗೊಳಿಸಲಾಗುವುದು.
      1. ರೈತರ ಮಕ್ಕಳಿಗೆ ಜಾರಿಗೊಳಿಸಿರುವ ರೈತ ವಿದ್ಯಾನಿಧಿ ಯೋಜನೆಯ ಸೌಲಭ್ಯವನ್ನು ಭೂ ರಹಿತ ಕೃಷಿ ಕಾರ್ಮಿಕರ ಮಕ್ಕಳಿಗೂ ವಿಸ್ತರಿಸಲಾಗುವುದು.
      2. ಇದಲ್ಲದೆ ಭೂ ರಹಿತ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳನ್ನು ಆದ್ಯತೆಯಾಗಿರಿಸಿಕೊಂಡು, ಅಗತ್ಯವನ್ನಾಧರಿಸಿ, ರಾಜ್ಯದಲ್ಲಿ ಹೊಸದಾಗಿ ೪೦೫೦ ಅಂಗನವಾಡಿ ತೆರೆಯಲಾಗುವುದು. ಆ ಮೂಲಕ 16 ಲಕ್ಷ ಕುಟುಂಬಗಳ ಮಕ್ಕಳಿಗೆ ಪೌಷ್ಟಿಕ ಆಹಾರ ಹಾಗೂ ಶಾಲಾ ಪೂರ್ವ ಶಿಕ್ಷಣ ನೀಡಲು ಅವಕಾಶ ಕಲ್ಪಿಸಲಾಗುವುದು. 8100ಮಹಿಳೆಯರಿಗೂ ಇದರಿಂದ ಉದ್ಯೋಗಾವಕಾಶ ದೊರೆಯಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

    ಅಮೃತ ಕಾಲಕ್ಕೆ ಕೊರತೆಗಳ್ನು ನೀಗಿಸಿ ಮುಂದೆ ಹೋಗಲು ಸಿಂಹಾವಲೋಕನ, ಆತ್ಮಾವಲೋಕನದ ಅವಶ್ಯಕತೆ ಇದೆ

    BENGALURU AUG 15

    ದೇಶಕ್ಕೆ ಜನತೆಯ ಶ್ರಮ, ಶ್ರದ್ಧೆ, ಅಭಿಮಾನ, ಬೆವರಿನ ಹನಿ ಮುಖ್ಯ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದರು.ಅವರು ಇಂದು ಮಾಣಿಕ್ ಷಾ ಪರೇಡ್ ಮೈದಾನದಲ್ಲಿ 76 ನೇ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

    ದೇಶ ಮೊದಲು ಎನ್ನುವ ಭಾವನೆ ಇರಬೇಕು. ದೇಶ ಸ್ವಾಭಿಮಾನ ಸಂಕೇತ. ನಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂದರು.

    ಸಿಂಹಾವಲೋಕನ, ಆತ್ಮಾವಲೋಕನದ ಅವಶ್ಯಕತೆ ಇದೆ

    ಎಪ್ಪತ್ತೈದು ವರ್ಷಗಳಾದ ಹಿನ್ನೆಲೆಯಲ್ಲಿ ಹಿಂದಿರುಗಿ ನೋಡಬೇಕು. ನಡೆದು ಬಂದ ಈ ದಾರಿಯಲ್ಲಿನ ಕೊರತೆಗಳನ್ನು ಸರಿಪಡಿಸಿಕೊಂಡು c. ದೇಶಕ್ಕೆ ನಾನು ಏನು ಮಾಡಿದ್ದೇನೆ ಎಂಬ ಪ್ರಶ್ನೆ ಹಾಕಿಕೊಳ್ಳಬೇಕು. ದೇಶಕ್ಕೆ ಚರಿತ್ರೆ ಇದೆ. ಚಾರಿತ್ಯ ಬೇಕಾಗಿದೆ. ಆಚಾರರಿದ್ದಾರೆ, ಬೇಕಾಗಿರುವುದು ಆಚರಣೆ, ಒಳ್ಳೆಯ ಆಚರಣೆ ದೇಶಕ್ಕೆ ಸದ್ಚಾರಿತ್ಯ ಕೊಡುತ್ತಿದೆ. . ಮುಂದಾಲೋಚನೆಯಲ್ಲಿ ಈ ದೇಶಕ್ಕೆ ಒಂದು ದೃಷ್ಟಿಕೋನ ಇದೆ ಎಂದರು.

    ಅಮೃತ ಕಾಲಕ್ಕೆ ಸಶಕ್ತ ಭಾರತ

    ನೈಸರ್ಗಿಕವಾಗಿ ಸಂಪತ್ಭರಿತವಾದ ದೇಶ, ಶ್ರಮಜೀವಿಗಳ ದೇಶ ನಮ್ಮದು. ಸರಿಯಾದ ದಿಕ್ಸೂಚಿ, ಗುರಿ, ಛಲ ಅತ್ಯಂತ ಅವಶ್ಯಕವಿದೆ. ಈ ಅಮೃತಕಾಲದಲ್ಲಿ ಮೋದಿಯವರ ನಾಯಕತ್ವ ಇದೆ. ಎಂಟು ವರ್ಷದಲ್ಲಿ ಹಲವು ಸವಾಲುಗಳನ್ನು ಎದುರಿಸಿದ್ದಾರೆ. ಸ್ವಚ್ಛ ಭಾರತದ ಮೂಲಕ ಸ್ವಚ್ಛತೆಯ ಸಾಧನೆ ಮೋದಿಯವರು ಮಾಡಿದ್ದಾರೆ. ನಲವತ್ತು ಕೋಟಿ ಜನರಿಗೆ ಖಾತೆಗಳನ್ನು ತೆರೆದು ಡಿಜಿಟಲ್ ವ್ಯವಹಾರ ಪ್ರಾರಂಭಿಸಿದ್ದಾರೆ. ದೇಶದ ಆರ್ಥಿಕತೆ, ಜಿಡಿಪಿ ಹೆಚ್ಚಾಗಿದೆ. ವಿದೇಶಿ ವಿನಿಮಯ ಹೆಚ್ಚಾಗಿ ದೇಶದ ರಕ್ಷಣೆಯಲ್ಲಿ ಆತ್ಮನಿರ್ಭರ್ ಆಗಿದೆ. ರಕ್ಷಣೆಯ ಸಾಮರ್ಥ್ಯವನ್ನು ರಫ್ತು ಮಾಡುತ್ತಿದ್ದೇವೆ. ಸ್ಟಾರ್ಟ್ ಅಪ್, ಯೂನಿಕಾರ್ನ್ ಪ್ರಾರಂಭವಾಗಿದೆ. ಸಶಕ್ತ ಭಾರತ ಹೊರಹೊಮ್ಮಿದೆ. ಅಮೃತ ಭಾರತಕ್ಕೆ ಭದ್ರ ಬುನಾದಿ ಹಾಕಲಾಗುತ್ತಿದೆ ಎಂದರು.

    ಅವರ ಈ ಪ್ರಯತ್ನದಲ್ಲಿ ಕರ್ನಾಟಕವೂ ಭದ್ರ ಬುನಾದಿ ಹಾಕಲು ಎಲ್ಲರ ಪ್ರಯತ್ನವೂ ಬೇಕು. ಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ , ಸಬ್ ಕಾ ಪ್ರಯಾಸ್ ಎಂಬ ತತ್ವ ಆಧರಿಸಿ ಮುನ್ನಡೆಯಬೇಕು. ಕರ್ನಾಟಕ ವಿಶಿಷ್ಟ ರಾಜ್ಯ. ಕೃಷಿಯಲ್ಲಿ ಅತಿಹೆಚ್ಚು ಉತ್ಪಾದನೆ, ಅತಿ ಹೆಚ್ಚು ಸ್ಟಾರ್ಟ್ ಅಪ್, ಯೂನಿಕಾರ್ನ್ ,ಡೆಕಾಕಾರ್ನ್ ಇಲ್ಲಿವೆ. ತಂತ್ರಜ್ಞಾನದಲ್ಲಿ ಕರ್ನಾಟಕ ನಂ.1 ಇದೆ. ನಮ್ಮ ರಾಜ್ಯದ ಒಟ್ಟು ತಲಾವಾರು ಆದಾಯ ಇಡೀ ದೇಶದಲ್ಲಿ 3ನೇ ಸ್ಥಾನದಲ್ಲಿದೆ. ಜಿಡಿಪಿ ಶೇ.9 ರಷ್ಟು ಬೆಳೆಯುತ್ತಿದೆ. ಅತಿ ಹೆಚ್ಚು ವಿದೇಶಿ ನೇರ ಬಂಡವಾಳ ಹರಿದು ಬಂದ ರಾಜ್ಯ ನಮ್ಮದು. ನಮ್ಮ ಸರ್ಕಾರ ಕೋವಿಡ್ ನಲ್ಲಿ ನಾಯಕರಾದ ಯಡಿಯೂರಪ್ಪನವರ ನೇತೃತ್ವದಲ್ಲಿ ಅವರ ಮಾರ್ಗದರ್ಶನದಲ್ಲಿ ಉತ್ತಮವಾಗಿ ನಿರ್ವಹಿಸಿ ಮುನ್ನಡೆಯುತ್ತಿದ್ದೇವೆ. ವೈದ್ಯರು ಆಶಾ ಕಾರ್ಯಕರ್ತರು, ನರ್ಸುಗಳು, ಪೊಲೀಸ್, ಸರ್ಕಾರಿ ನೌಕರರು ಕೋವಿಡ್ ಸಂದರ್ಭದಲ್ಲಿ ಅವರ ಶ್ಲಾಘನೀಯ ಕಾರ್ಯ ಮಾಡಿದ್ದಾರೆ. ಒಂದು ಜನಾಂಗವನ್ನು ಉಳಿಸುವ ಕಾರ್ಯ ನಡೆದಿದೆ. ರಾಜ್ಯದಲ್ಲಿ ಎಂಟು ಕೋಟಿ ಲಸಿಕೆ ನೀಡಲಾಗಿದೆ ಎಂದರು.

    ಹಲವು ಕ್ಷೇತ್ರಗಳಲ್ಲಿ ರಾಜ್ಯ ನಂಬರ್ 1

    ಸರ್ಕಾರ ಕೋವಿಡ್ ನಿಂದಾದ ಆರ್ಥಿಕ ಹಿಂಜರಿತವನ್ನು ಹಿಮ್ಮೆಟ್ಟಿಸಿ ಸುಮಾರು ಹದಿನೈದು ಸಾವಿರ ಕೋಟಿ ಅಧಿಕ ಆದಾಯವನ್ನು ರಾಜ್ಯಕ್ಕೆ ತಂದಿದೆ. ಅಮೃತ ಯೋಜನೆಗಳನ್ನು ಕಳೆದ ಬಾರಿ ಘೋಷಣೆ ಮಾಡಲಾಯಿತು. ಒಂದು ವರ್ಷದಲ್ಲಿ ಅವುಗಳನ್ನು ನಾವು ಮಾಡಿ ಪೂರೈಸಿದ್ದೇವೆ. ಅಮೃತ ಯೋಜನೆಯಡಿಯಲ್ಲಿ 750 ಗ್ರಾಮ ಪಂಚಾಯತಿ ಅಭಿವೃದ್ಧಿಗೆ 25 ಲಕ್ಷ ರೂ.ಶಾಲೆಗಳ ಅಭಿವೃದ್ಧಿ, ಎಪ್ಪತ್ತೈದು ಸಾವಿರ ಯುವಕರಿಗೆ ಕೌಶಲ್ಯಾಭಿವೃದ್ಧಿ ಒದಗಿಸಲಾಗಿದೆ ಎಂದರು.

    ಅಮೃತ ಮಹೋತ್ಸವದ ನಮ್ಮ ಕೆಲಸ ಮುಂದಿನ ದಿನಗಳಿಗೆ ಸ್ಪೂರ್ತಿ. ಈ ವರ್ಷ ಭರಸೆಯ ಬಜೆಟ್ ಮಂಡಿ ಸಲಾಗಿದೆ. ಅಗತ್ಯ ಯೋಜನೆಗಳನ್ನು ರೂಪಿಸಲಾಗಿದೆ. ಕರ್ನಾಟಕದ 8101 ಶಾಲಾ ಕೊಠಡಿಗಳು ಈ ವರ್ಷವೇ ಪೂರ್ಣಗೊಳ್ಳಲಿದೆ. 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಿಹೆಚ್ ಸಿ ಗಳಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಪೌಷ್ಟಿಕ ಆಹಾರಕ್ಕೆ ಒತ್ತು ನೀಡಿದೆ. ಗ್ರಾಮಗಳಲ್ಲಿ ಸ್ತ್ರೀ ಶಕ್ತಿ ಸಂಘಕ್ಕೆ ಹಣಕಾಸು, ಮಾರುಕಟ್ಟೆ ಸೌಲಭ್ಯ, 4 ಲಕ್ಷ ಮಹಿಳೆಯರಿಗೆ ಉದ್ಯೋಗ ನೀಡಿದ್ದೇವೆ. ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ ಮೂಲಕ ಯುವಕರಿಗೆ ಸುಮಾರು 5 ಲಕ್ಷ ಕೈಗಳಿಗೆ ಕೆಲಸವನ್ನು 1.5 ಲಕ್ಷ , ಹತ್ತು ಲಕ್ಷ ರೂ.ಗಳ ಯೋಜನೆ, ಅವರ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಮೂಲಕ ಇವರಿಗೆ ಬೆಂಬಲ ನೀಡಿದರೆ ನಾಡಿನ ಅಭಿವೃದ್ಧಿ ಸಾಧ್ಯವಾಗುತ್ತದೆ. ಆರ್ಥಿಕತೆ ಎಂದರೆ ದುಡ್ಡಲ್ಲ, ಜನರ ದುಡಿಮೆ ಎಂದು ಅರಿತಿದ್ದೇವೆ. ಹತ್ತು ಲಕ್ಷ ರೈತರ ಮಕ್ಕಳಿಗೆ 430 ಕೋಟಿ ರೂ. ರೈತ ವಿದ್ಯಾನಿಧಿ ಮೂಲಕ ವಿತರಿಸಲಾಗಿದೆ. ಕಾರ್ಮಿಕರಿಗೆ, ದೀನದಲಿತರರಿಗೆ ಸ್ವಯಂ ಉದ್ಯೋಗ ಯೋಜನೆ, ಹಿಂದುಳಿದ ವರ್ಗದವರಿಗೆ ಕನಕದಾಸ ವಿದ್ಯಾರ್ಥಿನಿಲಯ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ದೀನ್ ದಯಾಳ್ ಉಪಾಧ್ಯಾಯ ಸೌಹಾರ್ದ’ ಸಾವಿರ ಕೊಠಡಿಗಳ ಸಾಮರ್ಥ್ಯದ ವಿದ್ಯಾರ್ಥಿ ನಿಲಯ ನಿರ್ಮಿಸಲಾಗುತ್ತಿದೆ ಎಂದರು.

    ರೈತರಿಗೆ ಯಶಸ್ವಿನಿ, ಕ್ಷೀರಸಮೃದ್ಧಿ ಬ್ಯಾಂಕ್, ಮೂವತ್ತು ಲಕ್ಷ ರೈತರಿಗೆ ಸಾಲ. 3 ಸಾವಿರ ಕೋಟಿ ರೂ.ಗಳಲ್ಲಿ ರಾಜ್ಯ ಹೆದ್ದಾರಿ, ರೈಲ್ವೆ ಮಾರ್ಗ, ಬಂದರು, ಮೂಲಸೌಲಭ್ಯ ಅಭಿವೃದ್ಧಿ ಕೈಗೊಳ್ಳಲಾಗಿದೆ.

    ಪ್ರತಿಯೊಬ್ಬ ಹಿರಿಯ ನಾಗರಿಕರಿಗೆ ಕಣ್ಣು ತಪಾಸಣೆ ಮಾಡಿ ಕನ್ನಡಕ ನೀಡುವ ಮೂಲಕ ಕಟ್ಟಕಡೆಯ ವ್ಯಕ್ತಿಗೂ ದೃಷ್ಟಿ ನೀಡುವ ಕೆಲಸ ಪ್ರಾರಂಭಗೊಂಡಿದೆ. ಆಸಿಡ್ ದಾಳಿಗೆ ತುತ್ತಾದವರಿಗೆ ಮೂರರಿಂದ ಹತ್ತು ಸಾವಿರ ರೂ.ಗಳ ಹೆಚ್ಚಳ, ಪೌರಕಾರ್ಮಿಕರ ಗೌರವಧನ ಹೆಚ್ಚಿಸಿದೆ. ಕಳೆದ ವರ್ಷ, ಅತಿ ವೃಷ್ಟಿ ಹಾಗೂ ಪ್ರವಾಹದಿಂದ , ಮನೆ ಕಳೆದುಕೊಂಡಿರುವವರಿಗೆ ಎನ್.ಡಿ.ಆರ್.ಎಫ್ ಮಾರ್ಗಸೂಚಿಗಳಿಗಿಂತ ಹೆಚ್ವಿನ ಪರಿಹಾರ ನೀಡಿದೆ ಎಂದರು.

    ಅಭಿವೃದ್ಧಿಗೆ ಮೂರು ‘ಇ’ ಗಳು

    ನಾಡಿನ ಅಭಿವೃದ್ಧಿಗೆ 3 ಇ ಗಳು- ಈಸ್ ಆಫ್ ಲಿವಿಂಗ್, ಈಸ್ ಆಫ್ ಡೂಯಿಂಗ್ ಬಿಸಿನೆಸ್, ಈಸ್ ಆಫ್ ಅಪ್ ಬ್ರಿಂಗಿಂಗ್ ಗಳನ್ನು ಆಧಾರಿಸಿದ್ದೇವೆ. ಹಾಗೂ ದೀನದಲಿತರನ್ನು ಸಶಕ್ತಗೊಳಿಸಲು 3 ಇಗಳು,- ಶಿಕ್ಷಣ, ಉದ್ಯೋಗ , ಸಬಲೀಕರಣದ ಮಂತ್ರವನ್ನು ಅಳವಡಿಸಿಕೊಂಡಿದ್ದೇವೆ.

    ಪ್ರಧಾನಮಂತ್ರಿಗಳು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿ ಹೊಂದಿದ್ದು, ಇದಕ್ಕೆ ಕರ್ನಾಟಕ 1 ಟ್ರಿಲಿಯನ್ ಡಾಲರ್ ಆರ್ಥಿಕತೆ ಕೊಡುಗೆ ನೀಡುವ ವಿಶ್ವಾಸವಿದೆ. ನಮ್ಮಲ್ಲಿ ಸಂಕಲ್ಪ, ಛಲ. ದೂರದೃಷ್ಟಿ ಇದೆ. ನವಕರ್ನಾಟಕದಿಂದ ನವಭಾರತ ನಿರ್ಮಾಣ ಮಾಡಲಾಗುತ್ತಿದೆ. 6 ಇಂಜಿನಿಯರ್ ಕಾಲೇಜುಗಳನ್ನು ಐಐಟಿ ಮಾದರಿಯ ಕಾಲೇಜುಗಳನ್ನಾಗಿ ಮಾಡಲಾಗುತ್ತಿದೆ, 5 ಹೊಸ ಅಂತರರಾಷ್ಟ್ರೀಯ ಮಟ್ಟದ ನಗರಗಳನ್ನು ಕಟ್ಟುತ್ತಿದ್ದೇವೆ. ನೀರಾವರಿ ಯೋಜನೆಗಳನ್ನು ಸಮಯದಲ್ಲಿ ಪೂರ್ಣ ಮಾಡಿ, ರಾಜ್ಯದ ಪ್ರತಿಯೊಂದು ಹನಿ ನೀರನ್ನು ಸಮಪರ್ಕವಾಗಿ ಬಳಸಲು ಸಂಕಲ್ಪ ಮಾಡಲಾಗಿದೆ. ವಿದ್ಯುಚ್ಛಕ್ತಿ, ನೀರಾವರಿಯಲ್ಲಿ ಕ್ಷಮತೆ ಕಾಯ್ದುಕೊಳ್ಳಲಾಗಿದೆ ಎಂದರು.

    ಸುದೀರ್ಘ ಅನುಭವದ ರಾಷ್ಟ್ರ

    ಒಬ್ಬ ವ್ಯಕ್ತಿಯ ಜೀವನದಲ್ಲಿ ಎಪ್ಪತ್ತೈದು ವರ್ಷವಾದರೆ ಅದು ಹಿರಿಯ ವಯಸ್ಸು. ದೇಶವೊಂದಕ್ಕೆ 75 ವರ್ಷಗಳಾದರೆ, ಅದು ಅನುಭವ ಇರುವ ಯೌವನದ ವಯಸ್ಸು. 75 ವರ್ಷದ ಅನುಭವ ,ಮುಂದಿನ ನಡೆಯ ಬೇಕಾಗಿರುವ ದಾರಿಯ ಕುರಿತು ದಿಕ್ಸೂಚಿ ಹಾಕಿಕೊಳ್ಳಲು ಅಮೃತ ಕಾಲ. ದೇಹ ಮನಸ್ಸು ಎಲ್ಲಿ ಒಂದು ಕಡೆ ಇರುವುದೋ ಅದು ಅಮೃತ ಘಳಿಗೆ. ಈಗ ಅಮೃತ ಘಳಿಗೆ ಬಂದಿದೆ ಎಂದರು.

    ಈ ಸ್ವಾತಂತ್ರ್ಯ ಸುಲಭವಾಗಿ ಬಂದಿಲ್ಲ. ಹಲವಾರು ಅನಾಮಧೇಯರು ಹೋರಾಟ, ಸತ್ಯಾಗ್ರಹಗಳನ್ನು ಮಾಡಿದ್ದಾರೆ. ಹಲವು ಹೋರಾಟಗಾರರು ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಬ್ರಿಟೀಷರ ಗುಂಡಿಗೆ ಬಲಿಯಾಗಿದ್ದಾರೆ. ಆಸ್ತಿ ಪಸ್ತಿ ಕಳೆದುಕೊಂಡಿದ್ದಾರೆ. ರೈತರು ಕರ ನಿರಾಕರಣೆಯ ಚಳವಳಿ, ಬಾರ್ದೋಲಿ, ಇಂಡಿಗೋ ಸತ್ಯಾಗ್ರಹ, ದಕ್ಷಿಣ ಭಾರತದಲ್ಲಿ , ಡೆಕ್ಕನ್ ಸತ್ಯಾಗ್ರಹ, ಹೀಗೆ ರೈತ ಚಳವಳಿಯು ಮುಂಚೂಣಿಯಲ್ಲಿದ್ದಾಗ ನಮ್ಮ ಸಿಪಾಯಿ ದಂಗೆಯೂ ಕೂಡ ಇದಕ್ಕೆ ಪೂರಕವಾಗಿತ್ತು. ತದನಂತರದ ಘಟನೆಗಳ ಪರಿಣಾಮವಾಗಿ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್ ಮತ್ತು ತಂಡದವರಿಂದ ಇಡೀ ಭಾರತ ಜಾಗೃತಗೊಂಡಿತ್ತು. ನಂತರ ಮೂಲ ತಾತ್ವಿಕ ನಿಲುವನ್ನು ‘ ಸ್ವತಂತ್ರ ನನ್ನ ಜನ್ಮ ಸಿದ್ದ ಹಕ್ಕು’ ಎಂದ ಬಾಲಗಂಗಾಧರ ತಿಲಕ್ ಅವರಿಂದ ವೀರ್ ಸರ್ವಾಕರ್, ತತ್ಯಾ ಟೋಪಿ, ಜಾನ್ಸಿರಾಣಿ ಲಕ್ಷ್ಮೀಬಾಯಿ ಅವರುಗಳು ಸ್ವಾತಂತ್ರ್ಯದ ಕಿಚ್ಚು ಹಚ್ಚಿದರು ಎಂದರು.

    ಕರ್ನಾಟಕದ ಕೊಡುಗೆ
    ಇವೆಲ್ಲಕ್ಕೂ ಮುನ್ನ 1824 ರಲ್ಲಿ ಮೊದಲ ಸಿಪಾಯಿ ದಂಗೆ, ಕನ್ನಡ ನಾಡಿನ ವೀರ ರಾಣಿ ಕಿತ್ತೂರು ಚೆನ್ನಮ್ಮ ಬ್ರಿಟಿಷರ ಮೊದಲು ಸಡ್ಡು ಹೊಡೆದಿದ್ದು, ನಮ್ಮ ಸಣ್ಣ ರಾಜ್ಯ ಬ್ರಿಟಿಷ್ ರನ್ನು ಸಹ ಸೋಲಿಸಬಹುದು ಎಂದು ತೋರಿಸಿಕೊಟ್ಟರು ಎಂದರು.

    ದೇಶ ಕಟ್ಟಿದ ಎಲ್ಲರಿಗೂ ನಮನಗಳು
    ದೇಶ ಕಟ್ಟಲು ಕೊಡುಗೆ ನೀಡಿರುವ ಮಹಾನ್ ವ್ಯಕ್ತಿಗಳು, ಆಹಾರ ಭದ್ರತೆ ನೀಡಿದ ರೈತರು, ಗಡಿ ಕಾಯುವ ಸೈನಿಕರು ದೇಶದ ಆಂತರಿಕ ಭದ್ರತೆ ಕಾಪಾಡುತ್ತಿರುವ ಪೊಲೀಸ್ ಪಡೆ, ಶಿಕ್ಷಕರು , ವಿಜ್ಞಾನಿಗಳು, ಇಂಜಿನಿಯರ್ ಗಳು, ವೈದ್ಯರು , ಕೈಗಾರಿಕೆಗಳು, ಕೂಲಿ ಕಾರ್ಮಿಕರು, ದೀನ ದಲಿತರು ಸೇರಿದಂತೆ ಈ ದೇಶವನ್ನು ಕಟ್ಟಲು ತಮ್ಮ ಕೊಡುಗೆ ನೀಡಿರುವ ಎಲ್ಲರಿಗೂ ನನ್ನ ನಮನಗಳನ್ನು ಸಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

    ಬೆಂಗಳೂರು ಸ್ಕೂಲ್ ಆಫ್ ವಿಜುಅಲ್ ಆರ್ಟ್ಸ್ ವಿದ್ಯಾರ್ಥಿಗಳ ಕಲಾಪ್ರದರ್ಶನ

    ವಿ ಎಸ್ ನಾಯಕ

    ಕಲೆ ಎಂಬುದು ಎಂಥವರನ್ನಾದರೂ ಹೇಗಾದರೂ ಆಕರ್ಷಿಸಬಹುದು. ಚಿಕ್ಕವಯಸ್ಸಿನಿಂದ ಹುಟ್ಟಿದ ಕಲಾಪ್ರೀತಿ ನಂತರ ಹೆಮ್ಮರವಾಗಿ ಮುಂದಿನ ದಿನಗಳಲ್ಲಿ ಕಲಾವಿದನಾಗಬೇಕು ಅದ್ಭುತವಾದ ಚಿತ್ರಗಳನ್ನು ಬಿಡಿಸಬೇಕು ಎಂಬ ಹಂಬಲ ಇರುವುದು ಸಹಜ. ಕಲಾವಿದನಾಗ ಬೇಕಾದರೆ ಅದರ ಬಗ್ಗೆ ಅಪಾರವಾದ ಆಸಕ್ತಿ ಸರಿಯಾದ ಗುರಿ ಇದ್ದಾಗ ಮಾತ್ರ ಕೆಲಸವನ್ನು ಸುಲಭ ಮಾಡಿಕೊಳ್ಳಬಹುದು.

    ಅಂತಹ ರೀತಿಯ ಗುರಿಯನ್ನು ಹೊಂದಿ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಬೆಂಗಳೂರು ಸ್ಕೂಲ್ ಆಫ್ ವಿಜುವಲ್ ಆರ್ಟ್ ಸಂಜೆ ಕಾಲೇಜಿನಲ್ಲಿ ಕಲಿಯಬೇಕೆಂಬ ಆಸಕ್ತಿಯನ್ನು ಹೊಂದಿ ಹಲವಾರು ಕಲಾವಿದರು ಇಲ್ಲಿಗೆ ಬಂದು ಸೇರಿ ತಾವು ಎಂದು ಅರಿಯದ ವಿಭಿನ್ನವಾದ ವಿಶಿಷ್ಟವಾದ ಕಲಾವಿದರಾಗಿ ಹೊರಹೊಮ್ಮುತ್ತಿರುವ ವಿಶೇಷ. ಕಾಲೇಜಿನಲ್ಲಿ ಸೇರಿ ಅಂದಿನಿಂದ ಇಂದಿನ ವರೆಗೆ ಕಲಾ ಶಿಕ್ಷಕರ ಮಾರ್ಗದರ್ಶನದಲ್ಲಿ ವಿಭಿನ್ನ ಕಲಾಪ್ರಕಾರಗಳನ್ನು ಕಲಿತು ವಿಸ್ಮಯಕಾರಿಯಾದ ಕಲಾ ಲೋಕವನ್ನೇ ಸೃಷ್ಟಿಸಿದ್ದಾರೆ. ಇಲ್ಲಿ ಇಷ್ಟು ವರ್ಷಗಳ ಕಾಲ ತಾವು ತಿಳಿದ ಕಲಿತ ಹಲವಾರು ವಿಚಾರಧಾರೆಗಳನ್ನು ವಿಭಿನ್ನ ಕಲಾಕೃತಿಗಳ ಮೂಲಕ ಕಲಾಸಕ್ತರ ಮಡಿಲಿಗೆ ಅರ್ಪಿಸಲು ಹೊರಟಿದ್ದಾರೆ. ಚಿತ್ರಕಲಾವಿದರ ಕುಂಚದಲ್ಲಿ ಮತ್ತು ಶಿಲ್ಪಗಳಲ್ಲಿ ಅದ್ಭುತವಾದ ಕಲಾಕೃತಿಗಳು ಮೂಡಿಬಂದಿರುವುದು ವಿಶೇಷ.

    ಈ ವಿದ್ಯಾರ್ಥಿಗಳ ಕಲಾಪ್ರದರ್ಶನ ಕುಮಾರಕೃಪಾ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್ತಿನ ಕಲಾ ಗ್ಯಾಲರಿಯಲ್ಲಿ ನಡೆಯಲಿದ್ದು ವಿದ್ಯಾರ್ಥಿಗಳ ಕೈಚಳಕದಲ್ಲಿ ಅರಳಿದ ವಿಭಿನ್ನವಾದ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಟ್ಟಿರುವುದು ನಿಜವಾಗಿಯೂ ಶ್ಲಾಘನೀಯ. ಕಲಾ ಲೋಕವೇ ಧರೆಗಿಳಿದುಬಂದಂತೆ ಗೋಚರವಾಗುವ ಕಲಾಪ್ರದರ್ಶನ ಎಂಥವರಿಗಾದರೂ ಕೂಡ ಒಂದು ಅದ್ಭುತ ಕಲಾ ತಾಣಕ್ಕೆ ಆಡಿಯಿಟ್ಟ ಅನುಭವವಾಗುತ್ತದೆ. ಹಲವಾರು ವಿದ್ಯಾರ್ಥಿಗಳು ತಮಗೆ ಅನಿಸಿರುವ ಕಲಾಕೃತಿಗಳನ್ನು ಇಲ್ಲಿ ಪ್ರದರ್ಶಿಸಲಿದ್ದಾರೆ. ಇವರ ಅದ್ಭುತ ಕಲಾಪ್ರದರ್ಶನವನ್ನು ವೀಕ್ಷಿಸುವ ಭಾಗ್ಯ ತಮ್ಮ ಪಾಲಿಗೆ ಆಗಲಿದೆ. ತಮ್ಮ ಬಿಡುವಿನ ವೇಳೆಯನ್ನು ಚಿತ್ರಕಲಾ ಪರಿಷತ್ತಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಕಲಾ ಪ್ರದರ್ಶನವನ್ನು ವೀಕ್ಷಿಸಬಹುದು
    ದಿನಾಂಕ ಆಗಸ್ಟ್ 10 ನಿಂದ 18ವರೆಗೆ ನಡೆಯುವ ಈ ಕಲಾಪ್ರದರ್ಶನ ಉಚಿತ ಪ್ರವೇಶವಿದೆ

    ಪ್ರದರ್ಶನದ ಸ್ಥಳ:ಕರ್ನಾಟಕ ಚಿತ್ರಕಲಾ ಪರಿಷತ್ತು ಕಲಾ ಗ್ಯಾಲರಿ
    ಕುಮಾರಕೃಪಾ ರಸ್ತೆ ಬೆಂಗಳೂರು

    ಆಗ ಇದ್ದಿದ್ದು ಅಸಲಿ ಕಾಂಗ್ರೆಸ್, ಈಗಿರುವುದು ನಕಲಿ ಕಾಂಗ್ರೆಸ್ ರಾಷ್ಟ್ರೀಯ ಪಕ್ಷಗಳ ವಿರುದ್ಧ ಮಾಜಿ ಮುಖ್ಯಮಂತ್ರಿ ಆಕ್ರೋಶ

    BENGALURU AUG 15

    ಇಂದು ದೇಶಪ್ರೇಮವನ್ನು ಗುತ್ತಿಗೆ ಪಡೆದವರಂತೆ ವರ್ತಿಸುತ್ತಿರುವ ಶಕ್ತಿಗಳೇ ಸ್ವಾತಂತ್ರ್ಯ ನಂತರ ದೇಶ ವಿಭಜನೆಗೆ ಕಾರಣವಾದವು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

    ಹಾಗೆಯೇ, ಕಾಂಗ್ರೆಸ್ ವಿರುದ್ಧವೂ ಟೀಕಾ ಪ್ರಹಾರ ನಡೆಸಿದ ಅವರು; ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಕಾಂಗ್ರೆಸ್ ಪಕ್ಷವೇ ಬೇರೆ, ಆದರೆ, ಈಗಿನ ಕಾಂಗ್ರೆಸ್ ನಕಲಿ ಕಾಂಗ್ರೆಸ್ ಎಂದು ನೇರವಾಗಿ ಹೇಳಿದರು.

    ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ಜೆಡಿಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಡೆದ 75ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

    ಒಂದು ಕಡೆ ನೆಹರೂ ಭಾವಚಿತ್ರ ಕಣ್ಮರೆ ಮಾಡುತ್ತಾರೆ. ಮತ್ತೊಂದು ಕಡೆ ಜವಹಾರಲಾಲ್ ನೆಹರೂ ರಾಷ್ಟ್ರ ವಿಭಜನೆ ಆಗಲು ಕಾರಣ ಅಂತ ನೆಪ ಹೇಳುತ್ತಾರೆ. ಅಂದು ನಿಮ್ಮ (ಬಿಜೆಪಿಯ) ಸಂಕುಚಿತ ಮನೋಭಾವದಿಂದಲೇ ದೇಶ ವಿಭಜನೆ ಆಗಲು ಕಾರಣ. ಇಂದು ನೋಡಿದರೆ ನೆಹರು ಅವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಲಾಗುತ್ತಿದೆ ಎಂದರು ಅವರು.

    75 ವರ್ಷದ ಸವಿನೆನಪಿಗಾಗಿ ಬಿಜೆಪಿ ಹರ್‌ಘರ್ ತಿರಂಗ ಎಂಬ ಕಾರ್ಯಕ್ರಮ ಮಾಡಿದೆ. ಕಾಂಗ್ರೆಸ್ ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿವೆ. ಅದರ ಎರಡೂ ರಾಷ್ಟ್ರೀಯ ಪಕ್ಷಗಳೂ ಜನರಿಗೆ ಮಂಕಬೂದಿ ಎರಚುತ್ತುವೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

    ಅಂದು ಸ್ವಾತಂತ್ರ್ಯಕ್ಕಾಗಿ ಹುಟ್ಟಿಕೊಂಡ ಕಾಂಗ್ರೆಸ್‌ ಬೇರೆ. ಇಂದು ಕಾಂಗ್ರೆಸ್ ಹೆಸರೇಳಿ ರಾಜಕೀಯ ಮಾಡುವವರು ನಕಲಿ ಕಾಂಗ್ರೆಸ್ಸಿಗರು. ಅಂದು ಹಲವಾರು ಮಂದಿ ಪ್ರಾಣ ತ್ಯಾಗ ಮಾಡಿ ಸ್ವಾತಂತ್ರ್ಯ ತಂದುಕೊಟ್ಟರು. ಸ್ವಾತಂತ್ರ್ಯ ತಂದುಕೊಟ್ಟ ನಂತರದ ದಿನಗಳ ಬಗ್ಗೆ ಈಗ ಚರ್ಚೆ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿಗಳು ನುಡಿದರು.

    ಜವಾಹರಲಾಲ್ ನೆಹರು ಭಾವಚಿತ್ರ ವಿಚಾರದಲ್ಲಿ ಬಿಜೆಪಿ ಸರ್ಕಾರ ಹೇಗೆ ನಡೆದುಕೊಂಡಿದೆ ಎಂಬುದನ್ನು ನೋಡಿದ್ದೇ‌ನೆ. ಅದಕ್ಕೆ ನಾವೆಲ್ಲರೂ ತಲೆ ತಗ್ಗಿಸುವ ಕೆಲಸವಾಗಿದೆ ಎಂಬುದು ನನ್ನ ಅಭಿಪ್ರಾಯ. ನೆಹರು ಕುಟುಂಬ ಸ್ವಾತಂತ್ರ್ಯ ಹೋರಾಟದಲ್ಲಿ ಹೇಗೆ ಭಾಗವಹಿಸಿತ್ತು. ಅವರ ಕೊಡುಗೆ ಏನೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಎಂದು ನೆಹರು ಭಾವಚಿತ್ರ ಹಾಕದಿದ್ದಕ್ಕೆ ಕುಮಾರಸ್ವಾಮಿ ಅವರು ಅಸಮಾಧಾನ ವ್ಯಕ್ತಪಡಿಸಿದರು.

    ಸಾವರ್ಕರ್ ಭಾವಚಿತ್ರ ತೆಗೆದರೆಂದು ಮುಸ್ಲಿಂ ಯುವಕರನ್ನು ಬಂಧನ ಮಾಡಿದ್ದಾರೆ. ಅಲ್ಲಿ ಸಾವರ್ಕರ್ ಭಾವಚಿತ್ರ ತೆಗೆದರೆಂಬ ಕಾರಣಕ್ಕೆ ಇಲ್ಲಿ ಟಿಪ್ಪು ಫ್ಲೆಕ್ಸ್ ಹರಿದು ಹಾಕಿದ್ದಾರೆ. ಇದು ಅಮೃತ ಮಹೋತ್ಸವ ಆಚರಿಸುವ ವಿಧಾನವೇ? ಎಂದು ಪ್ರಶ್ನಿಸಿದರು ಕುಮಾರಸ್ವಾಮಿ ಅವರು.

    ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ವಾತಂತ್ರ್ಯ ದಿನವನ್ನು ವಿಶೇಷವಾಗಿ ಆಚರಣೆ ಮಾಡಬೇಕೆಂದು ಕರೆಕೊಟ್ಟಿವೆ. ಆದರೆ ಅವರೇ ಸಂಕುಚಿತ ಮನೋಭಾವದಲ್ಲಿ ಈ ಮಹಾನ್ ದಿನವನ್ನು ಆಚರಿಸುತ್ತಿದ್ದಾರೆ. ನಾಡಿನ ಅನೇಕ ಮಹನೀಯರ ಕೊಡುಗೆ ಸ್ಮರಿಸುವಲ್ಲಿ ಸಂಕುಚಿತ ಮನೋಭಾವ ತೋರಿಸುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

    ಊಟ, ವಸತಿ ಕೊಡದೇ ಹರ್ ಘರ್ ತಿರಂಗ ಮಾಡಿ ಪ್ರಯೋಜನ ಏನು?. ಕೋವಿಡ್ ಅನಾಹುತ ಸಂದರ್ಭದಲ್ಲಿ ಏನೇನಾಯಿತು? ಮನೆ ಮನೆಯ ಮೇಲೆ ಬಾವುಟ ಹಾರಿಸಿ ಎಂದು ಕರೆ ಕೊಟ್ಟಿದ್ದೀರಾ. ಆದರೆ, ಎಷ್ಟೋ ಜನಕ್ಕೆ ವಾಸ ಮಾಡಲು ಮನೆ ಇಲ್ಲ. ಫ್ಲೈ ಓವರ್ ಗಳ ಕೆಳಗೆ, ದೊಡ್ಡ ದೊಡ್ಡ ಪೈಪುಗಳಲ್ಲಿ ಜನ ವಾಸ ಮಾಡುತ್ತಿದ್ದಾರೆ. ಬೃಹತ್ ಜಾಥಾಗಳನ್ನು ಮಾಡಿಕೊಂಡು ಹೊರಟ್ಟಿದ್ದಿರಿ, ನಿಮ್ಮ ಜಾಥಾಗಳಿಂದ ಜನರ ಹೊಟ್ಟೆ ತುಂಬಲ್ಲ. ಪ್ರಧಾನಿ ನರೇಂದ್ರ ಮೋದಿ ಒಂದು ಕಡೆ ಹೇಳುತ್ತಾರೆ. ಉಚಿತ ಸೌಲಭ್ಯಗಳನ್ನು ಕೊಡುವುದು ನಿಲ್ಲಿಸಬೇಕು. ಎಷ್ಟೋ ಕುಟುಂಬಗಳು ಎರಡು ಹೊತ್ತಿನ ಊಟಕ್ಕೆ ಪರದಾಡುವ ಸ್ಥಿತಿ ಇದೆ. ಅಂತಹ ಕುಟುಂಬಗಳ ಗತಿ ಏನು? ಎಂದು ಬಿಜೆಪಿ ಸರ್ಕಾರಗಳನ್ನು ಹೆಚ್ ಡಿಕೆ ಪ್ರಶ್ನಿಸಿದರು.

    ಸ್ವಾತಂತ್ರ್ಯ ದ ಅಮೃತ ಮಹೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯಗಳು. ಈ ಸ್ವಾತಂತ್ರ್ಯ ದಿನ ಪ್ರತಿ ಕನ್ನಡಿಗರಿಗೆ, ಪ್ರತಿ ಭಾರತೀಯರಿಗೆ ಮಹತ್ವದ ದಿನ. ಹಲವಾರು ಕ್ಲಿಷ್ಟಕರವಾದ ದಿನಗಳನ್ನು ಇಷ್ಟು ದಿನಗಳಲ್ಲಿ ಕಂಡಿದ್ದೇವೆ. ಹಂತ ಹಂತವಾಗಿ ಪ್ರಗತಿಯನ್ನು ಕಾಣುತ್ತಿದ್ದೇವೆ. ಶಾಂತಿ ಹಾಗೂ ಸಹಬಾಳ್ವೆಯಿಂದ ಬಾಳುವಂತಹ ವಾತಾವರಣ ಸೃಷ್ಟಿ ಮಾಡಬೇಕಿದೆ. ಇಂದು ಕನ್ನಡಿಗರಿಗೆ ಅತ್ಯಂತ ಮಹತ್ವವಾದ ದಿನ. ದೇಶಕ್ಕೆ ಬೇಕಾಗಿರೋದು ಶಾಂತಿ ಸಹಬಾಳ್ವೆ. ಪ್ರತಿಯೊಬ್ಬರೂ ತಮ್ಮ ನಡವಳಿಕೆಯಿಂದ ಅಮೃತಮಹೋತ್ಸವ ಅರ್ಥಪೂರ್ಣವಾಗಿ ಆಚರಿಸಬೇಕಿದೆ ಎಂದು ಹೇಳಿದರು.

    ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು, 1995ರಲ್ಲೇ ಜನತಾದಳ ಕಚೇರಿಯಲ್ಲಿ ಧ್ವಜಾರೋಹಣ ಮಾಡಿದೆ. ಆ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿ ಹೆಚ್.ಡಿ.ದೇವೇಗೌಡರು ಧ್ವಜಾರೋಹಣ ಮಾಡಿದ್ದರು. ಮುಂದಿನ ಬಾರಿ ನಾನು ಇಲ್ಲೇ ಧ್ವಜಾರೋಹಣ ಮಾಡುತ್ತೇನೆ. ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿ ಧ್ವಜಾರೋಹಣ ಮಾಡುತ್ತಾರೆ ಎಂದು ಭವಿಷ್ಯ ನುಡಿದರು.

    ಕೆಂಪುಕೋಟೆ ಮೇಲೆ ರಾಷ್ಟ್ರಧ್ವಜ ಹಾರಿಸಿದ ಏಕೈಕ ಕನ್ನಡಿಗ ಹೆಚ್.ಡಿ.ದೇವೇಗೌಡರು. ಮುಂದಿನ ಬಾರಿ ಕುಮಾರಸ್ವಾಮಿ ಸಿಎಂ ಆಗಿ ದ್ವಜಾರೋಹಣದ ಮಾಡುತ್ತಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸ್ವಾತಂತ್ರ್ಯ ಸಂದೇಶದಲ್ಲಿ ಕುವೆಂಪು ಅವರ ಕವನ ಕೇಳಿ ಸಂತೋಷ ಆಯಿತು. ಭಾರತ ಜನನಿಯ ತನುಜಾತೆ ಕನ್ನಡಾಂಬೆಗೆ ಆಗುತ್ತಿರುವ ಅನ್ಯಾಯ ಕುಮಾರಸ್ವಾಮಿ ಸರಿಪಡಿಸ್ತಾರೆ. ಹಸಿವು ಮುಕ್ತ, ಬಡತನ ಮುಕ್ತ ಕರ್ನಾಟಕವನ್ನಾಗಿ ಕುಮಾರಸ್ವಾಮಿ ಮಾಡ್ತಾರೆ. ಮುಂದೆ ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬರುವುದು ಖಂಡಿತಾ ಎಂದು ಹೇಳಿದರು.

    ವಿಧಾನ ಪರಿಷತ್ ಸದಸ್ಯರಾದ ಟಿ.ಎ.ಶರವಣ, ಜೆಡಿಎಸ್ ನಗರ ಘಟಕದ ಅಧ್ಯಕ್ಷರಾದ ಆರ್.ಪ್ರಕಾಶ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

    ಹರ್ ಘರ್ ತಿರಂಗಾ ಯಶಸ್ವಿಯಾಗಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

    BENGALURU AUG 15

    ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹರ ಘರ ತಿರಂಗಾ ಅತ್ಯಂತ ಯಶಸ್ವಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.ಇಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ 225 ನೇ ಜಯಂತೋತ್ಸವದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

    ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕರೆಯ ಹರ್ ಘರ್ ತಿರಂಗಾ ಅತ್ಯಂತ ಯಶಸ್ವಿಯಾಗಿ, ಅದ್ಭುತವಾಗಿಯಾಗಿದೆ. ಮುಂದಿನ 25 ವರ್ಷಕ್ಕೆ ಭದ್ರ ಬುನಾದಿಯಾಗಿದೆ‌. ಎಲ್ಲರೂ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

    75 ವರ್ಷದ ಸ್ವತಂತ್ರ್ಯೋತ್ಸವವನ್ನು ಇಡೀ ದೇಶವೇ ಆಚರಣೆ ಮಾಡುತ್ತಿದೆ. ದೇಶದಲ್ಲಿ 40 ಕೋಟಿ ಮನೆಗಳ ಮೇಲೆ ಧ್ವಜ ಹಾರಾಡುತ್ತಿದೆ. ಕರ್ನಾಟಕದಲ್ಲಿ 1.25 ಕೋಟಿ ಮನೆಗಳ ಮೇಲೆ ಧ್ವಜ ಹಾರಾಡುತ್ತಿದೆ. ಎಲ್ಲರೂ ಸೇರಿ ಸಂಭ್ರಮಿಸಬೇಕು. ಇದರಲ್ಲಿ ಜಾತಿ, ಮತ, ಪಕ್ಷ, ಪಂಗಡ ಇಲ್ಲ. ನಾವೆಲ್ಲರೂ ಭಾರತೀಯರು. ಒಗ್ಗಟ್ಟಾಗಿ ಒಂದಾಗಿ ಮಾಡಬೇಕು. ಎಷ್ಟು ಜನ ಇದರಲ್ಲಿ ಪಾಲ್ಗೊಳ್ಳುತ್ತಾರೆ ಅಷ್ಟು ಒಳ್ಳೆಯದ್ದು. ನಾನು ಎಲ್ಲವನ್ನೂ ಸ್ವಾಗತ ಮಾಡುತ್ತೇನೆ.ದೇಶ ಒಂದಾಗಿ ಎದ್ದು ನಿಲ್ಲಬೇಕೆಂದು ಎಲ್ಲರೂ ಸಹಕಾರ ಕೊಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

    ತ್ರಿವರ್ಣ ಧ್ವಜದಡಿಯಲ್ಲಿ ನಾವೆಲ್ಲರೂ ಒಂದೇ

    ಬಾವುಟದ ಬಗ್ಗೆ ಜಗಳ ಏನಿಲ್ಲ. ತ್ರಿವರ್ಣ ಧ್ವಜದಡಿಯಲ್ಲಿ ನಾವೆಲ್ಲರೂ ಒಂದೇ. ಉಳಿದ ವೇಳೆ ಬೇರೆ. ಭಾರತದ ತ್ರಿವರ್ಣ ಧ್ವಜದಡಿಯಲ್ಲಿ ನಾವೆಲ್ಲರೂ ಭಾರತ ಮಾತೆಯ ಮಕ್ಕಳು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

    ಕರ್ನಾಟಕದಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮದ ಘಟನೆಗಳು

    ಪ್ರಸ್ತುತ ವರ್ಷದಲ್ಲಿ ನಮ್ಮ ದೇಶದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಬಹಳ ವಿಜೃಂಭಣೆಯಿಂದ ನಾವೆಲ್ಲರೂ ಆಚರಿಸುತ್ತಿದ್ದೇವೆ. ಪ್ರತಿಯೊಬ್ಬ ಭಾರತೀಯನಲ್ಲೂ ದೇಶ ಪ್ರೇಮವನ್ನು ಪ್ರೇರೇಪಿಸಲು ಪ್ರತಿಯೊಂದು ಮನೆಯಲ್ಲೂ ರಾಷ್ಟ್ರಧ್ವಜವನ್ನು ಹಾರಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಇಂತಹ ಒಂದು ಸುಸಂದರ್ಭದಲ್ಲಿ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ವೈಯಕ್ತಿಕ ಸುಖ ಸಂಪತ್ತುಗಳನ್ನು ತ್ಯಜಿಸಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿದ ಮಹನೀಯರನ್ನು ಮತ್ತು ಅವರು ಮಾಡಿದ ತ್ಯಾಗ ಮತ್ತು ಸೇವೆಯನ್ನು ನೆನೆಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ. ಈ ದಿಸೆಯಲ್ಲಿಈ ಲೇಖನವನ್ನು ಅವರ ನೆನಪಿಗಾಗಿ ಅರ್ಪಿಸುತ್ತೇನೆ. 

    ನಮಗೆಲ್ಲರಿಗೂ ತಿಳಿದಿರುವಂತೆ ಭಾರತದ ಸ್ವಾತಂತ್ರ್ಯ ಚಳವಳಿಯು ಅನೇಕ ಚಾರಿತ್ರಿಕ ಹೋರಾಟಗಳ ಸರಮಾಲೆ. ಸ್ವಾತಂತ್ರ್ಯ ಚಳುವಳಿಯ ಮೂಲೋದ್ದೇಶ ಬ್ರಿಟಿಷರನ್ನು ನಮ್ಮ ದೇಶದಿಂದ ತೊಲಗಿಸುವುದೆ ಆಗಿತ್ತು. ನವರೋಜಿ, ಗೋಖಲೆ, ರಾನೆಡೆ, ತಿಲಕ್ ಮತ್ತಿರರ ನೇತೃತ್ವದಲ್ಲಿ ಪ್ರಾರಂಭಗೊಂಡ ಸ್ವಾತಂತ್ರ್ಯ ಸಂಗ್ರಾಮವು 1857 ರಿಂದ 1947 ರ ವರೆಗೆ ಸುಮಾರು ತೊಂಬತ್ತು ವರ್ಷಗಳ ಕಾಲ ಸತತವಾಗಿ ನಡೆಯಿತು. ಇದರ ಪ್ರತಿಫಲವಾಗಿ ಸ್ವಾತಂತ್ರ್ಯದ ತದನಂತರ ಜನಿಸಿದ ನಾವುಗಳೆಲ್ಲರೂ ಈ ದಿನ ನೆಮ್ಮದಿಯಿಂದ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ.

    ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಮಾತನಾಡುವಾಗ ಅಥವಾ ಲೇಖನಗಳನ್ನು ಬರೆಯುವಾಗ ಸಾಮಾನ್ಯವಾಗಿ ರಾಷ್ಟ್ರೀಯ ಮಟ್ಟದಲ್ಲಿ ನಡೆದಂತಹ ಚಳವಳಿಗಳಾದ ಉಪ್ಪಿನ ಸತ್ಯಾಗ್ರಹ, ಭಾರತ ಬಿಟ್ಟು ತೊಲಗಿ, ಸಿಪಾಯಿ ದಂಗೆ ಇತ್ಯಾದಿಗಳನ್ನೇ ಉಲ್ಲೇಖಿಸುತ್ತಿರುತ್ತೇವೆ. ಆದರೆ ರಾಜ್ಯಗಳ ಮಟ್ಟದಲ್ಲಿ ನಡೆದಂತಹ ಹಲವಾರು ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಳು ಮತ್ತು ಘಟನೆಗಳು ನಮ್ಮ ನೆನಪಿನಲ್ಲಿಉಳಿಯದೆ ಹೊಸ ತಲೆಮಾರಿನ ಪ್ರಜೆಗಳಿಗೆ ಈ ಘಟನೆಗಳ ಬಗ್ಗೆ ಯಾವುದೇ ಅರಿವು ಮತ್ತು ಮಾಹಿತಿ ಇರುವುದಿಲ್ಲ. ಆದರೆ ರಾಜ್ಯ ಮಟ್ಟದಲ್ಲಿ ನಡೆದ ಘಟನೆಗಳು ಸ್ವಾತಂತ್ರ್ಯ ಚಳವಳಿಯ ದಿಕ್ಕನ್ನೆ ಬದಲಾಯಿಸಿ ಸಾಮಾನ್ಯ ಪ್ರಜೆಗಳಲ್ಲಿ ದೇಶ ಪ್ರೇಮವನ್ನು ಉತ್ತೇಜಿಸಿ ಮತ್ತು ದ್ವಿಗುಣಗೊಳಿಸಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸಿರುತ್ತವೆ. ಈ ಲೇಖನದಲ್ಲಿ ಕರ್ನಾಟಕದಲ್ಲಿ ನಡೆದು  ನಮ್ಮ ನೆನಪಿನಲ್ಲಿ ಉಳಿಯದೆ ಮರೆತು ಹೋಗಿರುವ ಕೆಲವು ಘಟನೆಗಳ ಬಗ್ಗೆ ಮಾಹಿತಿಯನ್ನು ನೀಡಲು ಪ್ರಯತ್ನಿಸುತ್ತಿದ್ದೇನೆ. 

    ಈಚಲು ಮರದ ಚಳವಳಿ

    ಈ ಚಳುವಳಿಯು ಚಿತ್ರದುರ್ಗ ಜಿಲ್ಲೆಯ ತುರುವನೂರು ಎಂಬ ಕುಗ್ರಾಮದಲ್ಲಿ ನಡೆಯಿತು. ಈ ಒಂದು ಘಟನೆಯಿಂದ ಈ ಹಳ‍್ಳಿಯು ಸ್ವಾತಂತ್ರ್ಯ ಚಳವಳಿಯ ಹಲವಾರು ಚಟುವಟಿಕೆಗಳ ಕೇಂ‍ದ್ರ ಬಿಂದುವಾಗಿತ್ತು. 1939 ರಲ್ಲಿ ಮಹಾತ್ಮ ಗಾಂಧೀಜಿಯವರು ದೇಶಾದ್ಯಂತ ಮದ್ಯಪಾನವನ್ನು ನಿಷೇಧಿಸುವಂತೆ ಕರೆ ನೀಡಿದರು. ಇವರ ಕರೆಗೆ ಓಗೊಟ್ಟು ಸುಮಾರು ಎಂಬತ್ತು ತುರುವನೂರು ಗ್ರಾಮಸ್ಥರು ( ಮಹಿಳೆಯರು ಸೇರಿದಂತೆ ) ಗ್ರಾಮದ ಸುತ್ತಮುತ್ತಲು ಇರುವ ಈಚಲು ಮರಗಳನ್ನು ಕಡಿಯುವುದರ ಮುಖಾಂತರ ಸ್ಪಂದಿಸಿದರು.  ಈ ಹೋರಾಟದಲ್ಲಿ ಗಾಂಧೀವಾದಿಗಳಾದ ದಿವಂಗತ ಎ‍ಸ್. ನಿಜಲಿಂಗಪ‍್ಫನವರು ಮುಂದಾಳತ‍್ವವನ‍್ನು ವಹಿಸಿದ್ದರು. ಇದರ ಫಲವಾಗಿ ಅವರನ್ನು ಬಂಧಿಸಿ ಚಿತ್ರದುರ್ಗದ ಜೈಲಿನಲ್ಲಿ ಒಂದು ವರ್ಷದ ಕಾಲ ಇಡಲಾಯಿತು. ಹಲವಾರು ತಿಂಗಳುಗಳ ಕಾಲ ನಡೆದ ಈ ಚಳವಳಿ ಮಹಾತ್ಮ ಗಾಂಧೀಜಿಯವರ ಗಮನವನ್ನು ಸೆಳೆಯಿತು. ಅವರ ವ್ಯೆಯಕ್ತಿಕ ಕಾರ್ಯದರ್ಶಿಗಳಾದಂತಹ ಮಹದೇವ ದೇಸಾಯಿಯವರು 1942 ರಲ್ಲಿ ಗ್ರಾಮಕ್ಕೆ ಭೇಟಿ ಕೊಟ್ಟು ಚಳುವಳಿಗೆ ಪ್ರೋತ್ಸಾಹವನ್ನು ನೀಡಿದರು. 

    ಈಚಲು ಮರಗಳನ್ನು ಕಡಿದ ಕಾರಣದಿಂದಾಗಿ ಮದ್ಯದ  ಉತ್ಪಾದನೆಯು ಕುಂಠಿತವಾಗಿ ಸರ್ಕಾರದ ಭೊಕ್ಕಸಕ್ಕೆ ಆರ್ಥಿಕವಾಗಿ ಬಹಳಷ್ಟು ನಷ್ಟವಾಯಿತು. ಇದನ್ನು ಗಮನಿಸಿದ ಮೈಸೂರು ಅರಸರು ಗ್ರಾಮಸ‍್ಥರ ಮೇಲೆ ಪುಂಡು ಕಂದಾಯವನ್ನು ಏರಿದರು. ಆದರೆ ಪುಂಡು ಕಂದಾಯ ಕಟ್ಟುವುದನ್ನು ದಿಕ್ಕರಿಸಿ ಕಂದಾಯ ರಹಿತ ಚಳವಳಿಗೆ ಬುನಾದಿಯಾಯಿತು. ಈ ಘಟನೆಯು ಸಣ‍್ಣ ಪ್ರಮಾಣದ್ದು ಎನಿಸಿದರು ಬ್ರಿಟಿಷರ ಆಳ್ವಿಕೆಯ ವಿರುದ್ದ ಹೋರಾಡಲು ಜನರನ್ನು ಒಟ್ಟುಗೂಡಿಸುವಲ್ಲಿ ಯಶಸ್ವಿಯಾಯಿತು. ಈ ಚಳವಳಿಯ ಜ್ಞಾಪಕಾರ್ಥವಾಗಿ 1948ರಲ್ಲಿ ಮಹಾತ್ಮ ಗಾಂಧೀಜಿಯವರ ಪುತ‍್ಥಳಿಯನ್ನು ಅನಾವರಣ ಮಾಡಲಾಯಿತು. ಈ ಪುತ‍್ಥಳಿಯನ್ನು ಗ್ರಾಮದಲ್ಲಿ ಇಂದು ಸಹ ನೋಡಬಹುದಾಗಿದೆ.

    ಅಂಕೋಲದ ಉಪ್ಪಿನ ಸತ್ಯಾಗ್ರಹ

    ಮಹಾತ್ಮ ಗಾಂಧೀಜಿಯವರ  ನೇತೃತ್ವದಲ್ಲಿ 1930ರ ಮಾರ್ಚ್ 12 ರಿಂದ ಏಪ್ರಿಲ್ 6 ರ ವರೆಗೆ ನಡೆದಂತಹ ದಂಡಿ ಉಪ್ಪಿನ ಸತ್ಯಾಗ್ರಹ ನಮಗೆಲ್ಲರಿಗೂ ತಿಳಿದಿರುವಂತಹ ವಿಷಯ. ಈ ಘಟನೆಯು ದೇಶದಾದ್ಯಂತ ಸ್ವಾತಂತ್ರ್ಯ ಹೋರಾಟಗಾರರ ಕಿಚ್ಚನ್ನು ತ್ರಿಗುಣಗೊಳಿಸುವಲ್ಲಿ ಯಶಸ್ವಿಯಾಯಿತು. ಈ ದಂಡಿಯಾತ್ರೆಯಲ್ಲಿ ನಮ್ಮ ಈಡೀ ಕರ್ನಾಟಕದಿಂದ ಹಾವೇರಿ ಜಿಲ್ಲೆಯ ಮೈಲಾರ ಮಹದೇವಪ್ಪನವರು ರಾಜ್ಯವನ್ನು ಪ್ರತಿನಿಧಿಸಿದ ಏಕೈಕ ಹೋರಾಟಗಾರ. ಇವರು ಶಬರಿಮತಿ ಆಶ್ರಮದಿಂದ ದಂಡಿಯವರೆಗೂ ಯಾತ್ರೆಯಲ್ಲಿ ಭಾಗವಹಿಸಿದ ಮಹನೀಯರು.

    ದಂಡಿಯಾತ್ರೆಯ ಯಶಸ್ಸನ್ನು ಗಮನಿಸಿದ ಕರ್ನಾಟಕ ರಾಜ್ಯದ ಹೋರಾಟಗಾರರು ರಾಜ್ಯದಲ್ಲೂ ಸಹ ಅದೇ ಮಾದರಿಯಲ್ಲಿ ಉಪ್ಪಿನ ಸತ್ಯಾಗ್ರಹವನ್ನು ಹಮ್ಮಿಕೊಳ‍್ಳಲು ನಿರ್ದರಿಸಿದರು. ಇದರ ಬಗ್ಗೆ ಚರ್ಚಿಸಲು ಧಾರವಾಡದಲ್ಲಿ ಸಭೆಯನ್ನು ಕರೆಯಲಾಯಿತು. ಸಭೆಯಲ್ಲಿ ಆರ್.ಆರ್.ದಿವಾಕರ್, ಕಾರ್ನಾಡ್ ಸದಾಶಿವರಾಯರು ಮತ್ತು ಹನುಮಂತ ರಾವ್ ಕೌಜಲಗಿ ಇವರುಗಳನ್ನು ಒಳಗೊಂಡಂತೆ ಒಂದು ಸಮಿತಿಯನ್ನು ರಚಿಸಲಾಯಿತು. ಈ ಸಮಿತಿಗೆ ಉಪ್ಪಿನ ಸತ್ಯಾಗ್ರಹವನ್ನು ನಡೆಸಲು ಸ‍್ಥಳವನ್ನು ಆಯ್ಕೆ ಮಾಡುವಂತೆ ಸೂಚಿಸಲಾಯಿತು. ಅದರಂತೆ ಈ ಸಮಿತಿಯು ಉತ್ತರ ಕನ್ನಡ ಜಿಲ್ಲೆಯ ಅರೇಬಿಯನ್ ಸಮುದ್ರ ತೀರದಲ್ಲಿರುವ ಅಂಕೋಲಾ ಪಟ್ಟಣವನ್ನು ಆಯ್ಕೆ ಮಾಡಿತು. ಅದರಂತೆ 1930 ಏಪ್ರಿಲ್ 13 ರಂದು ಶ್ರೀ ಎಂ. ಪಿ. ನಡಕರ್ಣಿಯವರ ನೇತೃತ್ವದಲ್ಲಿ ಅಂಕೋಲದ ಸಮೀಪದಲ್ಲಿರುವ ಪೂಜಿಗೇರಿ ಎಂಬ ಸ‍್ಥಳದಲ್ಲಿ ಸುಮಾರು ನಲವತ್ತು ಸಾವಿರ ಜನರು ಉಪ್ಪನ್ನು ತಯಾರಿಸುವ ಮೂಲಕ ಬ್ರಿಟಿಷರ ಕಾನೂನನ್ನು ಭಂಗ ಮಾಡಿದರು. ಎನ್. ಎಸ್. ಹರ್ಡಿಕರ್, ಗೋವಿಂದ ನಾಯಕ ಮತ್ತು ಇನ್ನಿತರ ಪ್ರಮುಖರು ಚಳವಳಿಯಲ್ಲಿ ಭಾಗವಹಿಸಿದ್ದರು. ಗ್ರಾಮಸ‍್ಥರು ಮಣ್ಣಿನ ಮಡಕೆಗಳಲ್ಲಿ ಸಮುದ್ರದ ತೀರದಿಂದ ಉಪ್ಪನ್ನು ತಂದು ಪಟ್ಟಣದ ಬೀದಿಗಳಲ್ಲಿ ಯಾವುದೇ ರೀತಿಯಾದಂತಹ ತೆರಿಗೆಯನ್ನು ನೀಡದೆ ಮಾರಾಟ ಮಾಡಿದರು. ಈ ಚಳುವಳಿಯ ಮುಂದಾಳತ್ವವನ್ನು ವಹಿಸಿದ್ದ ನಾಯಕರುಗಳನ್ನು ಬಂಧಿಸಿದರೂ ಸಹ, ಗ್ರಾಮಸ‍್ಥರು ಆರು ವಾರಗಳ ಕಾಲ ಈ ಚಳವಳಿಯನ್ನು ಮುಂದುವರಿಸಿದರು ಎಂದು ದಾಖಲಾಗಿದೆ.

    ಶಿವಪುರದ  ಧ್ವಜ ಸತ್ಯಾಗ್ರಹ

     ನಮ್ಮ ದೇಶದಲ್ಲಿ ತ್ರಿವರ್ಣ ಧ್ವಜವನ್ನು ( ಕೇಸರಿ, ಬಿಳಿ, ಹಾಗೂ ಹಸಿರು ಬಣ‍್ಣದ ಪಟ್ಟೆಗಳ ಮಧ್ಯೆ ಚರಕವನ್ನು ಹೊಂದಿದಂತೆ ) ಹಾರಿಸದಂತೆ ಬ್ರಟಿಷ್ ಸರ್ಕಾರವು ಆದೇಶವನ್ನು ಹೊರಡಿಸಿತ್ತು. ನಾಗರಿಕ ಸ್ವಾತಂತ್ರ್ಯದ  ಬಗ್ಗೆ ನಿರ್ಬಂಧನೆಗಳನ್ನು ಹೇರಿದ   ಬ್ರಿಟಿಷ್ ಸರ್ಕಾರದ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ತ್ರಿವರ್ಣ ಧ್ವಜವನ್ನು ಹಾರಿಸುವುದೇ ಹೋರಾಟಗಾರರ ಸಾಮಾನ್ಯ ನಡವಳಿಕೆಯಾಗಿತ್ತು. ಈ ಚಳವಳಿಯಲ್ಲಿ ಜನರು ಬಹಳ ಉತ್ಸಾಹದಿಂದ ಭಾಗವಹಿಸಿದ್ದರು.

    1923 ರಲ್ಲಿ ನಾಗಪುರ ಮತ್ತು ಜಬ್ಬಲ ಪುರಗಳಲ್ಲಿ ಧ್ವಜ ಸತ್ಯಾಗ್ರಹ ನಡೆಯಿತು. ಈ ಎರಡು ಘಟನೆಗಳನ್ನು ಹೊರತುಪಡಿಸಿ, 1938 ರಲ್ಲಿ ನಮ್ಮ ರಾಜ್ಯದ ಶಿವಪುರ ಮತ್ತು ವಿದುರಾಷ್ವತಗಳಲ್ಲಿ ಧ್ವಜ ಸತ್ಯಾಗ್ರಹ ನಡೆಯಿತು. ಈಗಿನ ಮಂಡ್ಯ ಜಿಲ್ಲೆಯ ಮದ್ದೂರಿನ ಸಮೀಪದಲ್ಲಿರುವ ಶಿವಪುರದಲ್ಲಿ 1938 ರಲ್ಲಿ ಮೈಸೂರು ಕ್ರಾಂಗ್ರೆಸ್ಸಿನ ಮೊದಲ ಸಮ್ಮೇಳನವು ನಡೆಯಿತು. ಈ ಸಮ್ಮೇಳನದಲ್ಲಿ ತಿರುಮಲೇಗೌಡರ ಜಮೀನಿನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವುದರ ಮೂಲಕ ಧ್ವಜ ಸತ್ಯಾಗ್ರಹವನ್ನು ನಡೆಸಲು ತೀರ್ಮಾನಿಸಲಾಯಿತು. ಧ್ವಜ ಸತ್ಯಾಗ್ರಹವನ್ನು ನಡೆಸದಂತೆ ಆಗಿನ ಜಿಲ್ಲಾಧಿಕಾರಿಯು ಹೋರಾಟಗಾರರಿಗೆ ಎಚ್ಚರಿಕೆಯನ್ನು ನೀಡಿದರು. ತ್ರಿವರ್ಣ ಧ್ವಜದ ಬದಲು ಮೈಸೂರು ಅರಸರ ಒಡೆಯರ್ ರಾಜ ಸಂತತಿಯ ರಾಜ ಲಾಂಛನವಾದ ಗಂಡಭೇರುಂಡವನ್ನು ಹೊಂದಿರುವ ಧ್ವಜವನ್ನು ಹಾರಿಸುವಂತೆ ಜಿಲ್ಲಾಧಿಕಾರಿಯು ಸೂಚಿಸಿದರು. 1938 ರ ಏಪ್ರಿಲ್ 9 ರಂದು ಎರಡೂ ಧ್ವಜಗಳನ್ನು ಹಾರಿಸುವಂತೆ ಮೈಸೂರು ಕಾಂಗ್ರೆಸ್ಸಿನ ಅಧ್ಯಕ್ಷರಾದಂತಹ ಟಿ. ಸಿದ‍್ಧಲಿಂಗಯ್ಯನವರಿಗೆ ಸೂಚಿಸಲಾಗಿತ್ತು. ಮಹಿಳೆಯರು ಸೇರಿದಂತೆ ತಿರುಮಲೇಗೌಡರ ಜಮೀನಿನಲ್ಲಿ ಸುಮಾರು ಹತ್ತು ಸಾವಿರ ಜನ ಈ ಸಮಾರಂಭದಲ್ಲಿ ಭಾಗವಹಿಸಲು ಸೇರಿದ್ದರು. ಅರವತ್ತು ಅಡಿ ಎತ್ತರದ ಅಡಿಕೆ ಮರವನ್ನು ಧ್ವಜ ಸ‍್ಥಂಭವಾಗಿ ಉಪಯೋಗಿಸಲಾಗಿತ್ತು. ಈ ಧ್ವಜ ಸ‍್ಥಂಭವನ್ನು ರಕ್ಷಿಸಲು ಮೂವತ್ತು ಮಹಿಳೆಯರು ಸುತ್ತ ನಿಂತಿದ್ದರು. ಸಿದ್ಧಲಿಂಗಯ್ಯನವರು ತ್ರಿವರ್ಣ ಧ್ವಜವನ್ನು ಇನ್ನೇನು ಹಾರಿಸಬೇಕು ಎನ್ನುವಷ್ಟರಲ್ಲಿ ಪೊಲೀಸರು ಅವರನ್ನು ಬಂಧಿಸಿದರು. ಅವರ ಪಕ್ಕದಲ್ಲೇ ನಿಂತಿದ್ದ ಮತ್ತೊಬ್ಬ ನಾಯಕರಾದಂತಹ ಎಂ. ಎನ್. ಜೋಯಿಷ್ ರವರು ದಾರವನ್ನು ಎಳೆಯುವುದರ ಮೂಲಕ ತ್ರಿವರ್ಣ ಧ್ವಜವನ್ನು ಹಾರಿಸಿದರು. ಈ ಮೂಲಕ ಕಾರ್ಯಕ್ರಮದ ಉದ್ದೇಶವನ್ನು ಈಡೇರಿಸಿದರು. ಅಲ್ಲಿದ್ದ ಎಲ್ಲ ನಾಯಕರುಗಳನ್ನು ಬ್ರಿಟಿಷರು ಬಂಧಿಸಿ, ಸೆರೆ ಮನೆಗೆ ಕಳುಹಿಸಿದರು. ಆದರೂ ಈ ಧ್ವಜ ಸತ್ಯಾಗ್ರಹ ಹಲವಾರು ದಿನಗಳು ಯಶಸ್ವಿಯಾಗಿ ನಡೆದು ಅಕ್ಕ ಪಕ್ಕದ ಊರು ಮತ್ತು ಜಿಲ್ಲೆಗಳಿಂದ ಸಾವಿರಾರು ನಾಗರಿಕರು ಶಿವಪುರಕ್ಕೆ ಆಗಮಿಸಿ ಹಾರಾಡುತ್ತಿರುವ ಧ್ವಜವನ್ನು ಕಣ್ತುಂಬ ನೋಡಿ ಆನಂದಿಸಿದರು. ಈ ಘಟನೆಯು ಶಿವಪುರ ಧ್ವಜ ಸತ್ಯಾಗ್ರಹ ಎಂದು ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದಿದೆ. ರಾಜ್ಯದ ಮಾಜಿ ಮುಖ್ಯ ಮಂತ್ರಿಗಳಾದ ಕೆಂಗಲ್ ಹನುಮಂತಯ್ಯನವರು ಮುತುವರ್ಜಿ ವಹಿಸಿದ ಕಾರಣ, ಈ ಸತ್ಯಾಗ್ರಹದ ಸ್ಮರಣಾರ್ಥವಾಗಿ ಶಿವಪುರದಲ್ಲಿ ಸತ್ಯಾಗ್ರಹ ಸೌಧವನ್ನು ನಿರ್ಮಿಸಲಾಗಿದೆ. ದುರದೃಷ್ಟವಸಾತ್ ಈ ಸೌಧದ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡುತ್ತಿಲ್ಲವೆಂಬ ದೂರುಗಳು  ಕೇಳಿ ಬರುತ್ತಿವೆ. ಸರ್ಕಾರವು ಸೂಕ್ತ ಕ್ರಮವನ್ನು ಕೈಗೊಳ‍್ಳುತ್ತದೆಂದು ಆಶಿಸೋಣ.

    ಈಸೂರು ಚಳುವಳಿ

    ಈಸೂರು ದಂಗೆ – ಬ್ರಿಟಿಷರ ಆಳ್ವಿಕೆಯಿಂದ ಸ್ವಾತಂತ್ರ್ಯವನ್ನು ಸ್ವಯಂ ಘೋಷಿಸಿದ ಏಕೈಕ ಗ್ರಾಮ

     ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದ ಪುಟಗಳನ್ನು ತಿರುವುತ್ತಾ ಹೋದಲ್ಲಿ ನಮಗೆ ಹಲವಾರು ಕುತೂಹಲಕಾರಿ ವಿಷಯಗಳು ತಿಳಿಯುತ್ತವೆ. ದೇಶಕ್ಕೆ ಸ್ವಾತಂತ್ರ್ಯ ಬರುವ ಮುಂಚೆಯೇ ಬ್ರಿಟಿಷರ ಆಳ್ವಿಕೆಗೆ ಸೆಡ್ಡು ಹೊಡೆದು, ತಮ್ಮ ಗ್ರಾಮವು ಬ್ರಿಟಿಷರ ಆಳ್ವಿಕೆಯಿಂದ ಸ್ವತಂತ್ರವನ್ನು ಪಡೆದಿದೆ ಎಂದು ಘೋಷಣೆ ಮಾಡಿದ ಏಕೈಕ ಗ್ರಾಮ ಈಸೂರು. ಈ ಘಟನೆಯು ಬ್ರಿಟಿಷರಿಗೆ ಆತಂಕವನ್ನುಂಟುಮಾಡಿತು. ಇದರಿಂದ ದಿಕ್ಕು ತೋಚದೆ ಬ್ರಿಟಿಷರು ಕಂಗಾಲಾದರು.

    ಈಸೂರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನಲ್ಲಿರುವ ಚಿಕ್ಕ ಗ್ರಾಮ. ಶಿವಮೊಗ್ಗದಿಂದ ಸುಮಾರು ಐವತ್ತು ಕಿ. ಮೀ ದೂರದಲ್ಲಿದೆ. ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದ ಪುಟಗಳಲ್ಲಿ ಈಸೂರು ಗ್ರಾಮ ಅಚ್ಚ ಅಳಿಯದೆ ಉಳಿದಿದೆ. “ಭಾರತ ಬಿಟ್ಟು ತೊಲಗಿ” ಚಳುವಳಿಯು ನಡೆದ ನಂತರ 1942 ರಲ್ಲಿ, ಈಸೂರು ಗ್ರಾಮಸ್ಥರು ಬ್ರಿಟಿಷರ ಆಳ್ವಿಕೆಯಿಂದ ಸ್ವಾತಂತ್ರ್ಯವನ್ನು ಪಡೆದಿದ್ದೇವೆ ಎಂದು ಘೋಷಿಸಿ, ಸಮಾನಾಂತರ ಸರ್ಕಾರವನ್ನು ನಡೆಸಿ, ಚರಿತ್ರೆಯನ್ನು ಸೃಷ್ಟಿಸಿದರು. ನೈಸರ್ಗಿಕ ವಿಪತ್ತಿನ ಕಾರಣದಿಂದಾಗಿ, ರೈತರು ಅಪಾರ ನಷ್ಟವನ್ನು ಅನುಭವಿಸಿದ ಹಿನ್ನಲೆಯಲ್ಲಿ, ಭೂ ಕಂದಾಯವನ್ನು ಕಟ್ಟಲು ನಿರಾಕರಿಸಿದರು. ಬ್ರಿಟಿಷರ ಬೆದರಿಸುವ ತಂತ್ರಗಳಿಗೆ ಸೊಪ್ಪು ಹಾಕದೆ, ಅವರ ವಿರುದ್ಧ ಧೈರ್ಯವಾಗಿ ಹಾಗೂ ಆತ್ಮ ವಿಶ್ವಾಸದಿಂದ ಹೋರಾಡಿದರು. ಕಡತಗಳಿಗೆ ಬೆಂಕಿ ಹಾಕಿ ಸುಟ್ಟರು. ಬ್ರಿಟಿಷ್ ಅಧಿಕಾರಿಗಳು ಯಾರೂ ಗ್ರಾಮವನ್ನು ಪ್ರವೇಶಿಸದಂತೆ ನಿರ್ಬಂಧವನ್ನು ಹೇರಿದರು.

    ಬ್ರಿಟಿಷ್ ಪೊಲೀಸರು ಗ್ರಾಮವನ್ನು ಪ್ರವೇಶಿಸದಂತೆ ಎಲ್ಲಾ ದಾರಿಗಳಿಗೆ ಬೇಲಿಯನ್ನು ಹಾಕಿದರು. ಸೆಪ್ಟೆಂಬರ್ 29, 1942 ರಂದು ವೀರಭದ್ರೇಶ್ವರ ದೇವಸ್ಥಾನದ ಶಿಖರದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದರು. ಗ್ರಾಮದ ಪ್ರವೇಶ ದ್ವಾರದಲ್ಲಿ, “ಸ್ವರಾಜ್ ಸರ್ಕಾರ” ಎಂಬ ಫಲಕವನ್ನು ನೆಟ್ಟರು. ಬ್ರಿಟಿಷ್ ಪೊಲೀಸರು ಗ್ರಾಮವನ್ನು ಪ್ರವೇಶಿಸಲು ಪ್ರಯತ್ನಿಸಿದಾಗ ಗ್ರಾಮಸ್ಥರು ವಿರೋಧಿಸಿದರು. ಇದರಿಂದ ಪೊಲೀಸರು ಮತ್ತು ಗ್ರಾಮಸ್ಥರ ನಡುವೆ ಘರ್ಷಣೆಯಾಗಿ, ಗ್ರಾಮಸ್ಥರನ್ನು ಪೊಲೀಸರು ಸಿಕ್ಕಾಪಟ್ಟೆ ಹೊಡೆದರು. ಈ ಘರ್ಷಣೆಯಲ್ಲಿ ಇಬ್ಬರು ಕಂದಾಯ ಇಲಾಖೆಯ ಅಧಿಕಾರಿಗಳು ಪ್ರಾಣವನ್ನು ಕಳೆದುಕೊಂಡರು ಮತ್ತು ನೂರಾರು ಗ್ರಾಮಸ್ಥರು ಗಾಯಗೊಂಡರು. ಈ ದಂಗೆಯು ಗ್ರಾಮದ ಮೇಲೆ ಗಂಭೀರವಾದ ಪರಿಣಾಮವನ್ನು ಬೀರಿತು. ಗ್ರಾಮದ ನೂರಾರು ಜನರನ್ನು ಪೊಲೀಸರು ಬಂಧಿಸಿದರು ಮತ್ತು ಐದು ಯುವಕರನ್ನು ಗಲ್ಲಿಗೇರಿಸಿದರು. ಬಂಧಿಸಿದ ಎಲ್ಲರಿಗೂ ಜೀವಾವಧಿ ಶಿಕ್ಷೆಯನ್ನು ನೀಡಲಾಯಿತು. ಗ್ರಾಮದ ಮೇಲೆ ಬ್ರಿಟಿಷರಿಂದ  ನಡೆಯಬಹುದಾದಂತ ಆಕ್ರಮಣವನ್ನರಿತ ಗ್ರಾಮಸ್ಥರು ಸಮೀಪದ ಕಾಡಿನಲ್ಲಿ ಅವಿತುಕೊಂಡರು. ಆದರೆ ಮಹಿಳೆಯರು, ಮಕ್ಕಳು ಮತ್ತು ಹಿರಿಯರು ಗ್ರಾಮದಲ್ಲಿಯೇ ಉಳಿದುಕೊಂಡರು. ಇದನ್ನರಿತ ಬ್ರಿಟಿಷ್ ಪೊಲೀಸರು ಗ್ರಾಮಕ್ಕೆ ಪ್ರವೇಶಿಸಿ, ಮಹಿಳೆಯರು, ಮಕ್ಕಳು ಮತ್ತು ಹಿರಿಯರ ಮೇಲೆ ನಿರ್ದಾಕ್ಷಿಣ್ಯವಾಗಿ ಹಿಂಸಾತ್ಮಕ ದಾಳಿ ನಡೆಸಿ, ಬೆದರಿಸಿ ಗಾಯಗೊಳಿಸಿದರು. ಸ್ವಾತಂತ್ರ್ಯ ಬಂದ ನಂತರ, ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರನ್ನು ಜೈಲಿನಿಂದ ಬಿಡುಗಡೆಗೊಳಿಸಿ ಅವರಿಗೆ ಅದ್ದೂರಿ ಸ್ವಾಗತವನ್ನು ನೀಡಿ ಗ್ರಾಮಕ್ಕೆ ಬರ ಮಾಡಿಕೊಳ್ಳಲಾಯಿತು. 

    ಹಲಗಲಿ ಬೇಡರ ದಂಗೆ (1857)

    ಹಲಗಲಿ ಇಂದಿನ ಬಾಗಲಕೋಟೆ ಜಿಲ್ಲೆಯ (ಹಿಂದಿನ ಬಿಜಾಪುರ ಜಿಲ್ಲೆ) ಮುಧೋಳ ತಾಲ್ಲೂಕಿನಲ್ಲಿರುವ ಪುಟ್ಟ ಹಳ್ಳಿ. ಈ ಹಳ್ಳಿಯಲ್ಲಿ ಹೆಚ್ಚಿನ ಜನ ಬೇಡ ಜನಾಂಗಕ್ಕೆ ಸೇರಿದವರಾಗಿದ್ದರು. ಪ್ರಾಣಿ, ಪಕ್ಷಿಗಳನ್ನು ಬೇಟೆಯಾಡುವುದು ಮತ್ತು ಅರಣ್ಯದಲ್ಲಿ ಸಿಗಬಹುದಾದ ಪದಾರ್ಥಗಳನ್ನು ಮಾರಿ ಜೀವನ ನಡೆಸುತ್ತಿದ್ದರು. ಇವರ ಕಸುಬಿಗೆ ಅಗತ್ಯವಾದ ಬಿಲ್ಲು ಬಾಣ, ಕತ್ತಿ, ಕೊಡಲಿ ಮುಂತಾದ ಆಯುಧಗಳು ಸದಾ ಇವರ ಬಳಿ ಇರುತ್ತಿದ್ದವು. ಕಡಿಮೆ ಮಳೆಯಿಂದಾಗಿ ಬರಗಾಲ ಬಂದಾಗ, ದರೋಡೆ ಮಾಡುತ್ತಿದ್ದರೆಂಬ ಆಧಾರವಿಲ್ಲದ ವಿಷಯ ಸಾಮಾನ್ಯರಲ್ಲಿ ಮತ್ತು ಸರ್ಕಾರದಲ್ಲಿ ಹರಿದಾಡುತ್ತಿತ್ತು. ಇದನ್ನು ತಿಳಿದ ಬ್ರಿಟಿಷ್ ಸರ್ಕಾರ ಬೇಡ ಜನಾಂಗದವರೆಲ್ಲರೂ ಕೂಡಲೇ ಆಯುಧಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕೆಂದು ಆದೇಶವನ್ನು ಮಾಡಿತು. ಆದೇಶದ ಪ್ರಕಾರ ಭಾರತೀಯರು ಸರ್ಕಾರದ ಅನುಮತಿಯಿಲ್ಲದೆ ಯಾವುದೇ ಆಯುಧಗಳನ್ನು, ಪಿಸ್ತೂಲ್ ಗಳನ್ನು ಹೊಂದುವಂತಿಲ್ಲ ಮತ್ತು ಆದೇಶವನ್ನು ಕಟ್ಟು ನಿಟ್ಟಾಗಿ ಪಾಲಿಸಲು ಆಜ್ಞಾಪಿಸಲಾಯಿತು. ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಆಯುಧಗಳು ಅತ್ಯಗತ್ಯ. ಆದ್ದರಿಂದ ಆಯುಧಗಳನ್ನು ಸರ್ಕಾರಕ್ಕೆ ಒಪ್ಪಿಸಲು ಸಾಧ್ಯವಿಲ್ಲವೆಂದು ಬೇಡ ಜನಾಂಗದವರು ಆಜ್ಞೆಯನ್ನು ಪಾಲಿಸಲು ನಿರಾಕರಿಸಿದರು. ಈ ನಿರಾಕರಣೆ ಬ್ರಿಟಿಷರ ಕೋಪಕ್ಕೆ ಕಾರಣವಾಯಿತು. 1857 ರ ನವೆಂಬರ್ 29 ರಂದು, ಹಲಗಲಿ ಗ್ರಾಮಕ್ಕೆ ಬ್ರಿಟಿಷರ ಪೊಲೀಸರು ಆಕ್ರಮಣ ಮಾಡಿ, ಬೆಂಕಿ ಹಚ್ಚಿ, ನೂರಾರು ಬೇಡ ಜನಾಂಗದವರನ್ನುಬಂಧಿಸಿ ಜೈಲಿಗೆ ಕಳುಹಿಸಿದರು. ಹಲವಾರು ಜನರನ್ನು ಗುಂಡಿಕ್ಕಿ ಸಾಯಿಸಲಾಯಿತು. ಸುಮಾರು ಇಪ್ಪತ್ತು ಬೇಡರನ್ನು ಸಾರ್ವಜನಿಕ ಸ್ಥಳದಲ್ಲಿ ಗಲ್ಲಿಗೇರಿಸಲಾಯಿತು. ಬ್ರಿಟಿಷರ ವಿರುದ್ಧ ಧೈರ್ಯದಿಂದ ಪ್ರತಿಭಟಿಸಿ, ಸ್ವಾತಂತ್ರ್ಯದ ಕಿಚ್ಚನ್ನು ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ಹಚ್ಚಿದ ಬೇಡ ಜನಾಂಗದ ನಾಗರೀಕರು ಚರಿತ್ರೆಯ ಪುಟಗಳಲ್ಲಿ ಶಾಶ್ವತ ಸ್ಥಾನವನ್ನುಪಡೆದಿದ್ದಾರೆ. ಹಲಗಲಿ ಬೇಡ ಜನಾಂಗದವರು ತೋರಿಸಿದ ಸ್ವಾಭಿಮಾನ ಮತ್ತು ಅವರ ಬಲಿದಾನವನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ನೆನಪಿಸಿಕೊಳ್ಳುವುದು ಸಮಂಜಸ ಮತ್ತು ನಮ್ಮ ಆದ್ಯ ಕರ್ತವ್ಯ. ಈ ಘಟನೆಗಳಲ್ಲಿ ಭಾಗವಹಿಸಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ದೇಶ ಪ್ರೇಮ, ತ್ಯಾಗ ಮತ್ತು ನಿಸ್ವಾರ್ಥ ದೇಶ ಸೇವೆಯನ್ನು ಅನುಕರಣೆ ಮಾಡಿ, ಮುಂದಿನ ಪೀಳಿಗೆಗೆ ನಾವೆಲ್ಲರೂ ಆದರ್ಶ ವ್ಯಕ್ತಿಗಳಾಗೋಣ. 

    ಜೈ ಭುವನೇಶ್ವರಿ, ಜೈ ಭಾರತಾಂಬೆ.

    ಟಿ. ಪಿ. ಕೈಲಾಸಂ ವಿರಚಿತ `ನಂಕಂಪ್ನಿ’ ನಾಟಕ ಪ್ರದರ್ಶನ

    ಸಂಕೇತ ಗುರುದತ್ತ

    ಸುಮಾರು ನೂರು ವರುಷ ಹಳೆಯ ನಾಟಕವಾದರೂ ನಿತ್ಯನೂತನ ಆಹ್ಲಾದಕರ ರಂಗಕೃತಿ ’ನಂಕಂಪ್ನಿ’ ಸಂಗೀತಮಯ – ಹಾಸ್ಯ– ವಿಡಂಬನಾತ್ಮಕ ನಾಟಕವು ಕನ್ನಡ ರಂಗ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿದೆ.

    ನಾಟಕದೊಳಗೆ ನಾಟಕ ನಡೆಯುವ ಆಂಶ ಹೊಂದಿರುವ ಕೃತಿ ನಕ್ಕು ನಗಿಸುತ್ತದೆ – ವಿಶಿಷ್ಟ ಹಾಡುಗಳಿಂದ ಮುದಗೊಳಿಸುತ್ತದೆ. ನಾಟಕ ಆರಂಭದಲ್ಲಿ ಸೂತ್ರಧಾರನೊಂದಿಗೆ ನಟಿಯ ಪ್ರವೇಶ. ‘ನಂಕಂಪ್ನಿ’ ತಂಡದಿಂದ ’ಶೂರ್ಪನಖ ಕುಲವಿಲಾಸ’ ನಾಟಕ ಪ್ರದರ್ಶನ! ’ಆ ನಾಟಕ’ ನಡೆಯುವಾಗ ಘಟಿಸುವ ತಪ್ಪು-ಒಪ್ಪುಗಳು, ಅವಘಡಗಳು ಹಾಸ್ಯದ ಹೊನಲನ್ನು ಹರಿಸುತ್ತದೆ.

    ಸುಮಾರು 30 ಹಾಡುಗಳು – ಕಂದ ಪದ್ಯಗಳು ಕಂಪನಿ ನಾಟಕದ ಶೈಲಿಯಲ್ಲಿ ರಂಗದ ಮೇಲೆ ಹರಿದು ಬಂದು ಪ್ರೇಕ್ಷಕರನ್ನು ಬೇರೊಂದು ಲೋಕಕ್ಕೆ ಕರೆದೊಯ್ಯುತ್ತದೆ. ರಾಜ-ರಾಣಿಯ ಕತೆ, ಋಷಿಯ ಕೋಪ-ತಾಪ, ವಿಲಕ್ಷಣ ವಿಪ್ರನ ಹಾಸ್ಯ, ಬಗೆಬಗೆಯ ಸಖಿಯರ ನಾಟ್ಯ-ಸಂಗೀತ, ಕೊನೆಗೆ ಶೂರ್ಪನಖಿಯ ಜಾದೂ! ಈ ಎಲ್ಲ ಅಂಶಗಳಿಂದ ನಾಟಕ ಪೂರ್ಣ ರಂಗ ಅನುಭವ ನೀಡುವ ವಿಶಿಷ್ಟ ಪ್ರಸ್ತುತಿ ಆಗಿದೆ.

    ವಿ ಮನೋಹರ್ ಅವರ ಸಂಗೀತವಿದೆ.ಕಲೆಯ ನಿರ್ವಹಣೆ ಮಾಲತೇಶ್ ಬಡಿಗೆರ್.
    ವಸ್ತ್ರ, ಧ್ವನಿ ವಿನ್ಯಾಸ ಮತ್ತು ನಿರ್ಮಾಣ ಜಸ್ಲೀನ್ ಋತ್ವಿಕ್ ಸಿಂಹ,ವಿನ್ಯಾಸ ಮತ್ತು ನಿರ್ದೇಶನ ಋತ್ವಿಕ್ ಸಿಂಹ.ವೇದಿಕೆ ನಾಟಕಶಾಲೆ, ವೇದಿಕೆ ಫೌಂಡೇಷನ್ ಅಂಗ ಸಂಸ್ಥೆಯ ನಾಟಕ ಶಾಲೆಯ ಪ್ರಥಮ ಬ್ಯಾಚಿನ ವಿದ್ಯಾರ್ಥಿಗಳ ಅಭಿನಯ.

    ವೇದಿಕೆ ಫೌಂಡೇಶನ್
    1983ರಲ್ಲಿ ‘ಟಿಪಿಕಲ್ ಟಿ.ಪಿ.ಕೈಲಾಸಂ’ ನಾಟಕದೊಂದಿಗೆ ಕಾರ್ಯ ಆರಂಭಿಸಿದ ಸಂಸ್ಥೆ ರಾಜ್ಯ – ರಾಷ್ಟ್ರ- ಅಂತರರಾಷ್ಟ್ರಿಯ ಮಟ್ಟದಲ್ಲಿ ಪ್ರಸ್ತುತಿಗಳನ್ನ ನೀಡಿ ಗಟ್ಟಿ ನೆಲೆ ಕಂಡುಕೊಂಡಿದೆ.

    ಖ್ಯಾತ ರಂಗ ದಂಪತಿಗಳಾದ ಶಾರದಾ – ಸಿ. ಆರ್. ಸಿಂಹ ಅವರು ಆರಂಭಿಸಿದ ವೇದಿಕೆ, ಇಂದು ನೂರಾರು ಕಲಾವಿದರನ್ನ ರೂಪಿಸಿದ ಕೀರ್ತಿಹೊಂದಿದೆ . ಟಿಪಿಕಲ್ ಟಿ.ಪಿ.ಕೈಲಾಸಂ, ಭೈರವಿ, ರಸಋಷಿ ಕುವೆಂಪು,ಅಗ್ನಿ ಮತ್ತು ಮಳೆ, ಮ್ಯಾಕಬೇಥ್, ಡ್ರೀಂ, ಮದುವೆ ಮದುವೆ, ಹಾವು-ಏಣಿ, ಬಹದ್ದೂರ್ ಗಂಡ. ಹೀಗೆ ವೇದಿಕೆಯ ನಾಟಕ ಕೃತಿಗಳ ಪಟ್ಟಿ ಬೆಳೆಯುತ್ತದೆ.

    2001ರಲ್ಲಿ ಮಹತ್ವದ ಕಾರ್ಯವನ್ನ ಹಮ್ಮಿಕೋಂಡು, `ವೇದಿಕೆ ರಂಗ ಮಾಲಿಕೆ’ ಎಂಬ ವಾರಾಂತ್ಯ ಪ್ರದರ್ಶನ ನೀಡುವ ಯೋಜನೆ ರೂಪಿಸಲಾಯಿತು. ಸತತವಾಗಿ 125 ವಾರ– ವೇದಿಕೆ ನಾಟಕ ಪ್ರದರ್ಶನ ಆಯೋಜಿಸಿ ಆಧುನಿಕ ರಂಗಭೂಮಿಯಲ್ಲಿ ಇತಿಹಾಸ ನಿರ್ಮಿಸಿತು. ಇದರ ರೂವಾರಿಗಳು ಜಸ್ಲೀನ್ – ಋತ್ವಿಕ್ ಸಿಂಹ.

    ಅಲ್ಲಿಂದ ಹಂತಹಂತವಾಗಿ ವಿವಿಧ ಕಾರ್ಯಚಟುವಟಿಕೆಗಳನ್ನ ಆಯೋಜಿಸುತ್ತ ಸಂಸ್ಥೆ ಬೆಳೆದಿದೆ. ವೇದಿಕೆ ಟೆರೆಸ್ ಥಿಯೇಟರ್– ಮನೆ ತಾರಸಿಗಳಲ್ಲಿ ಪ್ರದರ್ಶನ; ವೇದಿಕೆ ಮಾತುಕತೆ–ಖ್ಯಾತ ಕಲಾವಿದರೊಂದಿಗೆ ಆಪ್ತ ಸಮಾಲೋಚನೆ; ವೇದಿಕೆ ಚಿತ್ರ ಕೂಟ– ಚಲನಚಿತ್ರ ವೀಕ್ಷಣೆ; ವೇದಿಕೆ ಶಿಬಿರಗಳು, ಹೇಗೆ ಹಲವಾರು ವಲಯಗಳಲ್ಲಿ ವೇದಿಕೆ ಕಾರ್ಯನಿರ್ವಹಿಸುತ್ತಿದೆ.

    ವೇದಿಕೆ ನಾಟಕಶಾಲೆಯು 2020ರ ಸಂಕ್ರಾಂತಿಯಿಂದ ಮೊದಲ ಬ್ಯಾಚ್ ಅನ್ನು ಆರಂಭಿಸಿದೆ. ವಿದ್ಯಾರ್ಥಿಗಳಿಗೆ ರಂಗ ಪಾಠ ನೀಡುವ ಕಾರ್ಯಕ್ರಮ ಆರಂಭವಾಯಿತು. ‘ಡಿಪ್ಲೋಮ ಇನ್ ಥಿಯೇಟರ್ ಆರ್ಟ್ಸ್’– ಎರಡು ವರುಷದ ಡಿಪ್ಲೋಮ ಆರಂಭಿಸಲಾಗಿದೆ.

    ಥಿಯರಿ– ರಂಗ ಇತಿಹಾಸ, ಕನ್ನಡ ರಂಗಭೂಮಿ, ಭಾರತಿಯ –ವಿಶ್ವ ರಂಗಭೂಮಿ, ಅಭಿನಯ ಸಿದ್ಧಾಂತ, ನಾಟ್ಯಶಾಸ್ತ್ರ, ನೇಪಥ್ಯ ವಿಭಾಗದ ತರಗತಿಗಳು.
    ಪ್ರಾಕ್ಟಿಕಲ್ಸ್– ದೇಹ ಭಾಷೆ, ಧ್ವನಿ, ರಸಾಭಿಜ್ಞ, ಅಭಿನಯ ಅಭ್ಯಾಸ, ನಾಟಕಗಳ ಓದು, ಪಾತ್ರಗಳ ಅಭ್ಯಾಸ.ಇವಲ್ಲದೇ – ಪ್ರತಿ ವರುಷ ಒಬ್ಬ ನಾಟಕಕಾರನನ್ನು ಕೇಂದ್ರೀಕರಿಸಿ ಏಕಾಂಕ ನಾಟಕ ಚಕ್ರ. ಅಭಿನಯ, ನಿರ್ದೇಶನ, ನೇಪಥ್ಯ ಕೆಲಸಗಳ ಪ್ರಾಕ್ಟಿಕಲ್ ಚಟುವಟಿಕೆಗಳ ಜೊತೆಯಲ್ಲಿ ನಾಟಕ ಹಾಗೂ ಚಲನಚಿತ್ರ ವೀಕ್ಷಣೆ, ಪರಿಣತರಿಂದ ಮಾಸ್ಟರ್ ತರಗತಿಗಳು, ಸಂಗೀತ, ನೃತ್ಯ ಅಭ್ಯಾಸ ಮಾಡಿಸಲಾಗುತ್ತೆ.

    ಕೊನೆಗೆ ಘಟಿಕೋತ್ಸವ ಪ್ರಸ್ತುತಿ ಮತ್ತು ಘಟಿಕೋತ್ಸವ ಏರ್ಪಡಿಸಲಾಗಿದೆ.ಮಹತ್ವದ ವಿಚಾರವೆಂದರೆ ಇಡೀ ಡಿಪ್ಲೊಮ ತರಗತಿ ಸಂಪೂರ್ಣ ಉಚಿತ. ಆದರೆ ಇಲ್ಲಿಗೆ ಸೇರುವ ವಿದ್ಯಾರ್ಥಿಗಳು ವೇದಿಕೆ ಸಂಸ್ಥೆಗೆ ನೀಡುವುದು ತಮ್ಮ ಶ್ರದ್ಧೆ, ಏಕಾಗ್ರತೆ ಮಾತ್ರ.

    ರಂಗ ವಿದ್ಯಾರ್ಥಿಗಳ ಪ್ರಥಮ ಬ್ಯಾಚಿನ ವಿದ್ಯಾರ್ಥಿಗಳ ಘಟಿಕೋತ್ಸವದ ಕಾರ್ಯಕ್ರಮ. ಈ ದಿನದಂದು ನಾಟಕ ಕಲೆಯ ಡಿಪ್ಲೋಮ ಪಡೆದು ತಮ್ಮ ರಂಗ ಪಯಣ ಆರಂಭಿಸುತ್ತಿದ್ದಾರೆ ಎನ್ನುವುದು ಈ ಕಾರ್ಯಕ್ರಮದ ವಿಶೇಷವಾಗಿದೆ. ಅದರ ಪ್ರಯುಕ್ತ ಈ ‘ನಂಕಂಪ್ನಿ’ ನಾಟಕ ಪ್ರದರ್ಶನ.

    ಟಿ. ಪಿ. ಕೈಲಾಸಂ ಅವರ ರಚನೆಯ ನಾಟಕ ‘ನಂಕಂಪ್ನಿ’
    ದಿನಾಂಕ: 13 ಮತ್ತು 14 [ಶನಿವಾರ – ಭಾನುವಾರ] ಆಗಸ್ಟ್ 2022
    ಸಮಯ: ಸಂಜೆ 7ಕ್ಕೆ
    ಸ್ಥಳ: ಪ್ರಭಾತ್ ಕೆ ಎಚ್ ಕಲಾಸೌಧ, ಹನುಮಂತನಗರ. ಬೆಂಗಳೂರು
    .

    ಎಲ್ಲರಂತಲ್ಲ ನಮ್ಮ ಶಿವಮೊಗ್ಗ ಸುಬ್ಬಣ್ಣ-Shivamogga Subbanna


    ಗುರುವಾರ ಮಧ್ಯರಾತ್ರಿ ನಿಧನರಾದ ಸುಗಮ ಸಂಗೀತದ ಹೆಸರಾಂತ ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರೊಂದಿಗಿನ ತಮ್ಮ ಒಡನಾಟವನ್ನು ಅವರ ಬಹುಕಾಲದ ಗೆಳೆಯ, ನಾಡಿನ ಹಿರಿಯ ಮಾಧ್ಯಮ ತಜ್ಞ ಎಸ್ ಕೆ ಶೇಷಚಂದ್ರಿಕ ಇಲ್ಲಿ ನೆನಪಿಸಿಕೊಂಡಿದ್ದಾರೆ.


    “ಎಲ್ಲರಂತಲ್ಲ ನಮ್ಮ ಶಿವಮೊಗ್ಗ ಸುಬ್ಬಣ್ಣ”ಖ್ಯಾತ ಪತ್ರಕರ್ತ ಎಂಬಿ ಸಿಂಗ್ ರವರು ಸುಗಮ ಸಂಗೀತ ಸಾಧಕ ಮಲೆನಾಡಿನ ಗಾಯಕ ಶಿವಮೊಗ್ಗ ಸುಬ್ಬಣ್ಣನನ್ನು ಕುರಿತು ಈಗ್ಯೆ ಸುಮಾರು 44 ವರುಷಗಳ ಹಿಂದೆ ಹೇಳಿದ ಮಾತಿದು. ಆಗ ಸುಬ್ಬಣ್ಣನಿಗೆ 40 ವರುಷ.

    ಸಿಂಗ್ ರವರು ‘ಸುಧಾ’ವಾರ ಪತ್ರಿಕೆಯ ಸಂಪಾದಕರಾಗಿದ್ದಾಗ ಆಡಿದ ಮೆಚ್ಚುಗೆ ಮಾತಿದು. ಚಲನಚಿತ್ರ ಜಗತ್ತಿನ ಸಕಲ ಆಗು ಹೋಗುಗಳನ್ನು ಹಲವಾರು ವರ್ಷಗಳ ಕಾಲ ಅವಲೋಕನ ಮಾಡಿದ ಈ ಮಹನೀಯರು ಶಿವಮೊಗ್ಗ ಸುಬ್ಬಣ್ಣನನ್ನು ಪ್ರಶಂಸಿಸಲು ಕಾರಣವಿತ್ತು.

    ಸರ್ವೇಸಾಮಾನ್ಯವಾಗಿ ಪ್ರವರ್ಧಮಾನಕ್ಕೆ ಬರಲು ಕಾತುರರಾಗಿರುವ ಯುವ ಪ್ರತಿಭೆಗಳು, ಸಿನಿಮಾ ರಂಗದಲ್ಲಿ ಪ್ರಚಾರ ಪ್ರಸಿದ್ಧಿಯನ್ನು ಮೆಟ್ಟಿಲಾಗಿ ಬಳಸುವುದು ಸಿದ್ಧಿ ಸಹಜ.ಪ್ರಚಾರ ಹೆಚ್ಚಿದಂತೆಲ್ಲ ನಟ, ನಟಿ ,ನಿರ್ದೇಶಕ, ಚಿತ್ರಕಥಾ ಲೇಖಕ, ಹಿಂಬದಿ ಗಾಯಕ, ತಂತ್ರಜ್ಞ ಪ್ರಸಿದ್ಧಿ ಪುರುಷರಾಗುವುದು ಲಾಗಾಯ್ತು ವಿಧಾನ.ಪ್ರಶಸ್ತಿ ಬಂದ ಬಳಿಕ ತಾನೇ ತಾನಾಗಿ ಪ್ರಚಾರ ಸಿಗುವುದು ಚಿತ್ರಜಗತ್ತಿನ ಸಂಪ್ರದಾಯ.

    ಕನ್ನಡಕ್ಕೆ ಗಾಯಕ ಪ್ರಶಸ್ತಿ
    ಅನುಭವಿ ವಿಮರ್ಶಕ ಮತ್ತು ಪತ್ರಕರ್ತ ಎಂಬಿ ಸಿಂಗ್ ರವರು ಪ್ರತಿಭಾವಂತ ಸುಗಮ ಸಂಗೀತಜ್ಞ ಶಿವಮೊಗ್ಗ ಸುಬ್ಬಣ್ಣನನ್ನು ಗುರ್ತಿಸಿದಾಗ ಈತನಿಗೆ ಯಾವುದೇ ಪ್ರಚಾರವಾಗಲಿ,ಈಗಿನ ಭಾಷೆಯಲ್ಲಿ ಹೇಳುವಂತೆ ‘ಬಿಲ್ಡಪ್ ‘ ಇರ್ಲಿಲ್ಲ.ಅನರ್ಘ್ಯ ಕುಸುಮ ಈ ಕಲಾವಿದ ಎಂದು ಖಚಿತ ಮಾಡಿಕೊಂಡರು ಎಂಬಿ ಸಿಂಗ್.ಎಲೆ ಮರೆಯ ಕಾಯಿ ಇದು ಎಂದು ನಂಬಿದರು.

    ಶಿವಮೊಗ್ಗ ಸುಬ್ಬಣ್ಣ ಕನ್ನಡ ಚಲನಚಿತ್ರರಂಗಕ್ಕೆ ರಾಷ್ಟ್ರೀಯ ಪ್ರಶಸ್ತಿ ತಂದಿತ್ತ ಸುದ್ದಿಯನ್ನು ನನಗೆ ಮೊದಲು ತಿಳಿಸಿದವರೇ ಎಂಬಿ ಸಿಂಗ್ ಸಾಹೇಬರು.

    ಇದೇ ಸಮಯದಲ್ಲಿ ಖ್ಯಾತ ಚಿಂತಕ, ಬರಹಗಾರ ಪ್ರೊ ಚಂದ್ರಶೇಖರ ಕಂಬಾರರ ‘ಕಾಡು ಕುದುರೆ’ ಚಲನಚಿತ್ರದ ಅದೇ ಹೆಸರಿನ ಭಾವ ಸಂಪೂರ್ಣತೆಯ ಹಾಡು ಭಾರತೀಯ ಚಲನಚಿತ್ರರಂಗದ ರಾಷ್ಟ್ರೀಯ ಪ್ರಶಸ್ತಿ ತಂದಿತ್ತಿತು.೪೦ ವರುಷದ ಸಾಧಕ ಶಿವಮೊಗ್ಗ ಸುಬ್ಬಣ್ಣ ಅನಾಯಾಸವಾಗಿ ಅಷ್ಟೇ ಕಾತರತೆಯಿಂದ ಕನ್ನಡ ಚಿತ್ರಕ್ಕೆ ಮೊತ್ತಮೊದಲ ರಾಷ್ಟ್ರೀಯ ಗೌರವ ತಂದಿತ್ತದ್ದು, ಚಿತ್ರ ಸಂಗೀತ ವಿಭಾಗಕ್ಕೆ ರಾಷ್ಟ್ರೀಯ ಪುರಸ್ಕಾರ ದೊರೆತದ್ದು ರಾಷ್ಟ್ರಮಟ್ಟದ ಸುದ್ದಿಯಾಯ್ತು.

    ‘ ಸುಧಾ ‘ದಲ್ಲಿ ಸಂದರ್ಶನ
    1978 ನವೆಂಬರ್ ಡಿಸೆಂಬರ್ ತಿಂಗಳ ಮುಸ್ಸಂಜೆ ಶಿವಮೊಗ್ಗೆಯ ಕರ್ನಾಟಕ ಸಂಘದ ಎದುರು ಮಹಡಿಯಲ್ಲಿ ಸುಬ್ಬಣ್ಣ ಲಾಯರ್ ಚೇಂಬರ್ ನಾನು ಭಾರತ ಸರ್ಕಾರದ ವಾರ್ತಾ ಸೇವೆಯ ಅಧಿಕಾರಿ.

    ನಾನು ಶಿವಮೊಗ್ಗ ಸುಬ್ಬಣ್ಣ ೧೯೫೦ರ ದಶಕದಿಂದ ಮಿತ್ರರು ಮೈಸೂರಿನ ಮಾಧ್ವ ಹಾಸ್ಟೆಲ್ಲಿನ ಎದುರು ಪೂಜ್ಯ ಪೇಜಾವರ ವಿಶ್ವೇಶ್ವರ ತೀರ್ಥರ ಕೃಪಾಪೋಷಿತರು.ವಿದ್ಯಾರ್ಥಿಯಾಗಿದ್ದಾಗಲೇ ಸುಬ್ಬಣ್ಣನ ಭಕ್ತಿ ಸಂಗೀತಕ್ಕೆ ತಲೆದೂಗಿ ಆಶೀರ್ವದಿಸಿದ್ದರು ಪೇಜಾವರ ಶ್ರೀಗಳು.

    ಎಂ ಬಿ ಸಿಂಗ್ ರವರು ಟ್ರಂಕ್ ಕಾಲ್ ಮಾಡಿ ನನ್ನನ್ನು ಸಂಪರ್ಕಿಸಿದಾಗ ಸೂರ್ಯ ಮುಳುಗಲಿದ್ದ.ಸಿಹಿ ಸುದ್ದಿಯೊಂದಿಗೆ ಸುಧಾ ಸಂಪಾದಕರು ನನಗೆ ಮತ್ತೊಂದು ಆದೇಶ — ಜವಾಬ್ದಾರಿ ಹೊರಿಸಿದವರು.

    “…….ಕೂಡಲೇ ಶಿವಮೊಗ್ಗ ಸುಬ್ಬಣ್ಣನನ್ನು ಸಂದರ್ಶಿಸುವ, ಈ ಪ್ರತಿಭಾವಂತನ ಅನಿಸಿಕೆಗಳನ್ನು ಕಲೆಹಾಕು.ದೀರ್ಘವಾಗಿ ಮಾತನಾಡಿಸು. ಪ್ರತಿ ಮಾತನ್ನು ಮರೆಯದೇ ಬರೆ. ಶಿವಮೊಗ್ಗ ಸುಬ್ಬಣ್ಣ ‘ಎಲ್ಲರಂತಲ್ಲ’ ಎಂದು ಒತ್ತಿ ಹೇಳಿದರು ಸುಧಾ ಸಂಪಾದಕರು.ಅವರ ಉತ್ಸಾಹ ಇಷ್ಟಕ್ಕೇ ನಿಂತಿರಲಿಲ್ಲ”

    ಮುಂದಿನ ವಾರದ ಸುಧಾ ಸಂಚಿಕೆ ನಾಳೆ ಮುದ್ರಣಕ್ಕೆ ಹೋಗುವುದಿದೆ. ಕೊನೆಯ ಪುಟವನ್ನು ಶಿವಮೊಗ್ಗ ಸುಬ್ಬಣ್ಣನ ಸಂದರ್ಶನ ಪ್ರಕಟಿಸಲು ಮೀಸಲಾಗಿಟ್ಟಿದ್ದೇನೆ. ನಾಡಿನ ಉಳಿದ ಎಲ್ಲ ಪತ್ರಿಕೆಗಳಿಗಿಂತ ಈ ಅಸಾಧಾರಣ ಕಲಾವಿದನ ಸಾಧನೆ ಸುಧಾ ದಲ್ಲಿ ಅಚ್ಚಾಗಬೇಕು ಹೀಗೆಂದು ಟ್ರಂಕ್ ಕಾಲ್ ಕಟ್ಟು ಮಾಡಿದ್ದರು ಎಂ ಬಿ ಸಿಂಗ್.

    ಗೋಪಿ ಹೊಟೇಲಿನಲ್ಲಿ ಸಂದರ್ಶನ
    ಅಂದಿನ ದಿನಗಳಲ್ಲಿ ಗೋಪಿ ಸರ್ಕಲ್ ಮತ್ತು ಗೋಪಿ ಹೋಟೆಲ್ ಶಿವಮೊಗ್ಗೆಯ ಪ್ರಸಿದ್ಧ ಲ್ಯಾಂಡ್ಮಾರ್ಕ್ಗಳು.ಅಂದು ಸಂಜೆಯ ಕ್ಷಣ ಹೊಸನಗರದ ಹನಿಯ ಸ್ವಗ್ರಾಮದಿಂದ ಹಿಂತಿರುಗಿದ್ದ ಶಿವಮೊಗ್ಗ ಸುಬ್ಬಣ್ಣ ಸರ್ಕಲ್ಲಿನ ಸುತ್ತುಗಟ್ಟಿ ಮತ್ತು ಗೋಪಿ ಹೋಟೆಲಿನ ಮೇಲೆ ಬೆಂಚುಗಳೇ ನಮ್ಮ ಪ್ರೆಸ್ ರೂಂ ಆಯಿತು.ಸುಬ್ಬಣ್ಣನಿಗೆ ರಾಷ್ಟ್ರಪ್ರಶಸ್ತಿಯ ಪೂರ್ಣ ಮಾಹಿತಿಯನ್ನು ಮೊದಲು ತಿಳಿಸಿದವನೇ ನಾನು.

    ಶಿವಮೊಗ್ಗ ಸುಬ್ಬಣ್ಣ ಬಹು ಸಾದಾ ಸೀದಾ ಮನುಷ್ಯ. ಮಲೆನಾಡಿನ ಕಿರಿಕ್ ಭಾಷೆಯಲ್ಲಿ ಹೇಳುವುದಾದರೆ ‘ಬೋಳೇಶಂಕರ’ ತನ್ನನ್ನು ಮೇಲೆ ತಂದ ಕೆ ಕೆ ಶಾಮಣ್ಣನವರಿಂದ ಹಿಡಿದು ಪ್ರೊ ಚಂದ್ರಶೇಖರ್ ಕಂಬಾರರವರೆಗೆ ತನಗೆ ಮಾರ್ಗದರ್ಶನವಿತ್ತ ಮಹನೀಯರೆಲ್ಲರನ್ನೂ ಸ್ಮರಿಸಿದ.ತನ್ನ ಬದುಕಿಗೆ ತೊಟ್ಟಿಲಾದ ಶಿವಮೊಗ್ಗೆಯ ಕರ್ನಾಟಕ ಸಂಘದ ಅಂದಿನ ಹಿರಿಯ ತಲೆಗಳಾದ ದತ್ತಾತ್ರಿಶಾಸ್ತ್ರಿಗಳು, ವೆಂಕಟರಾಮ ಶಾಸ್ತ್ರಿಗಳು,ಮಹಿಷಿ ಶಿವಮೂರ್ತಿ,ಇಬ್ರಾಹಿಂ ಸಾಹೇಬರು, ಮಹೇಶ್ವರಪ್ಪ ,ಕೆ ಜಿ ಸುಬ್ರಹ್ಮಣ್ಯ ಮತ್ತಿತರರು ನೀಡಿದ ಸಹಕಾರವನ್ನು ಮನಸಾರೆ ಸ್ಮರಿಸಿದ.

    ಸಂದರ್ಶನವೋ ಸಿದ್ಧವಾಯಿತು. ಆದರೆ ಬೆಂಗ್ಳೂರಿಗೆ ಮುಟ್ಟಿಸುವುದು ಹೇಗೆ?

    ಶಿವಮೊಗ್ಗೆ ಬೆಂಗ್ಳೂರಿಗೆ ಆಗಷ್ಟೇ ರಾತ್ರಿವೇಳೆ ಲಗ್ಜರಿ ಬಸ್ ಸಂಚಾರ ಆರಂಭವಾಗಿತ್ತು.ರಾತ್ರಿ ಒಂಭತ್ತರ ಲಗ್ಜರಿ ಬಸ್ಸಿನ ಡ್ರೈವರ್ ಗೆ ಸಲಾಂ ಹೊಡೆದೆ.ಆತ ಈ ಜವಾಬ್ದಾರಿಯನ್ನು ಸೌಭಾಗ್ಯವೆಂದೇ ಭಾವಿಸಿದ. ಆತನ ಬೆಂಗ್ಳೂರ್ ವಿಳಾಸ ಪಡೆದು ಬೆಂಗ್ಳೂರ್ ಮಿತ್ರರಿಗೆ ವಿವರಕೊಟ್ಟೆ.

    ಕೊನೆಯದಾಗಿ ಇನ್ನೊಂದು ವಿಷಯ ಹೇಳಲೇಬೇಕು ನಾಡಿನ ಪ್ರಸಿದ್ಧ ಪತ್ರಕರ್ತ ಶ್ರೀ ಎಂ ಬಿ ಸಿಂಗ್ ರವರು ಸ್ವತಃ ಮೆಜೆಸ್ಟಿಕ್ ನಲ್ಲಿ ಬಸ್ಸಿಗಾಗಿ ಕಾದಿದ್ದು ಸಂದರ್ಶನ ಪ್ಯಾಕೆಟ್ ಸಂಗ್ರಹಿಸಿದ್ದರು.

    ಸಂದರ್ಶಕ ಶಿವಮೊಗ್ಗ ಸುಬ್ಬಣ್ಣನ ಜಿಗರಿ ಗೆಳೆಯ ಶೇಷಚಂದ್ರಿಕಾ ಎಂದು ಹೇಳಲು ಎದೆಯುಬ್ಬುತ್ತದೆ.

    error: Content is protected !!