26.6 C
Karnataka
Friday, April 4, 2025
    Home Blog Page 177

    ಕೊರೊನಾ ಕಾಲದ ವಂಚನೆ

    ಜನಸಾಮಾನ್ಯರು ಕಂಟಕಕ್ಕೆ ಸಿಕ್ಕು ಹೊರಬರಲು ದಾರಿ ಹುಡುಕುವಾಗ ಅವರ ಅಸಹಾಯಕತೆಗಳನ್ನು ಅಗತ್ಯಗಳನ್ನು,ಅಜ್ಞಾನದ ಪರಿಸ್ಥಿತಿಯನ್ನೇ ತಮ್ಮ ಲಾಭಕ್ಕೆ ಉಪಯೋಗಿಸಿಕೊಳ್ಳುವ ಘಾತಕರು ಎಲ್ಲೆಡೆ ಇದ್ದಾರೆ. ದುರದೃಷ್ಟವಶಾತ್ ಅದು ಮನುಷ್ಯನ ಒಂದು ಮೃಗೀಯ ಗುಣವೂ ಹೌದು.

    ಕರೋನ ವೈರಸ್ಸಿನ ಕಾರಣ ಲಾಕ್ ಡೌನ್ ಶುರುವಾಗಿ ಸಂಚಾರವನ್ನು ಸ್ಥಗಿತಗೊಳಿಸಿದ ನಂತರ ಆಗುತ್ತಿದ್ದ ರಸ್ತೆ ಅಪಘಾತಗಳು, ಪರಿಸರ ಮಾಲಿನ್ಯ, ಕಳ್ಳತನಗಳು, ಅನಾವಶ್ಯಕ ದುಂದು ಇತ್ಯಾದಿ ಕಡಿಮೆಯಾಗಿ ಜನರು ಒಂದು ರೀತಿಯ ನೆಮ್ಮದಿಯ ನಿಟ್ಟುಸಿರಿಟ್ಟರೂ, ಮತ್ತೊಂದೆಡೆ ಕೌಟುಂಬಿಕ ಕಲಹಗಳು, ವ್ಯಾಜ್ಯಗಳು ಜೊತೆಗೆ ಕರೋನಾ ವೈರಸ್ಸಿನ ಸ್ಥಿತಿಯನ್ನೇ ಬಳಸಿಕೊಂಡು ನಡೆಯುತ್ತಿರುವ ವಂಚನೆಯ ಪ್ರಕರಣಗಳು ಹೆಚ್ಚಾಗಿಬಿಟ್ಟಿವೆ. ಕರೋನಾ ತಂದಿರುವ ಸಾವು, ನೋವು, ಸೋಂಕು, ಆತಂಕಗಳ ಜೊತೆಗೆ ಅಂತರ್ಜಾಲ, ಫೋನುಗಳ ಮೂಲಕ ನಡೆಯುತ್ತಿರುವವಂಚನೆಯ ಪ್ರಕರಣಗಳು ಹೆಚ್ಚಾಗುತ್ತಿದ್ದುಸಾರ್ವಜನಿಕರನ್ನು ಕಂಗೆಡಿಸಿವೆ.

    ಲಾಕ್  ಡೌನ್ ಶುರುವಾದ ಕೂಡಲೇ  ಬ್ಯಾಂಕುಗಳು ಬಾಗಿಲು ಹಾಕಿದವು. ನೋಟುಗಳ ಮೂಲಕ ಸೋಂಕು ಹರಡುವ ಭಯದಿಂದ ಕಾರ್ಡ್ ಗಳ ಬಳಕೆ ಹೆಚ್ಚಿತು.ದೇಶಗಳು ಹಲವು ವರ್ಗದ ಜನರಿಗೆ ಸರಕಾರಗಳು ಪರಿಹಾರವನ್ನು ಘೋಷಿಸಿದವು. ತೆರಿಗೆಯಲ್ಲಿ ಕಡಿತವನ್ನು ಘೋಷಿಸಿದವು ಅಥವಾ ತೆರಿಗೆ ಕಟ್ಟಲು ಹೆಚ್ಚು ಸಮಯವನ್ನು ನೀಡಿದವು.

     ಸಂದರ್ಭ ತಂದ ಇಂತಹ ಪ್ರತಿಯೊಂದು ಬದಲಾವಣೆಗಳನ್ನು ವಂಚಕರು ತಮ್ಮ ಲಾಭಕ್ಕೆ ಬಳಸಿಕೊಂಡಿದ್ದಾರೆ. ಬ್ಯಾಂಕುಗಳು, ಸರಕಾರ, ಸಂಸ್ಥೆಗಳು ಜನರಿಗೆ ಉದಾರವಾಗಿ ಏನೇನನ್ನೋ ನೀಡುತ್ತಿದ್ದಾರೆ ಎಂದು ನಂಬಿಸಿ, ಅದನ್ನು ನಂಬುವ ಹುಂಬರ ಲೋಭವನ್ನು ತಮ್ಮ ವಯಕ್ತಿಕ ಗಳಿಕೆಯನ್ನಾಗಿ ಪರಿವರ್ತಿಸಿಕೊಂಡು ಟೋಪಿಹಾಕುತ್ತಿದ್ದಾರೆ.ಎಲ್ಲ ಕಾಲದಲ್ಲ ಇಂತಹ ವಂಚನೆಗಳು ನಡೆಯುವುದು ನಿಜವಾದರೂ ಕರೋನ ಕಾಲದಲ್ಲಿ ಜನರು ಮನೆಯಲ್ಲಿದ್ದು ಡಿಜಿಟಲ್ ಉಪಕರಣಗಳ ಬಳಕೆಯನ್ನು ಹೆಚ್ಚಿಸಿರುವ ಕಾರಣ ಈಡಿಜಿಟಲ್ ವಂಚನೆಗಳು ಇದೀಗ ಮತ್ತೂ ಹೆಚ್ಚಿವೆ.

    ಲಾಕ್ ಡೌನ್ ಕಾಲದಲ್ಲಿಜೇಬುಗಳ್ಳತನ ಮಾಡಲು ರಸ್ತೆಯಲ್ಲಿ ಜನರಿಲ್ಲ. ಸದಾ ಜನರು ಮನೆಯಲ್ಲೇ ಇರುವ ಕಾರಣ ಮನೆಗಳ್ಳತನವಿಲ್ಲ. ಆದರೆ ಮನೆಯಲ್ಲಿರವ ಜನ ಹೊರಗಿನ ಜಗತ್ತಿನೊಂದಿಗೆ ಸಂಪರ್ಕ ಇಟ್ಟಿಕೊಳ್ಳಲು ಫೋನ್, ಅಂತರ್ಜಾಲ, ಸಾಮಾಜಿಕ ಜಾಲತಾಣಗಳು, ಇತ್ಯಾದಿ ಇ -ಜಗತ್ತಿನೊಡನಿನ ಸಂಪರ್ಕವನ್ನು  ದಾಖಲೆಯ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿದ್ದಾರೆ. ಈ ಅವಕಾಶವನ್ನು ಬಳಸಿಕೊಂಡು ಜನರನ್ನು ದುರ್ವಂಚನೆಯ ಆಸೆ, ಆಮಿಷಗಳ ಗಾಳ ಎಸೆದು ಬರಿಗೈ ಮಾಡುತ್ತಿರುವ ಪ್ರಕರಣಗಳು ನಾಲ್ಕು ಪಟ್ಟು ಹೆಚ್ಚಾಗಿವೆ. ಬ್ಯಾಂಕುಗಳ ಖಾತೆಯ ವಿವರ, ಎ.ಟಿ.ಎಂ. ಕೋಡ್ ಗಳ ವಿವರ ಮತ್ತು ವೈಯಕ್ತಿಕ ವಿವರಗಳನ್ನು ಕದಿಯುವವರು ಹೆಚ್ಚಾಗಿದ್ಡಾರೆ. ಕೋವಿಡ್ ತಂದಿರುವ ಆರ್ಥಿಕ ಬಿಕ್ಕಟ್ಟುಗಳ ಕಾರಣ ವಯಕ್ತಿಕ ಸಾಲಗಳನ್ನು ನೀಡುವ ಮೋಸಗಾರರ, ಲೋನ್ ಶಾರ್ಕ್ ಗಳ ಸಂಖ್ಯೆ ಹೆಚ್ಚುತ್ತಿದೆ.

    ಗೋಪ್ಯವಾಗಿ ಎಲ್ಲೋ ಇದ್ದುಕೊಂಡು, ಫೋನ್ ಗಳ ಮೂಲಕ, ಅಂತರ್ಜಾಲದ ಮೂಲಕ, ಸುಳ್ಳು ಸುದ್ದಿಗಳನ್ನು ಹರಡುವ ಮೂಲಕ ವಂಚಿಸುತ್ತಿರುವ ಇವರು ಕೂಡ ಕೋವಿಡ್-19 ರಂತೆಯೇ ಕಣ್ಣಿಗೆ ಕಾಣದ  ಶತ್ರುಗಳಾಗಿದ್ದಾರೆ.ಯಾವ ಆತ್ಮಸಾಕ್ಷಿಯೂ ಇಲ್ಲದ ಇವರಿಗೆ ತಾವು ವಂಚಿಸುವ ವ್ಯಕ್ತಿಗಳವಯಕ್ತಿಕ ಪರಿಸ್ಥಿತಿಗಳ ಬಗ್ಗೆ ಯಾವ ಕಾಳಜಿಯೂ ಇರುವುದಿಲ್ಲ. ನಿಜದಲ್ಲಿ ದುರ್ಬಲ ವ್ಯಕ್ತಿಗಳನ್ನೇ ಅವರು ಹುಡುಕುತ್ತಿರುತ್ತಾರೆ.  ಕೋವಿಡ್ ದುರಂತದ ಸಮಯದಲ್ಲಿ ಹೆಚ್ಚಾಗಿರುವ ಇಂತಹ ಅನ್ಯಾಯಗಳು ಪೋಲೀಸರಿಗೆ  ತಲೆನೋವಾಗಿವೆ.ಇದೀಗಾಗಲೇ ಬೆಳಕಿಗೆ ಬಂದಿರುವ ಪ್ರಕರಣಗಳು ಒಂದಷ್ಟಾದರೆ ಕ್ರಮೇಣ ತಿಳಿದು ಬಹದಾದ ಪ್ರಕರಣಗಳು ಅದರ ಹತ್ತರಷ್ಟಿರಬಹುದೆಂಬ ಅಂದಾಜಿದೆ. ಪ್ರಪಂಚದಾದ್ಯಂತ ಇವುಗಳ ಸ್ವರೂಪ ಹಲವು ಬಗೆಯದಾಗಿವೆ

    ಟಿವಿ ನೋಡುವವರ ಸಂಖ್ಯೆ ಹೆಚ್ಚುತ್ತಿದ್ದಂತೆ,  ಕರೋನ ವೈರಸ್ಸನ್ನು ತಡೆಯುತ್ತೇವೆಂಬ ಹಲವು ಸಾಮಗ್ರಿಗಳು ಮಾರುಕಟ್ಟೆಗೆ ಧಾಳಿಯಿಟ್ಟವು. ಅದಕ್ಕೆ ಯಾವುದೇ ಪುರಾವೆಯಿಲ್ಲದಿದ್ದರೂ, ಅವು ನಕಲಿಗಳೇ ಆದರೂ,ಮಾರುವವರು ಲಾಭಮಾಡಿದರು. ಅತ್ಯಂತ ಅಗತ್ಯವೆನಿಸಿದ ಮಾಸ್ಕ್  ಗಳಂತ ವಸ್ತುಗಳು ಸರಬರಾಜಿನಲ್ಲಿ ಕೊರತೆ ಕಾಣುತ್ತಿದ್ದಂತೆ ಅವನ್ನೇ ನಾಲ್ಕು ಪಟ್ಟು ದುಡ್ಡಿಗೆ ಮಾರಿದ ಅಂತರ್ಜಾಲ ಕಂಪನಿಗಳು ನ್ಯಾಯದರಗಳ  ಎಲ್ಲ ನಿಯಮಗಳನ್ನು  ಗಾಳಿಗೆ ತೂರಿ ಜನರನ್ನು ಶೋಶಣೆ ಮಾಡಿದವು.ಕೆಲವು ಅಂತರ್ಜಾಲ ಕಂಪನಿಗಳು ಹಣ ಪಡೆದ ನಂತರ ವಸ್ತುಗಳನ್ನ ಕಳಿಸಲೇ ಇಲ್ಲ. ಇತರರು ಕಳಪೆ ಮೌಲ್ಯದ ವಸ್ತುಗಳನ್ನು ಮಾರುಕಟ್ಟೆಗೆ ಬಿಟ್ಟು ಜನರನ್ನು ವಂಚಿಸಿದವು.

    ಉದಾಹರಣೆಗೆ ಲಂಡನ್ನಿನ ಒಂದು ಕಾರು ಗ್ಯಾರೇಜಿನಲ್ಲಿ ನಕಲಿ ಕರೋನ ಟೆಸ್ಟಿಂಗ್ ಕಿಟ್ ಗಳನ್ನು ಮಾರುತ್ತಿದ್ದುದನ್ನು ಪತ್ತೆ ಹಚ್ಚಿ ಅದನ್ನು ಪೋಲೀಸರು ವಶ ಪಡಿಸಿಕೊಂಡರು. ಇದೇ ಲಂಡನ್ನಿನ ಮತ್ತೊಂದು ಭಾಗದಲ್ಲಿ  5000 ನಕಲಿ  ಮೌತ್ ಮಾಸ್ಕ್ ಗಳನ್ನು ಮತ್ತು ಮತ್ತು  2600 ನಕಲಿ ಸ್ಯಾನಿಟೈಸರ್ ಗಳನ್ನು ವಶಪಡಿಸಿಕೊಂಡರು.. ಇಂತಹ ಘಟನೆಗಳು ಭಾರತವೂ ಸೇರಿದಂತೆ ಎಲ್ಲೆಡೆ ಬೆಳಕಿಗೆ ಬಂದಿವೆ.

    ಕರೋನ ಟೆಸ್ಟಿಂಗ್ ಕಿಟ್ ಗಳಲ್ಲಿ ಕೂಡ ಹಲವು ಕಂಪನಿಗಳು ಮೋಸದ ದಂಧೆ ನಡೆಸಿದ್ದಾರೆ. ಇವುಗಳು ನೀಡುತ್ತಿರುವ ಫಲಿತಾಂಶದ ಬಗ್ಗೆ ದೇಶ -ವಿದೇಶಗಳು ಅತ್ಯಂತ ಎಚ್ಚರಿಕೆಯನ್ನು ಕಾಯ್ದುಕೊಳ್ಳಲು ಹೆಣಗುತ್ತಿದ್ದಾರೆ. ಲೋಪಗಳಾದಲ್ಲಿ ಹಣ, ಆರೋಗ್ಯದ ಜೊತೆ ಲಾಕ್ಡೌನಿನ ಎಲ್ಲ ಲಾಭಗಳೂ ಹಗುರವಾಗಿ ಆವಿಯಾಗಿಬಿಡಬಹುದಾದ ಕಾರಣ ನಿಗಾ ವಹಿಸಬೇಕಾದ ನೈತಿಕ ಜವಾಬ್ದಾರಿ ಎಲ್ಲ ದೇಶಗಳ ಮೇಲಿದೆ. ಆರೋಗ್ಯ ಇಲಾಖೆ/ ವರ್ಗದಲ್ಲಿ ಕೆಲಸ ಮಾಡುವವರಿಗೆ ನೀಡಲಾಗುವ ಸ್ವಯಂ ರಕ್ಷಣ ಧಿರುಸುಗಳ ಆಮದು-ರಫ್ತಿನ ವಿಚಾರದಲ್ಲಿಯೂ ಅತಿ ದೊಡ್ಡ ವಿವಾದಗಳು ನಡೆದವು.ಕರೋನ ವಿಶ್ವ ವ್ಯಾಪಿ ಹೊಸ ವ್ಯಾಧಿಯಾದ ಕಾರಣಚೈನಾ ಟರ್ಕಿಗಳೂ ಸೇರಿದಂತೆ ಬಹುತೇಕ ರಾಷ್ಟ್ರಗಳು ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಸರಬರಾಜು ವಂಚನೆಗಳನ್ನು,ಗುಮಾನಿಗಳನ್ನು ಎದುರಿಸಬೇಕಾಯ್ತು.

    ಇನ್ನು  ಖಾಸಗೀ ವಲಯದಲ್ಲಿ ಕೆಲಸ ಮಾಡುತ್ತಿರುವ ವೈದ್ಯರು, ದಂತ ವೈದ್ಯರು, ದಾದಿಯರು ಯಾವ ಕಂಪನಿಯ ಸ್ವಯಂ ರಕ್ಷಣ ಧಿರುಸುಗಳನ್ನು ನಂಬಿ ಖರೀದಿಸಬಹುದು?ಯಾವುದು ನಿಜ?ಯಾವುದು ಮೋಸ? ಎಂದು ತಿಳಿಯದೆ ಇಂದಿಗೂ ದ್ವಂದ್ವದಲ್ಲಿದ್ದಾರೆ. ಭಾರತವೂ ಸೇರಿದಂತೆ ವೈದ್ಯಕೀಯ ರಂಗ ಡೋಲಾಯಮಾನದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.

    ಈ ನಡುವೆ ಮನೆಗಳಲ್ಲಿ ಟಿವಿಯ ವೀಕ್ಷಣೆ ಹೆಚ್ಚಾಯಿತು.ಹಲವು ಖಾಸಗೀ ಚಾನಲ್ ಗಳಿಗೆ ಚಂದಾದಾರರ ಸಂಖ್ಯೆ ಅಧಿಕವಾಯಿತು.ಕೆಲವು ಖಾಸಗೀ  ಕಾಮಪ್ರಚೋದಕ  ಚಾನೆಲ್ ಗಳು ತಮ್ಮ ವಹಿವಾಟು ಹೆಚ್ಚಿಸಿ, ಇನ್ನೂ ಹೆಚ್ಚಿನ ಯುವತಿಯರನ್ನು ಈ ದಂಧೆಗೆ ನುಗ್ಗಿಸಿದ್ದಾರೆ.ಮೆಕ್ಸಿಕೋ ದಂತಹ ದೇಶಗಳಲ್ಲಿ ಮಾದಕ ವಸ್ತುಗಳ ಸರಬರಾಜಿನಲ್ಲಿ ಏರು ಪೇರು ನಡೆದ ಕಾರಣ ಅವುಗಳ ಬೆಲೆ ಗಗನ ಮುಟ್ಟಿ, ಬೇಡಿಕೆ ಹೆಚ್ಚಿದ ಕಾರಣ ನಕಲಿ ದ್ರವ್ಯಗಳು ಮಾರುಕಟ್ಟೆಯನ್ನುಪ್ರವೇಶಿಸಿ ಇನ್ನೂ ಹೆಚ್ಚಿನ ಬದುಕುಗಳನ್ನು ಬಲಿತೆಗೆದುಕೊಂಡಿವೆ.

     ಕೆಲವು ಅಂತರ್ಜಾಲ ತಾಣಗಳಮೂಲಕ ರಾಜಕೀಯ ಪಕ್ಷಗಳು ಹಲವು ಅತ್ಯಂತ ಪ್ರಚೋದಕವಾದ ಮತ, ಧರ್ಮ, ಸ್ವದೇಶೀ ಪ್ರೇಮ ,ಅಸಹಿಶ್ಣುತೆ ಇತ್ಯಾದಿ ರಾಜಕೀಯಗಳ ವಿಚಾರಗಳನ್ನು ಕರೋನದ ಹೆಸರಲ್ಲಿ ಹರಿಯಬಿಟ್ಟು ಉದ್ರೇಕಿತ ಯುವ ಜನತೆಯಲ್ಲಿ, ಮುಗ್ದರಲ್ಲಿ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸಿ ಮತಗಟ್ಟೆಗಳನ್ನು ಸೃಷ್ಟಿಸಿಕೊಳ್ಳಲು ಪ್ರಯತ್ನಿಸಿದ್ದಾರೆ.ಇವರೆಲ್ಲರೂ ಅಮಾನವೀಯ ವಂಚಕ ಅವಕಾಶವಾದಿಗಳೇ. ಇದು ಕೂಡ ಅಮೇರಿಕಾದಿಂದ ಹಿಡಿದು ಭಾರತದವರೆಗೆ ಹಬ್ಬಿದ ವಿಶ್ವವ್ಯಾಪಿ ವಂಚನೆಯ ವಿಚಾರವಾಗಿದೆ.ದೇಶವೊಂದರ ಮಟ್ಟದಲ್ಲಿ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ನಡೆದ ರಾಜಕೀಯ ವಂಚನೆಗಳಲ್ಲಿ ಕರೋನವನ್ನು ಅಧಿಕೃತವಾಗಿ ಬಳಸಲಾಗಿರುವುದು ಈ ಸಮಯದಲ್ಲಿ ಜೀವಗಳನ್ನು ಉಳಿಸಲು ಪ್ರಾಣದ ಹಂಗು ತೊರೆದು ಹೋರಾಡಿದ ಎಲ್ಲರಿಗೂ ಭ್ರಮನಿರಸನವನ್ನು ಉಂಟು ಮಾಡಿದೆ.

    ಮುಖ್ಯವಾಗಿ ವಂಚನೆಗಳು ನಡೆದದ್ದು ಹಣಕ್ಕಾಗಿ. ಲಾಕ್ ಡೌನ್ ಶುರುವಾದ ಕೂಡಲೇ  “ದೊಡ್ಡ ದೊಡ್ಡ ಸೂಪರ್ ಮಾರ್ಕೆಟ್ಟುಗಳು ಎಲ್ಲರಿಗೂ ಉಚಿತವಾಗಿ ವೋಚರ್ ಗಳನ್ನು ನೀಡುತ್ತಿದ್ದಾರೆ. ನಿಮ್ಮ  ಮಾಹಿತಿಗಳ ನೊಂದಾವಣೆ  ಮಾಡಿ “ ಎನ್ನುವ ವಾಟ್ಸ್ಯಾಪ್ ಮೆಸೇಜುಗಳು ಹರಿದಾಡಿದವು.ಜನರ  ವೈಯಕ್ತಿಕ ವಿವರಗಳನ್ನು ಪಡೆದು ಅವುಗಳನ್ನು ಹಲವರಿಗೆ ಮಾರಿಕೊಳ್ಳುವ ಹುನ್ನಾರ ನಡೆಸಿದವು.

    ತೆರಿಗೆ ಅಧಿಕಾರಿಗಳೇ ಕರೆ ಮಾಡುತ್ತಿದ್ದಾರೇನೋ ಎನ್ನುವ ರೀತಿಯಲ್ಲಿ ಜನರಿಗೆ ದೂರವಾಣಿ ಕರೆಗಳು ಬಂದವು. “ ನೀವು  ಇಂತಿಷ್ಟು ತೆರಿಗೆ ಪಾವತಿ ಮಾಡಿಲ್ಲ, ಈ ಕೂಡಲೇ ಇಂತಹ ಬ್ಯಾಂಕಿನ ಖಾತೆಗೆ ಹಣ ಕಟ್ಟದಿದ್ದರೆ ಇಷ್ಟು ದಂಡ ವಸೂಲಿ ಮಾಡುತ್ತೇವೆ “ ಎಂಬ ಬೆದರಿಕೆಗಳು ಹರಿದಾಡಿದವು.

    ನಿಮ್ಮ ಟಿ.ವಿ. ಲೈಸನ್ಸ್ ಅಥವಾ  ಅಮಜಾನ್ ಪ್ರೈಮ್ ಲೈಸನ್ಸ್ ಮುಗಿದಿದೆ. ತಕ್ಷಣ ಹಣ ಕಟ್ಟಿ ಅದನ್ನು ಮುಂದುವರೆಸಿ ಎನ್ನುವ ಪೊಳ್ಳು ಸಂದೇಶಗಳು, ಮಿಂಚಂಚೆಗಳು ಹರಿದಾಡಿ ಕೊಟ್ಟ ಖಾತೆಗೆ ಹಣ ಕಟ್ಟದಿದ್ದರೆ ನಮಗೆ ಹೊರಗಿನ ಸಂಪರ್ಕ ಕಡಿಯುತ್ತದೆ ಎಂಬ ಆತಂಕವನ್ನು ಜನರಲ್ಲಿ ಸೃಷ್ಟಿಸುವ ಮಾಹಿತಿಗಳನ್ನು ಕಳಿಸುವ ಮೂಲಕ ವಂಚಕರು ಯತ್ನಿಸಿದ್ದಾರೆ.ಆ ಮೂಲಕ ಹಣ ಮಾಡುವ ಯತ್ನದಲ್ಲಿ ತೊಡಗಿಕೊಂಡಿದ್ದಾರೆ.

    ಸರ್ಕಾರ ನಿಮಗೆ ಇಂತಿಷ್ಟು ಪರಿಹಾರಧನವನ್ನು ನೀಡಿದೆ. ಅದನ್ನು ನಿಮ್ಮ ಖಾತೆಗೆ ವರ್ಗಾಯಿಸಲು ನಿಮ್ಮ ಬ್ಯಾಂಕಿನ ಎಲ್ಲ ವಿವರಗಳು ಬೇಕು ಎಂದು ಕೇಳಿ ಆ ಮೂಲಕ ನಂಬಿಕೆಯಿಂದ ಮಾಹಿತಿಗಳನ್ನು ನೀಡಿದ ಜನರ ಬ್ಯಾಂಕಿನಲ್ಲಿದ್ದ ಹಣವನ್ನು ದೋಚುತ್ತಿದ್ದಾರೆ.

    ಕೋವಿಡ್ ನ ಕಾಲದಲ್ಲಿ ಸರ್ಕಾರ ಮತ್ತು ದಾನಿಗಳು ಎಲ್ಲರಿಗೂ ಉಚಿತ ಹಣ ನೀಡಿದ್ದಾರೆ.ಈ ಲಾಭವನ್ನು ನಿಮ್ಮದಾಗಿಸಿಕೊಳ್ಳಲು ಈ ಕೊಂಡಿ/ಲಿಂಕನ್ನು ಒತ್ತಿ ಎಂದು ಪುಸಲಾಯಿಸಿ ಕಂಪ್ಯೂಟರ್/ ಫೋನ್  ಗಳ ಮೂಲಕ ಬ್ಯಾಂಕುಗಳ ಖಾತೆಗಳನ್ನು ಹ್ಯಾಕ್ ಮಾಡಲು ಅವಿರತ ಪ್ರಯತ್ನಗಳು ನಡೆದಿವೆ. ಡೋಮಿನೋ ಪಿಝ್ಝ ಗಳನ್ನು ಎಲ್ಲರಿಗೂ ಉಚಿತವಾಗಿ ನೀಡಲಾಗುತ್ತಿದೆ,ಇದಕ್ಕಾಗಿ ರಿಜಿಸ್ಟರ್ ಮಾಡಿ ಎನ್ನುವ ನಕಲಿ ಸಂದೇಶಗಳು ಬಂದವು.

    ಕೋವಿಡ್ ಸಂತ್ರಸ್ತರಿಗೆ ಸಹಾಯಮಾಡಲು ದಾನ/ದೇಣಿಗೆ ನೀಡಿ ಎಂದು ಕೂಡ ಇಂತವರು ಜನರನ್ನು ವಂಚಿಸಬಹುದು. ಆದ್ದರಿಂದ ನಂಬಲರ್ಹವಾದ ಮೂಲಗಳಿಗೆ ಮಾತ್ರ ದಾನ ನೀಡುವುದು ಉತ್ತಮ.

    ಈ ವಂಚಕರು ಎಲ್ಲ ಕಾಲದಲ್ಲೂ ತಮ್ಮ ಚಟುವಟಿಕಗಳನ್ನು ನಡೆಸುತ್ತಾರೆ. ಆದರೆ ಕೋವಿಡ್ ಕಾಲ ಅವರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಿದೆ. ವಿಶ್ವವ್ಯಾಪಿ ಹೊಸವ್ಯಾಧಿ ( ಪ್ಯಾಂಡೆಮಿಕ್ )ತಂದಿರುವ ಆತಂಕಗಳನ್ನು ಶೋಷಿಸಲು ಅವರು ಇನ್ನಿಲ್ಲದಷ್ಟು ಪ್ರಯತ್ನ ನಡೆಸಿದ್ದಾರೆ.ಫೋನ್ ಮತ್ತು ಅಂತರ್ಜಾಲಗಳನ್ನು ಹೆಚ್ಚು ಹೆಚ್ಚು ಬಳಸುವ ಪಾಶ್ಚಾತ್ಯ ದೇಶಗಳಲ್ಲಿ ಇದರ ವ್ಯಾಪ್ತಿ ಮತ್ತೂ ಹೆಚ್ಚು.

    ಇಂಗ್ಲೆಂಡಿನಲ್ಲಿ ಲಾಕ್ ಡೌನ್ ಶುರುವಾದದ್ದು ಮಾರ್ಚ್ 23 ರಿಂದ. ಅದಕ್ಕಿಂತ  ಮುಂಚೆಯೇ  ಅಂದರೆ ಮೊದಲ ಕೋವಿಡ್ ವಂಚನೆಯ ಪ್ರಕರಣ ಫೆಬ್ರವರಿ 9 ರಂದು ದಾಖಲಾಯ್ತು.ಅದೇ ತಿಂಗಳಲ್ಲಿ ಒಟ್ಟು ಇಪ್ಪತ್ತು ಪ್ರಕರಣಗಳು ದಾಖಲಾದವು. ಮಾರ್ಚಿ ತಿಂಗಳ ಮೊದಲ 13 ದಿನಗಳಲ್ಲೆ 46 ಪ್ರಕರಣಗಳುನೋಂದಾವಣೆಗೊಂಡವು. ಮಾರ್ಚ್ 18 ರ ವೇಳೆಗೆ Action fraud, ಕರೋನಾಗೆ ಸಂಭಂದಪಟ್ಟಂತ 196 ವಂಚನೆಗಳನ್ನು ದಾಖಲಿಸಿತು. ಒಟ್ಟಾರೆ ಈ ಪ್ರಕರಗಳಲ್ಲಿ ಜನಸಾಮಾನ್ಯರು 9 ಕೋಟಿ ಎಪ್ಪತ್ತು ಲಕ್ಷಗಳನ್ನು ಕಳೆದುಕೊಂಡಿದ್ದರು. ಲಂಡನ್ ಸಿಟಿ ಪೋಲೀಸರ ಪ್ರಕಾರ ಮೊದಲ ಒಂದು ತಿಂಗಳಲ್ಲಿ ಲಂಡನ್ ನಗರವೊಂದರಲ್ಲೇ ಇಂತಹ ವಂಚನೆಗಳು 400%  ಅಧಿಕವಾದವು.

    ನ್ಯೂಯಾರ್ಕ್ ಆಸ್ಪತ್ರೆಯಲ್ಲಿಯೂ ಇಂತಹ ಧಾಳಿಗಳು ನಡೆದವು. ಉದಾಹರಣೆಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಬಂದಂತಹ ಮಿಂಚಂಚೆಗಳು, ಡಿಸೀಸ್ ಕಂಟ್ರೋಲ್ ಮತ್ತು ಪ್ರೆವೆನ್ಶ್ ನ್ (DCP) ವಿಭಾಗದಿಂದ ಬಂದಂತೆ ಹಲವು ಕಡತಗಳನ್ನು ಅಂಟಿಸಿದ ಮಿಂಚಂಚೆಗಳು ಆಸ್ಪತ್ರೆಯ ಅಧಿಕಾರಿಗಳಿಗೆ ಬಂದವು. ಅವುಗಳನ್ನು ಡೌನ್ ಲೋಡ್ ಮಾಡಿಕೊಳ್ಳಲು ಸೂಚನೆಗಳಿದ್ದವು.ಅದರಲ್ಲಿದ್ದ ಕೆಲವು ಕೋಡ್ ಗಳ ಮೂಲಕ ಕಂಪ್ಯೂಟರ್ ಗಳಲ್ಲಿದ್ದ ಇಡೀ ಡೇಟಾವನ್ನು ಕದಿಯುವ ಹುನ್ನಾರ ವಂಚಕರದಾಗಿತ್ತು.

    ಆಸ್ಪತ್ರೆಯ ಕೆಲವು ಸಪ್ಪ್ಲೈಗಳು ಕೆಲವು ಲೋಪಗಳ ಕಾರಣ ನಿಂತುಹೋಗಿದೆಯೆಂದೂ, ತಕ್ಷಣ ಕೊಂಡಿ/ಲಿಂಕನ್ನು ಒತ್ತುವ ಮೂಲಕ ಅದನ್ನು ಬೇಗ ಕಳಿಸಿಕೊಡಲು ಸಾಧ್ಯವೆಂದೂ ಕೆಲವು ಮಿಂಚಂಚೆಗಳು ಬಂದವು. ಆದರೆ ಅದರ ಜೊತೆಯಲ್ಲಿಯೇ ಕಂಪ್ಯೂಟರ್ ವೈರಸ್ಸನ್ನು ಬಿಡಲಾಗಿತ್ತು.

    “Carona live 1.1.” ಎನ್ನುವ ಆಂಡ್ರ್ಯಾಯ್ಡ್ ಫೋನ್ ಗಳಿಗಾಗಿ ಮಾಡಲಾದ ಮ್ಯಾಲ್ವೇರನ್ನು ಲಿಬ್ಯಾದ ಪ್ರಜೆಗಳು ಎದುರಿಸಬೇಕಾಯಿತು.ಇದನ್ನು ಡೌನ್ ಲೋಡ್ ಮಾಡಿಕೊಂಡ ನಂತರ ಅವರ ಉಪಕರಣಗಳಲ್ಲಿ ಸೈಬರ್ ವೈರಸ್ ಸೇರಿಕೊಂಡು ವಂಚನೆಗಳಿಗೆ ಅವಕಾಶ ಕಲ್ಪಿಸಿಕೊಟ್ಟಿತು.

    ಭಾರತದಲ್ಲಿಯೂ ಈ ವಂಚನೆಯ ಪ್ರಕರಣಗಳು ದುಪ್ಪಟ್ಟಾದವು ಎನ್ನುತ್ತಾರೆKPMG India ಸಹಭಾಗಿತ್ವ ಹೊಂದಿದ ಅಖಿಲೇಷ್ ಟುತೇಜ.ಅವರ ಪ್ರಕಾರ ,ಟೆಕ್ನಾಲಜಿ ಮತ್ತು ಸೆಕ್ಯೂರಟಿ ಎರಡೂ ಜೊತೆ ಜೊತೆಯಲ್ಲೇ ಅರಳದಿದ್ದರೆ ಟೆಕ್ನಾಲಜಿ ಸೃಷ್ಟಿಸುವ ಡೇಟ ಎಲ್ಲರಿಗೂ ಲಭ್ಯವಾಗುತ್ತದೆ. ಸೆಕ್ಯೂರಿಟಿ ಕಲ್ಪಿಸುವಲ್ಲೇ ಬಹಳಷ್ಟು ಹಣವಿದೆ. ಹಾಗಾಗಿ ಕೆಲವು ಡೇಟಗಳಿಗೆ ಮಾತ್ರ ಸೆಕ್ಯೂರಿಟಿಯನ್ನು ಸೃಷ್ಟಿಸಲು ಸಾಧ್ಯ. ವ್ಯಕ್ತಿಗಳಿಗೆ ಸಂಬಂಧಿತ ಸೆಕ್ಯೂರಿಟಿ ಅನ್ನುವುದು ಆಯಾ ವ್ಯಕ್ತಿಯ ಅರಿವು, ಬಳಕೆ ಇನ್ನೂ ಹಲವು ವಿಚಾರಗಳನ್ನು ಅವಲಂಭಿಸಿದ ವಿಚಾರ. ಈ ಕಾರಣ ವಂಚಕರು ಸಾಮಾನ್ಯ ಜನತೆಯ ಮೂಲಕ ಮಾಹಿತಿಗಳನ್ನು ವಂಚನೆಗಳ ಮೂಲಕ ಪಡೆದು ಸೆಕ್ಯೂರಿಟಿಯನ್ನು  ಸುಲಭವಾಗಿ ಭೇದಿಸಲು ಅವಿರತ ಪ್ರಯತ್ನ ಮಾಡುತ್ತಲೇ ಇರುತ್ತಾರೆ.

     ಭಾರತದಲ್ಲಿ ಮತ್ತೊಂದು ಬಾರಿಗೆ ಟ್ರೂ ಕಾಲರ್ ಆಪ್ ಕೋಟ್ಯಾಂತರ ಜನರ ವಯಕ್ತಿಕ ಮಾಹಿತಿಗಳನ್ನು ಬರೇ ಒಂದು ಸಾವಿರ ಅಮೇರಿಕನ್ ಡಾಲರ್ ಗೆ ಮಾರಿಕೊಂಡಿತು ಎನ್ನುವ ಪುಕಾರು ಎದ್ದಿದ್ದೂ ಇದೇ ಕಾಲದಲ್ಲಿ ಎನ್ನುವುದು ಮತ್ತೂ ಆತಂಕವನ್ನು ಸೃಷ್ಟಿಸಿತು. ಆ ಕಂಪನಿ ಸಮಾಧಾನ ಮತ್ತು ಸ್ಪಷ್ಟೀಕರಣ ಎರಡನ್ನೂ ನೀಡಬೇಕಾಯಿತು.

    ಜನರಿಗೆ ಇ- ಜಗತ್ತಿನ ಅರಿವು ಮೂಡುವ ಮುನ್ನವೇ ಟೆಕ್ನಾಲಜಿಯ ವಶಕ್ಕೆ ತಳ್ಳುತ್ತಿರುವ ಈ ಪ್ರಪಂಚದಲ್ಲಿ ಇದೇ ಕಾರಣಕ್ಕೆ ಸೈಬರ್ ಕಳ್ಳತನಗಳು ಹೆಚ್ಚಾಗುತ್ತಿವೆ. ಕರೋನ ಅದಕ್ಕೆ ಒಳ್ಳೆಯ ಅವಕಾಶವನ್ನು ಸೃಷ್ಟಿಸಿದೆ.ಕರೋನ ಕಾಲದಲ್ಲಿ ಜನರು ತಮ್ಮ ಕೆಲಸ ದುಡ್ಡು ಇತ್ಯಾದಿಗಳ ಬಗ್ಗೆ ಆತಂಕಪಡಲು ಶುರುಮಾಡಿದ ಕೂಡಲೇ ಪ್ರಪಂಚದಲ್ಲಿ ವರ್ಚುಯಲ್ ವಂಚನೆಗಳ ಸಂಖ್ಯೆ ತ್ರಿಪಟ್ಟು ಜಾಸ್ತಿಯಾಯಿತು.

    ಬಹಳಷ್ಟು ಜನರು ಈ ಬಗ್ಗೆ ಅರಿವನ್ನು ಹೊಂದಿ ಇಂತಹ ಆಸೆಗಳಿಂದ ಪಾರಾಗುತ್ತಾರಾದರೂ, ಒಂದಷ್ಟು ಜನರು ಇಂತಹ ವಂಚನೆಗೆ ತುತ್ತಾಗುತ್ತಲೇ ಇರುವ ಕಾರಣ ಈ ವಂಚಕರು ತಮ್ಮ ಪ್ರಯತ್ನಗಳನ್ನು ಮುಂದುವರೆಸುತ್ತಾರೆ. ಒದಗಿಬರುವ ಪ್ರತಿ ಬದಲಾವಣೆಗಳಿಗೆ ಹೊಂದಿಕೊಂಡು ಹೊಸ ಹೊಳಹುಗಳ ಮೂಲಕ ಜನರನ್ನು ವಂಚಿಸಲು ಮುಂದಾಗುತ್ತಾರೆ.ಅಂತರ್ಜಾಲ ಸೆಕ್ಯೂರಿಟಿ ಕಂಪನಿ ಸೊಹೋಸ್ ನಡೆಸಿದ ವಿಚಾರಣೆಯ ಪ್ರಕಾರ ಏಪ್ರಿಲ್ ನ ಮೊದಲ ವಾರದಲ್ಲಿ ಜಗತ್ತಿನ ಎಲ್ಲ ವಂಚನೆಯ ಪ್ರಕರಣಗಳಲ್ಲಿ ಕರೋನ ಸಂಭಂದಿತ ವಂಚನೆಗಳು 3% ಜಾಗವನ್ನ ಆಕ್ರಮಿಸಿದವು.

    ವಂಚಕ ಮಿಂಚಂಚೆಗಳು (Phishing), ವಂಚಕ ಸಂದೇಶಗಳು(Smishing)ಬೇರೆಯವರು ಕಳಿಸಿರುವ ಸಂದೇಶಗಳನ್ನೇ ಮುಂದುವರೆಸಿದಂತೆ ಮಾಡಿ ಅವರದೇ ಹೆಸರಲ್ಲಿ ಬರುವ ಸುಳ್ಳು ಸಂದೇಶಗಳು (Spoofing ) ಹೀಗೆ ನಾನಾ ರೀತಿಯಲ್ಲಿ ವಂಚಕರ ಮಾಡುವ ಸಂಪರ್ಕ ವಿಧಾನಗಳನ್ನು  ಸೈಬರ್ ಸೆಕ್ಯುರಿಟಿ ಸಂಸ್ಥೆಗಳು ಗುರುತಿಸುತ್ತವೆ.

    ಇಂತಹದ್ದರಲ್ಲೂ ಟ್ರೋಜನ್ ಮತ್ತು ರ್ಯಾನ್ಸಮ್ ವೇರ್ ಎನ್ನುವ ಎರಡು ಬಗೆಯ ಮ್ಯಾಲ್ವೇರ್ ಗಳಿವೆ.

    ಮೊದಲನೆಯದ್ದರಲ್ಲಿ ನೀವು ಡೌನ್ ಲೋಡ್ ಮಾಡಿಕೊಂಡ ಅಪ್ಲಿಕೇಶನ್ ಕಣ್ಣಿಗೆ ಕಾಣುವಂತೆ ಕೆಲಸಮಾಡುತ್ತಿರುತ್ತದೆ. ಆದರೆ ಅದರ ಜೊತೆಯಲ್ಲೇ ಬರುವ ವಂಚಕ ಮ್ಯಾಲ್ವೇರ್ ಹಿನ್ನೆಲೆಯಲ್ಲಿ ತನ್ನ ಕೆಟ್ಟ ಕೆಲಸವನ್ನು ಕಣ್ಣಿಗೆ ಕಾಣದಂತೆ ಮಾಡುತ್ತಿರುತ್ತದೆ. ಕೋವಿಡ್ ವಿಷಯದಲ್ಲೂ ಇಂತಹ  AzorUlt Trojanಬರಬಹುದು.

    ರ್ಯಾನ್ಸಮ್ ವೇರ್ ನಲ್ಲಿ ದೊರೆತ ಡೇಟವನ್ನು ಆಯಾ ಸಂಸ್ಥೆ, ಸರಕಾರ ಇತ್ಯಾದಿಗಳನ್ನು ಬ್ಲಾಕ್ ಮೇಲ್ ಮಾಡಲು ಬಳಸಲಾಗುತ್ತದೆ.

    ಮೊಬೈಲ್ ಫೋನ್ ಗಳ ರ್ಯಾನ್ಸಮ್ ವೇರ್– ಕೆಲವು ಉಪಯೋಗಕಾರೀ ಅಪ್ಲಿಕೇಶನ್ ನಂತೆ ಕಾಣುವ ಆಪ್ ಗಳನ್ನು ವಂಚಕರು ಬಳಸುತ್ತಿದ್ದಾರೆ.ಉದಾಹರಣೆಗೆ ,  ’ಕರೋನ ವೈರಸ್ ಅಪ್ಡೇಟ್ ಆಪ್ ’ ಎಂದಿಟ್ಟುಕೊಳ್ಳಿ. ಅದನ್ನು ನಿಮ್ಮ ಮೊಬೈಲ್ ಗಳಲ್ಲಿ ಡೌನ್ ಲೋಡ್ ಮಾಡಿಕೊಂಡ ನಂತರ ಅದು ನಿಮ್ಮ ಇಡೀ ಫೋನ್ ನಲ್ಲಿರುವ ಎಲ್ಲ ಮಾಹಿತಿಗಳನ್ನು ಹ್ಯಾಕ್ ಮಾಡಬಹುದು. ಅಷ್ಟೇ ಅಲ್ಲದೆ ಅವರ ಇಡೀ ಫೋನಿನ ನಿಯಂತ್ರಣವನ್ನು ತಮ್ಮದಾಗಸಿಕೊಳ್ಳಬಹುದು.  ನಿಮ್ಮದೇ ಫೋನ್ ನಂಬರನ್ನು ಬಳಸಿ ಇತರರಿಗೆ ಫೋನಾಯಿಸುವುದು, ಸಂದೇಶಕಳಿಸುವುದು ಇತ್ಯಾದಿಗಳನ್ನು ನಿಮಗೆ ತಿಳಿಯದಂತೆ ಯಾವುದೋ ರಿಮೋಟ್ ಪ್ರದೇಶದಲ್ಲಿ ಕುಳಿತು ಮಾಡಬಹುದು.ನೀವು ಮಾಡುವ ಎಲ್ಲವನ್ನು ಅವರು ಎಲ್ಲಿಯೋ ಕುಳಿತು ನಿಮಗೇ ಹೇಳುತ್ತ , ನಿಮ್ಮ  ದೂರವಾಣಿಯನ್ನು ಸಂಪೂರ್ಣ ನಿಯಂತ್ರಿಸಿ ನಿಮ್ಮ ಕೈ ಕಟ್ಟಿ ಹಾಕಬಹುದು. ಡೊಮೈನ್ ಟೂಲ್ಸ್ ಎನ್ನುವ ಸಂಸ್ಥೆ  ಕರೋನ ಹೆಸರಲ್ಲಿ ನಡೆದ ಇಂತಹ ವಂಚನೆಯ ಹೊಸ ಪ್ರಕರಣಗಳನ್ನು ಹೊರಗೆಳೆದಿದೆ.

    ಇಂತಹ ವಂಚಕರು ಸಾಮಾನ್ಯ ಬಹಳ ಒತ್ತಡ ಹೇರುತ್ತಾರೆ. ಬೆದರಿಸುತ್ತಾರೆ. ಆತಂಕ ಹುಟ್ಟಿಸುತ್ತಾರೆ ಅಥವಾ ದೊಡ್ಡ ದೊಡ್ಡ ಆದಾಯವನ್ನು ಘೋಷಿಸುತ್ತಾರೆ. ಇವು ನಂಬಿಕೆಗೆ ಅರ್ಹವಾಗದ ಪ್ರಮಾಣದಲ್ಲಿರುತ್ತವೆ. ಮತ್ತೆ ಕೆಲವರು ಕಾರಣವೇ ಇಲ್ಲದೆ ನಮಗೆ ದುಡ್ಡು ನೀಡುವ ಪ್ರಮಾಣಗಳನ್ನು ನೀಡುತ್ತಾರೆ. ಅಥವಾ ಹಣ ಹೂಡಲು ಹೇಳಿ ದೊಡ್ಡದದ ಮೊತ್ತ ಕೈ ಸೇರುತ್ತದೆಂದು ಹೇಳುತ್ತಾರೆ.ಕೆಲವರು ನಂಬಲರ್ಹವಾದ ಕಂಪನಿಗಳ ಹೆಸರನ್ನು ಬಳಸಿ ವಂಚಿಸಲು ಈ ಪ್ರಯತ್ನಗಳನ್ನು ಮಾಡುತ್ತಾರೆ.

    ಇವರು ತಾವೇ ಬ್ಯಾಂಕುಗಳು, ಸರ್ಕಾರಗಳು, ವಿಶ್ವ ಆರೋಗ್ಯ ಸಂಸ್ಥೆ, ಕೊನೆಗೆ ಯುನೈಟೆಡ್ ನೇಷನ್ಸ್ ಎಂಬೆಲ್ಲ ಹೆಸರುಗಳಲ್ಲಿಕೂಡ ಜನರನ್ನು ಸಂಪರ್ಕಿಸಿ ವಂಚಿಸುತ್ತಿದ್ದಾರೆ.

    ನಿಮಗೆ ಗೊತ್ತಿಲ್ಲದ ಮಿಂಚಂಚೆಗಳನ್ನು ತೆರೆಯದಿರುವುದು. ಅಗತ್ಯವಿಲ್ಲದ ವಿಚಾರಗಳ ಕೊಂಡಿಗಳನ್ನು ಒತ್ತದಿರುವುದುಗೊತ್ತಿರದವರು ಕಳಿಸಿದ ವಿಚಾರಗಳನ್ನು ಡೌನ್ ಲೋಡ್ ಮಾಡಿಕೊಳ್ಳದಿರುವುದು.ನಿಮ್ಮ ವಿವರಗಳನ್ನು ಗೊತ್ತಿಲ್ಲದವರಿಗೆ ನೀಡದಿರುವುದು ಇತ್ಯಾದಿ ಎಚ್ಚರಿಕೆಗಳು ಕರೋನ ಕಾಲದಲ್ಲಿ ಇನ್ನೂ ಹೆಚ್ಚಾಗಿ ಬೇಕಾಗಿದೆ.

    ಯಾವ ಉನ್ನತ ಸಂಸ್ಥೆಗಳೂ ( ಉದಾಹರಣೆಗೆ- ವಿಶ್ವ ಆರೋಗ್ಯ ಸಂಸ್ಥೆ) ಮೊದಲೇ ಸಾರ್ವಜನಿಕ ಹೇಳಿಕೆಗಳನ್ನು ನೀಡದೆ ವೈಯಕ್ತಿಕವಾಗಿ ನಿಮ್ಮನ್ನು ಕರೋನಾದ ಬಗ್ಗೆ ಸಂಪರ್ಕಿಸುವುದಿಲ್ಲ,ನಿಮ್ಮದೇ ಬ್ಯಾಂಕುಗಳ ಹೆಸರಲ್ಲೇ ಮಿಂಚಂಚೆ, ಸಂದೇಶಗಳು ಬಂದರೂ ಅವರು ನಿಮ್ಮ  ಬ್ಯಾಂಕ್ ಕಾರ್ಡ್, ಬ್ಯಾಂಕ್ ಖಾತೆಗಳ  ವಿವರಗಳನ್ನು ಕೇಳುವುದಿಲ್ಲ ಎಂಬುದನ್ನು ಇದೀಗ ಮತ್ತೆಹೇಳಿಕೊಳ್ಳುವ ಅಗತ್ಯ ಹೆಚ್ಚಾಗಿದೆ.ಬದುಕು ಮತ್ತೆ ಸಾಧಾರಣ ಸ್ಥಿತಿಗೆ ಮರಳಿದರೂ ಕರೋನ ಹೆಸರಲ್ಲಿ ಸೈಬರ್ ವಂಚನೆಗಳು ಫೋನ್ ಮತ್ತು ಅಂತರ್ಜಾಲದ ಮೂಲಕ ಮುಂದುವರೆಯುವುದು ಖಂಡಿತ. ಆದ್ದರಿಂದ ಈ ಬಗ್ಗೆ ಕಾಳಜಿಯಿರಲಿ. PICTURE COURTESY :DONALD TONG

    ಚೀನಾ ಸಾರಿದ ಜೈವಿಕ ಸಮರ: ಸಂಶಯದ ಪ್ರಚಂಡ ಮಾರುತ

    ಅಧಿಕಾರ ದಾಹ ಅಪಾಯಕಾರಿ ಕಾಯಿಲೆ. ಕೊರೊನಾ ರೀತಿಯಲ್ಲೇ ಒಬ್ಬ ನಾಯಕ ಅಥವಾ ಒಂದು ದೇಶದ ಶ್ವಾಸಕೋಶವನ್ನು ಘಾಸಿಗೊಳಿಸಿ ನಿಧಾನ ತಲೆಗೇರಿ ಮೆದುಳನ್ನು ನಿಷ್ಕ್ರಿಯಗೊಳಿಸಬಲ್ಲದು. ಚೀನಾದ ಇವತ್ತಿನ ಹಪಾಹಪಿ ನೋಡಿದಾಗ ಈ ಮಾತಿನ‌ ಅರ್ಥ ಸ್ಪಷ್ಟವಾಗಬಲ್ಲದು. ಚೀನಾಕ್ಕೆ ಸೂಪರ್ ಪವರ್ ಆಗುವ ಹುಚ್ಚು ತಲೆಗೇರಿದೆ. ಹಿಂದೆ ರಷ್ಯಾದ ಲೆನಿನ್, ಸ್ಟಾಲಿನ್ ಅವರಿಗೆ ವಕ್ಕರಿಸಿದ್ದ ಕಾಯಿಲೆಯೇ ಇಂದು ಮಹಾಗೋಡೆಯ ಸಾಮ್ರಾಟ ಕ್ಸಿ ಜಿನ್ ಪಿಂಗ್‌ಗೂ ತಗುಲಿದೆ.

    ‘ಪ್ರಭಾವಳಿ ವಿಸ್ತರಣೆ’ಯ ಹುಚ್ಚಿಗೆ ಬಲಿಯಾಗಿರುವ ಈ ದೇಶ ತನ್ನ ಉದ್ದೇಶ ಸಾಧನೆಗಾಗಿ ಕಂಡುಕೊಂಡ ದಾರಿ ಮಾತ್ರ ಅತಿ ಭಯಾನಕ. ಸೋಂಕಿನ ಮೂಲಕವೇ ಸಾಮ್ರಾಜ್ಯ ಭದ್ರಪಡಿಸುವ ಖಯಾಲಿ ಆ ದೇಶಕ್ಕೆ ಶುರುವಾಗಿದೆ ಎನ್ನುವ ಸಂಶಯವನ್ನು ಅನೇಕ ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ.  ಆದರೆ, ಇದು ಬೇಕಿಲ್ಲದವರು ಮಾಡುವ ಒಣ ಆರೋಪ ಎಂದು ಅಲ್ಲಗಳೆಯುವವರು ಇದ್ದಾರೆ.

     ಹಾಗಾದರೆ ಇದರಲ್ಲಿ ಯಾವುದು ಸತ್ಯ?

    ಸೈನ್ಸ್ ಹೇಳುವ ಮಿಸಿಂಗ್ ಲಿಂಕ್: ಎರಡೂ ಕಡೆಯ ವಾದಗಳನ್ನೂ ಆಲಿಸಬೇಕು. ಆದರೆ ಈ ಸೂಕ್ಷ್ಮ ಸತ್ಯ ಅರಿಯಲು ವಿಜ್ಞಾನದ ಹಾದಿಯನ್ನು ಹೆಚ್ಚು ನಂಬಬೇಕು. ಮಿಸಿಂಗ್ ಲಿಂಕ್‌ಗಳನ್ನು ಜೋಡಿಸಿ ನೋಡಬೇಕು.

     ಕಳೆದ ವರ್ಷ ಡಿಸೆಂಬರ್‌ನಲ್ಲಿ ಈ ವೈರಾಣು ವುಹಾನ್‌ನಲ್ಲಿ ಮೊದಲು ಕಾಣಿಸಿಕೊಂಡಿತು. ಅದಾಗಿ  ಮಾರ್ಚ್‌ವರೆಗೆ ಸದ್ದಿಲ್ಲದೇ ಟ್ರೀಟ್ ಮಾಡಿತು ಚೀನಾ.  ಕೊನೆಗೆ ವೈರಾಣು ವುಹಾನ್‌ನ ಹಾದಿಬೀದಿ ಆಕ್ರಮಿಸಿದಾಗ ಜಾಗತಿಕ ಸುದ್ದಿಯಾಗತೊಡಗಿತು. ಆಗಲೂ ಚೀನಾ ನಿಜವಾದ ವೈರಾಣುವಿನ ನಿಜ ಸ್ವರೂಪ ಏನು ಎನ್ನುವುದನ್ನು ಬಾಯಿಬಿಡಲಿಲ್ಲ. ಒಳಗೊಳಗೇ ಕಂಟ್ರೋಲ್ ಮಾಡಿ, ವಿದೇಶಗಳಿಗೆ ಜಿಗಿಯಲು ಅನುವು ಮಾಡಿಕೊಟ್ಟಿತು. ವಿದೇಶಗಳಿಗೆ ಹರಡಿದ ವೈರಾಣು ಮೂಲ ವೈರಾಣುವಿಗಿಂತ ಮಾರಣಾಂತಿಕ ಎನಿಸಿತು.

    ಆದ್ದರಿಂದಲೇ ಯೂರೋಪ್ ಮತ್ತು ಅಮೆರಿಕದಂತಹ ಬಲಾಢ್ಯರ  ಅಂಗಳದಲ್ಲಿ ಹೆಣಗಳ ರಾಶಿ ತುಂಬಿತು. ಭಾರತದಂತಹ ಬಲಿಷ್ಠ ರೋಗ ನಿರೋಧಕ ಶಕ್ತಿ ಹೊಂದಿದ ರಾಷ್ಟ್ರ ಕೂಡ ಅಲುಗಾಡತೊಡಗಿತು. ಜಗತ್ತಿನ ೨೦೦ ಮೇಲ್ಪಟ್ಟು ದೇಶಗಳಿಗೆ ಈ ವೈರಾಣು ನುಗ್ಗಿತು. ಚೀನಾ ಮುಸಿಮುಸಿ ನಗುತ್ತಲೇ ಸೋಂಕು ಮುಕ್ತಿ ಹೊಂದಿತು!  ಕಠಿಣ ಲಾಕ್‌ಡೌನ್ ನಡುವೆಯೂ ಭಾರತದ ಎಲ್ಲಾ ರಾಜ್ಯಗಳಿಗೂ ಇದರ ಸೋಂಕು ಹರಡಿದರೆ, ಅದರ ಸ್ವರೂಪದ ಸ್ಪಷ್ಟತೆಯೇ ಇರದ ಆರಂಭಿಕ ಘಟ್ಟದಲ್ಲಿಯೂ ಚೀನಾ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಿ ಬಿಟ್ಟಿತು. ತನ್ನ ರಾಜಧಾನಿ ನಗರ ಬೀಜಿಂಗ್‌ಗೆ ಒಂದು ವೈರಾಣು ಕೂಡ ನುಗ್ಗದಂತೆ ನೋಡಿಕೊಂಡಿತು. ಅನೇಕರಿಗೆ ಇದೊಂದು ಪವಾಡದಂತೆ ಕಾಣಿಸಿತು. ಆದರೆ ಪವಾಡ ನಂಬದ ಕೆಲವು ವಿಜ್ಞಾನಿಗಳು ಮಾತ್ರ ಮಿಸಿಂಗ್ ಲಿಂಕ್ ಶೋಸಿ ಸತ್ಯ ಸಾರುವ ಪ್ರಯತ್ನ ಮಾಡಿದರು. ಅವರು ಹೇಳುತ್ತಿರುವ ಸತ್ಯವೇ ‘ಕೊರೊನಾ ವೈರಾಣು ನೈಸರ್ಗಿಕ ಅಲ್ಲ, ಲ್ಯಾಬ್ ಸೃಷ್ಟಿ’ ಎನ್ನುವುದು.

    ವುಹಾನ್ ಲ್ಯಾಬ್‌ನಲ್ಲಿ ತಾವು ಕೆಲಸ ಮಾಡಿರುವುದಾಗಿ ಹೇಳಿಕೊಂಡ ಕೆಲವು ವಿಜ್ಞಾನಿಗಳು ಕೂಡ ಈ ಸತ್ಯವನ್ನೇ ಉಸುರುತ್ತಿದ್ದಾರೆ.  ‘‘ಚೀನಾ ವಿರುದ್ಧ ನಮಗೆ ಯಾವುದೇ ಸಿಟ್ಟು, ಸೇಡು ಇಲ್ಲ. ಆದರೆ, ಜಗತ್ತನ್ನು ನಡುಗಿಸಿದ ಮಹಾಮಾರಿ ವಿಷಯದಲ್ಲಿ ನಡೆದ ಸಂಚನ್ನು ಮುಚ್ಚಿಟ್ಟು ಮುಗುಮ್ಮಾಗಿ ಉಳಿದರೆ,  ಅದು ದ್ರೋಹವಾಗುತ್ತದೆ” ಎಂದು ತುಂಬ ತೂಕದ ಮಾತುಗಳನ್ನಾಡುತ್ತಲೇ ‘ಕೊರೊನಾ ವುಹಾನ್ ಲ್ಯಾಬ್ ಸೃಷ್ಟಿ’ ಎಂದು ಸಾರಿದ್ದಾರೆ.

    ಅಧಿಕಾರ ಮತ್ತು ವಾಣಿಜ್ಯ ವಿಸ್ತರಣೆಯ ಮಹತ್ವಾಕಾಂಕ್ಷೆ ಹೊಂದಿರುವ ಚೀನಾ, ಇಡೀ ಜಗತ್ತಿನ ಮೇಲೆ ತನ್ನ ಹಿಡಿತ ಇರಿಸಬೇಕು ಎನ್ನುವ ಧಾವಂತ. ಅದರ ಈ ರಾಕ್ಷಸ ಹಂಬಲವನ್ನು ಹತ್ತಿರದಿಂದ ಕಂಡ ಅಮೆರಿಕದ ಅನೇಕ ವಿಜ್ಞಾನಿಗಳು ಇದನ್ನೇ ಹೇಳುತ್ತಿದ್ದಾರೆ.

    ಅವರು ತಮ್ಮ ವಾದಕ್ಕೆ ಪೂರಕವಾಗಿ  ಮೂರು ಮುಖ್ಯ ಮಿಸ್ಸಿಂಗ್ ಲಿಂಕ್‌ಗಳನ್ನು ಕೊಡುತ್ತಾರೆ.

    ಲಿಂಕ್-1: ಕೊರೊನಾ ನೈಸರ್ಗಿ ಅಲ್ಲ, ಲ್ಯಾಬ್ ಸೃಷ್ಟಿ. ಯಾಕೆಂದರೆ, ಅದು ನೈಸರ್ಗಿಕವಾಗಿದ್ದರೆ ಈ ಪರಿ ಶರವೇಗದಲ್ಲಿ ಜಗತ್ತನ್ನು ಆವರಿಸುತ್ತಿರಲಿಲ್ಲ.  ಎಬೋಲಾದಿಂದ ಇದುವರೆಗೆ ಹಾವಳಿ ಇಟ್ಟು ಕಣ್ಮರೆಯಾದ ವೈರಾಣುಗಳ ಹೆಜ್ಜೆಜಾಡು ಗಮನಿಸಿ. ಅವ್ಯಾವೂ ಕೂಡ ಇಷ್ಟೊಂದು ವಿಶ್ವರೂಪಿ ಪೀಡೆಯಾಗಿರಲಿಲ್ಲ.  ಸಾಮಾನ್ಯವಾಗಿ ಹವಾಮಾನ ಹಾಗೂ ಭೌಗೋಳಿಕ ಕಂಡೀಷನ್ ಆಧರಿಸಿ  ವೈರಾಣುಗಳ ಪ್ರಸರಣ ವ್ಯತ್ಯಾಸಗೊಳ್ಳುತ್ತದೆ. ಅದು ನೈಸರ್ಗಿಕ ಎನ್ನುವುದೇ ಖರೆ ಆಗಿದ್ದರೆ ಚೀನಾ ರೀತಿಯ ಹವಾಮಾನ ಹೊಂದಿದ ರಾಷ್ಟ್ರಗಳಿಗೆ ಮಾತ್ರ ಅದು ಸೀಮಿತವಾಗಬೇಕಿತ್ತು. ಆದರೆ ಈಗ ಆಗಿರುವುದೇ ಬೇರೆ. ಸ್ವಿಡ್ಜರ್‌ಲೆಂಡಿನಿಂದ ಹಿಡಿದು ಮರುಭೂಮಿಯ ಒಳಹವೆ ಹೊಂದಿದ ರಾಷ್ಟ್ರಗಳವರೆಗೆ ಅದು ಸಮನಾಗಿ ಹರಡುತ್ತಿದೆ. ಇದು ಸತ್ಯದ ಪ್ರಥಮ ಲಿಂಕ್.

    ಲಿಂಕ್-2:  ವುಹಾನ್‌ನಂತಹ ಶೀತ ಹವಾಮಾನ ಹೊಂದಿದ ಪ್ರದೇಶಗಳಲ್ಲಿ ವೈರಾಣು ಅಬ್ಬರಿಸುತ್ತದೆ. ಪ್ರಸರಣ ವೇಗ ಹೆಚ್ಚಿರುತ್ತದೆ. ಭಾರತದಂತಹ ಬಿಸಿಲು, ಒಣ ಹವೆ ಹೊಂದಿದ ದೇಶಗಳಲ್ಲಿ ಅದು ಅತಿ ಶೀಘ್ರ ಸಾಯುತ್ತದೆ. ಇದು ವೈರಾಣುವಿನ ಅಂಗ ರಚನೆ ಆಧರಿಸಿ ಹೇಳುವ ಸಾಮಾನ್ಯ ಸತ್ಯ. ಆದರೆ ಇಂದು ಕಾಣುತ್ತಿರುವುದೇನು? ಬೆಂಕಿಯಂತಹ ಉರಿಬಿಸಿಲಿನ ನಡುವೆಯೂ ಅದು ಒಂದೇ ಸಮಾ ವಿಸ್ತರಿಸುತ್ತಲೇ ಇದೆ.  ಲ್ಯಾಬ್ ಸೃಷ್ಟಿ ಎನ್ನುವುದಕ್ಕೆ ಇದು ಎರಡನೆ ಪ್ರಬಲ ಲಿಂಕ್.

    ಲಿಂಕ್-3:  ವೈರಾಣು ಸೋರಿಕೆಯಾದ ವುಹಾನ್ ಲ್ಯಾನ್‌ನಲ್ಲಿ  ಕೆಲಸ ಮಾಡುತ್ತಿದ್ದ ಎಲ್ಲಾ ಟೆಕ್ನಿಷಿಯನ್‌ಗಳು ಈಗ ಕಣ್ಮರೆಯಾಗಿದ್ದಾರೆ. ಅನಾಹುತ ಘಟಿಸಿದ ಬಳಿಕ ಅಲ್ಲಿನ  ಲ್ಯಾಬ್ ನ  ಫೋನ್  ಸಂಪರ್ಕ ಮೂರು ತಿಂಗಳು ಕಾಲ   ಕಡಿತಗೊಂಡಿತ್ತು.  ಅಲ್ಲಿನ ಲ್ಯಾಬ್ ಟೆಕ್ನಿಷಿಯನ್‌ಗಳೆಲ್ಲರೂ ನಿಗೂಢವಾಗಿ ಕಣ್ಮರೆಯಾಗಿದ್ದಾರೆ.

    ಈ ಎಲ್ಲಾ ಮಿಸ್ಸಿಂಗ್ ಲಿಂಕ್ ಜೋಡಿಸಿದರೆ ಹೊಳೆಯುವ ಪ್ರಬಲ ಗುಮಾನಿ; ಕೊರೊನಾ ವುಹಾನ್ ಲ್ಯಾಬ್ ಸೃಷ್ಟಿ ಎನ್ನುವುದೇ ಆಗಿದೆ. ಇದು  ಚೀನಾ ಪ್ರಯೋಗಿಸಿದ ಜೈವಿಕ ಅಸ್ತ್ರ .  ಬಾವಲಿಯಿಂದ ಕೊರೊನಾ ವೈರಾಣು ಹುಟ್ಟಿದೆ ಎಂದು ಈಗ ಆ ದೇಶ ತಿಪ್ಪೆ ಸಾರಿಸುತ್ತಿದೆ. ಅದನ್ನು ನಂಬಬೇಡಿ , ನೂರಕ್ಕೆ ನೂರು ಇದೊಂದು  ಪಿತೂರಿ’’ ಎಂದಿದ್ದಾರೆ ವಿಜ್ಞಾನಿಗಳು.

    ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಂಟಲು ಹರಿದು ಹೋಗುವಷ್ಟು ಗಟ್ಟಿಯಾಗಿ ಈ ವಿಷಯದಲ್ಲಿ ಚೀನಾವನ್ನು ದೂಷಿಸಿದ್ದಾರೆ. ಅಂತಿಮವಾಗಿ  ವಿಶ್ವ ಆರೋಗ್ಯ ಸಂಸ್ಥೆ ಇದರ ನಿಗೂಢ ಅರಿಯಲು ತಜ್ಞ ಸಮಿತಿ ರಚಿಸಿದೆ. ಏನೇ ಆದರೂ ಚೀನಾ ಬಗ್ಗೆ ಎಚ್ಚರ ವಹಿಸಬೇಕಾದ ಅಗತ್ಯ ಇದೆ ಎನ್ನುವುದು ಈಗ ಜಗತ್ತಿಗೆ ಅರ್ಥವಾಗುತ್ತಿದೆ. ಇದು ಗುಡ್ ಸೈನ್.

    ಅಮೆರಿಕ ಅಧ್ಯಕ್ಷರ ಭೂಗತ ಬಂಕರ್ ಎಂಬ ನಿಗೂಢ ರಹಸ್ಯ

    ಆಫ್ರಿಕನ್ ಮೂಲದ ಅಮೆರಿಕ ಪ್ರಜೆ ಜಾರ್ಜ್ ಫ್ಲಾಯ್ಡ್ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿರುವುದು ಅಮೆರಿಕದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಯನ್ನು ಹುಟ್ಟು ಹಾಕಿದೆ. ಒಂದು ವಿಧದಲ್ಲಿ ಜನಾಂಗೀಯ ವೈಷಮ್ಯದ ವಿರುದ್ಧದ ಹೋರಾಟವಾಗಿ ಮಾರ್ಪಟ್ಟಿದೆ. ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ ಮತ್ತು ಕಚೇರಿಯಾಗಿರುವ ಶ್ವೇತಭವನದೆದುರು ಸಾವಿರಾರು ಪ್ರತಿಭಟನಾಕಾರರು ಏಕಾಏಕಿ ಜಮಾಯಿಸಿದ ಹಿನ್ನೆಲೆಯಲ್ಲಿ ಬೆದರಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಕ್ಷಣಾ ಸಿಬ್ಬಂದಿ ಅವರನ್ನು ಶ್ವೇತಭವನದಲ್ಲಿರುವ ಭೂಗತ ಬಂಕರ್ ಗೆ ಸ್ಥಳಾಂತರಿಸಿದ್ದು ಈಗ ದೊಡ್ಡ ಸುದ್ದಿ.

    9/11 ಅಂದರೆ ವಿಶ್ವ ವಾಣಿಜ್ಯ ಸಂಕೀರ್ಣದ ಅವಳಿ ಗೋಪುರಗಳ ಮೇಲೆ ಭಯೋತ್ಪಾದಕರ ದಾಳಿ ನಡೆದಾಗ ಅಧ್ಯಕ್ಷರು ಬಂಕರ್ ಗೆ ತೆರಳಿದ್ದರು ಎಂದು ಹೇಳಲಾಗುತ್ತಿದೆ.

    ಹಾಗಾದರೆ, ಶ್ವೇತಭವನದ ಈ ರಹಸ್ಯ ಬಂಕರ್ ನ ವೈಶಿಷ್ಟ್ಯ ಮತ್ತು ಅದು ಬಿಟ್ಟುಕೊಡದ ರಹಸ್ಯಗಳಾದರೂ ಏನು ಎಂಬ ಬಗ್ಗೆ ನೋಡೋಣ.

    ಅಮೆರಿಕ ಅಧ್ಯಕ್ಷರ ಬಂಕರ್ ಎಂದರೆ ಅದೊಂದು ಬ್ರಹ್ಮಾಂಡ ರಹಸ್ಯ. ಅದು ಹೇಗಿದೆ? ಅಲ್ಲಿ ಏನಿದೆ ? ಯಾವ ರೀತಿ ಅಧ್ಯಕ್ಷರ ರಕ್ಷಣೆ ಮತ್ತು ತುರ್ತು ಸಂದರ್ಭದಲ್ಲಿ ಸೇನಾಪಡೆ ಸೇರಿದಂತೆ ನಾನಾ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಲು ಏನೇನು ವ್ಯವಸ್ಥೆ ಇದೆ  ? ಎಂಬ ಬಗ್ಗೆ ಅಲ್ಲಿನ ಬೆರಳೆಣಿಕೆಯಷ್ಟು ಜನರನ್ನು ಬಿಟ್ಟರೆ ಇಡೀ ಜಗತ್ತಿಗೆ ಅದು ಇನ್ನೂ ಚಿದಂಬರ ರಹಸ್ಯವಾಗಿಯೇ ಉಳಿದಿದೆ.

    ಭಯತ್ಪಾದಕರ ದಾಳಿ, ಯುದ್ಧ ಸಂದರ್ಭಗಳಲ್ಲಿ ಅಧ್ಯಕ್ಷರ ರಕ್ಷಣೆಯ ಉದ್ದೇಶದಿಂದ ಇದನ್ನು ನಿರ್ಮಿಸಲಾಗಿದ್ದು, ಶ್ವೇತಭವನದ ಹುಲ್ಲು ಹಾಸಿನ ತಳ ಭಾಗದಲ್ಲಿ ನಿರ್ಮಾಣವಾಗಿದೆ ಎಂದು ಹೇಳಲಾಗುತ್ತಿದೆ. ಯಾವುದೇ ರೀತಿಯ ಅಪಾಯದ ಸುಳಿವು ಸಿಕ್ಕ ಕೂಡಲೇ ಅಧ್ಯಕ್ಷರು ಹಾಗೂ ಪ್ರಮುಖ ಅಧಿಕಾರಿಗಳು ಈ ಬಂಕರ್ ಸೇರುತ್ತಾರೆ.

    ಶೀತಲ ಸಮರ ಯುಗದಲ್ಲಿ ಇದನ್ನು ಮೊದಲು ನಿರ್ಮಿಸಿದ್ದರೆ, 2001ರಲ್ಲಿ ಅದರ ನವೀಕರಣ ನಡೆದು ಅಣ್ವಸ್ತ್ರ ದಾಳಿ ಮಾತ್ರವಲ್ಲ ಬದಲಾದ ಕಾಲಘಟ್ಟದಲ್ಲಿ  ಎದುರಾಗಬಹುದಾದ ಅಪಾಯಗಳನ್ನು ಸಮರ್ಥವಾಗಿ ಎದುರಿಸುವ ರೀತಿಯಲ್ಲಿ ಸಜ್ಜುಗೊಳಿಸಲಾಯಿತು.

    ಐದು ಅಂತಸ್ತುಗಳ ಈ ಬಂಕರ್ ಗೆ ಪ್ರತ್ಯೇಕ ಗಾಳಿಯ ವ್ಯವಸ್ಥೆ ಇದೆ. ಕೆಲವು ತಿಂಗಳಿಗಳಿಗಾಗುವಷ್ಟು ಆಹಾರ ಸಂಗ್ರಹಿಸಿಡಲು ಇಲ್ಲಿ ಸಾಧ್ಯವಿದೆ. ಅದರ ಕಾಂಕ್ರೀಟ್ ಗೋಡೆಗಳು ಎಷ್ಟು ದಪ್ಪ ಇವೆಯೆಂದರೆ ಅಣ್ವಸ್ತ್ರ ದಾಳಿ ನಡೆದರೂ ವಿಕಿರಣ ಇದರ ಒಳಗೆ ಪ್ರವೇಶಿಸಲು ಸಾಧ್ಯವೇ ಇಲ್ಲ. ಶ್ವೇತಭವನ ಕಟ್ಟಡದ ನಾನಾ ಕಡೆಗಳಿಂದ ಈ ಬಂಕರ್ ಪ್ರವೇಶಿಸಲು ರಹಸ್ಯ ದಾರಿಗಳಿವೆ ಎಂಬುದಷ್ಟೇ ಸಾರ್ವಜನಿಕರಿಗೆ ಗೊತ್ತಿರುವ ವಿಷಯ. ಬಳಿದೆಲ್ಲಾ ಟಾಪ್ ಸೀಕ್ರೇಟ್.

    ಭೂಮಿಯಿಂದ ಸುಮಾರು 1000 ಅಡಿ ಆಳದಲ್ಲಿ ಈ ಬಂಕರ್ ಇದೆ. ಇದರಿಂದ ದೇಶದ ಪ್ರಮುಖ ನಗರಗಳಿಗೆ ನೇರ ಸಂಪರ್ಕ ಕಲ್ಪಿಸುವ ಸುರಂಗ ಮಾರ್ಗವಿದೆ ಎಂದು ಹೇಳಲಾಗುತ್ತದೆ. ಇಲ್ಲಿ ಅಧ್ಯಕ್ಷರ ತುರ್ತು ಕಾರ್ಯಾಚರಣೆ ಕೇಂದ್ರ (ಪಿಇಒಸಿ) ಮತ್ತು ಡೀಪ್ ಅಂಡರ್ಗ್ರೌಂಡ್ ಕಮಾಂಡ್ ಸೆಂಟರ್ (ಡಿಯುಸಿ) ಇದ್ದು, ಶ್ವೇತಭವನದ ರಕ್ಷಣೆಗಾಗಿಯೇ ನಿಯೋಜಿತರಾದ ಸೇನಾ ಸಿಬ್ಬಂದಿಗೆ ವಾಸ್ತವ್ಯ ಮಾಡಲು ಸಾಧ್ಯವಿದೆ. ಇದನ್ನು ಹೊರತು ಪಡಿಸಿ ಅಧ್ಯಕ್ಷರ ಏರ್ ಲಿಫ್ಟ್ ಗ್ರೂಪ್, ವೈದ್ಯಕೀಯ ತಂಡ, ಸುಸಜ್ಜಿತ ಹೆಲಿಕಾಪ್ಟರ್ ತಂಡ, ಅಧ್ಯಕ್ಷರಿಗೆ ಆಹಾರ ಪೂರೈಕೆ ತಂಡ ಮತ್ತು ಸಾರಿಗೆ ವಿಭಾಗದ ಪ್ರತಿನಿಧಿಗಳು ಕೂಡ ಇಲ್ಲಿ ಉಳಿದುಕೊಳ್ಳಲು ಸಾಧ್ಯವಿದೆ.

    ಅಣ್ವಸ್ತ್ರ, ಜೈವಿಕ ಮತ್ತು ರಾಸಾಯನಿಕ ಅಸ್ತ್ರಗಳ ದಾಳಿಗೂ ಜಗ್ಗದ ಈ ಬಂಕರ್ ನ್ನು ನಿರ್ಮಿಸಲು ಸುಮಾರು 2,50,000 ಘನ ಮೀಟರ್ ಪ್ರಮಾಣದ ಮಣ್ಣು ಮತ್ತು ಕಲ್ಲನ್ನು ಅಗೆಯಲಾಗಿತ್ತು. ಮಣ್ಣು ಮತ್ತು ಕಲ್ಲಿನ್ನು ನಾನಾ ಪರೀಕ್ಷೆಗೆ ಒಳಪಡಿಸಿ ಅದರ ಸಾಮರ್ಥ್ಯದ ಕೂಲಂಕಷ ಪರೀಕ್ಷೆಯ ಬಳಿಕವೇ ಬಂಕರ್ ನಿರ್ಮಿಸಲಾಗಿದೆ.

    ಅವಳಿ ಗೋಪುರಗಳ ಮೇಲೆ ನಡೆದ ದಾಳಿಯ ಬಳಿಕ ಈ ಬಂಕರ್ ಗೆ ಕಾಯಕಲ್ಪ ನೀಡಲಾಯಿತು. ಅದರ ನಿರ್ಮಾಣದ ವೇಳೆ, ಅಲ್ಲಿನ ಕೆಲಸಗಾರರು, ಗುತ್ತಿಗೆದಾರರು ಯಾರ ಜತೆಗೂ ಮಾತನಾಡುವಂತಿರಲಿಲ್ಲ ಅಷ್ಟೇ ಅಲ್ಲ ತಾವು ಮಾಡುತ್ತಿರುವ ಕೆಲಸದ ಪೂರ್ಣ ವಿವರ ಅವರಿಗೆ ತಿಳಿಯುತ್ತಿರಲೇ ಇಲ್ಲ ಎಂದು ಹಿರಿಯ ಅಧಿಕಾರಿಗಳನ್ನು ಉಲ್ಲೇಖಿಸಿ ನ್ಯೂಯಾರ್ಕ್ ಟೈಮ್ಸ್ 2008ರಲ್ಲಿ ವರದಿ ಮಾಡಿದೆ.

    ಕತ್ತಿ ಮನೆಯ ರೊಟ್ಟಿ ಊಟದ ಗುಟ್ಟೇನು?


    ಬಿಜೆಪಿ ನಾಯಕ ಉಮೇಶ ಕತ್ತಿ ಅವರ ಮನೆಯಲ್ಲಿ ನಡೆದ ರೊಟ್ಟಿ ಊಟದ ಮೀಟಿಂಗ್‌‌ನ ಹಿಂದಿನ ಅಸಲಿ ಕಹಾನಿ ಏನು ? ಅದು ಭಿನ್ನಮತ ಚಟುವಟಿಕೆಯೋ ರಾಜಕೀಯ ಒತ್ತಡ ತಂತ್ರವೋ..? ಕನ್ನಡಪ್ರೆಸ್.ಕಾಮ್ ನ ಪ್ರಧಾನ ಸಂಪಾದಕ ಶ್ರೀವತ್ಸ ನಾಡಿಗ್ ಮತ್ತು ಹಿರಿಯ ರಾಜಕೀಯ ವಿಶ್ಲೇಷಕ ಕೂಡ್ಲಿ ಗುರುರಾಜ ನಡೆಸಿದ ಪೊಡಕಾಸ್ಟ್ ಇದು. ಕೇಳಿ ನಿಮ್ಮ ಅಭಿಪ್ರಾಯ ತಿಳಿಸಿ.

    ಇದನ್ನೂ ಓದಿ: ಪ್ರತಿಯೊಂದಕ್ಕೂ, ಪ್ರತಿಯೊಬ್ಬರಿಗೂ ವಿಜಯೇಂದ್ರನನ್ನು ನೋಡು ಎಂದರಾ ಯಡಿಯೂರಪ್ಪ

    10 ಲಕ್ಷ ಡೌನ್ ಲೋಡ್ ದಾಟಿದ ರಿಮೂವ್ ಚೀನಾ ಆಪ್ಸ್

    ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ, ಕೋವಿಡ್-19 ಹಾವಳಿ ಇವರೆಡರ ಹಿನ್ನೆಲೆಯಲ್ಲಿ ಭಾರತದಲ್ಲಿ ಚೀನಾ ವಿರೋಧಿ ಭಾವನೆ ದಿನೇ ದಿನೇ ಹೆಚ್ಚುತ್ತಿದೆ. ಜೈಪುರ ಮೂಲದ ನವೋದ್ಯಮ ಅಭಿವೃದ್ಧಿ ಪಡಿಸಿರುವ ” ರಿಮೂವ್ ಚೀನಾ ಆಪ್ಸ್” ಇದಕ್ಕೆ ಜ್ವಲಂತ ನಿದರ್ಶನವಾಗಿದೆ. ಮೇ 17ರಂದು ಲಾಂಚ್ ಆದ ಈ ಆಪ್ ಸದ್ಯ ಆಂಡ್ರಾಯಿಡ್ ಫೋನ್ ಗಳಲ್ಲಿ ಮಾತ್ರ ಲಭ್ಯವಿದ್ದು, ಇದರ ಡೌನ್ ಲೋಡ್ ಸಂಖ್ಯೆ 10 ಲಕ್ಷಕ್ಕೆ ತಲುಪಿದೆ.

    ಈ ಆಪ್ ನ್ನು ಮುಖ್ಯವಾಗಿ ಚೀನಾ ಮೂಲದ ಆಪ್ ಗಳನ್ನು ಪತ್ತೆ ಹಚ್ಚುವ ರೀತಿಯಲ್ಲೇ ಅಭಿವೃದ್ಧಿ ಪಡಿಸಲಾಗಿದೆ. ಇದರ ಮೂಲಕ ಫೋನ್ ಬಳಕೆದಾರರು ತಮ್ಮ ಫೋನ್ ನಲ್ಲಿ ಇನ್ ಸ್ಟಾಲ್ ಆಗಿರುವ ಚೀನಾ ಮೂಲದ ಆಪ್ ಗಳನ್ನು ಸುಲಭವಾಗಿ ಅನ್ ಇನ್ಸ್ಟಾಲ್ ಮಾಡಬಹುದಾಗಿದೆ.

    ಗೂಗಲ್ ಪ್ಲೇ ಸ್ಟೋರ್ ನಲ್ಲಿ ಈಗ ಅತಿ ಹೆಚ್ಚು ಜನಪ್ರಿಯವಾಗಿರುವ ಉಚಿತ ಆಪ್ ಗಳ ಪೈಕಿ ಇದು ಎರಡನೇ ಸ್ಥಾನ ಪಡೆದಿದೆ. 3.5 ಎಂಬಿ ಗಾತ್ರದ ಇದನ್ನು ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು. ಸ್ಕ್ಯಾನ್ ನೌ ಬಟನ್ ಒತ್ತುವ ಮೂಲಕ ಚೀನಾದ ಆಪ್ ಗಳನ್ನು ಗುರುತಿಸಲು ಸಾಧ್ಯವಾಗುತ್ತದೆ. ಬಳಿಕ ಅನ್ ಇನ್ಸ್ಟಾಲ್ ಬಟನ್ ಒತ್ತಿದರೆ ಚೀನಾದ ಆಪ್ ಗಳು ಡಿಲೀಟ್ ಆಗುತ್ತವೆ. ಆದರೆ ಫೋನ್ ಖರೀದಿಸುವ ಸಂದರ್ಭದಲ್ಲೇ ಇನ್ ಸ್ಟಾಲ್ ಆಗಿರುವ ಆಪ್ ಗಳನ್ನು ಡಿಲೀಟ್ ಮಾಡಲು ಇದರಿಂದ ಸಾಧ್ಯವಿಲ್ಲ.

    ನಾವೇ ಸ್ವಯಂ ಡೌನ್ ಲೋಡ್ ಮಾಡಿದ ಚೀನಾ ಆಪ್ ಗಳನ್ನು ಮಾತ್ರ ಡಿಲೀಟ್ ಮಾಡಬಹುದಾಗಿದೆ.

    ಪ್ರತಿಯೊಂದಕ್ಕೂ, ಪ್ರತಿಯೊಬ್ಬರಿಗೂ ವಿಜಯೇಂದ್ರನನ್ನು ನೋಡು ಎಂದರಾ ಯಡಿಯೂರಪ್ಪ

    ಚಿರಾಗ್
    ಮಹಾಭಾರತ ಯುದ್ಧ ಕಾರಣ ಧೃತರಾಷ್ಟçನ ಪುತ್ರ ವ್ಯಾಮೋಹ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪವರು ಒಮ್ಮೆ ಅಧಿಕಾರ ಕಳೆದುಕೊಳ್ಳಲು ಕಾರಣವಾಗಿದ್ದೂ ಪುತ್ರವ್ಯಾಮೋಹವೇ. ಈಗ ಅವರ ವಿರುದ್ಧ ಪಕ್ಷದ ಹಿರಿಯ ಶಾಸಕರು ಅಸಮಾಧಾನಗೊಳ್ಳುವಂತೆಮಾಡಿದ್ದೂ ಪುತ್ರ ವ್ಯಾಮೋಹವೇ.

    ಹಿರಿಯ ಶಾಸಕ ಉಮೇಶ ಕತ್ತಿ ಮನೆಯಲ್ಲಿ ಉತ್ತರ ಕರ್ನಾಟಕ ಭಾಗದ ಬಿಜೆಪಿ ಶಾಸಕರು ಸಭೆಸೇರಿದ್ದು, ಸರಕಾರದ ವಿರುದ್ಧ ಅತೃಪ್ತಿ ಹೊರ ಹಾಕಿದ್ದು ಕೇವಲ ಆರಂಭ ಮಾತ್ರ. ಇಲ್ಲಿಕತ್ತಿಯವರ ಸಚಿವ ಸ್ಥಾನದ ಲಾಬಿ ಅಥವಾ ಸಹೋದರ ರಮೇಶ ಕತ್ತಿ ಅವರಿಗೆ ರಾಜ್ಯಸಭೆ ಟಿಕೆಟ್ ನೀಡಬೇಕೆಂಬ ಬೇಡಿಕೆ ನೆಪ ಮಾತ್ರ. ಅದು ಕತ್ತಿಯವರ ವೈಯಕ್ತಿಕ ಬೇಡಿಕೆ, ಇಲ್ಲವೇಬೆಳಗಾವಿಯ ಕುಟುಂಬ ರಾಜಕಾರಣದ ಭಾಗ. ಆದರೆ ಕತ್ತಿಯವರ ಮನೆಗೆ ಬಸನಗೌಡ ಪಾಟೀಲ ಯತ್ನಾಳ ಸೇರಿ ಇತರ ಶಾಸಕರು ಊಟದ ನೆಪದಲ್ಲಿ ಹೋಗಿದ್ದರಲ್ಲ, ಅದಕ್ಕೆ ಕಾರಣ ಮಾತ್ರಯಡಿಯೂರಪ್ಪನವರ ಪುತ್ರ ವ್ಯಾಮೋಹವೇ.


    ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿಯೇ ಯಡಿಯೂರಪ್ಪ ಅವರ ಪುತ್ರಬಿ.ವೈ.ವಿಜಯೇಂದ್ರ ಅವರಿಗೆ ಟಿಕೆಟ್ ನಿರಾಕರಿಸುವ ಮೂಲಕ ಹೈಕಮಾಂಡ್ ಮೂಗುದಾರಹಾಕಿತ್ತು. ಅಂದರೆ ಯಡಿಯೂರಪ್ಪ ಅವರ ಪುತ್ರ ವ್ಯಾಮೋಹದ ಕುರಿತು ವರಿಷ್ಠರಿಗೆ ಮೊದಲಿನಿಂದಲೂ ಅರಿವಿದೆ. ಕುಟುಂಬವನ್ನು ದೂರ ಇಡಬೇಕು ಎಂಬ ಷರತ್ತಿನ ಮೇಲೆಯೇ ಅವರಿಗೆ
    ಆಪರೇಷನ್ ಕಮಲ ನಡೆಸಲು ಅನುಮತಿ ನೀಡಿದ್ದು. ಆರಂಭದಲ್ಲಿ ಮಾತಿಗೆ ಬದ್ಧರಾಗಿ ನಡೆದುಕೊಂಡ ಯಡಿಯೂರಪ್ಪ ಕೊನೆ ಕೊನೆಗೆ ಪುತ್ರನಿಗೇ ಮಣೆ ಹಾಕುತ್ತಿದ್ದಾರೆ. ಇದು ಸಹಜವಾಗಿಯೇ ಶಾಸಕರ ಕಣ್ಣು ಕೆಂಪಗಾಗಿಸಿದೆ.


    ಹಾಗೆ ನೋಡಿದರೆ ಯತ್ನಾಳರು ಯಡಿಯೂರಪ್ಪನವರ ಕಟ್ಟಾ ಅಭಿಮಾನಿ. ಅಂತಹವರೇ ಈಗ ಸಿಡಿದುಬೀಳುತ್ತಾರೆ ಎಂದರೆ ಕಾರಣ ಇರಲೇಬೇಕಲ್ಲ. ಕ್ಷೇತ್ರಕ್ಕೆ ಸಂಬಧಿಸಿದ ಕೆಲಸಕ್ಕೆ ಹೋದಾಗ ಯಡಿಯೂರಪ್ಪನವರು, ’ವಿಜಯೇಂದ್ರನನ್ನು ನೋಡು’ ಎಂದಿದ್ದಾರೆ. ವಾಜಪೇಯಿ ಸಂಪುಟದಲ್ಲೇ
    ಸಚಿವರಾಗಿದ್ದ ಯತ್ನಾಳರನ್ನು ಅದು ಕೆರಳಿಸಿದೆ. ಬಹುತೇಕ ಶಾಸಕರಿಗೂ ಇದೇ
    ಅನುಭವವಾಗಿದೆ. ಇನ್ನು ಕೆಲವು ಸಚಿವರು ಶಾಸಕರನ್ನು ವಿಶ್ವಾಸಕ್ಕೆ
    ತೆಗೆದುಕೊಳ್ಳುತ್ತಿಲ್ಲ ಎನ್ನುವ ಆರೋಪಗಳೂ ಇವೆ.

    ಇದೆಲ್ಲದರ ಮಧ್ಯೆ ತಮ್ಮ ಆಪ್ತ, ದೂರದ ಸಂಬಂಧಿ ಎನ್.ಆರ್.ಸಂತೋಷ್ ಅವರನ್ನು ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡಿರುವುದು ಬಹಳಷ್ಟು ಶಾಸಕರಿಗೆ ಆಕ್ರೋಶ ಮೂಡಿಸಿದೆ.ಆಪರೇಷನ್ ಕಮಲದಲ್ಲಿ ಸಂತೋಷ್ ಮುಖ್ಯ ಪಾತ್ರ ವಹಿಸಿದ್ದರು ಎನ್ನುವುದು ನಿಜ.
    ಯಡಿಯೂರಪ್ಪ ಆಪ್ತ ಎಂಬ ಕಾರಣಕ್ಕೆ ಅವರ ಶ್ರಮಕ್ಕೆ ಗೌರವ ಕೊಡದಿರುವುದೂ ಸರಿಯಲ್ಲ.ಆದರೆ ಪಕ್ಷದ ಹಿರಿಯರನ್ನು ಕಡೆಗಣಿಸಿ, ಶಾಸಕರನ್ನು ಪಕ್ಕಕ್ಕಿಟ್ಟು ಇಂತಹ ತೀರ್ಮಾನ ಕೈಗೊಳ್ಳುವುದು ಸರಿಯಲ್ಲ ಎನ್ನುವುದು ಹಲವರ ಭಾವನೆ.ವಿಜಯೇಂದ್ರ ಅವರನ್ನು ವಿಧಾನಪರಿಷತ್ತಿಗೆ ಮಾಡುವ ವಿಚಾರವೂ ಹರಿದಾಡಿದೆ. ಅದೂ ಸಹ
    ಪಕ್ಷದಲ್ಲಿ ಅಸಮಾಧಾನದ ಅಲೆ ಎಬ್ಬಿಸಿದೆ.

    ‘ಹಿರಿಯ ಮಗ ರಾಘವೇಂದ್ರನಿಗೆ ನೆಲೆ ಕಾಣಿಸಿದ್ದಾಗಿದೆ, ಕಿರಿಯ ಮಗನಿಗೂ ವ್ಯವಸ್ಥೆ ಮಾಡಿ’ ಎಂದು ಕುಟುಂಬ ಸದಸ್ಯರು,ವಿಶೇಷವಾಗಿ ಹೆಣ್ಣು ಮಕ್ಕಳು ಒತ್ತಡ ಹೇರುತ್ತಿದ್ದಾರೆ ಎನ್ನುವ ವದಂತಿಯೂ ಇದೆ.ಯಡಿಯೂರಪ್ಪನವರು ಶ್ರಮಜೀವಿ ಎನ್ನುವುದರಲ್ಲಿ ಎರಡು ಮಾತೇ ಇಲ್ಲ.

    ಇಳಿವಯಸ್ಸಿನಲ್ಲಿಯೂ ಅವರ ಕ್ರಿಯಾಶೀಲತೆಯನ್ನು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಪ್ರತಿಪಕ್ಷಗಳ ನಾಯಕರೂ ಮೆಚ್ಚುತ್ತಾರೆ. ಬಹುಶಃ ವಯೋಸಹಜ ಬಳಲಿಕೆಯಿಂದಲೂಯಡಿಯೂರಪ್ಪ ಈಗ ಅಧಿಕಾರ ನಡೆಸಲು ಕುಟುಂಬದ ಸದಸ್ಯರನ್ನು, ವಿಶೇಷವಾಗಿ ವಿಜಯೇಂದ್ರ ಅವರನ್ನು ನೆಚ್ಚಿಕೊಂಡಿಕ್ಕೆ ಸಾಕು. ಆದರೆ ಅದಕ್ಕೂ ಒಂದು ಮಿತಿ ಎನ್ನುವುದು ಇರಬೇಕು.


    ಪ್ರತಿಯೊಂದಕ್ಕೂ, ಪ್ರತಿಯೊಬ್ಬರಿಗೂ ‘ವಿಜಯೇಂದ್ರನನ್ನು ನೋಡು’ ಎಂದರೆ ಏನಾಗುತ್ತದೆ? ಸದ್ಯಕ್ಕೆ ಕೊರೊನಾ ಅವರಿಗೆ ರಕ್ಷಾ ಕವಚವಾಗಿದೆ, ಆದರೆ ಅದೇ ಎಲ್ಲಾ ಸಮಯದಲ್ಲಿಯೂನೆರವಿಗೆ ಬರುವುದಿಲ್ಲವಲ್ಲ?

    OTTಯಲ್ಲೇ ಸಿನಿಮಾ ಬಿಡುಗಡೆ

    ಲಾಕ್ ಡೌನ್ ಹಂತ ಹಂತವಾಗಿ ಸಡಿಲಗೊಳ್ಳುತ್ತಿದ್ದರೂ ಚಿತ್ರಮಂದಿರಗಳು ಇನ್ನೂ ತೆರೆದಿಲ್ಲ. ಮಾಲ್‌ ಗಳು ಮುಂದಿನವಾರದಿಂದ ಆರಂಭವಾಗಬಹುದು. ಆದರೆ ಚಿತ್ರಮಂದಿರಗಳು ತೆರೆಯಲು ಇನ್ನೂ ಕೆಲದಿನಗಳಾದರು ಬೇಕಾಗಬಹುದು. ಟಾಕೀಸ್ ಗಳು ಮೇಲೂ ಪ್ರೇಕ್ಷಕರು ಮೊದಲಿನಂತೆ ಮಂದಿರಗಳತ್ತ ಧಾವಿಸುವುದು ಅನುಮಾನ. ಈ ಸಂದರ್ಭವನ್ನು ಒಟಿಟಿ ಪ್ಲಾಟ್‌ಫಾರ್ಮ್‌ಗಳು ಸದುಪಯೋಗ ಪಡಿಸಿಕೊಂಡು ಸಿನಿಮಾಗಳನ್ನು ನೇರವಾಗಿ ರಿಲೀಸ್‌ ಮಾಡುತ್ತಿವೆ.

    <

    ಕನ್ನಡದ ಎರಡು ಚಿತ್ರಗಳು ಸೇರಿದಂತೆ ಒಟ್ಟು 7 ಸಿನಿಮಾಗಳನ್ನು ರಿಲೀಸ್‌ ಮಾಡುವುದಾಗಿ ಅಮೇಜಾನ್‌ ಪ್ರೈಮ್‌ ವಿಡಿಯೋ ಅನೌನ್ಸ್‌ ಮಾಡಿದೆ. ಕನ್ನಡದಲ್ಲಿ ಪುನೀತ್‌ರಾಜ್‌ಕುಮಾರ್‌ ನಿರ್ಮಾಣದ ‘ಫ್ರೆಂಚ್‌ ಬಿರಿಯಾನಿ’, ‘ಲಾ’ , ತಮಿಳಿನಲ್ಲಿ ಜ್ಯೋತಿಕಾ ನಟನೆ29ಯ ‘ಪೊನ್‌ ಮಗಳ್‌ ವಂದಾಳ್‌’ , ಕೀರ್ತಿ ಸುರೇಶ್‌ ನಟನೆಯ ‘ಪೆಂಗ್ವಿನ್‌’, ಅಮಿತಾಭ್ ಬಚ್ಚನ್‌ ಮತ್ತು ಆಯುಷ್ಮಾನ್‌ ಖುರಾನ ನಟನೆಯ ‘ಗುಲಾಬೋ ಸಿತಾಬೊ’, ವಿದ್ಯಾಬಾಲನ್‌ ಅವರ ‘ಶಕುಂತಲಾ ದೇವಿ’ ಮಲಯಾಳಂನ ‘ಸೂಫಿಯೆಂ ಸಂಜಾತೆಯಂ’ ಸಿನಿಮಾಗಳು ನೇರವಾಗಿ ಅಮೇಜಾನ್‌ನಲ್ಲಿ ಸ್ಟ್ರೀಮಿಂಗ್‌ ಆಗಲಿವೆ.ತಮಿಳಿನಲ್ಲಿ ಜ್ಯೋತಿಕಾ ನಟನೆಯ ‘ಪೊನ್‌ ಮಗಳ್‌ ವಂದಾಳ್‌’ ಈಗಾಗಲೇ ಬಿಡುಗಡೆಯಾಗಿದೆ.

    ವಿರೋಧ

    ಚಿತ್ರಮಂದಿರಗಳನ್ನು ಬಿಟ್ಟು ನೇರವಾಗಿ ಓಟಿಟಿಯಲ್ಲಿ ಚಿತ್ರವನ್ನು ರಿಲೀಸ್‌ ಮಾಡುತ್ತಿರುವುದಕ್ಕೆ ಮೊದಲು ಆಕ್ಷೇಪ ವ್ಯಕ್ತಪಡಿಸಿದ್ದು, ತಮಿಳು ನಾಡಿನ ಪ್ರದರ್ಶಕರು. ‘ಪೋನ್‌ ಮಗಳ್‌ ವಂದಾಳ್‌’ ಚಿತ್ರ ಸೂರ್ಯ ನಿರ್ಮಾಣ ಮಾಡಿದ್ದು, ಮುಂದಿನ ದಿನಗಳಲ್ಲಿ ಅವರ ಸಿನಿಮಾಗಳನ್ನು ನಾವು ಚಿತ್ರಮಂದಿರದಲ್ಲಿ ಪ್ರದರ್ಶನ ಮಾಡುವುದಿಲ್ಲ ಎಂಬ ಮಾತುಗಳನ್ನು ಸಹ ಆಡಿದರು ಆದರೂ ಸೂರ್ಯ ಮತ್ತು ಜ್ಯೋತಿಕಾ ಧೈರ್ಯ ಮಾಡಿ ಅಮೇಜಾನ್‌ನಲ್ಲಿ ಸಿನಿಮಾ ರಿಲೀಸ್ ಮಾಡಿದ್ದಾರೆ. ಇನ್ನು ಕನ್ನಡದಲ್ಲಿಯೂ ಕೆಲವರು ಪುನೀತ್ ರಾಜ್‌ಕುಮಾರ್‌ ಅವರ ಬ್ಯಾನರ್‌ನಿಂದ ಈ ರೀತಿಯ ಬೆಳವಣಿಗೆ  ಆಗಬಾರದಿತ್ತು ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

    ಕರ್ನಾಟಕದ ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷರಾದ ಕೆ ವಿ ಚಂದ್ರಶೇಖರ್‌. ಸದ್ಯ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಇಂತಹ ಪ್ರಯತ್ನ ಓಕೆ, ಆದರೆ ಎಲ್ಲವೂ ಸರಿಯಾದ ಮೇಲೂ ಓಟಿಟಿಯಲ್ಲಿ ರಿಲೀಸ್‌ ಮಾಡಿದರೆ ಸಮಸ್ಯೆಯಾಗುತ್ತದೆ ಎಂದಿದ್ದಾರೆ.

    ಇನ್ನು ಐನಾಕ್ಸ್‌ ಕೂಡಾ ಸಿನಿಮಾಗಳನ್ನು ಒಟಿಟಿಗೆ ಕೊಟ್ಟಿದ್ದಕ್ಕೆ ಬೇಸರ ವ್ಯಕ್ತಪಡಿಸಿತ್ತು. ಇಷ್ಟೆಲ್ಲಾ ವಿಷಯಗಳ ನಡುವೆ ಮೇ 29ರಂದು ತಮಿಳಿನ ‘ಪೊಣ್‌ ಮಗಳ್‌ ವಂದಾಳ್‌’ ಅಮೇಜಾನ್‌ನಲ್ಲಿ ಬಿಡುಗಡೆಯಾಗಿ ಕೊಂಚ ಹೆಸರು ಸಹ ಮಾಡಿದೆ. 

    ಮತ್ತೊಂದು ಡೆಡ್ಲಿ ವೈರಸ್ :ವಿಜ್ಞಾನಿಗಳ ಎಚ್ಚರಿಕೆ

    ಕೋವಿಡ್-19 ಈಗಾಗಲೇ ಸಾಕಷ್ಟು ಹಾವಳಿ ಎಬ್ಬಿಸಿದೆ. ಆದರೆ ಇನ್ನಷ್ಟು ದುರ್ದಿನಗಳು ಕಾಯುತ್ತಿವೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಕೋಳಿ ಸಾಕಾಣಿಕೆಯಲ್ಲಿ ಎಚ್ಚರಿಕೆ ವಹಿಸದೆ ಈಗಿರುವಂತೆ ಇಕ್ಕಟ್ಟಾದ ಜಾಗದಲ್ಲಿ ಅವುಗಳನ್ನು ಸಾಕಿದರೆ ಮತ್ತೊಂದು ಡೆಡ್ಲಿ ವೈರಸ್ ಕಾಡುವ ಸಮಯ ಬರಲಿದೆ. ಮುಖ್ಯವಾಗಿ ಕೋಳಿಗಳು ಹೊರ ಸೂಸುವ ಭಾರೀ ಪ್ರಮಾಣದ ಅಮೋನಿಯಾ ಇದಕ್ಕೆ ಕಾರಣ ಎನ್ನಲಾಗಿದೆ.

    ಡಾ. ಮೈಕೆಲ್ ಗ್ರೆಗರ್

    How Not To Die  ಎಂಬ ಜನಪ್ರಿಯ  ಪುಸ್ತಕದ ಲೇಖಕ  ಡಾ. ಮೈಕೆಲ್ ಗ್ರೆಗರ್ ಎಂಬ ವಿಜ್ಞಾನಿ ತಮ್ಮ ಹೊಸ ಪುಸ್ತಕ How To Survive A Pandemic  ಎಂಬ ಪುಸ್ತಕದಲ್ಲಿ ಈ ಸಂಗತಿಯನ್ನು ಬೆಳಕಿಗೆ ತಂದಿದ್ದಾರೆ.ಅವರ ಪ್ರಕಾರ ಈ ವಿನಾಶಕಾರಿ ವೈರಸ್ (ಅಪೋಕ್ಯಾಲಿಪ್ಟಿಕ್), ಕೋವಿಡ್ -19ನಿಂದಲೂ ಅನಾಹುತಕಾರಿಯಾಗಿದ್ದು, ವಿಶ್ವದ ಒಟ್ಟು ಜನಸಂಖ್ಯೆಯ ಅರ್ಧದಷ್ಟು ಜನರನ್ನು ಸಾವಿನ ದವಡೆಗೆ ನೂಕು ಸಾಮರ್ಥ್ಯ ಹೊಂದಿದೆ.

    ಸಸ್ಯಜನ್ಯ ಆಹಾರದ ಅತಿ ದೊಡ್ಡ ಪ್ರತಿಪಾದಕರಾಗಿರುವ ಗ್ರೆಗರ್, ಕೋಳಿ ಸಾಕಾಣಿಕೆಯನ್ನು ಅವಲಂಬಿಸಿ ಅದನ್ನು ತಿನ್ನುವವರೆಗೆ ಸಾಂಕ್ರಾಮಿಕ ರೋಗಗಳು ಮುಂದುವರಿಯಲಿವೆ ಎಂದು ಪ್ರತಿಪಾದಿಸಿದ್ದಾರೆ. ಆಹಾರ ಸೇರಿದಂತೆ ಪ್ರಾಣಿಗಳ ಜತೆ ನಿಕಟ ಸಂಪರ್ಕವನ್ನು ಮಾನವರು ಹೊಂದಿರುವರೆಗೆ ಸಾಂಕ್ರಾಮಿಕ ರೋಗಗಳ ಭೀತಿ ತಪ್ಪಿದ್ದಲ್ಲ. ನೋವೆಲ್ ಕೊರೊನಾ ವೈರಸ್ ಕೂಡ ಇಂತಹುದೇ ಸಮಸ್ಯೆಗೆ ಮೂಲ ಎಂದು ಹೇಳಿದ್ದಾರೆ. ಸದ್ಯದ ಮಟ್ಟಿಗೆ ಇದು ಬಾವಲಿಗಳಿಂದಲೇ ಹರಡಿದೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಸ್ಪಷ್ಟನೆ ಇನ್ನಷ್ಟೇ ಸಿಗಬೇಕಾಗಿದೆ ಎಂದಿದ್ದಾರೆ.

    ಹಕ್ಕಿಜ್ವರವು 1997ರಲ್ಲಿ ಹಾಂಗ್ ಕಾಂಗ್ ನಲ್ಲಿ ಕಾಣಿಕೊಂಡು ಲಕ್ಷಾಂತರ ಕೋಳಿಗಳನ್ನು ಕೊಲ್ಲಬೇಕಾಯಿತು. ಆದರೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಅದು 2003 ಮತ್ತು 2009ರಲ್ಲಿ ಮತ್ತೆ ಚೀನಾದ ಹೊರಗಡೆ ರುದ್ರ ತಾಂಡವ ಆರಂಭಿಸಿತ್ತು ಎಂದು ನೆನಪಿಸಿರುವ ಅವರು, ಹೀಗಾಗಿ ಈ ವೈರಸ್ ಸಮಸ್ಯೆ ಸಂಪೂರ್ಣವಾಗಿ ಮೂಲೋತ್ಪಾಟನೆ ಆಗಿಲ್ಲ ಎಂಬುದು ಇದರಿಂದ ತಿಳಿಯುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

    ಹೀಗಾಗಿ ಇಂತಹ ಅನಾಹುತವನ್ನು ಭವಿಷ್ಯದಲ್ಲಿ ತಪ್ಪಿಸುವ ನಿಟ್ಟಿನಲ್ಲಿ ಕೋಳಿ ಸಾಕಾಣಿಕೆ ವಿಧಾನವನ್ನು ಪರಿಷ್ಕರಿಸಬೇಕು. ಬಹುತೇಕ ಕೋಳಿ ಸಾಕಾಣಿಕೆ ಕೇಂದ್ರಗಳಲ್ಲಿ ಇಕ್ಕಟ್ಟಾದ ಜಾಗದಲ್ಲಿ ಸಾವಿರಾರು ಕೋಳಿಯನ್ನು ಸಾಕಲಾಗುತ್ತದೆ. ಅವುಗಳಿಗೆ ರೆಕ್ಕೆ ಜಾಡಿಸಲೂ ಜಾಗ ಇಲ್ಲದಂತಹ ಪರಿಸ್ಥಿತಿ ಇದೆ. ಇದರಿಂದ ಅವುಗಳ ದೇಹದಿಂದ ಅಪಾರ ಪ್ರಮಾಣದಲ್ಲಿ ಅಮೋನಿಯಾ ಹೊರಸೂಸಲ್ಪಡುತ್ತದೆ. ಇದನ್ನು ತಪ್ಪಿಸುವಂತಹ ವ್ಯವಸ್ಥೆಯಾದರೆ ಮಾತ್ರ ಭವಿಷ್ಯದಲ್ಲಿ ಮತ್ತೊಂದು ಮಾರಣಾಂತಿಕ ಸಾಂಕ್ರಾಮಿಕ ರೋಗ ಹರಡುವುದನ್ನು ತಪ್ಪಿಸಬಹುದು ಎಂದು ಗ್ರೆಗರ್ ಹೇಳಿದ್ದಾರೆ.

    ಭಾರಿ ಕುಸಿತದ ಬೆಲೆಗಳಿಂದ ಚೇತರಿಕೆ ಕಂಡ ಷೇರು ಪೇಟೆ

     ಆರ್ಥಿಕ ನಿರ್ವಹಣೆ ಈ ಲಾಕ್ಡೌನ್ ಅವಧಿಯಲ್ಲಿ ಒಂದು ಸವಾಲಾಗಿದ್ದು,  ಇದನ್ನು ಕೇವಲ ಜನಸಾಮಾನ್ಯರಲ್ಲದೆ, ಸರ್ಕಾರಗಳು, ಕಾರ್ಪೊರೇಟ್ ಗಳು ಮುಂತಾದವರೆಲ್ಲ ಎದುರಿಸಬೇಕಾಯಿತು. ಇಲ್ಲಿ ಸ್ವಲ್ಪಮಟ್ಟಿನ ನಿರಾಳತೆ ಕಂಡವರು ಮಿತವ್ಯಯಿಗಳು.  ಉಳಿತಾಯವೇ ಆಪದ್ಧನ,  ಇಂದು ಉಳಿಸಿದ ಮೊಬಲಗು ನಾಳಿನ ಜೀವನಕೆ ಮೆರಗು,  ಮುಂತಾದವುಗಳನ್ನು ಅಳವಡಿಸಿಕೊಂಡಿದ್ದವರು ಹೆಚ್ಚಿನ ತೊಂದರೆಗಳಿಂದ ಮುಕ್ತರಾಗಿದ್ದರು.   ಆದರೆ ಈ ವಿಧದವರು ತೀರಾ ವಿರಳ.  ಇದಕ್ಕೆ ಕಾರಣ ಕೇವಲ ವೆಚ್ಚಬಾಕುತನವನ್ನೇ ಜೀವನದ ಭಾಗವೆಂಬಂತೆ ಅಳವಡಿಸಿಕೊಂಡವರ ಸಂಖ್ಯೆಯೇ ಹೆಚ್ಚಾಗಿವೆ.  ಈ ಲಾಕ್ಡೌನ್ ಆರ್ಥಿಕ ಸಾಕ್ಷರತೆಯ ಬಗ್ಗೆ ಅರಿವಿರಲೇಬೇಕೆಂಬ ಅವಶ್ಯಕತೆಯನ್ನು ತಿಳಿಸಿದೆ.

    ಷೇರುಪೇಟೆ ಚಟುವಟಿಕೆಯು ಆರ್ಥಿಕ ಚಟುವಟಿಕೆಗಳಲ್ಲಿ ಮುಖ್ಯವಾದುದಾಗಿದೆ.  ಇದು ಎಷ್ಟರಮಟ್ಟಿಗೆ ಪ್ರಾಮುಖ್ಯತೆ ಪಡೆದಿದೆ ಎಂದರೆ ಲಾಕ್ಡೌನ್ ಸಮಯದಲ್ಲಿ ಇದನ್ನು ಅವಶ್ಯ ಸೇವೆಯಾಗಿ ಪರಿಗಣಿಸಲಾಯಿತು.  ಇದರ ಹಿಂದೆ ಅಡಕವಾಗಿರುವ ಅಂಶವೆಂದರೆ, ಈ ಚಟುವಟಿಕೆಯು ದೇಶದ ಬೊಕ್ಕಸಕ್ಕೆ ಮಹತ್ತರವಾದ ಕೊಡುಗೆ ನೀಡುತ್ತದೆ ಎಂಬುದು.

    ಮಾರ್ಚ್ 2020 ರಲ್ಲಿ ಒಟ್ಟು ಸಂಗ್ರಹವಾದ ಜಿ ಎಸ್ ಟಿ ಯ ಪ್ರಮಾಣ ರೂ.1.1 ಲಕ್ಷ ಕೋಟಿಯಷ್ಟಾಗಿತ್ತು.  ಆದರೆ ಈ ಲಾಕ್ಡೌನ್ ಕಾರಣ  ಏಪ್ರಿಲ್ ತಿಂಗಳಲ್ಲಿ ಭಾರಿ ಕುಸಿತ ಕಂಡಿದೆ.   ಲಾಕ್ಡೌನ್ ಕಾರಣ ಹೆಚ್ಚಿನ ವ್ಯಾವಹಾರಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದರೂ ಸಂಗ್ರಹವಾದ ಜಿ ಎಸ್ ಟಿ ಯಲ್ಲಿ ಷೇರುಪೇಟೆಯ ಕೊಡುಗೆ ಅಪಾರ.


    ಷೇರುಪೇಟೆಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವವರಿಗೆ ಪೇಟೆಯ ಆಗುಹೋಗುಗಳ ಬಗ್ಗೆ ನಿರಂತರವಾದ ಮಾಹಿತಿಯ ಅಗತ್ಯವಾಗಿದೆ.   ಷೇರುಪೇಟೆಯು ಹಿಂದಿದ್ದ invest  and  forget  it  ಎಂಬುವುದರಿಂದ invest  and watch it ಗೆ ಪರಿವರ್ತಿತವಾಗಿದೆ.  ಈ ಪರಿವರ್ತನೆಯು ಲಾಕ್ಡೌನ್ ಕಾರಣ ಹೆಚ್ಚು ಜಾರಿಯಾಗಿದೆ.  ಕೊರೊನ ಕಾರಣ ಮಾರ್ಚ್ ೨೩ ರಂದು ಕಂಡ ಭಾರಿ ಕುಸಿತಕ್ಕೆ ಷೇರು ವಿನಿಮಯ ಕೇಂದ್ರಗಳು ಚಟುವಟಿಕೆಯನ್ನು ಸ್ಥಗಿತಗೊಳಿಸಲಾಯಿತು.  ಅಂದು ಹೆಚ್ಚಿನ ಕಂಪನಿ ಷೇರುಗಳು ವಾರ್ಷಿಕ ಕನಿಷ್ಟಕ್ಕೆ ಕುಸಿತಕ್ಕೊಳಗಾಗಿದ್ದವು.    ಆದರೆ ಕೇವಲ ಕೆಲವೇ ದಿನಗಳಲ್ಲಿ ಭಾರಿ ಕುಸಿತದ ಬೆಲೆಗಳಿಂದ ಚೇತರಿಕೆ ಕಂಡು  ಬೆಲೆಗಳು ಪುಟಿದೆದ್ದು ವಿಜೃಂಭಿಸಿವೆ.ಈ ಚೇತರಿಕೆ ಯಾವ ಪ್ರಮಾಣದಲ್ಲಿದೆ ಎಂಬುದಕ್ಕೆ ಈ ಕೆಳಗಿನ ಕೆಲವು ನಿದರ್ಶನಗಳು ಉತ್ತರಿಸುತ್ತವೆ.

    ಕಮ್ಮಿನ್ಸ್ ಇಂಡಿಯಾ:

    ಮಾರ್ಚ್ ಆರಂಭದಲ್ಲಿ ಈ ಷೇರಿನ ಬೆಲೆಯು ರೂ.500 ರ ಸಮೀಪವಿದ್ದು ಏಪ್ರಿಲ್ ಮೊದಲ ವಾರದಲ್ಲಿ ರೂ.281 ರ ವಾರ್ಷಿಕ ಕನಿಷ್ಠಕ್ಕೆ ಕುಸಿದು ಮೇ ಅಂತ್ಯದಲ್ಲಿ ರೂ.382 ರವರೆಗೂ ಚೇತರಿಕೆ ಕಂಡಿದೆ.  ಈ ಮಧ್ಯೆ ಅನೇಕ ಭಾರಿ ಸಣ್ಣದಾದರೂ ಗಮನಾರ್ಹ ಏರಿಕೆ ಮತ್ತು ಇಳಿಕೆಗಳಿಂದ ಕೂಡಿದ್ದು ಅಲ್ಪಕಾಲೀನ ಲಾಭಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ.


    ರಿಲಯನ್ಸ್ ಇಂಡಸ್ಟ್ರೀಸ್:ಈ ಕಂಪನಿಯ ಷೇರಿನ ಬೆಲೆ ಮಾರ್ಚ್ ಆರಂಭದಲ್ಲಿ ರೂ.1360 ರ ಸಮೀಪದಲ್ಲಿದ್ದು ಮಾರ್ಚ್ 23 ರಂದು ಷೇರಿನ ಬೆಲೆ ರೂ.875 ಕ್ಕೆ ಕುಸಿಯಿತು.  ಅಲ್ಲಿಂದ ಸತತವಾದ ಏರಿಕೆಯತ್ತ ಸಾಗಿ ಮೇ 11 ರಂದು ರೂ.1,600ನ್ನು ದಾಟಿ ವಿಜೃಂಭಿಸಿತು.  ಈ ವಿಜೃಂಭಣೆಯ ಹಿಂದೆ ಕಂಪನಿಯ ಆಂತರಿಕ ಸಾಧನೆಗಿಂತ ಬಾಹ್ಯ ಬೆಳವಣಿಗೆಗಳು ಕಾರಣವಾದವು.  ಈ ಭಾರಿ ಏರಿಕೆಯ ಹಿಂದೆ ಕಂಪನಿಯ ಅಂಗ ಸಂಸ್ಥೆಯೊಂದಿಗೆ ಅನೇಕ ವಿದೇಶಿ ಕಂಪನಿಗಳ ಹೂಡಿಕೆಯ ಆಸಕ್ತಿ ಮತ್ತು ಕಂಪನಿ ಪ್ರಕಟಿಸಿದ ಹಕ್ಕಿನ ಷೇರು ವಿತರಣೆ ಯೋಜನೆಯಾಗಿದೆ.   ಆದರೆ ಈ ರೀತಿಯ ಭಾರಿ ಏರಿಕೆಗೆ ಕಂಪನಿಯ ಮಾರ್ಚ್ ತಿಂಗಳ ಸಾಧನೆ ಪೂರಕವಾಗಿಲ್ಲವೆಂಬುದು ಗಮನಾರ್ಹ.
    ನೋಸಿಲ್ :

    ಬಿ ಎಸ್ ಇ 500 ಶ್ರೇಣಿಯ ಸ್ಪೆಷಾಲಿಟಿ ಕೆಮಿಕಲ್ಸ್  ಕಂಪನಿ ಷೇರಿನ ಬೆಲೆ ರೂ.44 ರ ಸಮೀಪಕ್ಕೆ ಮಾರ್ಚ್ 24ರಂದು ಕುಸಿದು ನಂತರ ರೂ.91  ರವರೆಗೂ ಏರಿಕೆಯನ್ನು ಏಪ್ರಿಲ್ ಅಂತ್ಯದಲ್ಲಿ ತಲುಪಿ ಸುಮಾರು ಒಂದೇ ತಿಂಗಳ ಸಮಯದಲ್ಲಿ ದ್ವಿಗುಣಗೊಂಡಿದೆ.

    ಬ್ರಿಟಾನ್ನಿಯಾ ಇಂಡಸ್ಟ್ರೀಸ್ :ಈ ಕಂಪನಿಯ ಷೇರಿನ ಬೆಲೆ  ಮಾರ್ಚ್ ಆರಂಭದಲ್ಲಿ ರೂ.3,15೦ ರ ಸಮೀಪವಿದ್ದು ಮಾರ್ಚ್ 23 ರಂದು ರೂ.2,100 ರ ಸಮೀಪಕ್ಕೆ ಕುಸಿಯಿತು.  ಆದರೆ ಈ ಷೇರಿನ ಬೆಲೆ ಮೇ ಅಂತ್ಯದಲ್ಲಿ ರೂ.3,400 ಕ್ಕೆ  ಪುಟಿದೆದ್ದ ರೀತಿ, ಹೂಡಿಕೆದಾರರು ಈ ಕಂಪನಿಯ ಬಗ್ಗೆ ಹೊಂದಿರುವ ನಂಬಿಕೆಯೇ ಕಾರಣ.   ಈ ಕಂಪನಿಯು ಜೂನ್  2 ರಂದು ಮಾರ್ಚ್ 2020ರ ವರ್ಷಾಂತ್ಯದ   ತನ್ನ ಸಾಧನೆ, ಫಲಿತಾಂಶ ಪ್ರಕಟಿಸಲಿದೆ.

    ಯು ಪಿ ಎಲ್ :ಮಾರ್ಚ್ ಎರಡನೇ ವಾರದಲ್ಲಿ ರೂ.520 ರ ಸಮೀಪವಿದ್ದ ಈ ಕಂಪನಿ ಷೇರು ಮಾರ್ಚ್ 23 ರಂದು ರೂ.240 ರ ಸಮೀಪಕ್ಕೆ ಕುಸಿಯಿತು.   ಅಲ್ಲಿಂದ ಏಪ್ರಿಲ್ ಅಂತ್ಯದಲ್ಲಿ ರೂ.420 ನ್ನು ತಲುಪಿ ನಂತರ ಕೆಲವು ಕೀಟ ನಾಶಕಗಳ ಮೇಲೆ ನಿರ್ಬಂಧ ವಿಧಿಸಲಾಗುವುದು ಎಂಬ ಸುದ್ಧಿಯಿಂದ ರೂ.338 ರ ಸಮೀಪಕ್ಕೆ ಜಾರಿತು.  ನಂತರ ಕಂಪನಿ ಪ್ರಕಟಿಸಿದ  ಮಾರ್ಚ್ 2020ರ ವಾರ್ಷಿಕ ಸಾಧನೆಯ ಉತ್ತಮ ಅಂಕಿ ಅಂಶಗಳ ಕಾರಣ ಮತ್ತೆ ರೂ.419 ಕ್ಕೆ ಪುಟಿದೆದ್ದಿದೆ.

    ಎ ಸಿ ಸಿ :ಕೊರೊನ ಒತ್ತಡದಿಂದ ಮಾರ್ಚ್ 25ರಂದು ರೂ.895 ಕ್ಕೆ ಕುಸಿದಿದ್ದ ಈ ಕಂಪನಿ ಷೇರು ಮೇ ತಿಂಗಳ ಅಂತ್ಯದಲ್ಲಿ ಮತ್ತೊಮ್ಮೆ ರೂ.1,297 ಕ್ಕೆ ಪುಟಿದೆದ್ದಿದೆ.  ಈ ಮಧ್ಯೆ ಪ್ರತಿ ಷೇರಿಗೆ ರೂ.14 ರ ಲಾಭಾಂಶ ವಿತರಿಸಿದ  ಕಾರಣ ಚಟುವಟಿಕೆ ಭರಿತವಾಯಿತು.


    ಇದೆ ರೀತಿ ಪ್ರಮುಖ ಕಂಪನಿಗಳಾದ ಬಜಾಜ್ ಫೈನಾನ್ಸ್ , ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಹೆಚ್ ಡಿ ಎಫ್ ಸಿ ಏಷಿಯನ್ ಪೇಂಟ್ಸ್, ಭಾರತ್ ಫೋರ್ಜ್, ಟಾಟಾ ಸ್ಟಿಲ್, ಎಲ್ ಐ ಸಿ ಹೌಸಿಂಗ್ ಫೈನಾನ್ಸ್, ಲಾರ್ಸನ್ ಅಂಡ್ ಟೋಬ್ರೋ , ಬಯೋಕಾನ್, ಅರವಿಂದೋ ಫಾರ್ಮ, ಅಲೆಂಬಿಕ್ ಫಾರ್ಮ, ಇನ್ಫೋಸಿಸ್, ಮೈಂಡ್ ಟ್ರೀ, ಟೈಟಾನ್, ಕಾಲ್ಗೇಟ್,  ಅಲ್ಟ್ರಾಟೆಕ್,  ಇಂಡಸ್ ಇಂಡ್ ಬ್ಯಾಂಕ್,  ಐಟಿಸಿ ಯಂತಹ ಬೃಹತ್ ಕಂಪನಿಗಳು ವೈವಿಧ್ಯಮಯ ಕಾರಣಗಳಿಂದಾಗಿ ಹೆಚ್ಚಿನ ಏರಿಳಿತಗಳನ್ನು ಪ್ರದರ್ಶಿಸಿ ಅಲ್ಪ ಕಾಲಿನದಲ್ಲೇ ಬೃಹತ್ ಪ್ರಮಾಣದ ಲಾಭ ಗಳಿಕೆಗೆ ಕಾರಣವಾದವು.


    ಈ ಎಲ್ಲ  ಬೆಳವಣಿಗೆಗಳಿಗೆ ಪ್ರಮುಖವಾಗಿ ಕಾರಣವಾಗಿದ್ದು, ಹಣದ ಆವಶ್ಯಕತೆ ಇದ್ದಾಗ, ಬೇಕಾದಾಗ ತಕ್ಷಣ ಮಾರಾಟಮಾಡಿ ಹೊರಬರಬಹುದಾದ ಏಕೈಕ ಸ್ವತ್ತು, ಷೇರುಪೇಟೆ ಹೂಡಿಕೆ ಎಂಬುದಾಗಿದೆ.  ಇಂತಹ ಸದೃಢ ಕಂಪೆನಿಗಳಲ್ಲಿ, ಒದಗಬಹುದಾದ ಅಪಾಯದ ಅರಿವಿನಿಂದ, ತುಲನಾತ್ಮಕವಾಗಿ ಹೂಡಿಕೆ ಮಾಡಿದಲ್ಲಿ ಲಾಭಗಳಿಕೆ ಸಾಧ್ಯ.  ಆದರೆ  ಪೇಟೆಯಲ್ಲಾಗುವ ಏರು-ಪೇರುಗಳ ಬಗ್ಗೆ ನಿರಂತರವಾಗಿ ಗಮನವಿರುವುದು ಅವಶ್ಯಕವಾಗಿದೆ.  ಹೆಚ್ಚಿನ ಕಾರ್ಪೊರೇಟ್ ಬ್ರೋಕಿಂಗ್ ಹೌಸ್ ಗಳು ತಮ್ಮ ಕಕ್ಷಿದಾರರಿಗೆ ಈ ಸೌಲಭ್ಯವನ್ನು ಒದಗಿಸಲು ವಿಫಲರಾದ ಕಾರಣ ಶಾಖೆಗಳನ್ನು ಮುಚ್ಚುವ ಪರಿಸ್ಥಿತಿಗೆ ತಲುಪಿರುವುದು ದುರಂತವೇ ಸರಿ.  ಷೇರುಪೇಟೆಯ ಯಶಸ್ಸಿಗೆ ಪ್ರಮುಖವಾದ ಸಮೀಕರಣವೆಂದರೆ ‘ವ್ಯಾಲ್ಯೂ ಪಿಕ್- ಪ್ರಾಫಿಟ್ ಬುಕ್’  ಆಗಿದೆ.  ಜೊತೆಗೆ ಸಂದರ್ಭವನ್ನು ತುಲನಾತ್ಮಕವಾಗಿ ಬಳಸಿಕೊಳ್ಳುವ ಗುಣವು ಅಗತ್ಯವಾಗಿದೆ.

    ಹೂಡಿಕೆದಾರರಿಗೆ ಕಿವಿಮಾತು:

    ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಷೇರುಗಳು ಹೂವಿನಂತೆ ಅಲ್ಪಾಯುಷಿ,
    ಲಾರ್ಜ್ ಕ್ಯಾಪ್ ಷೇರುಗಳು Dry Fruits ನಂತೆ ಧೀರ್ಘಾಯುಷ್ಯ ಹೊಂದಿರುತ್ತವೆ.

    ನಿಮ್ಮ ಸ್ಮಾರ್ಟ್ ಫೋನ್ ಕಮ್ಯುನಿಕೇಶನ್‌ಗೆ ಕಾದಿದೆಯಾ ಕುತ್ತು ?

    ನಮಗೆ ಅರಿವಿಲ್ಲದಂತೆ ಭೂಮಿಯ ವಾತಾವರಣದಲ್ಲಿ ಸಾಕಷ್ಟು ಬದಲಾವಣೆಗಳು ಅಥವಾ ಸ್ಥಿತ್ಯಂತರಗಳು ಆಗುತ್ತಲೇ ಇವೆ. ಇವುಗಳ ಪೈಕಿ ಇತ್ತೀಚಿನ ದಿನಗಳಲ್ಲಿ ಆಯಸ್ಕಾಂತೀಯ ಕ್ಷೇತ್ರದಲ್ಲಿ (ಮೆಗ್ನೆಟಿಕ್ ಕ್ಷೇತ್ರ) ಆಗಿರುವ ಬದಲಾವಣೆ ಹೆಚ್ಚು ಆತಂಕ ಮೂಡಿಸಲು ಆರಂಭಿಸಿದೆ.

    ಮ್ಯಾಗ್ನೆಟಿಕ್ ಫೀಲ್ಡ್ ಅಥವಾ ಅಯಸ್ಕಾಂತೀಯ ಕ್ಷೇತ್ರದ ಕವಚವು ಭೂಮಿಯನ್ನು ಸೂರ್ಯನಿಂದ ಹೊರ ಬರುವ ನಾನಾ ರೀತಿಯ ಅಪಾಯಕಾರಿಯಾದ ವಿಕಿರಣಗಳಿಂದ ಕಾಪಾಡುತ್ತವೆ. ಪ್ರಾಣಿ-ಪಕ್ಷಿಗಳಿಂದ ಇವು ರಕ್ಷಣೆ ನೀಡುತ್ತಿದ್ದು, ಇತ್ತೀಚಿನ ಅಧ್ಯಯನ ವರದಿಗಳ ಪ್ರಕಾರ ನಮ್ಮ ಜೀವನಾಡಿಯೇ ಆಗಿರುವ ಸ್ಮಾರ್ಟ್‌ಫೋನ್ ಗಳ ಮೇಲೂ ಇದು ವ್ಯತಿರಿಕ್ತ ಪ್ರಭಾವ ಬೀರುವ ಅಂಶ ಈಗ ಬೆಳಕಿಗೆ ಬಂದಿದೆ.

    ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾ ಖಂಡಗಳ ನಡುವೆ ಭೂಮಿಯ ಆಯಸ್ಕಾಂತೀಯ ಕ್ಷೇತ್ರವು ದುರ್ಬಲಗೊಳ್ಳುತ್ತಿದ್ದು, ಇದು ಕೃತಕ ಉಪಗ್ರಹ ಮತ್ತು ಬಾಹ್ಯಾಕಾಶ ನೌಕೆಗಳ ಮೇಲೆ ನೇರ ಪರಿಣಾಮ ಬೀರುವ ಎಲ್ಲಾ ಸಾಧ್ಯತೆಗಳಿವೆ ಎಂದು ಯುರೋಪಿಯನ್ ಸ್ಪೇಸ್ ಎಜೆನ್ಸಿ (ಇಎಸ್ಎ) ಸ್ವಾರ್ಮ್ ಹೇಳಿದೆ.

    ನೇರ ಪರಿಣಾಮ

    ಸದ್ಯ ಇಂಟರ್ನೆಟ್ ಮತ್ತು ಫೋನ್ ಗಳು ಕೃತಕ ಉಪಗ್ರಹಗಳ ಸಹಾಯದಿಂದಲೇ ಕಾರ್ಯ ನಿರ್ವಹಿಸುತ್ತಿದ್ದು, ಇಲ್ಲಿ ಆಗುವ ಚಿಕ್ಕ ಏರು-ಪೇರು ಕೂಡ ಒಟ್ಟಾರೆ ಸಂವಹನ (ಕಮ್ಯೂನಿಕೇಷನ್) ಪ್ರಕ್ರಿಯೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಹೀಗಾಗಿ ಕಂಪ್ಯೂಟರ್, ಮೊಬೈಲ್ ಫೋನ್ ಸೇರಿದಂತೆ ಕೃತಕ ಉಪಗ್ರಹಗಳ ನೆರವಿನಿಂದಲೇ ಕೆಲಸ ಮಾಡುವ ಎಲ್ಲಾ ಇಲೆಕ್ಟ್ರಾನಿಕ್ ಉಪಕರಣಗಳ ಕಾರ್ಯನಿರ್ವಹಣೆ ಕಷ್ಟವಾಗುವ ಎಲ್ಲಾ ಸಾಧ್ಯತೆಗಳನ್ನು ಅವರು ಲೆಕ್ಕಾಚಾರ ಹಾಕಿದ್ದಾರೆ.

    ಆಯಸ್ಕಾಂತೀಯ ವಲಯ

    ಭೂಮಿಯ ಮೇಲ್ಮೈಯಿಂದ ಸುಮಾರು 3,000 ಕಿ.ಮೀ. ಎತ್ತರದಲ್ಲಿ ಈ ಅಯಸ್ಕಾಂತೀಯ ವಲಯವಿದೆ. ಇದು ಸೂರ್ಯ ಹೊರಸೂಸುವ ಅಪಾಯಕಾರಿ ವಿಕಿರಣಗಳಿಂದ ಭೂಮಿಯನ್ನು ರಕ್ಷಿಸುತ್ತದೆ. ಈ ಕುರಿತು ನಿರಂತರವಾಗಿ ಪಾಶ್ಚಿಮಾತ್ಯ ದೇಶಗಳ ನಾನಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಅಧ್ಯಯನ ಮಾಡುತ್ತಿವೆ.  ಇದರಲ್ಲಿ ಕಂಡುಕೊಂಡ ಅಂಶವೆಂದರೆ ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾ ಖಂಡದ ನಡುವಿನ ಭಾಗದಲ್ಲಿ ಈ ಆಯಸ್ಕಾಂತೀಯ ವಲಯ ನಿಧಾನವಾಗಿ ದುರ್ಬಲಗೊಳ್ಳುತ್ತಿದ್ದು, ಭವಿಷ್ಯದಲ್ಲಿ ಈಗಾಗಲೇ ಬಾಹ್ಯಾಕಾಶಕ್ಕೆ ಕಳುಹಿಸಿರುವ ಕೃತಕ ಉಪಗ್ರಹಗಳ ಚಲನೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಮಸ್ಯೆಗಳು ಎದುರಾಗಬಹುದು. ಇದು ಪರೋಕ್ಷವಾಗಿ ಈಗ ನಾವು ಸಂಪೂರ್ಣವಾಗ ಅವಲಂಬಿತರಾಗಿರುವ ಇಂಟರ್ ನೆಟ್, ಮೊಬೈಲ್ ಫೋನ್ ಕಾರ್ಯವೈಖರಿಯನ್ನು ಅಸಮತೋಲನಗೊಳಿಸಲು (ಡಿಸ್ಟರ್ಬ್) ಮಾಡಬಹುದು. ಈ ರೀತಿಯ ಬೆಳವಣಿಗೆ ಇದಕ್ಕೆ ಮೊದಲು 2,50,000 ವರ್ಷಗಳ ಮೊದಲು ಕಂಡು ಬಂದಿತ್ತು ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.

    error: Content is protected !!