17.2 C
Karnataka
Tuesday, November 26, 2024
    Home Blog Page 153

    ಶುಭ ದಿನ

    ಇಂದಿನ ನುಡಿ

    ಪ್ರೀತಿಯಿಲ್ಲದ ಜೀವನವು  ಹೂವು, ಹಣ್ಣಿಲ್ಲದ ಮರವಿದ್ದಂತೆ.- ಖಲೀಲ್ ಗಿಬ್ರಾನ್

    ಸಂಗ್ರಹ :ರಾಜೀವಲೋಚನ

    ಇಂದಿನ ಪಂಚಾಂಗ

    ದಿನಾಂಕ 12 ಸೆಪ್ಚೆಂಬರ್ 2020,ಭಾನುವಾರ

    ಸಂವತ್ಸರ : ಶ್ರೀ ಶಾರ್ವರಿ, ಆಯನ :ದಕ್ಷಿಣಾಯನ, ಋತು: ವರ್ಷ, ಮಾಸ : ಭಾದ್ರಪದ, ಪಕ್ಷ :ಕೃಷ್ಣ ತಿಥಿ: ಏಕಾದಶಿ ನಕ್ಷತ್ರ: ಪುನ

    ಸೂರ್ಯೋದಯ : ಬೆಳಿಗ್ಗೆ 6.08,

    ಸೂರ್ಯಾಸ್ತ: ಸಂಜೆ 6.21

    Photo by Mohamed Nohassi on Unsplash

    ಪೇಶನ್ಸ್ ಪ್ಲೂಟೋ ಪೇಶನ್ಸ್

    ಕನ್ನಡದ ಜನಪ್ರಿಯ ಕವಿ ಕೆ. ವಿ. ತಿರುಮಲೇಶ್ ಕಥೆಗಾರರಾಗಿಯೂ ಸುಪ್ರಸಿದ್ಧ. ಅವರ ಜನಪ್ರಿಯ ಕಥೆಗಳಲ್ಲಿ ಒಂದಾದ ಪೇಶನ್ಸ್ ಪ್ಲೂಟೋ ಪೇಶನ್ಸ್ . ಅನ್ನು ಕನ್ನಡದ ಭರವಸೆಯ ಕವಯತ್ರಿ ನಂದಿನಿ ಹೆದ್ದುರ್ಗ ಇಲ್ಲಿ ವಾಚಿಸಿದ್ದಾರೆ.ಆಲಿಸುವ ಆನಂದ ನಿಮ್ಮದಾಗಲಿ.

    ನಂದಿನಿ ಹೆದ್ದುರ್ಗ ಅವರ ವಾಸ ಹಾಸನ ಜಿಲ್ಲೆ ಆಲೂರು ತಾಲೂಕಿನ ಹೆದ್ದುರ್ಗ ಎನ್ನುವ ಪುಟ್ಟ ಹಳ್ಳಿಯಲ್ಲಿ. ಬದುಕಿಗೆ ಕಾಫಿ ತೋಟ,ಕೃಷಿ. ಆಸಕ್ತಿ ಕೃಷಿ,ಕಾವ್ಯ,ಸಾಹಿತ್ಯ, ತಿರುಗಾಟ.

    ತಿರುಮಲೇಶರ ಮುಖಾ ಮುಖಿ

    ಕೆ. ವಿ. ತಿರುಮಲೇಶರ ಮುಖಾಮುಖಿ ಕನ್ನಡದ ಸುಪ್ರಸಿದ್ಧ ಪ್ರಮುಖ  ಕವನಗಳಲ್ಲೊಂದು . ಪುರಾಣದ ಕತೆಯೊಂದನ್ನು ಕವನದಲ್ಲಿ ತರುವ ಮೂಲಕ ಇದರ ತೂಕ ಮತ್ತೂ ಹೆಚ್ಚಾಗಿದೆ. ಈ ಕವನವನ್ನು ಪೂರ್ಣಿಮಾ ಗಿರೀಶ್ ಇಲ್ಲಿ ವಾಚಿಸಿದ್ದಾರೆ. ಮೂಲತಃ ಬೆಂಗಳೂರಿನವರಾದ ಪೂರ್ಣಿಮಾಾ ಸಧ್ಯ ಸ್ವೀಡನ್ ವಾಸಿ.  14 ವರ್ಷ ಐಟಿ ಉದ್ಯೋಗದ ಅನುಭವ. ವಿವೇಕಾನಂದ ಯೋಗ ಅನುಷ್ಠಾನದಲ್ಲಿ ತರಬೇತಿ ಪಡೆದು ಈಗ ಯೋಗ ಶಿಕ್ಷಕಿ. ಆನ್ ಲೈನ್ ನಲ್ಲಿ ಯೋಗ ತರಪೇತುಗಾರ್ತಿ. ಆರು ವರ್ಷದಿಂದ ಗುರು ಮುಖೇನ ವೇದಾಭ್ಯಾಸ . ಹವ್ಯಾಸಿ ಬರಹಗಾರ್ತಿ. ಸಂಗೀತ, ಸಾಹಿತ್ಯದಲ್ಲಿ ಆಸೆ ಮತ್ತು ಆಸಕ್ತಿ.

    ಕವನವನ್ನು ಆಸ್ವಾದಿಸುವ ಸಂತಸ ನಿಮ್ಮದಾಗಲಿ.

    ಶುಭ ದಿನ

    ಇಂದಿನ ನುಡಿ

    ಯಾರೇ ವ್ಯಕ್ತಿಯನ್ನು ಪೂರ್ಣವಾಗಿ ಅರಿಯದೆ ಮನಸ್ಸಿಗೆ ಹತ್ತಿರ ತಂದುಕೊಳ್ಳಬೇಡಿ. ಹಾಗೆಯೇ, ಮನಸ್ಸಿಗೆ ಹತ್ತಿರವಾದ ವ್ಯಕ್ತಿಯನ್ನು, ಅರಿಯದೇ ಆದ ತಪ್ಪಿಗಾಗಿ ದೂರ ಮಾಡಿಕೊಳ್ಳಬೇಡಿ

    ಸಂಗ್ರಹ :ರಾಜೀವಲೋಚನ

    ಇಂದಿನ ಪಂಚಾಂಗ

    ದಿನಾಂಕ 12 ಸೆಪ್ಚೆಂಬರ್ 2020,ಶನಿವಾರ

    ಸಂವತ್ಸರ : ಶ್ರೀ ಶಾರ್ವರಿ, ಆಯನ :ದಕ್ಷಿಣಾಯನ, ಋತು: ವರ್ಷ, ಮಾಸ : ಭಾದ್ರಪದ, ಪಕ್ಷ :ಕೃಷ್ಣ ತಿಥಿ: ದಶಮಿ ನಕ್ಷತ್ರ: ಆರ್ದ್ರಾ

    ಸೂರ್ಯೋದಯ : ಬೆಳಿಗ್ಗೆ 6.08,

    ಸೂರ್ಯಾಸ್ತ: ಸಂಜೆ 6.21

    Photo by Gabriel Sanchez on Unsplash

    ಡಾಮಿನಿಕ್ ದ ಡ್ರಮ್ಮರ್

    ಕನ್ನಡದ ಮೊದಲ ಸಾಲಿನಲ್ಲಿ ಗುರುತಿಸಿಕೊಳ್ಳಬಹುದಾದ ಕವಿ ಕೆ. ವಿ. ತಿರುಮಲೇಶ್ ಕಥೆಗಾರರಾಗಿಯೂ ಜನಪ್ರಿಯ. ಅವರ ಜನಪ್ರಿಯ ಕಥೆಗಳಲ್ಲಿ ಒಂದಾದ ಡಾಮಿನಿಕ್ ದ ಡ್ರಮ್ಮರ್ ಒಂದು ಬೇತಾಳ ಕಥೆ ಅನ್ನು ಕನ್ನಡದ ಭರವಸೆಯ ಕವಯತ್ರಿ ನಂದಿನಿ ಹೆದ್ದುರ್ಗ ಇಲ್ಲಿ ವಾಚಿಸಿದ್ದಾರೆ.

    ಆಲಿಸುವ ಆನಂದ ನಿಮ್ಮದಾಗಲಿ.

    ತಿರುಮಲೇಶರೆಂಬ ಸವ್ಯಸಾಚಿಗೆ…

    ತಿರುಮಲೇಶ್ ಕನ್ನಡದ ಮೊದಲ ಸಾಲಿನಲ್ಲಿ ಗುರುತಿಸಿಕೊಳ್ಳಬಹುದಾದ ಕವಿ. ಅವರು ಕವಿ, ಕಥೆಗಾರ, ಅಂಕಣಕಾರ, ಭಾಷಾ ಶಾಸ್ತ್ರಜ್ಞ, ನಾಟಕಕಾರ ಏನೆಲ್ಲವೂ ಹೌದು.. ಈ ಸೆಪ್ಟೆಂಬರ್ ಹನ್ನೆರಡಕ್ಕೆ ಅಂದರೆ ಇಂದು ಎಂಬತ್ತು ವರ್ಷಗಳನ್ನು ಪೂರೈಸಲಿರುವ ತಿರುಮಲೇಶರೀಗ ಹೈದರಾಬಾದಿನಲ್ಲಿ ವಾಸ. ಅವರ ಅಕ್ಷಯಕಾವ್ಯಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನ ಬಂದಿದೆ. ಅವರ ವಿಫುಲ ಸಾಹಿತ್ಯ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದೆ.ಈ ಹೊತ್ತಿನಲ್ಲಿ ಅವರ ಸಾಹಿತ್ಯ ಲೋಕದಲ್ಲೊಂದು ಸುತ್ತು

    ಆಶಾ ಜಗದೀಶ್

    ತಿರುಮಲೇಶ್ ಎನ್ನುವ ಹೆಸರಿಗೇ ಒಂದು ಆಕರ್ಷಣೆ ಬಂದಾಗಿತ್ತು. ನಾನಾಗಿನ್ನು ಸಾಹಿತ್ಯ ಪ್ರಪಂಚದಲ್ಲಿ ಕಣ್ಣುಬಿಡುತ್ತಿದ್ದೆ. ಅವರ ಕವಿತೆಯೊದು ಎಲ್ಲೇ ಬರಲಿ, ಅವರ ಲೇಖನವೊಂದು ಎಲ್ಲೇ ಪ್ರಕಟವಾಗಲಿ ಬೆಲ್ಲದ ತುಂಡನ್ನು ಕಂಡಂತೆ ಹಿಡಿದು ಕೂರುತ್ತಿದ್ದೆ. ಕವಿತೆ ಎಂದರೆ ಏನು ಹೇಗೆ ಅಂತ ಕಲಿಯಲು ತಿಳಿಯಲು ಶುರುಮಾಡಿದ್ದೇ ಅವರ ಕವಿತೆಗಳಿಂದ.

    ಅವರ ಅಕ್ಷಯ ಕವಿತೆಗಳನ್ನು ಓದುತ್ತಾ ಓದುತ್ತಾ ಅಚ್ಚರಿಗೊಳ್ಳುತ್ತಿದ್ದೆ ಹಲವು ಸಲ. ಅಕಗಷಯ ಕಾವ್ಯ ಒಂದಿ ರೀತಿಯಲ್ಲಿ ಬದುಕಿನ ಹಲವು ಆಯಾಮಗಳನ್ನು ಪರಿಚಯಿಸುತ್ತಾ ಹೋಗುತ್ತದೆ. ಅವರ ಕವಿತೆಗಳು ಸರಳ ಮತ್ತು ಸುಂದರ. ಒಂದು ಚಂದದ ಧ್ಯಾನದ ಫಲ. ಅವರ “ಆಳ ನಿರಾಳ” ಎನ್ನುವ ಅಂಕಣ ಬರಹದ ಆಳ ಮತ್ತು ವ್ಯಾಪಕತೆ ಹರವುಳ್ಳದ್ದು. ಮತ್ತೆ ಅವರ ಕಥೆಗಳದ್ದು ಮತ್ತೊಂದೇ ತೂಕ. ಅದೊಂದು ಅದ್ಭುತ ಲೋಕ.

    ತಿರುಮಲೇಶರ ಬಿಡಿ ಕಥೆಗಳನ್ನು ಮಾತ್ರ ಓದಿ ಗೊತ್ತಿದ್ದ ನನಗೆ ಅಚಾನಕ್ ಒಂದು ದಿನ ಅವರ “ಜಾಗುವಾ ಮತ್ತು ಇತರರು” ಎನ್ನುವ ಸಂಕಲನ ನನ್ನ ಕಣ್ಣಿಗೆ ಬಿತ್ತು. ಅವರನ್ನು ಮತ್ತಷ್ಟು ಒಳನೋಟಗಳಿಂದ ಅರಿಯಲು ಸಾಧ್ಯವಾಯಿತು. ಸುಮಾರು ಹದಿನೈದು ಕಥೆಗಳಿರುವ ಈ ಸಂಕಲನದ ಒಂದೊಂದು ಕಥೆಯೂ ತನ್ನ ವಸ್ತು ಮತ್ತು ರಾಚನಿಕ ದೃಷ್ಟಿಯಿಂದ ನಮ್ಮನ್ನು  ಸೆಳೆಯುತ್ತಾ ಹೋಗುತ್ತವೆ. ರಸ್ಕಿನ್ ಬಾಂಡರದೂ ಒಂದು “Tha bent double begger” ಎನ್ನುವ ಭಿಕ್ಷುಕನೊಬ್ಬನ ಬಗೆಗಿನ ಕಥೆಯಿದೆ. ಎಲ್ಲರೂ ಸಾಮನ್ಯ ಭಿಕ್ಷುಕ ಎಂದು ಪರಿಗಣಿಸುವ ವ್ಯಕ್ತಿಯೊಬ್ಬ ತನ್ನ ವಿಶಿಷ್ಟ ನಡವಳಿಕೆ ಮತ್ತು ಮಾತುಕತೆಯಿಂದ ಜೀವನ ದರ್ಶನ ಮಾಡಿಸುತ್ತಾನೆ. ಕೊನೆಯಲ್ಲಿ ಲೇಖಕರಿಗೆ ಕಾಡುವುದು ನಿಜವಾದ ಭಿಕ್ಷುಕ ಯಾರು ಎನ್ನುವುದು… ಈ ಕಥೆ ನನ್ನನ್ನು ಬಹಳ ಕಾಡಿತ್ತು. 

    ಅದೇ ರೀತಿಯಲ್ಲಿ ತಿರುಮಲೇಶರ “ಜಾಗುವಾ ಮತ್ತು ಇತರರು” ಸಂಕಲನದ “ಇಬ್ಬರು ಹುಚ್ಚರು” ಎನ್ನುವ ಕಥೆಯೂ ನನ್ನನ್ನು ಬಹಳವಾಗಿ ಕಾಡಿತ್ತು. ಈ ಕಥೆಯಲ್ಲಿ ಬರುವ ಸದಾನಂದ ತನಗೇ ಗೊತ್ತಿಲ್ಲದ ತನ್ನ ನಿರೀಕ್ಷೆಗಳ ಸ್ಪಷ್ಟತೆ ಇಲ್ಲದೆ ಆ ಕ್ಷಣಕ್ಕೆ ತಲೆ ಏರಿದ ಹುಚ್ಚು ಕುದುರೆಯನ್ನು ಸವಾರಿ ಮಾಡುವಂಥವನು. ಅವನಿಗೆ ಸ್ವಾತಂತ್ರ್ಯ ಬೇಕು. ಆದರೆ ಆ ಸ್ವಾತಂತ್ರ್ಯ ಯಾವುದೆನ್ನುವ ಸ್ಪಷ್ಟತೆ ಅವನಿಗಿಲ್ಲ. ಆ ಆ ಇಚ್ಛೆ ಅವನನ್ನು ಹುಚ್ಚನನ್ನಾಗಿಸುತ್ತದೆ. ವಿಚಿತ್ರ ಕೆಲಸಗಳನ್ನು ಅವನಿಂದ ಮಾಡಿಸುತ್ತದೆ. ಅವನು ನಿಜವಾಗಿಯೂ ಹುಚ್ಚನಾ ಅಥವಾ ಹುಚ್ಚನಂತೆ ವರ್ತಿಸುತ್ತಿದ್ದಾನಾ ಎನ್ನುವುದು ಅವರರವರ ತರ್ಕಕ್ಕೆ ನಿಲುಕಿದ್ದು. ಆದರೆ ಸಮಾಜಕ್ಕೆ ಹಾಗಲ್ಲ ಹುಚ್ಚನಾಗಲೀ ಹುಚ್ಚನಂತೆ ವರ್ತಿಸುವವನಾಗಲೀ ಯಾರಾದರೂ ಸರಿ ತಮ್ಮ ವಿಚಿತ್ರ ಕುತೂಹಲಕ್ಕೆ, ತಮ್ಮ ಹೀಗಳಿಕೆಗೆ, ವಿನೋದಕ್ಕೆ, ಕುಚೋದ್ಯಕ್ಕೆ… ಈಡಾಗುವ ಒಂದು ಪ್ರಾಣಿ ಸಿಕ್ಕಿದರೆ ಸಾಕು. ಅವನ ಯಾವ ಬಗೆಯ ಸ್ವಾಸ್ಥ್ಯದ ಕಾಳಜಿ ಅವರಿಗೆ ಬೇಕಿಲ್ಲ.

    ಇಲ್ಲಿ ಒಂದು ಸಂದರ್ಭ ಏರ್ಪಡುತ್ತದೆ. ಅದು ಸದಾನಂದ ಹುಚ್ಚ ಸದ್ದು ಆಗಲು ಅನುಕೂಲಕರವೂ ಆಗಿರುತ್ತದೆ. ರೋಗಿ ಬಯಸಿದ್ದೂ ವೈದ್ಯರು ಹೇಳಿದ್ದೂ ಒಂದೇ ಆಯಿತೆನ್ನುವ ಹಾಗೆ. ಸದಾನಂತ ತನ್ನ ಹುಚ್ಚು ಅವತಾರದಿಂದ ತಾನು ಯಾವ ಸ್ವಾತಂತ್ರ್ಯವನ್ನು ಬಯಸಿದ್ದನೋ ಅದನ್ನು ಪಡೆಯುತ್ತಾನೆ. ಕುಟುಂಬದ ಜವಾಬ್ದಾರಿ ನಿರ್ವಹಿಸಲಾಗದ, ದುಡಿದು ಕುಟುಂಬವನ್ನು ಸಾಕಲಾಗದ ಹೇಡಿಯೊಬ್ಬ ಎತ್ತುವ ಹೊಸ ಅವತಾರವೇ ಈ ಹುಚ್ಚನ ಅವತಾರ ಅಂತಲೂ ಅನಿಸುತ್ತದೆ.  
    ಈ ಮಧ್ಯೆ ಆ ಊರಿಗೆ ಮತ್ತೊಬ್ಬ ಹುಚ್ಚನ ಆಗಮನವಾಗುತ್ತದೆ. ಇವನ ಚೇಷ್ಟೆ ಕುಚೇಷ್ಟೆಗಳು ಸದ್ದೂವಿನ ಚೇಷ್ಟೆಗಳ ಹದ್ದನ್ನೂ ಮೀರುವಂತಿರುತ್ತವೆ. ಈಗ ಸದ್ದು ಕಂಗಾಲಾಗಿಬಿಡುತ್ತಾನೆ. ಪೈಪೋಟಿಗೆ ಬೀಳುತ್ತಾನೆ. ಕೊನೆಗೆ ಅವನೊಂದಿಗೆ ಸ್ಪರ್ಧಿಸಲಾಗದೆ ಅವನ ಬಳಿಗೆ ಸಂಧಾನಕ್ಕೆ ಹೋಗುತ್ತಾನೆ. ಆಗ ಅವರಿಬ್ಬರ ನಡುವೆ ನಡೆಯುವ ಮಾತುಕತೆ ಸ್ವಾರಸ್ಯಕರವಾಗಿದೆ. ಒಂದು ಹಂತದಲ್ಲಿ ಈ ಇಬ್ಬರೂ ಹುಚ್ಚರೇ ಅಲ್ಲ. ಹುಚ್ಚರಂತೆ ನಟಿಸುತ್ತಿದ್ದಾರೆ ಎಂದು ಓದುವ ಪ್ರತಿಯೊಬ್ಬರಿಗೂ ಗಾಢವಾಗಿ ಅನ್ನಿಸಿಬಿಡುತ್ತದೆ. 
    ಕೊನೆಗೆ ಹೊಸ ಹುಚ್ಚ ಇವನಿಗೆ “ನೀನು ನಿಜವಾದ ಹುಚ್ಚನಲ್ಲ, ನಿನಗೆ ಹೆಸರಿದೆ, ಕುಟುಂಬವಿದೆ, ಮಲಗಲು ಮನೆಗೆ ಹೋಗುತ್ತೀ… ಆದರೆ ನಾನು ನಿಜವಾದ ಹುಚ್ಚ, ನನಗೆ ಹೆಸರು ಮನೆ ಏನೂ ಇಲ್ಲ” ಎನ್ನುತ್ತಾನೆ. ಅಂದು ರಾತ್ರೋ ರಾತ್ರಿ ಸದ್ದು ಊರಿನಿಂದ ಮಾಯವಾಗುತ್ತಾನೆ. ಒಂದಾರು ತಿಂಗಳು ಕಳೆದು ಮನೆಗೆ ಬರುವ ಸದ್ದುವಿಗೆ ಹುಚ್ಚು ಇಳಿದಿರುತ್ತದೆ. ಬಹುಶಃ ಅವನಿಗೆ ಬದುಕಿನ ಕರಾಳತೆ ಅರ್ಥವಾಗಿರಬೇಕು… ಇದನ್ನೆಲ್ಲಾ ಬಿಟ್ಟು ಮರ್ಯಾದೆಯಿಂದ ಬದುಕೋಣ ಎನಿಸಿರಬೇಕು… ಇವನು ಊರಿಗೆ ಮರಳಿ ಬರುವ ಹೊತ್ತಿಗೆ, ಆ ಹೊಸ ಹುಚ್ಚನೂ ಕಣ್ಮರೆಯಾಗಿರುತ್ತಾನೆ. ಬಹುಶಃ ಅವನಿಗೂ ಇಂತಹುದೇ ಮನಃಪರಿವರ್ತನೆಯಾಗಿರಬೇಕು ಅಂತೆಲ್ಲಾ ಓದುಗರಿಗೆ ಅನಿಸತೊಡಗುತ್ತದೆ. ಅದನ್ನೇ ಕಥೆಯೂ ಹೇಳುತ್ತದೆ. 
    ಒಟ್ಟಾರೆ ಮನುಷ್ಯನಿಗೆ ತೃಪ್ತಿ ಎನ್ನುವುದು ಯಾವುದರಲ್ಲಿಯೂ ಸಿಗುವುದಿಲ್ಲ. ಇರುವುದನ್ನು ಬಿಟ್ಟು ಇಲ್ಲದಿರುವುದಕೆ ಹಲುಬುತ್ತಾ ಕೂರುತ್ತಾನೆ. ಕೊನೆಗೆ ಬದುಕಿನ ನಿಷ್ಠುರತೆಯ ಪೆಟ್ಟು ಬಿದ್ದಾಗಲೇ ಅವನಿಗೆ ಸತ್ಯದರ್ಶನವಾಗುವುದು. ಆಗ ಮರಳಿ ತನ್ನ ಅದೇ ಹಳೇ ಬದುಕಿಗೆ ಬರಲು ಅವನಿಗೆ ಅವಕಾಶವಿದ್ದರೆ ಅದೇ ಅವನ ಪಾಲಿನ ಅದೃಷ್ಟ.

    ತಿರುಮಲೇಶರ ಕಥೆಗಳಲ್ಲಿ ವಸ್ತುವಿನ ಆಯ್ಕೆ ಮತ್ತು ಅದನ್ನು ನಿರೂಪಿಸುವ ರೀತಿ ಬಹಳ ಚಂದ. ಅವರ ಕಥೆಗಳಲ್ಲಿ ಓದುಗರಿಗೆ ಸ್ಕೋಪ್ ಇರುತ್ತದೆ. ಯಾಕೆ, ಏನು, ಹೇಗೆ ಎಂದೆಲ್ಲಾ ಓದುಗ ಯೋಚಿಸ ತೊಡಗುತ್ತಾನೆ. ಅವರ ಕಥೆಗಳು ಆಚಾರ ಹೇಳುತ್ತಾ ಹೊರಡುವುದಿಲ್ಲ, ತಾರ್ಕಿಕ ಅಂತ್ಯಕ್ಕೆ ತಂದು ನಿಲ್ಲಿಸಿ ಓದುಗರ ಯೋಚನೆಯನ್ನು ಮೊಟಕುಗೊಳಿಸುವುದಿಲ್ಲ. ಇದು ಬಹಳ ಮುಖ್ಯ ಎನಿಸುತ್ತದೆ. ಅಲ್ಲದೆ ತಿರುಮಲೇಶರು ಕಥೆ ಮತ್ತು ಪಾತ್ರದ ಆಳಕ್ಕೆ ಓದುಗರನ್ನು ಒಯ್ಯುವ ರೀತಿಯಂತೂ ಅದ್ಭುತ. ಓದುಗನಿಗಂತೂ ಈ ಕಥೆ ಇಲ್ಲೇ ಎಲ್ಲೋ ಪಕ್ಕದಲ್ಲೇ ನಡೆದಿದೆ ಎನಿಸುವಷ್ಟು ಆಪ್ತವಾಗಿಬಿಡುತ್ತದೆ. 

    ಕಥೆ, ಕವಿತೆ, ಅಂಕಣ ಬರಹ ಹೀಗೆ ಪ್ರತಿಯೊಂದು ಪ್ರಕಾರದಲ್ಲೂ ತಮ್ಮ ವೈಶಿಷ್ಟ್ಯತೆಯ ಛಾಪನ್ನು ಮೂಡಿಸುತ್ತಲೇ ಹೋದವರು ಕೆ.ವಿ.ತಿರುಮಲೇಶರು. ಹಾಗಾಗಿಯೇ ಅವರು ಸವ್ಯಸಾಚಿ. ಅವರಿಗೀಗ ಎಂಭತ್ತರ ಸಂಭ್ರಮ. ಅವರ ಹುಟ್ಟುಹಬ್ಬಗಳು ಅನಂತವಾಗಲಿ ಎನ್ನುವ ಮುಗಿಯದ ಆಸೆಯೊಂದನ್ನು ಎದೆಯಲ್ಲಿ ಹಚ್ಚಿಟ್ಟುಕೊಂಡು ಸದಾ ಖುಷಿಯಿಂದಿರಿ ಸರ್ ಎಂದು ಹಾರೈಸುವೆ.

    ಆಶಾ ಜಗದೀಶ್

    ಗೌರಿಬಿದನೂರಿನವರಾದ ಆಶಾ ಜಗದೀಶ್ ತಮ್ಮ ಬರಹಗಳಿಂದ ಕನ್ನಡಿಗರಿಗೆ ಪರಿಚತರು. ಹಲವಾರು ಕವನ, ಕಥೆ , ಪ್ರಬಂಧ ಬರೆದಿದ್ದಾರೆ.

    ಮ್ಯುಟೇಷನ್ ಹಂತ ತಲುಪಿತಾ ವೈರಸ್

    ಚೀನಾ ದೇಶದಲ್ಲಿ ಪ್ರಥಮವಾಗಿ ಕಾಣಿಸಿಕೊಂಡ ಕರೋನಾ ವೈರಸ್ (ಕೋವಿಡ್-19) ಪ್ರಪಂಚದ ಎಲ್ಲಾ ದೇಶಗಳಲ್ಲಿಸಾಕಷ್ಟು ಹಾನಿಯುಂಟುಮಾಡಿತು. ಹಾಗೂ ಹಲವಾರು ಸಾವು ನೋವುಗಳ, ಆರ್ಥಿಕ ಹಿಂಜರಿತ ಮತು ಉದ್ಯೋಗ ನಷ್ಟ ಸೃಷ್ಟಿಸಿತು. ಈ ಪರಿಸ್ಥಿತಿ ಇನ್ನೂ ಎಷ್ಟು ದಿನ ಮುಂದುವರೆಯುತ್ತದೆ ಮತ್ತು ಮೊದಲಿನ ಸ್ಥಿತಿ ಯಾವಾಗ ಬರುತ್ತದೆ ಎನ್ನುವ ಪ್ರಶ್ನೆ ಎಲ್ಲರನ್ನುಕಾಡುತ್ತಿದೆ.

    ಸೋಂಕಿನ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತಿದ್ದು ಸಾವಿನ ಪ್ರಮಾಣ ಕಡಿಮೆಯಾಗುತ್ತಿರುವುದು ಒಂದು ಆಶಾಕಿರಣ. ಕರೋನಾ ಸೋಂಕಿನ ಬಗ್ಗೆ ಸ್ಪಷ್ಟ ನಿಖರತೆ ಇಲ್ಲದೆ ಇರುವುದು ಹಲವು ಗೊಂದಲಕ್ಕೀಡುಮಾಡಿದೆ.
    ಐವತ್ತುವರ್ಷಕ್ಕಿಂತ ಮೇಲಿರುವರು ಮತ್ತು ಐವತ್ತು ವರ್ಷಕ್ಕಿಂತ ಕಡಿಮೆ ಇರುವವರಲ್ಲಿನ ರೋಗ ಲಕ್ಷಣಗಳು ಮತ್ತು ಸಾವಿನ ಸಂಖ್ಯೆಯಲ್ಲಿ ಗಮನಾರ್ಹ ವ್ಯತ್ಯಾಸ ಕಂಡು ಬರುತ್ತಿಲ್ಲ. ಆರೋಗ್ಯದಿಂದಿರುವವರು ಮತ್ತು ಯುವಕರೂ ಕೂಡ ಕರೋನಾದಿಂದ ಸಾವನ್ನಪ್ಪಿದ್ದಾರೆ. ವಯಸ್ಸಾದವರು ಮತ್ತು ಈಗಾಗಲೇ ಹಲವಾರು ರೋಗಗಳಿಂದ ಬಾಧಿತರಾದವರು ಸೋಂಕಿನಿಂದ ಪಾರಾಗಿ ಬದುಕುಳಿದಿದ್ದಾರೆ.ಇಲ್ಲಿಯವರೆಗೆ ಸುರಕ್ಷಿತದಿಂದಿರುವ ಪ್ರದೇಶಗಳು ಕೂಡ ಹೆಚ್ಚು ಹಾನಿಗೊಳಗಾಗುತ್ತಿವೆ.

    ಇಲ್ಲಿಯವರೆಗಿನ ಅಂಕಿ ಅಂಶಗಳನ್ನು ವಿಶ್ಲೇಷಿಸಿದರೆ ವಿಶ್ವದಲ್ಲಿ ಸೋಂಕಿತರ ಸಂಖ್ಯೆಮಾರ್ಚನಲ್ಲಿ 5.7 ಲಕ್ಷವಾಗಿದ್ದು ಈಗ 2.7 ಕೋಟಿಗೆ ತಲುಪಿದೆ. ಮಾರ್ಚನಲ್ಲಿದೈನಂದಿನ ಸೋಂಕಿತರ ಪ್ರಮಾಣ 78,000ವಿದ್ದು ಜೂನ್‌ನಲ್ಲಿ 2,50,000 ಇದ್ದು ನಂತರ 2,80,000ಕ್ಕೆ ಸ್ಥಿರಗೊಳ್ಳುತ್ತಿದೆ. ಸೋಂಕಿತರಲ್ಲಿ ಸಾವಿನ ಪ್ರಮಾಣ ಮಾರ್ಚ್‌ನಲ್ಲಿ ಶೇಕಡಾ 30ರಷ್ಟು ಇದ್ದು ಈಗ ಶೇಕಡಾ 2.5ಕ್ಕೆ ಸ್ಥಿರವಾಗಿದೆ.
    ನಮ್ಮ ದೇಶದಲಿ ದೈನಂದಿನ ಸೋಂಕಿತರ ಸಂಖ್ಯೆ ಮಾರ್ಚನಲ್ಲಿ 1,800 ಇದ್ದು ಪ್ರಸ್ತುತ 90,000ಕ್ಕೆ ಏರಿದೆ. ಮಾರ್ಚನಲ್ಲಿ ದಿನಕ್ಕೆ ಸಾವಿನ ಸಂಖ್ಯೆ 130 ಇದ್ದು ಜೂನನಲ್ಲಿ 600ಕ್ಕೆ ಏರಿ ಪ್ರಸ್ತುತ ಸುಮಾರು 1000ಕ್ಕೆ ಸ್ಥಿರವಾಗಿದೆ .

    ಯಾವುದೇ ರೋಗ ಲಕ್ಷಣಗಳನ್ನು ಉಂಟುಮಾಡಿ ಕೊನೆಗೆ ಸಾವನ್ನುಉಂಟು ಮಾಡುವ ವೈರಸ್‌ನ್ನು ಹಾನಿಕಾರಕ ವೈರಸ್ ಎಂದು ಕರೆಯಲಾಗುತ್ತದೆ. ಇಂಥ ವೈರಸ್ ರೋಗ ನಿರೋಧಕ ಶಕ್ತಿ ಇರುವವರ ದೇಹವನ್ನು ಪ್ರವೇಶಿಸಿದಾಗ ಹೆಚ್ಚಿನ ತಂಟೆ ಮಾಡದೆ ಸೊರಗುತ್ತದೆ. ಹೀಗಾಗಿ ಇಂಥ ವ್ಯಕ್ತಿಗಳಲ್ಲಿ ಯಾವುದೇ ರೋಗ ಲಕ್ಷಣ ಕಾಣುವುದಿಲ್ಲ. ಈ ವ್ಯಕ್ತಿಗಳಲ್ಲಿ ಮೊದಲೆ ಸೊರಗಿದ್ದ ವೈರಸ್ ಮತ್ತೊಬ್ಬರನ್ನು ಪ್ರವೇಶಿಸಿದಾಗ ಮತ್ತಷ್ಟು ಸೊರಗಿರುತ್ತದೆ . ಇದನ್ನೇ Mutation ಎನ್ನಲಾಗುತ್ತದೆ.

    ಈ ರೀತಿ ರೂಪಾಂತರಗೊಂಡ ಸೌಮ್ಯ ವೈರಸ್ ಸೋಂಕಿತ ವ್ಯಕ್ತಿಯಲ್ಲಿ ಕಡಿಮೆ ಅಥವಾ ಯಾವುದೇರೋಗ ಲಕ್ಷಣಗಳನ್ನು ಉಂಟುಮಾಡುವುದಿಲ್ಲ. ಹೀಗಾಗಿ ಸೋಂಕಿನ ಪ್ರಮಾಣ ಹೆಚ್ಚುತ್ತಲೇ ಇದ್ದರೂ ಅದರಿಂದ ಆಗುವ ತೀವ್ರ ರೋಗ ಲಕ್ಷಣಗಳು ಮತ್ತು ಸಾವುಗಳು ಕ್ರಮೇಣ ಕಡಿಮೆಯಾಗುತ್ತವೆ ಮತ್ತು ಸಾವುಗಳು ಸಂಖ್ಯೆಯ ತೀರಾ ನಗಣ್ಯವಾಗುತ್ತವೆ ಎನ್ನಬಹುದು.

    ಮುಂದಿನ ದಿನಗಳಲ್ಲೂ ಕರೋನಾ ವೈರಸ್ ಸೋಂಕಿತ ವ್ಯಕ್ತಿಗಳು ಇರುತ್ತಾರೆ ಆದರೆ ಅವರೆಲ್ಲರೂ ತುಂಬಾ ಸೌಮ್ಯವಾದ ರೋಗಲಕ್ಷಣಗಳನ್ನು ಹೊಂದಿರುತ್ತಾರೆ ಅಥವಾ ಯಾವುದೇ ಲಕ್ಷಣಗಳು ಇರುವುದಿಲ್ಲ. ಆದರೆ ಸಾವು ಬಹಳ ಕಡಿಮೆ ಇರುತ್ತದೆ ಎಂದು ಭಾವಿಸಲಾಗಿದೆ

    ಸೌಮ್ಯವೈರಸ್‌ನಿಂದ ಸೋಂಕಿತಗೊಂಡ ಸೋಂಕಿತರು ನೈಸರ್ಗಿಕ ವ್ಯಾಕ್ಸಿನೇಷನ್ ಹೊಂದಿದಂತೆ ವೈರಸ್‌ನ್ನು ನಿಗ್ರಹಿಸುವ ಶಕ್ತಿ ಹೊಂದಿರುತ್ತಾರೆ. ಈಗಿನ ಸಾವಿನ ಸಂಖ್ಯೆಗೆ ಹೋಲಿಸಿದರೆ ಕೋವಿಡ್-19ನಿಂದಾಗುವ ಸಾವಿನ ಸಂಖ್ಯೆಪ್ರತಿದಿನ 1000ಇದ್ದುಕರೋನಾ ವೈರಸ್‌ ಇಲ್ಲದ ದಿನಗಳಲ್ಲಿ ಸಾವಿನ ಸಂಖ್ಯೆ ಪ್ರತಿದಿನ 25 000 ಇತ್ತು ಎಂಬುದನ್ನು ಗಮನಿಸಬೇಕು.

    ಆದರೆ ಮ್ಯೂಟೇಷನ್ ಆದ ವೈರಸ್ ಉಗ್ರರೂಪ ತಾಳಬಹುದು ಎಂಬ ವಾದವೂ ಇದೆ. ಆದರೆ ಹಿಂದಿನ ಸಾರ್ಸ್ ಮತ್ತು ಚಿಕನ್ ಗುನ್ಯಾ ವೈರಸ್ ಗಳನ್ನು ಗಮನಿಸಿದರೆ ಮ್ಯೂಟೇಷನ್ ಹಂತ ತಲುಪಿದ ನಂತರ ವೈರಸ್ ಗಳು ಸೌಮ್ಯವಾಗುವುದೆ ಹೆಚ್ಚು ಎಂದು ಭಾವಿಸಲಾಗಿದೆ.

    ಹಾಗೆಂದು ಮೈ ಮರೆಯದಿರಿ ಸರಕಾರ ಮುಂದೆ ತಿಳಿಸುವವರೆಗೆ ಎಲ್ಲಾ ಸುರಕ್ಷಿತ ಕ್ರಮಗಳನ್ನು ಪಾಲಿಸುವುದನ್ನು ಬಿಡಬಾರದು.

    ಕಾಂಗ್ರೆಸ್ ಪತ್ರ ಬಂಡಾಯದ ಹಿಂದಿದ್ದ ರಹಸ್ಯವಾದರು ಏನು ?

    ಇತ್ತೀಚೆಗಷ್ಟೇ ಕಾಂಗ್ರೆಸ್ 23 ನಾಯಕರು ಪ್ರಭಾರಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದು ನಾಯಕತ್ವ ಬದಲಾವಣೆಯನ್ನು ಒತ್ತಾಯಿಸಿದ್ದರು. ಬಳಿಕ ಅದೊಂದು ಅಘೋಷಿತ ಬಂಡಾಯವನ್ನು ಹತ್ತಿಕ್ಕಲಾಯಿತು ಬಿಡಿ. ಆದರೆ ಇದರ ಹಿಂದೆ ಇನ್ನಷ್ಟು ರಹಸ್ಯಗಳು ಅಡಗಿವೆ ಎಂದು ಈಗ ತಿಳಿದು ಬರುತ್ತಿವೆ.

    ಇದೊಂದು ಸೌರವ್ಯೂಹ

    ಕಾಂಗ್ರೆಸ್ ಪಕ್ಷವೆಂಬುದು ಒಂದು ರೀತಿಯಲ್ಲಿ ಸೌರವ್ಯೂಹವಿದ್ದಂತೆ. ಅಲ್ಲಿ ನವಗ್ರಹಗಳಲ್ಲದೆ ಅನೇಕ ಉಪಗ್ರಹಗಳು, ಕ್ಷುದ್ರಗ್ರಹಗಳು ಸುತ್ತುತ್ತಿವೆ. ಸೌರವ್ಯೂಹದಲ್ಲಿ ಸೂರ್ಯನೊಬ್ಬನೇ ಕೇಂದ್ರವಾಗಿದ್ದರೆ, ಕಾಂಗ್ರೆಸ್ ನಲ್ಲಿ ಈಗ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಹೀಗೆ ಯಾರು ಕೇಂದ್ರವಾಗಬೇಕು ಎಂಬ ಜಿಜ್ಞಾಸೆ ಆರಂಭವಾಗಿದ್ದೇ ಈ ಎಲ್ಲಾ ಅವಾಂತರಕ್ಕೆ ಕಾರಣ ಎನ್ನಲಾಗುತ್ತಿದೆ. ಅಂದರೆ ಅಲ್ಲೀಗ ತಾಯಿ-ಮಗ ಇವರಿಬ್ಬರ ಮಧ್ಯೆ ಯಾರ ಮೇಲೆ ನಿಷ್ಠೆ ತೋರಬೇಕು ಮತ್ತು ಅದರಿಂದ ತಮಗಾಗುವ ಲಾಭ ಏನು ಎಂಬ ಚಿಂತನೆ ಆರಂಭವಾಗಿದೆ ಎಂದೇ ಹೇಳಬೇಕಾಗುತ್ತದೆ.

    ಹಿಂದಿನಿಂದಲೂ ನೆಹರು-ಗಾಂಧಿ ಕುಟುಂಬದ ಆಪ್ತವಲಯದಲ್ಲೇ ಭಟ್ಟಂಗಿತನ ಮಾಡುತ್ತಿದ್ದ ಹಳೆಯ ಹುಲಿಗಳು ಹೊಸ ಮುಖದ ಶೋಧನೆಗೆ ತೊಡಗಿರುವ ರಾಹುಲ್ ಗಾಂಧಿಯ ನಡೆಯಿಂದ ಕಂಗೆಟ್ಟಿದ್ದಾರೆ. ಮೋದಿ- ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ ನಡೆಸುತ್ತಿರುವ ಹೊಸ ಮುಖಗಳ ಹುಡುಕಾಟ (ಉದಾ-ಯೋಗಿ ಆದಿತ್ಯನಾಥ್ ಅವರನ್ನು ಉ.ಪ್ರ. ಮುಖ್ಯಮಂತ್ರಿಯಾಗಿ ಆರಿಸಿದ್ದು, ಕರ್ನಾಟಕ ವಿಧಾನ ಪರಿಷತ್ ಗೆ ಅನಿರೀಕ್ಷಿತ ಮುಖಗಳನ್ನು ಆಯ್ಕೆ ಮಾಡಿದ್ದು)ವು ರಾಹುಲ್ ಗಾಂಧಿಯವರನ್ನು ಇಂತಹುದೇ ನಡೆಗೆ ಪ್ರೇರೇಪಿಸಿತ್ತು. ಆದರೆ, ಹಳೆ ಹುಲಿಗಳು ಬಿಡಬೇಕಲ್ಲ. ಇದಕ್ಕಾಗಿ ಇಂತಹದ್ದೊಂದು ಪತ್ರ ಅಭಿಯಾನವನ್ನು ಅರಂಭಿಸಿದವು.

    ಸೋನಿಯಾ ನಿಷ್ಠರ ಪಡೆ

    ಸೋನಿಯಾ ಗಾಂಧಿ ಬಣದಲ್ಲಿ ಹಳೆ ಹುಲಿಗಳಿಗೇ ಪ್ರಾಧಾನ್ಯ. ಮನಮೋಹನ್ ಸಿಂಗ್, ಪಿ. ಚಿದಂಬರಂ, ಜೈರಾಮ್ ರಮೇಶ್, ಪಂಜಾಬ್ ಮುಖ್ಯಮಂತ್ರಿ ಕ್ಯಾ. ಅಮರೀಂದರ್ ಸಿಂಗ್, ಸುಶೀಲ್ ಕುಮಾರ್ ಶಿಂಧೆ, ಎ. ಕೆ. ಆಂಟನಿ, ಅಹ್ಮದ್ ಪಟೇಲ್, ಅಂಬಿಕಾ ಸೋನಿ, ಅಶೋಕ್ ಗೆಲ್ಹೋಟ್, ಅಭಿಷೇಕ್ ಮನು ಸಿಂಘ್ವಿ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

    ಇವರ ಪೈಕಿ ನಿಜವಾದ ಸ್ಕಾಲರ್ ಆಗಿರುವ ಮನಮೋಹನ್ ಸಿಂಗ್, ಸೋನಿಯಾ ನಿಷ್ಠರಾದರೂ ರಾಜಕಾರಣ ತಂತ್ರ ನಿಪುಣರಲ್ಲ. ಇವುಗಳ ಮಧ್ಯೆ, ಗುಲಾಂ ನಬಿ ಆಜಾದ್, ಕಬಿಲ್ ಸಿಬಲ್, ಆನಂದ್ ಶರ್ಮಾ, ಕರ್ನಾಟಕದವರೇ ಆದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೋಯ್ಲಿ ಸೇರಿದಂತೆ ಪತ್ರಕಾರರ 23 ನಾಯಕರಿಗೆ ಸ್ಥಾನವಿರಲಿಲ್ಲ. ಮಲ್ಲಿಕಾರ್ಜುನ ಖರ್ಗೆಯೊಬ್ಬರೇ ಈ ನಿಟ್ಟಿನಲ್ಲಿ ಅಲ್ಪಸ್ವಲ್ಪ ಸಾಧನೆ ಮಾಡಿದವರು ಎಂದರೆ ಅತಿಶಯೋಕ್ತಿಯಲ್ಲ.

    ರಾಹುಲ್ ಬಣ

    ರಾಹುಲ್ ಗಾಂಧಿಯವರ ನಿಷ್ಠರತ್ತ ಗಮನ ಹರಿಸಿದರೆ ಮುಖ್ಯವಾಗಿ ಕೇಳಿ ಬರುತ್ತಿರುವ ಹೆಸರು ಸುರ್ಜೇವಾಲಾ, ವೇಣುಗೋಪಾಲ್. ಇವರನ್ನು ಹೊರತು ಪಡಿಸಿದರೆ, ರಾಹುಲ್ ಗಾಂಧಿಯವರ ಟ್ವಿಟರ್ ಅಕೌಂಟ್ ನ ಗೇಟ್ ಕೀಪರ್ ಎಂದೇ ಹೆಸರಾಗಿರುವ ನಿಖಿಲ್ ಆಳ್ವ (ಮಾರ್ಗರೇಟ್ ಆಳ್ವ ಪುತ್ರ), ಮಾಜಿ ಹೂಡಿಕೆ ತಜ್ಞ ಅಲಂಕಾರ್ ಸವಾಯಿ, ವ್ಯೂಹಾತ್ಮಕ ಸಲಹೆಗಾರ ಸಚಿನ್ ರಾವ್, ಆಕ್ಸ್ ಫರ್ಡ್ ವಿವಿ ಖ್ಯಾತಿಯ ಕೌಶಲ್ ಕಿಶೋರ್ ವಿದಾರ್ಥೆ ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕಾಲದಲ್ಲಿ ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿದ್ದ ಸ್ಯಾಮ್ ಪಿತ್ರೋಡ (ಅಮೆರಿಕದಲ್ಲಿ ಭಾರತೀಯ ಸಂಜಾತರ ಜತೆಗಿನ ಸಂವಾದ ಕಾರ್ಯಕ್ರಮ ಏರ್ಪಡಿಸುವಲ್ಲಿ ಪ್ರಮುಖ ಪಾತ್ರವನ್ನು ಪಿತ್ರೋಡ ವಹಿಸಿದ್ದರು).

    ಆತಂಕ ಆರಂಭ

    ಯಾವಾಗ ರಾಹುಲ್ ಗಾಂಧಿಯವರು (ಅಧ್ಯಕ್ಷರಾಗಿದ್ದ ಸಂದರ್ಭ) ಕೌಶಲ್, ಸವಾಯಿ, ಪಿತ್ರೋಡಾ, ಆಳ್ವ ಮೊದಲಾದವರನ್ನು ಎಐಸಿಸಿಯಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನೀಡಲು ಆರಂಭಿಸಿದರೋ ಆಗ ಹಳೆ ಹುಲಿಗಳಿಗೆ ನಡುಕ, ಆತಂಕ ಆರಂಭವಾಯಿತು ಎಂದೇ ವಿಶ್ಲೇಷಿಸಲಾಗುತ್ತಿದೆ.

    ಹೀಗಾಗಿ ಕೋರ್ ಟೀಮ್ ರಾಹುಲ್ ಗಾಂಧಿ ಎಂಬ ಹೊಸ ಬಣ ಕಾಂಗ್ರೆಸ್ ನಲ್ಲಿ ಹುಟ್ಟಿಕೊಂಡಿತು. ಅದರಲ್ಲಿ ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೋಯ್ ಪುತ್ರ ಗೌರವ್ ಗೊಗೋಯ್, ಅಜಯ್ ಮಕನ್, ಸುಶ್ಮಿತಾ ದೇವ್ (ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ), ಶ್ರೀನಿವಾಸ ಬಿ.ವಿ, ತಮಿಳುನಾಡಿನಲ್ಲಿ ವೈಕೋ ಅವರನ್ನೇ ಸೋಲಿಸಿದ್ದ ಮಣಿಕಾ ಟಾಗೋರ್, ರಾಜಸ್ತಾನದ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್, ಕರ್ನಾಟಕದ ಮಾಜಿ ಸಂಸದ ರಾಜೀವ್ ಗೌಡ ಹೀಗೆ ಯುವ ಪಡೆಯನ್ನೇ ರಚಿಸಿದ ರಾಹುಲ್, ಹಳೆ ಹುಲಿಗಳು ಮತ್ತು ಅವರ ಹಳಸಲು ಚಿಂತನೆಗಳನ್ನು ಹಿಂದಕ್ಕೆ ಹಾಕಿ, ಕಾಂಗ್ರೆಸ್ ಗೆ ಮತ್ತೆ ಜೀವ ಕಳೆ ನೀಡಲು ಮುಂದಾಗಿದ್ದರು. ಇದುವೇ ಪತ್ರಕಾರ ರಾಜಕಾರಣಿಗಳ ಕೋಪಕ್ಕೆ ಕಾರಣವಾಯಿತು.

    ಹೀಗಾಗಿ ಸೋನಿಯಾ ಗಾಂಧಿಯವರ ಅನಾರೋಗ್ಯದ ನಡುವೆ ಅವರನ್ನು ಹೊರತು ಪಡಿಸಿ ರಾಹುಲ್ ಗಾಂಧಿ ಅಧ್ಯಕ್ಷ ಪಟ್ಟಕ್ಕೇರಿದರೆ ಖಚಿತವಾಗಿಯೂ ತಮಗೆ ಕಿಮ್ಮತ್ತೂ ಬೆಲೆ ಸಿಗುವುದಿಲ್ಲ ಎಂಬ ಆತಂಕ ಅವರಲ್ಲಿ ಉಂಟಾಗಿದ್ದೇ ಈ ಪತ್ರ ವ್ಯವಹಾರದ ರಾಜಕಾರಣಕ್ಕೆ ಕಾರಣ ಎಂದೇ ಹೇಳಬೇಕಾಗುತ್ತದೆ.

    ಶುಭ ದಿನ

    ಇಂದಿನ ನುಡಿ

    ಎತ್ತರಕ್ಕೇರಿದವನಿಗೆ ಸೌಜನ್ಯವೇ  ಶ್ರೀರಕ್ಷೆ. ಸೌಜನ್ಯ ಎನ್ನುವುದು ದೌರ್ಬಲ್ಯವಲ್ಲ, ಶಕ್ತಿ.

    ಸಂಗ್ರಹ :ರಾಜೀವಲೋಚನ

    ಇಂದಿನ ಪಂಚಾಂಗ

    ದಿನಾಂಕ 11 ಸೆಪ್ಚೆಂಬರ್ 2020,ಶುಕ್ರವಾರ

    ಸಂವತ್ಸರ : ಶ್ರೀ ಶಾರ್ವರಿ, ಆಯನ :ದಕ್ಷಿಣಾಯನ, ಋತು: ವರ್ಷ, ಮಾಸ : ಭಾದ್ರಪದ, ಪಕ್ಷ :ಕೃಷ್ಣ ತಿಥಿ: ನವಮಿ ನಕ್ಷತ್ರ: ಮೃಗಶಿರಾ

    ಸೂರ್ಯೋದಯ : ಬೆಳಿಗ್ಗೆ 6.09,

    ಸೂರ್ಯಾಸ್ತ: ಸಂಜೆ 6.23

    ಇಂದಿನ ವಿಶೇಷ

    ಅವಿಧವಾ ನವಮಿ

    Photo by Ravi Sharma on Unsplash

    ಏನಿದು ಭಾರತ-ಚೀನಾ ಗಡಿ ವಿವಾದ

    ವಿಶ್ವದ ಅತಿ ಉದ್ದದ ಗಡಿ ಭಾಗವನ್ನು ಹಂಚಿಕೊಂಡಿರುವ ಭಾರತ-ಚೀನಾದ ಈ ಭಾಗದಲ್ಲಿ ಕಳೆದ ಸುಮಾರು 45 ವರ್ಷಗಳಿಂದ ಗುಂಡು ಹಾರಿರಲೇ ಇಲ್ಲ. ಆದರೆ ಈಗ ಗುಂಡಿನ ಮೊರೆತ ಕೇಳಿಬಂದಿದೆ ಎಂದು ಹೇಳಲಾಗುತ್ತಿದೆ. ಆದರೆ ಉಭಯ ದೇಶಗಳು ಕೂಡ ಇದನ್ನು ಅಲ್ಲಗಳೆಯುತ್ತಿವೆ ಮತ್ತು ಒಬ್ಬರ ಮೇಲೆ ಮತ್ತೊಬ್ಬರು ಆರೋಪ-ಪ್ರತ್ಯಾರೋಪ ಮಾಡುತ್ತಿದ್ದಾರೆ.

    ಗಡಿ ಇತಿಹಾಸ

    ಭಾರತದಲ್ಲಿ ಬ್ರಿಟಿಷ್ ವಸಾಹತುಶಾಹಿ ಮಾಡಿದ ಅನಾಹುತಗಳು ಒಂದೆರಡಲ್ಲ. ಇವುಗಳ ಪೈಕಿ ಭಾರತ-ಚೀನಾ ಗಡಿ ವಿವಾದವೂ ಕೂಡ ಒಂದು. 1914ರಲ್ಲಿ ಬ್ರಿಟಿಷ್ ಅಧಿಕಾರಿ ಹೆನ್ರಿ ಮೆಕ್ ಮಹನ್ ಈ ಗಡಿ ರೇಖೆಯನ್ನು ಸಿದ್ಧ ಪಡಿಸಿದ್ದರು. ಆದರೆ ಆಗಲೂ ಚೀನಾ ಇದನ್ನು ಒಪ್ಪಿರಲಿಲ್ಲ. ಪ್ರಸಕ್ತ ಚೀನಾ ಸುಮಾರು 90,000 ಚದರ ಕಿ.ಮೀ. ಜಾಗವನ್ನು ತನ್ನದೆಂದೇ ಹೇಳಿಕೊಳ್ಳುತ್ತಿದೆ. ಇದು ಬಹುತೇಕ ನಮ್ಮ ಅರುಣಾಚಲ ಪ್ರದೇಶದಲ್ಲಿರುವ ಜಾಗವಾಗಿದೆ. ಇದನ್ನು ಹೊರತು ಪಡಿಸಿದರೆ ಸುಮಾರು 38 ಸಾವಿರ ಚದರ ಕಿಮೀ. ಜಾಗ ಚೀನಾದ ನಿಯಂತ್ರಣದಲ್ಲಿದೆ. ಈಗ ಗದ್ದಲ ನಡೆಯುತ್ತಿರುವ ಲಡಾಕ್ ಪ್ರದೇಶದ ಅಕ್ಸಾ ಚಿನ್ ಅಥವಾ ಅಕ್ಸೈ ಚಿನ್ ಪ್ರದೇಶದ ಭಾಗ ಇದಾಗಿದೆ. 

    ಅತಿ ಎತ್ತರದ ಗಡಿ

    ಭಾರತ ಚೀನಾ ನಡುವಿನ ಗಡಿ ಭಾಗವು ಜಗತ್ತಿನ ಅತಿ ಎತ್ತರದ ಗಡಿ ಭಾಗವೆಂದೇ ಪರಿಗಣಿತವಾಗಿದೆ. ಸುಮಾರು 21,000 ಅಡಿ ಎತ್ತರದಲ್ಲಿರುವ ಈ ಪ್ರದೇಶದ ಹಿಮಾಲಯದ ಕಡಿದಾಡ ಪರ್ವತ ಪ್ರದೇಶ ಮತ್ತು ಅತಿ ಶೀತದಿಂದ ಕೂಡಿರುವ (ಮೈನಸ್ ಡಿಗ್ರಿ ಸೆಲ್ಸಿಯಸ್) ಭಾಗವಾಗಿದೆ. ಈ ಹಿಂದೆ 1962ರಲ್ಲಿ ಭಾರತ-ಚೀನಾ ನಡುವೆ ಯುದ್ಧವಾಗಿತ್ತು. ಆದರೆ ಆ ಬಳಿಕ ಉಭಯ ದೇಶಗಳು ಶಾಂತಿ ಪ್ರಕ್ರಿಯೆಯಲ್ಲಿ ತೊಡಗಿ ಗಡಿ ಭಾಗದಲ್ಲಿ ಅಘೋಷಿತ ಕದನ ವಿರಾಮಕ್ಕೆ ಮುಂದಾಗಿದ್ದವು. 1980ರ ದಶಕದಲ್ಲಿ ನಡೆದ ಒಂದು ಚಿಕ್ಕ ಘಟನೆಯನ್ನು ಬಿಟ್ಟರೆ ಇದುವರೆಗೆ ಚೀನಾ-ಭಾರತ ಗಡಿ ಭಾಗದಲ್ಲಿ ಯೋಧರು ಕೈ-ಕೈ ಮಿಲಾಯಿಸಿದ ಉದಾಹರಣೆಯೇ ಇಲ್ಲ. 2017ರಲ್ಲಿ ಸಂಭವಿಸಿದ ದೋಕ್ಲಾಮ್ ಕೂಡ ಮಾತುಕತೆಯ ಮೂಲಕ ಬಗೆಹರಿಸಿದಿತ್ತು.

    ಹಲವು ವಿಭಾಗ

    ಭಾರತ-ಚೀನಾ ಗಡಿ ವಿಷಯಕ್ಕೆ ಬಂದರೆ ಇಲ್ಲಿ ಹಲವು ಪ್ರದೇಶಗಳು ಬರುತ್ತವೆ. ಮುಖ್ಯವಾಗಿ ಎದುರಾಗುವುದೇ ಅರುಣಾಚಲ ಪ್ರದೇಶ ಸೇರಿದ ಪೂರ್ವ ವಲಯ. ಚೀನಾದ ಜತೆಗೆ ಇದು 1,129 ಕಿ.ಮೀ. ಗಡಿ ಪ್ರದೇಶವನ್ನು ಹೊಂದಿದೆ. 1962ರ ಯುದ್ಧಕ್ಕೆ ಮೂಲ ಕಾರಣವಾಗಿದ್ದೇ ಚೀನಾ ಇದನ್ನು ತನ್ನ ಭೂಭಾಗವೆಂದು ಪ್ರತಿಪಾದಿಸಿದ್ದು. ಆಗ ಕೆಲವು ಪ್ರದೇಶ ಭಾರತದ ಕೈ ತಪ್ಪಿ ಹೋಗಿತ್ತು. ಹೀಗಾಗಿಯೇ ವಾಸ್ತವ ನಿಯಂತ್ರಣ ರೇಖೆ ಎಂಬ ಹೊಸ ಶಬ್ದದ ಉತ್ಪತ್ತಿಯಾಯಿತು.

    ಕೇಂದ್ರ ಭಾಗಕ್ಕೆ ಬಂದರೆ 4,600 ಕಿ.ಮೀ. ಎತ್ತರದಲ್ಲಿರುವ ದೋಕ್ಲಾಮ್. ಸಿಕ್ಕಿಂ ರಾಜ್ಯದ ಗಡಿ ಭಾಗದಲ್ಲಿರುವ ನಾತು ಲಾ ಪಾಸ್ ಮೂಲಕ ಈ ಭಾಗದ ಮೇಲೆ ಹಿಡಿತ ಸಾಧಿಸಲು ಚೀನಾ ಬಯಸಿದೆ.  2017ರಲ್ಲಿ ಭಾರತ-ಚೀನಾ ಯೋಧರ ನಡುವೆ ಚಿಕ್ಕ ಪ್ರಮಾಣದ ಸಂಘರ್ಷ ಬಿಟ್ಟರೆ ಈ ಭಾಗ ಯಾವತ್ತೂ ಶಾಂತಿಯುತವಾಗಿಯೇ ಇದೆ. 

    ಈಗ ಸಂಘರ್ಷದ ಕೇಂದ್ರ ಬಿಂದುವಾಗಿರುವ ಲಡಾಕ್, ಚೀನಾದ ಜತೆಗಿನ ಗಡಿಯ ಪಶ್ಚಿಮ ವಲಯಕ್ಕೆ ಬರುತ್ತದೆ. 5,300 ಮೀಟರ್ ಎತ್ತರದ ಈ ಭೂ ಪ್ರದೇಶವನ್ನು ಇತ್ತೀಚೆಗಷ್ಟೇ ಭಾರತ ಸರಕಾರ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದೆ. ಹಿಮಾಚಲ ಪ್ರದೇಶ ರಾಜ್ಯದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಇದನ್ನು ಕೇಂದ್ರಾಡಳಿತ ಪ್ರದೇಶವೆಂದು ನರೇಂದ್ರ ಮೋದಿ ಸರಕಾರ ಘೋಷಿಸಿದ ಕೂಡಲೇ, ಪಾಕಿಸ್ತಾನ ಸ್ನೇಹಿಯಾದ ಚೀನಾ ಕೊತ ಕೊತನೆ ಕುದಿಯಲಾರಂಭಿಸಿತು. ಅದಾದ ಬಳಿಕವೇ ಆರಂಭವಾಗಿದ್ದು, ಕೆಂಪು ರಾಷ್ಟ್ರದ ಈ ಹೊಸ ಪ್ರಹಸನ. ಪಂಗಾಗ್ ತ್ಸು ಸರೋವರ, ಗುಲ್ವಾನ್ ಕಣಿವೆ ದೆಪ್ಸಂಗ್, ಡೆಮ್ಚಕ್ ಪ್ರದೇಶದಲ್ಲಿ ಚೀನಿ ಯೋಧರು ಬಂಕರ್ ರಚಿಸಿ, ಶಸ್ತ್ರ ಸಜ್ಜಿತ ವಾಹನಗಳು ಮತ್ತು ಮದ್ದು ಗುಂಡುಗಳನ್ನು ಸಾಗಿಸಲು ಆರಂಭಿಸಿದರು. ಇದಕ್ಕೆ ಪ್ರತಿಯಾಗಿ ಭಾರತ ಈ ಭಾಗದಲ್ಲಿ ಹೆದ್ದಾರಿ, ವಿಮಾನ ನಿಲ್ದಾಣ (ಯುದ್ಧ ವಿಮಾನ) ಸೇರಿದಂತೆ ಹಲವು ಮೂಲಸೌಕರ್ಯ ಅಭಿವೃದ್ಧಿಗೆ ವೇಗ ನೀಡಿತು. ಆಗಲೇ ಆರಂಭವಾಗಿದ್ದು ಮೊದಲ ಹಂತದ ಸಂಘರ್ಷ. 

    ಕಾಶ್ಮೀರದಲ್ಲೂ ಹಸ್ತಕ್ಷೇಪ

    ಜಮ್ಮು-ಕಾಶ್ಮೀರ ವಿವಾದ ಎಲ್ಲರಿಗೂ ತಿಳಿದಿದ್ದೇ. ಭಾರತ-ಪಾಕಿಸ್ತಾನ ನಡುವೆ ಎರಡು ಪೂರ್ಣ ಪ್ರಮಾಣದ ಯುದ್ಧಗಳಿಗೆ ಕಾರಣವಾದ ಈ ವಿವಾದದ ಜತೆಗೆ ಕೂಡ ಚೀನಾದ ಕುಟಿಲ ನಂಟಿದೆ. ಕಾಶ್ಮೀರದ ತೀರಾ ಚಿಕ್ಕ ಭಾಗವಾದ ಅಕ್ಸೈ ಚಿನ್ ಎಂದು ಕರೆಯಲ್ಪಡುವ ಪ್ರದೇಶದ ಮೇಲೆ ಚೀನಾ ನಿಯಂತ್ರಣ ಹೊಂದಿದೆ ಎಂಬುದು ಇಲ್ಲಿ ಸ್ಮರಣಾರ್ಹ. 

    error: Content is protected !!