ನೀಂ ಕ್ರಮ ವಿಪರ್ಯಮಂ ಮಾಡುವುದೆ– ರನ್ನನ ಗದಾಯುದ್ಧದ ಸಂಜಯವಚನದಲ್ಲಿ ಈ ಮಾತಿದು. ದುರ್ಯೋಧನ ಭೀಷ್ಮರನ್ನು ಭೇಟಿಯಾಗಲು ಸಂಜಯನ ಸಂಗಡ ಯುದ್ಧಭೂಮಿಯಲ್ಲಿ ನಡೆದುಬರುವಾಗ ತನ್ನ ಮಗನ ಶವವನ್ನು ಕಂಡು ಕಡು ನೋವಿನಿಂದ ಹೇಳುವ ಮಾತು.
ತಂದೆಯಾದವನಿಗೆ ಸಂಸ್ಕಾರ ಮಾಡುವುದು ಮಗನ ಜವಾಬ್ದಾರಿ ಇಲ್ಲಿ ನಿನಗೇ ಸಮಸ್ಕಾರ ಮಾಡಬೇಕಾಯಿತಲ್ಲ ಎನ್ನುವಲ್ಲಿ ಅವನ ಮನಸ್ಸು ಶೋಕ ಸಾಗರವೇ ಆಗಿತ್ತು ಎನ್ನಬಹುದು .ಯುಧ್ದಭೂಮಿಯಲ್ಲಿ ಹೋರಾಟ ಮಾಡಿ ಮಡಿದ ಮಗನಿಗೆ ತಂದೆ ಹೇಳುವ ಮಾತು ಆಂತಃಕರಣವನ್ನು ಕಲಕುತ್ತದೆ.
ಇಂದಿನ ದಿನ ದಿನಮಾನಗಳಲ್ಲಿ ಇಂತಹುದೆ ನೋವು ಬೇರೆ ಬೇರೆ ಕಾರಣದಿಂದ ತಂದೆ-ತಾಯಿಯರನ್ನು ಕಾಡುತ್ತಿರುವುದು ಸಾಮಾನ್ಯವಾಗಿದೆ. ಮೊದಲನೆಯದಾಗಿ ಬೆಳೆದುನಿಂತ ಮಕ್ಕಳನ್ನು ನೋಯಿಸಬಾರದು ಅನ್ನುವ ಕಾರಣಕ್ಕೆ ಅವರು ಕೇಳಿದ ಬೈಕ್ ಕೊಡಿಸುವುದು ಮಕ್ಕಳು ಅತೀವೇಗದಲ್ಲಿ ಚಾಲನೆ ಮಾಡಿ ಅಪಘಾತಗಳನ್ನು ಮಾಡಿಕೊಂಡು ನಿತ್ಯ ನೋವನ್ನು ಕೊಡುತ್ತಾರೆ. ದುಖದಲ್ಲೇ ಹೆತ್ತವರೇ ಮಕ್ಕಳ ಅಂಗಾಂಗಗಳನ್ನು ದಾನ ಮಾಡುತ್ತಿದ್ದಾರೆ. ದುಶ್ಚಟಗಳಿಗೆ ದಾಸರಾಗಿ ಅದರಿಂದ ಹೊರಬರಲಾರದೆ ಖಿನ್ನತೆಗೊಳಗಾಗಿ ಮಾನಸಿಕ ಅಸ್ವಸ್ಥರಾಗಿ ತಂದೆ ತಾಯಿಯರಿಗೆ ಹೊರೆಯಾಗಿರುವ ಮಕ್ಕಳ ಉದಾಹರಣೆಗಳು ಎಷ್ಟೋಇವೆ.
ಮೂರನೆಯದಾಗಿ ಇಂದಿನ ಜೀವಶೈಲಿ .ವೇಗದ ಬದುಕು, ಅಶಿಸ್ತಿನ ಆಹಾರ ಪದ್ಧತಿ, ಮಾನಸಿಕ ಒತ್ತಡ ಇದರಿಂದಾಗಿ ವಯೋಸಹಜವಾಗಿ ಬರುವ ಕಾಯಿಲೆಗಳು ಅಪವಯಸ್ಸಿನಲ್ಲೆ ಬಂದು ಯುವಜನಾಂಗವನ್ನು ಕಾಡುತ್ತಿವೆ. ಹೃದ್ರೋಗ, ನರರೋಗ , ಡಯಾಬಿಟಿಸ್ ನಂತಹ ಸಮಸ್ಯೆ ಎದುರಿಸುವ ಹೆತ್ತವರನ್ನು ಮಕ್ಕಳು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಆದರೆ ಕ್ರಮ ವಿಪರ್ಯಯವಾಗಿದೆ .ಪೋಷಕರೆ ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಹಾಗಾಗಿದೆ.
ಛಲವನ್ನೇ ಸವಾಲಾಗಿ ಸ್ವೀಕರಿಸಿದ ದುರ್ಯೋಧನ ಮಗನನ್ನು ಕಳೆದುಕೊಂಡರೆ ಇಂದಿನ ತಂದೆ ತಾಯಿಗಳು ಬಹುಪಾಲು ಇಂದಿನ ಜೀವನಶೈಲಿಯ ಕಾರಣದಿಂದ ಮಕ್ಕಳನೋವಿನಲ್ಲಿ ದಿನದೂಡಬೇಕಾದ ಸಂದರ್ಭವಿದೆ. ಮಹಾಭಾರತದ ದುರ್ಯೋಧನ ಹೇಳಿದ ಮಾತಿನ ಸಂದರ್ಭ ಹಾಗು ಇಂದಿನ ಸಂದರ್ಭ ಬೇರೆಯಾಗಿರಬಹುದು ಆದರೆ ನೋವು ಪುತ್ರ ಶೋಕ ನಿರಂತರ ಎನ್ನುವ ಮಾತಿನಲ್ಲಿಯೇ ಅಂತರ್ಗತವಾಗಿದೆ. “ನೀಂ ಕ್ರಮವಿಪರ್ಯಮಂ ಮಾಡುವುದೇ” ಎಂಬ ಮಾತು ಇಂದಿಗೂ ಅನ್ವಯಿಸುವ ಮಾತು ಅಲ್ವೆ!
ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ
ಕಣ್ಮಲರರಿಯದೆ ಮನಂ ಅರಿದುದು– ನೇಮಿಚಂದ್ರ ಕವಿಯ ‘ಲೀಲಾವತಿ ಪ್ರಬಂಧ’ದಲ್ಲಿ ಉಲ್ಲೇಖವಾಗಿರುವ ಮಾತಿದು.ಕಣ್ಣರಿಯದಿದ್ದರೂ ಮನಸ್ಸು,ಕರುಳು ಅರಿವುದು ಎಂಬ ಮಾತು ಎಲ್ಲರಿಗು ತಿಳಿದಿರುವಂಥದ್ದೆ. ಪ್ರತಿಭೆ ಎಂಬುದು ದೃಗ್ಗೋಚರವಲ್ಲ ಹೃದ್ಗೋಚರ ಎಂಬಂತೆ ಹೃದಯಕ್ಕೆ ತಿಳಿಯುವಂತಹ ಮಾತನ್ನು ಕುರಿತು ಈ ಮಾತಿದೆ.
ಕಂಡದ್ದೆಲ್ಲವನ್ನು ಸಾಕ್ಷಿಯ ಹಿನ್ನೆಲೆಯಿಂದಲೇ ವಿವೇಚಿಸುತ್ತೇವೆ ಎಂದು ತೀರ್ಮಾನಕ್ಕೆ ಬರಲಾಗದು.ಮನಸ್ಸಿನ ಸೂಕ್ಷ್ಮ ಸಂವೇದನೆಯ ಹಿನ್ನೆಲೆಯಿಂದಲೂ ಅವಲೋಕಿಸಬಹುದು. ಬುದ್ಧಿಯ ಮಾತು ಎಲ್ಲಾ ಸಂದರ್ಭಕ್ಕೂ ಹೊಂದಿಕೆಯಾಗುವುದಿಲ್ಲ. ಹೃದಯದಿಂದ ಮನಸ್ಸಿನ ಸಂಚಲನಕ್ಕೆ ಆ ಭಾವಕ್ಕೆ ಸ್ಪಂದಿಸಲೇಬೇಕಾಗುತ್ತದೆ. ಸಂಬಂಧಗಳು ತಮಗೆ ತಿಳಿಯದಂತೆ ಅವಿನಾಭಾವ ಬಂಧವನ್ನು ಹೊಂದಿರುತ್ತದೆ.
ಮನುಷ್ಯ ಸಮಾಜ ಸುಸ್ಥಿತಿಯಲ್ಲಿ ಇರಬೇಕೆಂದರೆ ಆತನ ಸಂಬಂಧದಲ್ಲಿಯೂ ಅನ್ಯೋನ್ಯತೆ ಇರಬೇಕು. ಕಣ್ಣಿಗೆ ಕಂಡಿದ್ದು ಸತ್ಯವಲ್ಲ. ಪರೀಕ್ಷಕ ದೃಷ್ಟಿಯಿಂದ ಈಕ್ಷಿಸಿದರೆ ಸತ್ಯಾಸತ್ಯತೆಗಳ ಅರಿವಾಗುತ್ತದೆ.
ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎಂಬ ಮಾತನ್ನು ಇಲ್ಲಿ ಸಂವಾದಿಯಾಗಿ ನೋಡಬಹುದು. ಕಣ್ಣಿಗೆ ಕಂಡದ್ದೆಲ್ಲ ಸತ್ಯವೆಂದು ಭಾವಿಸಲಾಗದು ಮೇಲ್ನೋಟಕ್ಕೆ ಸತ್ಯದ ಛಾಯೆ ಹೊಂದಿದ್ದರೂ ಅದು ಸುಳ್ಳಾಗಬಹುದು ಹಾಗಾಗಿ ಯಾವುದೇ ವಿಚಾರದಲ್ಲಿ ಆತುರದ ತೀರ್ಮಾನಕ್ಕೆ ಬಾರದೆ ಸಂದರ್ಭವನ್ನು ಕೂಲಂಕಷವಾಗಿ ಪರಿಶೀಲಿಸಬೇಕಾಗುತ್ತದೆ. ಯಾವುದೇ ತೀರ್ಮಾನಕ್ಕೆ ಬರಬೇಕಾದರೂ ಜಾಗೃತೆಯ ಎಚ್ಚರ ಬೇಕೆಂಬುದನ್ನು ಪ್ರಸ್ತುತ ಮಾತು ಹೇಳುತ್ತದೆ. ಯಾರೇ ಆಗಲಿ ವಿವೇಚನಾಯುಕ್ತ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು ತಿಳಿವಿಗಿಂತ ತಾಳುವಿಕೆಗಿಂತ ಹೆಚ್ಚಿನದಿಲ್ಲ ಅಲ್ವ!
ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ
ಆಗಸ್ಟ್ 23, 2023 ಈ ದಿನವನ್ನು ಭಾರತದ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯುವ ದಿನ. ಚಂದ್ರಯಾನ -3 ಬಾಹ್ಯಾಕಾಶ ನೌಕೆಯನ್ನು ಚಂದ್ರನ ಮೇಲ್ಮೈಗೆ ಸುರಕ್ಷಿತವಾಗಿ ಸಾಪ್ಟ್ ಲ್ಯಾಂಡಿಂಗ್ ಮಾಡಿದ ಮಹತ್ತರವಾದ ದಿನ. ವಿಕ್ರಮ್ ಲ್ಯಾಂಡರ್ ನಿಂದ ಪ್ರಗ್ಯಾನ್ ರೋವರನ್ನು ಬೇರ್ಪಡಿಸಿ ಚಂದ್ರನ ಮೇಲ್ಮೈಗೆ ಇಳಿಸಲಾಯಿತು. ಭಾರತದ ತಾಂತ್ರಿಕ ಮತ್ತು ವೈಜ್ಞಾನಿಕ ಸಾಧನೆಗೆ ಇಡೀ ವಿಶ್ವವೇ ಸಾಕ್ಷಿಯಾದ ದಿನ. ಚಂದ್ರನ ದಕ್ಷಿಣ ಧ್ರುವಕ್ಕೆ ಮೊಟ್ಟ ಮೊದಲಿಗೆ ಕಾಲಿಡುವ ಮೂಲಕ ನಮ್ಮ ದೇಶದ ವಿಜ್ಞಾನಿಗಳು ಹೊಸ ಮೈಲಿಗಲ್ಲನ್ನು ಸಾಧಿಸಿದ್ದಾರೆ.
ಜುಲೈ 14, 2023ರಂದು ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧಾವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಯಿತು. ಸುಮಾರು 40 ದಿನಗಳ ನಂತರ ಯಾವ ಸಮಸ್ಯೆಯಿಲ್ಲದೆ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಚಂದ್ರನನ್ನು ತಲಪಿದ್ದು ಐತಿಹಾಸಿಕ ಸಾಧನೆ. ಇದರಿಂದ ರಷ್ಯಾ, ಅಮೇರಿಕ ಮತ್ತು ಚೀನಾ ದೇಶಗಳ ನಂತರ ಚಂದ್ರನ ಮೇಲೆ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಸಾಪ್ಟ್ ಲ್ಯಾಂಡಿಂಗ್ ಮಾಡಿದ ನಾಲ್ಕನೇ ದೇಶ ಎಂಬ ಕೀರ್ತಿಯನ್ನು ಗಳಿಸಿತು. ಇಂತಹ ಚಿರಸ್ಮಣೀಯ ಸಂದರ್ಭದಲ್ಲಿ ಭಾರತದ ಬಾಹ್ಯಾಕಾಶ ವಿಜ್ಞಾನದ ಪಿತಾಮಹ ಎಂದು ಖ್ಯಾತಿಗಳಿಸಿರುವ, ಬಾಹ್ಯಾಕಾಶ ವಿಜ್ಞಾನವು ಈ ಮಟ್ಟಕ್ಕೆ ಬೆಳೆಯಲು ಅಡಿಪಾಯ ಹಾಕಿದ ಮತ್ತು ಭಾರತಕ್ಕೆ ರಾಕೆಟ್ ವಿಜ್ಞಾನವನ್ನು ಕಲಿಸಿದ ವಿಕ್ರಮ್ ಅಂಬಾಲಾಲ್ ಸಾರಾಭಾಯಿ ಅವರನ್ನು ನೆನೆಯುವುದು ಮತ್ತು ಅವರ ಬಗ್ಗೆ ಕೆಲವು ವಿಚಾರಗಳನ್ನು ತಿಳಿದುಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ.
ವಿಕ್ರಮ್ ಅಂಬಾಲಾಲ್ ಸಾರಾಭಾಯಿ ಅವರು ವಿಶ್ವ ವಿಖ್ಯಾತ ಭೌತಶಾಸ್ತ್ರ ಮತ್ತು ಖಗೊಳಶಾಸ್ತ್ರದ ವಿಜ್ಙಾನಿ. ಇವರು ಬಾಹ್ಯಾಕಾಶ ಸಂಶೋಧನೆಗೆ ನಮ್ಮ ದೇಶದಲ್ಲಿ ಅಡಿಪಾಯ ಹಾಕಿದವರು ಮತ್ತು ಪರಮಾಣು ಶಕ್ತಿ ಪ್ರಗತಿಗೆ ಸಹಾಯ ಮಾಡಿದವರು. ವಿಕ್ರಮ್ ಸಾರಾಭಾಯಿರವರು ಆಗಸ್ಟ್ 12, 1919 ರಂದು ಗುಜರಾತಿನ ಅಹಮದಾಬಾದ್ ನಲ್ಲಿ ಶ್ರೀಮಂತ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಅಂಬಾಲಾಲ್ ಸಾರಾಭಾಯಿ ಮತ್ತು ತಾಯಿ ಸರಳಾದೇವಿ. ಇವರ ಕುಟುಂಬ ಬಹಳ ದೊಡ್ಡ ಕೈಗಾರಿಕೊದ್ಯಮಿಗಳ ಕುಟುಂಬ. ಚಿಕ್ಕಂದಿನಿಂದಲೇ ಬುದ್ದಿವಂತನಾಗಿದ್ದ ಸಾರಾಭಾಯಿ ಅವರು ವಿಜ್ಞಾನ ಮತ್ತು ಗಣಿತ ವಿಷಯಗಳ ಬಗ್ಗೆ ಅಪಾರ ಆಸಕ್ತಿ ಮತ್ತು ಒಲವನ್ನು ಹೊಂದಿದ್ದರು. ಸೃಜನಶೀಲತೆ ಮತ್ತು ಪರಿಶೋಧಕ ಶಕ್ತಿಯನ್ನು ಪಡೆದಿದ್ದರು. ಗುಜರಾತ್ ಕಾಲೇಜಿನಲ್ಲಿನ ವ್ಯಾಸಂಗದ ನಂತರ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣವನ್ನು ಮುಂದುವರೆಸಿದರು. ಪ್ರಕೃತಿ ವಿಜ್ಙಾನದಲ್ಲಿ ಟ್ರೈಪಾಸ್ ಎಂಬ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ನಂತರ ಭಾರತ ದೇಶಕ್ಕೆ ವಾಪಸ್ಸಾದರು. ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಸರ್ ಸಿ. ವಿ. ರಾಮನ್ ರ ಮಾರ್ಗದರ್ಶನದಲ್ಲಿ ಕಾಸ್ಮಿಕ್ ಕಿರಣಗಳ ಬಗ್ಗೆ ಸಂಶೋಧನೆಯನ್ನು ನಡೆಸಿದರು. ಸಂಶೋಧನೆ ಪ್ರಾರಂಭಿಸಿದ ಎರಡೇ ವರ್ಷಗಳಲ್ಲಿ (1942) ಅತ್ಯುತ್ತಮ ಪ್ರಬಂಧವನ್ನು ಪ್ರಕಟಿಸಿದರು. ಪುನಃ ವಿದೇಶ ಪ್ರಯಾಣ ಬೆಳೆಸಿ, 1947ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ “ಉಷ್ಣವಲಯದ ಅಕ್ಷಾಂಶಗಳಲ್ಲಿ ಕಾಸ್ಮಿಕ್ ಕಿರಣಗಳ ತನಿಖೆಗಳು” (ಕಾಸ್ಮಿಕ್ ರೇಸ್ ಇನ್ವೆಸ್ಟಿಗೇಷನ್ಸ್ ಇನ್ ಟ್ರಾಪಿಕಲ್ ಲ್ಯಾಟಿಟೂಡ್ಸ್) ಎಂಬ ಶೀರ್ಷಿಕೆಯ ಪ್ರಬಂಧಕ್ಕೆ ಪಿಎಚ್.ಡಿ ಪದವಿಯನ್ನು ಪಡೆದರು. ಸ್ವಾತಂತ್ರ್ಯದ ನಂತರ, 1947 ರಲ್ಲಿ ತಮ್ಮ ತಾಯ್ನಾಡಿಗೆ ಮರಳಿದರು. 1942 ರಲ್ಲಿ ಶಾಸ್ತ್ರೀಯ ನರ್ತಕಿ ಮ್ರಿನಾಲಿಯವರನ್ನು ವಿವಾಹವಾದರು.
ವಿಕ್ರಮ್ ಸಾರಾಭಾಯಿರವರು, ಮುಖ್ಯವಾಗಿ ನಮ್ಮ ದೇಶದಲ್ಲಿ ಬಾಹ್ಯಾಕಾಶ ವಿಜ್ಞಾನದಲ್ಲಿ ಸಂಶೋಧನೆ ಪ್ರಾರಂಭಿಸುವಲ್ಲಿ ಮತ್ತು ಪರಮಾಣು ಶಕ್ತಿಯನ್ನು ಅಭಿವೃದ್ಧಿ ಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಭಾರತ ಸರ್ಕಾರದ ಒಪ್ಪಿಗೆಯನ್ನು ಪಡೆಯಲು ಪ್ರಮುಖ ಕಾರಣೀಭೂತರು. ಅದರ ಫಲವಾಗಿ 1962 ರಲ್ಲಿ ಇಂಡಿಯನ್ ನ್ಯಾಷನಲ್ ಕಮಿಟಿ ಫಾರ್ ಸ್ಪೇಸ್ ರಿಸರ್ಚ್ ಸಂಸ್ಥೆಯನ್ನು ಸ್ಥಾಪಿಸಿದರು. ನಂತರ 1969 ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರವಾಗಿ (ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗ್ ನೈಝೇಶನ್) ಮರು ನಾಮಕರಣ ಮಾಡಲಾಯಿತು. ಭಾರತದ ಪರಮಾಣು ವಿಜ್ಞಾನ ಕಾರ್ಯಕ್ರಮಗಳ ಪಿತಾಮಹರಾದ ಎಚ್. ಜೆ. ಭಾಭಾರವರು ವಿಕ್ರಮ್ ಸಾರಾಭಾಯಿ ರವರಿಗೆ ದೇಶದ ಮೊದಲ ರಾಕೆಟ್ ಉಡಾವಣೆ ಕೇಂದ್ರವನ್ನು ಸ್ಥಾಪಿಸಲು ಬೆಂಬಲಿಸಿದರು.
1963 ನವೆಂಬರ್ 21 ರಂದು ಮೊದಲನೇ ರಾಕೆಟ್ ನ್ನು ತುಂಬಾ ಉಡಾವಣಾ ನಿಲ್ದಾಣದಿಂದ ಉಡಾವಣೆ ಮಾಡಲಾಯಿತು. 1975 ರಲ್ಲಿ ರಷ್ಯಾದ ಉಡಾವಣಾ ಕೇಂದ್ರದಿಂದ ಭಾರತದ ಮೊಟ್ಟ ಮೊದಲನೆ ಉಪಗ್ರಹ “ಆರ್ಯಭಟ”ವನ್ನು ಕಕ್ಷೆಯಲ್ಲಿರಿಸಿದ ಯಶಸ್ವಿ ಕಾರ್ಯವನ್ನು ಸ್ಮರಿಸಬಹುದು.
ಸಾರಾಭಾಯಿರವರ ಪ್ರಮುಖ ಸಾಧನೆಗಳು (ಸ್ಥಾಪನೆ/ಕಾರಣೀಭೂತರು)
1. ಭಾರತದಲ್ಲಿನ ಬಾಹ್ಯಾಕಾಶ ಸಂಶೋಧನೆಯ ಪ್ರವರ್ತಕರು ಎಂದೇ ಖ್ಯಾತಿಯನ್ನು ಪಡೆದ ಸಾರಾಭಾಯಿರವರು ಫಿಸಿಕಲ್ ರಿಸರ್ಚ್ ಲ್ಯಾಬೊರೇಟರಿಯನ್ನು 1947 ರಲ್ಲಿ ಅಹಮದಾಬಾದ್ ನಲ್ಲಿ ಸ್ಥಾಪಿಸಿದರು. ಈ ಸಂಸ್ಥೆಯು “ಬಾಹ್ಯಾಕಾಶ ವಿಜ್ಞಾನದ ತೊಟ್ಟಿಲು (ಕ್ರಾಡೆಲ್ ಆಫ್ ಸ್ಪೇಸ್ ಸೈನ್ಸ್)” ಎಂದೇ ಖ್ಯಾತಿಯನ್ನು ಪಡೆದಿದೆ. ಅವರ ಮನೆ “ರಿಟ್ರೀಟ್” ನಲ್ಲಿ ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಿ, ನಂತರ ಎಂ. ಜಿ ಸೈನ್ಸ್ ಸಂಸ್ಥೆಯಲ್ಲಿ ಸ್ಥಾಪಿಸಲಾಯಿತು. ಪ್ರಾರಂಭದಲ್ಲಿ ಕಾಸ್ಮಿಕ್ ಕಿರಣಗಳು ಮತ್ತು ಮೇಲಿನ ವಾಯುಮಂಡಲ (ಅಪ್ಪರ್ ಅಟ್ಮಾಸ್ವಿಯರ್) ಗಳ ಬಗ್ಗೆ ಸಂಶೋಧನೆ ನಡೆಸಲಾಗುತ್ತಿತ್ತು. ಕ್ರಮೇಣ, ಸೈದ್ಧಾಂತಿಕ ಭೌತಶಾಸ್ತ್ರ (ಥಿಯರಿಟಿಕಲ್ ಫಿಸಿಕ್ಸ್) ಮತ್ತು ರೇಡಿಯೊ ಭೌತಶಾಸ್ತ್ರಗಳ ಬಗ್ಗೆಯೂ ಸಂಶೋಧನೆಗಳನ್ನು ಪ್ರಾರಂಭಿಸಲಾಯಿತು. ಈಗ ಖಗೋಳಶಾಸ್ತ್ರ, ಖಗೋಳ ಭೌತಶಾಸ್ತ್ರ, ವಾಯುಮಂಡಲ ವಿಜ್ಞಾನ, ಏರೋನೋಮಿ, ಗ್ರಹಗಳ ಮತ್ತು ಭೂವಿಜ್ಞಾನ, ಸೂರ್ಯ ಮಂಡಲ, ಸೈದ್ಧಾಂತಿಕ ಭೌತಶಾಸ್ತ್ರ ಮುಂತಾದ ವಿಷಯಗಳ ಬಗ್ಗೆ ಸಂಶೋಧನೆಗಳನ್ನು ನಡೆಸಲಾಗುತ್ತಿದೆ.
2. ನೆಹರೂ ಫೌಂಢೇಶನ್ ಫಾರ್ ಡೆವೆಲಪ್ ಮೆಂಟ್ ಸಂಸ್ಥೆಯನ್ನು 1965 ರಲ್ಲಿ ಅಹಮದಾಬಾದ್ ನಲ್ಲಿ ಸ್ಥಾಪಿಸಿದರು. ಗ್ರಾಮೀಣಾಭಿವೃದ್ಧಿ ಮತ್ತು ಪರಿಸರ ವಿಜ್ಞಾನದ ಬಗ್ಗೆ ಅರಿವು ಮೂಡಿಸುವುದು ಸಂಸ್ಥೆಯ ಮೂಲ ಉದ್ದೇಶಗಳು.
3. ಅಹಮದಾಬಾದ್ ನಲ್ಲಿ 1960 ರಲ್ಲಿ ವಿಕ್ರಮ್ ಸಾರಾಭಾಯಿ ಕಮ್ಯುನಿಟಿ ಸೈನ್ಸ್ ಸೆಂಟರ್ ನ್ನು ಸ್ಥಾಪಿಸಿದರು. ವಿಜ್ಞಾನ ಮತ್ತು ಗಣಿತದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ, ಶಿಕ್ಷಕರಲ್ಲಿ ಮತ್ತು ಸಾಮಾನ್ಯ ಪ್ರಜೆಗಳಲ್ಲಿ ಒಲವು ಮೂಡಿಸಿ, ಜನಪ್ರಿಯಗೊಳಿಸುವುದು ಸಂಸ್ಥೆಯ ಮೂಲ ಉದ್ದೇಶ.
4. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮಾನೇಜ್‌ಮೆಂಟ್, ಅಹಮದಾಬಾದ್ ಇದರ ಸ್ಥಾಫನೆಗೆ (1961) ಕಾರಣೀಭೂತರು.
5. ಅಹಮದಾಬಾದ್ ವಸ್ತ್ರೋದ್ಯಮ ಸಂಶೋಧನಾ ಸಂಸ್ಥೆಯ ಸ್ಥಾಪನೆಯಲ್ಲಿ (1947) ಸಕ್ರಿಯ ಪಾತ್ರವಹಿಸಿದರು.
6. ಅಹಮದಾಬಾದ್‌ನ ಪರಿಸರ ಯೋಜನೆ ಮತ್ತು ತಂತ್ರಜ್ಞಾನದ ವಿಶ್ವವಿದ್ಯಾಲಯವನ್ನು 1962 ಸ್ಥಾಪಿಸಿದರು.
7. ಕಾರ್ಯಾಚರಣೆಗಳ ಸಂಶೋಧನಾ ತಂಡದ ವ್ಯವಸ್ಥೆಯನ್ನು (ಆಪರೇಷನ್ಸ್ ರಿಸರ್ಚ್ ಗ್ರೂಪ್)1961 ರಲ್ಲಿ ಹುಟ್ಟು ಹಾಕಿದರು. ಈ ಸಂಸ್ಥೆ ಭಾರತದ ಮೊದಲನೆಯ ಮಾರ್ಕೆಟ್ ಸಂಶೋಧನಾ ಸಂಸ್ಥೆ.
8. ಬಹಳ ಪ್ರಮುಖವಾದ ಸಾಧನೆಯೆಂದರೆ, ಈಗಾಗಲೇ ತಿಳಿಸಿರುವಂತೆ , 1969 ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ಸ್ಥಾಪನೆ (ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಝೇಶನ್ – ಇಸ್ರೊ). ನಮ್ಮ ಬೆಂಗಳೂರಿನಲ್ಲಿ ಸ್ಥಾಪಿಸದ್ದು ನಮ್ಮೆಲ್ಲರಿಗೂ ಸಂತಸದ ವಿಷಯ.
9. ತುಂಬಾ ಸಮಬಾಜಕ ರಾಕೆಟ್ ಉಡಾವಣೆ ನಿಲ್ದಾಣವನ್ನು (ತುಂಬಾ ಈಕ್ವ ಟೋರಿಯಲ್ ರಾಕೆಟ್ ಲಾಂಚಿಂಗ್ ಸ್ಟೇಷನ್) 1963 ರಲ್ಲಿ ತುಂಬಾ, ತಿರುವನಂತಪುರಂ, ಕೇರಳದಲ್ಲಿ ಸ್ಥಾಪಿಸಿದರು. ಈ ಸಂಸ್ಥೆಯನ್ನು ವಿಕ್ರಮ್ ಸಾರಾಭಾಯಿರವರ ಮರಣದ ನಂತರ, ವಿಕ್ರಮ್ ಸಾರಾಭಾಯಿ ಸ್ಪೇಸ್ ಸೆಂಟರ್ ಎಂದು ಮರು ನಾಮಕರಣ ಮಾಡಲಾಗಿದೆ.
10. ತಮ್ಮ ಪತ್ನಿ ಯವರ ಉತ್ತೇಜನ ಮತ್ತು ಸಕ್ರಿಯ ಪಾತ್ರದಿಂದ ದರ್ಪನ್ ಅಕಾಡೆಮಿ ಫಾರ್ ಪರ್‌ಪಾರ್ಮಿಂಗ್ ಆರ್ಟ್ಸ್, ಸಂಸ್ಥೆಯನ್ನು 1949 ರಲ್ಲಿ ಸ್ಥಾಪಿಸಿದರು.
11. ವೇಗದ ತಳಿ ಪರೀಕ್ಷಾ ರಿಯಾಕ್ಟರ್ (ಪಾಸ್ಟ್ ಬ್ರೀಡರ್ ಟೆಸ್ಟ್ ರಿಯಾಕ್ಟರ್), ಕಲ್ಪಾಕಮ್, ತಮಿಳುನಾಡು.
12. ವೇರಿಯಬಲ್ ಎನರ್ಜಿ ಸೈಕ್ಲೋಟ್ರಾನ್ ಸೆಂಟರ್, ಕೊಲ್ಕತ್ತಾ –ಕಾರ್ಯಾಚರಣೆ ಪ್ರಾರಂಭ 1977.
13. ಇಲೆಕ್ಟ್ರಾನಿಕ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ ಲಿಮಿಟೆಡ್, ಹೈದರಾಬಾದ್. ಸ್ಥಾಪನೆ – 1967.
14. ಯುರೇನಿಯಮ್ ಕಾರ್ಪರೇಶನ್ ಆಫ್ ಇಂಡಿಯಾ ಲಿಮಿಟೆಡ್ ಜಾದುಗುಡ, ಬಿಹಾರ್. ಸ್ಥಾಪನೆ-1967.
ವಿಕ್ರಮ್ ಸಾರಾಭಾಯಿ ರವರು ಅಲಂಕರಿಸಿದ ಪ್ರತಿಷ್ಠಿತ ಹುದ್ದೆಗಳು.
1. ಅಧ್ಯಕ್ಷರು, ಭೌತಶಾಸ್ತ್ರ ವಿಭಾಗ, ಇಂಡಿಯನ್ ಸೈನ್ಸ್ ಕಾಂಗ್ರೆಸ್, 1962.
೨. ಅಧ್ಯಕ್ಷರು, ಐ.ಎ.ಈ.ಎ (ಅಂತರ್ ರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ) ಜನರಲ್ ಕಾನ್ಪರೆನ್ಸ್ (ಸಾಮಾನ್ಯ ಸಮಾವೇಶ), ವಿಯೆನ್ನಾ, 1970.
೩. ಅಧ್ಯಕ್ಷರು, ಪರಮಾಣು ಶಕ್ತಿ ಆಯೋಗ, 1966 ರಿಂದ 1971 ರ ವರೆಗೆ.
೪. ಉಪಾಧ್ಯಕ್ಷರು, ನಾಲ್ಕನೇ ವಿಶ್ವಸಂಸ್ಥೆಯ ಕಾನ್ಪರೆನ್ಸ್ (ಸಮಾವೇಶ) – 1971. ವಿಷಯ : ಪರಮಾಣು ಶಕ್ತಿಯ ಶಾಂತಿಯುತ ಬಳಕೆ.
೫. ಸಂಸ್ಥಾಪಕ ಅಧ್ಯಕ್ಷರು, ಬಾಹ್ಯಾಕಾಶ ವಿಜ್ಞಾನ ಅನ್ವಯಗಳು, 1963-1971.
ವಿಕ್ರಮ್ ಸಾರಾಭಾಯಿರವರಪರಂಪರೆ (ಲೆಗಸಿ)
1. ಕೇರಳ ರಾಜ್ಯದಲ್ಲಿರುವ ಬಾಹ್ಯಾಕಾಶ ಸಂಶೋಧನಾ ಕೇಂದ್ರವನ್ನು ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರವೆಂದು ಮರು ನಾಮಕರಣ ಮಾಡಲಾಗಿದೆ.
2. ಚಂದ್ರನ ಮೇಲ್ಮೈನಲ್ಲಿರುವ ಕುಳಿಯನ್ನು 1973 ರಲ್ಲಿ ಅಂತರ್ ರಾಷ್ಟ್ರೀಯ ಖಗೋಳಶಾಸ್ತ್ರದ ಒಕ್ಕೂಟವು ಸಾರಾಭಾಯಿ ಕುಳಿ ಎಂದು ನಾಮಕರಣ ಮಾಡಿರುತ್ತಾರೆ.
3. ಭಾರತೀಯ ಅಂಚೆ ಇಲಾಖೆಯು 1972 ರಲ್ಲಿ ಸಾರಾಭಾಯಿ ರವರ ಮೊದಲನೇ ವರ್ಷದ ಪುಣ್ಯ ದಿನದಂದು, ಅವರ ಸ್ಮರಣಾರ್ಥವಾಗಿ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತು.
4. ಚಂದ್ರಯಾನ -2 ಮತ್ತು ಚಂದ್ರಯಾನ -3 ರ ಲ್ಯಾಂಡರ್ ನ್ನು ವಿಕ್ರಮ್ ಎಂದು ಹೆಸರಿಡಲಾಗಿದೆ.
ಪ್ರಶಸ್ತಿಗಳುಮತ್ತುಗೌರವಗಳು.
ಪ್ರಮುಖವಾಗಿ, ಇವರ ಸಾಧನೆಗಳನ್ನು ಮತ್ತು ದೇಶದ ಅಭಿವೃದ್ಧಿಗೆ ನೀಡಿದ ಕೊಡುಗೆಗಳನ್ನು ಪರಿಗಣಿಸಿ, ಭಾರತ ಸರ್ಕಾರವು ಇವರಿಗೆ 1966 ರಲ್ಲಿ ಪದ್ಮ ಭೂಷಣ ಮತ್ತು 1972 ರಲ್ಲಿ (ಮರಣೋತ್ತರ) ಪದ್ಮ ವಿಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಿತು.
ವಿಕ್ರಮ್ ಸಾರಾಭಾಯಿ ಅವರು ದಿನಕ್ಕೆ16-18ಗಂಟೆಗಳ ಕಾಲ ಕಾರ್ಯ ನಿರ್ವಹಿಸುತ್ತಿದ್ದರು. ಕಾರ್ಯ ನಿಮಿತ್ತ ತುಂಬಾ ರಾಕೆಟ್ ಉಡಾವಣಾ ಕೇಂದ್ರಕ್ಕೆ ಭೇಟಿ ನೀಡಿದ್ದ ಸಮಯದಲ್ಲಿ, ಡಿಸೆಂಬರ್ 30, 1971ರಂದು ರಾತ್ರಿ ನಿದ್ರಿಸುತ್ತಿರುವಾಗ ಹೃದಯಾಘಾತದಿಂದ ದೈವಾಧೀನರಾದರು. ಕೇವಲ 52 ನೇ ಚಿಕ್ಕ ವಯಸ್ಸಿನಲ್ಲಿ ನಿಧನರಾದದ್ದು ಬಹಳ ದುಃಖಕರವಾದ ಸಂಗತಿಯಾಗಿದೆ. ಇವರ ಅಕಾಲಿಕ ಮರಣದಿಂದ ವಿಜ್ಞಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟವುಂಟಾಯಿತು.
ಇಷ್ಟೆಲ್ಲಾ ಸಾಧನೆಯನ್ನು ಮಾಡಿ, ಭಾರತ ದೇಶವು ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಪರಮಾಣು ಶಕ್ತಿ ಕ್ಷೇತ್ರಗಳಲ್ಲಿ ಉತ್ತುಂಗಕ್ಕೇರಲು ಕಾರಣೀಭೂತರಾದ ವಿಕ್ರಮ್ ಸಾರಾಭಾಯಿರವರು, ನಿಜವಾಗಿ ಭಾರತದ ರತ್ನ ಎಂದೇ ಕರೆಯಬಹುದು. ದೊಡ್ಡ ಮಟ್ಟದ ಸಾಧನೆ ಮಾಡಿದ್ದರೂ ಸಹ, ವ್ಯಕ್ತಿತ್ವದಲ್ಲಿ ಸರಳಜೀವಿ. ಎಲ್ಲಾ ಮನುಷ್ಯರನ್ನು ಸಮಾನವಾಗಿ ಕಾಣುವ ವಿಶಾಲ ಹೃದಯವನ್ನು ಹೊಂದಿದ್ದರು. ಬೇಸಾಯ, ಕೈಗಾರಿಕೆ, ಹವಾಮಾನ ಅಧ್ಯಯನ, ಖನಿಜಗಳ ಶೋಧನಾ ಕಾರ್ಯ ಹೀಗೆ ಹಲವಾರು ಕ್ಷೇತ್ರಗಳಲ್ಲಿ, ಪರಮಾಣು ಶಕ್ತಿ ಕೇಂದ್ರಗಳು ತಮ್ಮ ಕಾರ್ಯಾಚರಣೆಯ ಉದ್ದೇಶಗಳಲ್ಲಿ ಅಂತರ್ಗತ ಮಾಡಿಕೊಳ್ಳ ಬೇಕೆಂಬ ಅಭಿಪ್ರಾಯ ಹೊಂದಿದ್ದರು. ಇಂತಹ ದೊಡ್ಡ ವಿಜ್ಞಾನಿ ನಮ್ಮ ಭಾರತಾಂಭೆಯ ಸುಪುತ್ರ ಎಂಬುವುದೇ ನಮ್ಮೆಲ್ಲರಿಗೆ ಹೆಮ್ಮೆಯ ವಿಷಯ. ಇವರ ಸಾಧನೆ ಈಗಿನ ಮತ್ತು ಮುಂದಿನ ಯುವ ಪೀಳಿಗೆಗೆ ಮಾದರಿಯಾಗಲೆಂದು ಆಶಿಸೋಣ.
ಅತಿಬುದ್ಧಿಯುಳ್ಳವರಾದೊಡಂ ಶಾಸ್ತ್ರ ಚಿಂತನೆಯಂ ಮಾಡವೇಳ್ಕುಂ-ಪಂಚ ತಂತ್ರದಲ್ಲಿ ಬರುವ ಮಾತಿದು. ಅತಿಬುದ್ಧಿವಂತಿಕೆ, ಅತೀವಿಶ್ವಾಸ ಎರಡೂ ಅಪಾಯಕಾರಿ . ಇವೆರಡರ ಹಂದರದಲ್ಲಿ ಬಂಧಿಯಾದರೆ ಮೂಲ ವ್ಯಕ್ತಿತ್ವತ್ವಕ್ಕೆ ಸಂಚಕಾರ ತಂದುಕೊಂಡಂತೆ.
“ನಾನು ತುಂಬಾ ತಿಳಿದುಕೊಂಡಿದ್ದೇನೆ! ನನಗ್ಯಾರು ಸಾಟಿ ?” ಎಂಬ ಅಹಮಿಕೆ, ನಂಬಿಕೆ ಕೆಲವೊಮ್ಮೆ ಹುಸಿಯಾಗಬಹುದು. “ಎಲ್ಲಾ ಸರಿಯಿದೆ!” ಎಂಬ ಅತಿವಿಶ್ವಾಸ ಮತ್ತು “ಅದೇನ್ ಮಹಾ? ಚಿಕ್ಕವಿಷಯ” ಎಂಬೆರಡೂ ಧೋರಣೆಯೂ ತಪ್ಪೇ! .
ಈಗಿನ ದಿನಮಾನದಲ್ಲಿ ಪರಿಪ್ರೇಕ್ಷಗಳು ಒಂದರಿಂದ ಒಂದಕ್ಕೆ ಉನ್ನತೀಕರಣವಾಗುತ್ತಿರುತ್ತದೆ. ಹಾಗಾಗಿ ನಾವು ತಿಳಿದುಕೊಂಡ ವಿಚಾರಕ್ಕಿಂತ ಒಂದು ಹೆಜ್ಜೆ ಆ ವಿಷಯ ಔನ್ನತ್ಯಕ್ಕೇರಿರುವ ಸಾಧ್ಯತೆಯೂ ಇರುತ್ತದೆ ಹಾಗಾಗಿ ಇದಿಷ್ಟೇ….! ಇದಮಿತ್ಥಮ್,,,! ಎಂದು ದೊಡ್ಡದೊಂದು ಅಡ್ಡಗೆರೆ ಎಳೆದು ಸುಮ್ಮನಾಗುವುದು ಮೂರ್ಖತನವೇ ಸರಿ!
ಮೇಲ್ನೋಟಕ್ಕೆ ನಾವಂದು ಕೊಂಡಿರುವ ಸರಿ ಎನಿಸಿದರೂ ವೈಜ್ಞಾನಿಕವಾಗಿ ಏನಾದರೊಂದು ತೊಡಕು ಇದ್ದಿರಬಹುದು ಹಾಗಾಗಿ “ಬೆಟ್ಟಕ್ಕಿಂತ ಬೆಟ್ಟ ದೊಡ್ಡದು” ಎಂಬಂತೆ ಅಂತಿಮ ನಿರ್ಧಾರಕ್ಕೂ ಮುನ್ನ ವಿಚಾರವನ್ನು ಪರಾಮರ್ಶೆ ಮಾಡುವುದು ಒಳಿತು ಇಲ್ಲವಾದರೆ ಓಟದ ಸ್ಪರ್ಧೆಯಲ್ಲಿ ಮೊಲ ಆಮೆಯಿಂದ ಸೋತ ಕತೆಯಂತಾಗುತ್ತದೆ.
ಅತಿ ವಿಶ್ವಾಸ ಎಂದಿಗೂ ಅಪಾಯಕಾರಿ. ಬುದ್ಧಿಗೆ ಹೊಳೆದದ್ದೆಲ್ಲವೂ ತಾರ್ಕಿಕವಾಗಿ ಸರಿಯಾಗಬೇಕೆಂದಿಲ್ಲ ವೈಚಾರಿಕತೆಗೂ ಭಾವನಾತ್ಮಕತೆಗೂ ಕೆಲವು ವಿಚಾರಗಳಲ್ಲಿ ಹೇಗೆ ವೆತ್ಯಾಸವಿರುತ್ತದೆಯೋ ಹಾಗೆ ಇಲ್ಲಿಯೂ. ತಿಳಿಯುವುದು ಸಾಗರದಷ್ಟು ಇದ್ದರೂ ಸ್ವಲ್ಪ ತಿಳಿದೊಡನೆಯೆ ನಾನೆ ಬುದ್ಧಿವಂತ ಎಂಬ ಅಮಲು ತಲೆಗೇರಬಾರದು ಜೀವನ ಪರ್ಯಂತ ಕಲಿಯುವುದು ಇದ್ದೇ ಇರುತ್ತದೆ. ದಡ್ಡತನವನ್ನು ಯಾರಾದರೂ ಕ್ಷಮಿಸುವರು ಆದರೆ ಉದ್ಧಟತನವನ್ನು ಯಾರೂ ಸಹಿಸುವುದಿಲ್ಲ. ಹಾಗಾಗಿ ನಾನೇ ಎಲ್ಲವೂ ಎಂಬ ಅಹಂ ಸಲ್ಲದು. ಬುದ್ಧಿ ಹಾಗು ಜ್ಞಾನ ಎರಡೂ ಒಟ್ಟಿಗಿರಬೇಕು ಎಂಬುದನ್ನು “ಅತಿಬುದ್ಧಿಯುಳ್ಳವರಾದೊಡಂ ಶಾಸ್ತ್ರ ಚಿಂತನೆಯಂ ಮಾಡವೇಳ್ಕುಂ” ಎಂಬ ಮಾತು ಹೇಳುತ್ತದೆ.
ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ
ಗಣೇಶ ಚತುರ್ಥಿ ಭಾರತದಲ್ಲಿ ವೈಭವದಿಂದ ಆಚರಿಸಲ್ಫಡುವ ಹಬ್ಬ. ಪ್ರತಿ ವರ್ಷದ ಭಾದ್ರಪದ ಮಾಸದ ನಾಲ್ಕನೇ ದಿನ, ಚತುರ್ಥಿ ದಿನ ಈ ಹಬ್ಬವನ್ನು ಖುಷಿಆಚರಿಸುತ್ತೇವೆ. ಈ ಹಬ್ಬದಲ್ಲಿ ಮುಖ್ಯವಾಗಿ ಮಣ್ಣಿನಿಂದ ಮಾಡಿದ ಗಣಪತಿಯನ್ನು ಪೂಜೆ ಮಾಡುತ್ತೇವೆ.
ಗಣೇಶ ಚತುರ್ಥಿಯ ದಿನ ಚಂದ್ರ ದರ್ಶನ ಮಾಡಿದವರು “ಚೋರ” ನೆಂಬ ಅಪಖ್ಯಾತಿಗೆ ಗುರಿಯಾಗುತ್ತಾರೆ, ಎಂಬುದಕ್ಕೆ “ಶಮಂತಕಕೋಪಾಖ್ಯಾನ” ದ ಕಥೆ ಇದೆ.
ಒಮ್ಮೆ ದ್ವಾಪರಯುಗದಲ್ಲಿ ಶ್ರೀಕೃಷ್ಣ ಚೌತಿಯ ದಿನ ಅರಮನೆಯ ಉಪ್ಪರಿಗೆಯಲ್ಲಿ ಕುಳಿತಿದ್ದ. ರುಕ್ಮಿಣಿ ಆತನಿಗೆ ಹಾಲು ತಂದುಕೊಟ್ಟಳು. ಹಾಲು ಕುಡಿಯಲು ಲೋಟ ಎತ್ತಿದಾಗ ಹಾಲಿನಲ್ಲಿ ಕೃಷ್ಣನಿಗೆ ಚೌತಿಯ ಚಂದ್ರನ ದರ್ಶನವಾಯಿತು. ಅವನ ಮೇಲೂ ಕಳ್ಳತನದ ಆರೋಪ ಬಂತು.
ಕೃಷ್ಣನ ಬಂಧುಗಳಲ್ಲಿ ಒಬ್ಬನಾದ ಸತ್ರಾರ್ಜಿತನಲ್ಲಿ ಸೂರ್ಯ ದಯಪಾಲಿಸಿದ ಶಮಂತಕ ಎಂಬ ಒಂದು ಅಮೂಲ್ಯ ರತ್ನ ಇತ್ತು. ಅದು ದಿನವೂ 8 ಸೇರು ಬಂಗಾರವನ್ನು ನೀಡುತ್ತಿತ್ತು. ಅದನ್ನು ಧರಿಸಿ ಹೊರಟರೆ ಅದರ ಪ್ರಕಾಶದಿಂದ ಸೂರ್ಯನೇ ಧರೆಗಿಳಿದಂತೆ ಭಾಸವಾಗುತ್ತಿತ್ತು. ಕೃಷ್ಣ ಒಮ್ಮೆ ಇಂತಹ ಮಣಿ ಚಕ್ರವರ್ತಿಯ ಬಳಿ ಇರುವುದು ಕ್ಷೇಮ ಬಲರಾಮನಿಗೆ ಕೊಟ್ಟು ಬಿಡು ಎಂದು ಕೇಳಿದ. ಆದರೆ ಸತ್ರಾರ್ಜಿತ ಒಪ್ಪಲಿಲ್ಲ.ಆ ಮಣಿಯನ್ನು ಭೇಟೆಗೆ ಹಾಕಿಕೊಂಡು ಹೋಗುವಂತಿರಲಿಲ್ಲ. ಆದರೂ ಸತ್ರಾರ್ಜಿತ ಸೋದರ ಪ್ರಸೇನನು ಶಮಂತಕ ಮಣಿ ಧರಿಸಿ ಶ್ರೀಕೃಷ್ಣನ ಜತೆಗೂಡಿ ಬೇಟೆಗೆ ಹೋದನಂತೆ. ಬೇಟೆಯ ಸಂದರ್ಭದಲ್ಲಿ ಎಲ್ಲರೂ ದಾರಿ ತಪ್ಪಿದರು. ಪ್ರಸೇನ ಎಲ್ಲೋ ಕಾಡಿನಲ್ಲಿ ಕಾಣೆಯಾದ. ಪ್ರಸೇನನನ್ನು ಸಿಂಹವೊಂದು ಕೊಂದು ಶಮಂತಕ ಮಣಿಯನ್ನು ಅಪಹರಿಸಿತು. ಆ ಸಿಂಹವನ್ನು ಜಾಂಬವಂತನೆಂಬ ಕರಡಿಯು ಕೊಂದು ಮಣಿಯನ್ನು ತನ್ನ ಸ್ವಾಧೀನ ಮಾಡಿಕೊಂಡು ಅದನ್ನು ಮಗುವಿನ ತೊಟ್ಟಿಲಿಗೆ ಆಡಲು ಕಟ್ಟಿತು.
ಇತ್ತ ಕಾಡಿನಲ್ಲಿ ಪ್ರಸೇನನಿಗಾಗಿ ಹುಡುಕಿದ ಯಾದವರು, ಆತ ಸಿಗದಿದ್ದಾಗ ಕೃಷ್ಣ ಸಮೇತನಾಗಿ ಅರಮನೆಗೆ ಮರಳಿದರು. ಆದರೆ, ಸತ್ರಾರ್ಜಿತ ಹಾಗೂ ಪುರಜನರು ಮಣಿಗಾಗಿ ಕೃಷ್ಣನೇ ತನ್ನ ಸೋದರ ಪ್ರಸೇನನನ್ನು ಕೊಂದಿರಬೇಕು ಎಂದು ಅನುಮಾನಿಸಿದರು. ಚೌತಿಯ ಚಂದ್ರನ ದರ್ಶನದಿಂದ ತನಗೆ ಈ ಅಪವಾದ ಬಂದಿದೆ ಎಂಬುದನ್ನು ಗ್ರಹಿಸಿದ ಕೃಷ್ಣ , ಗಣಪನನ್ನು ಪೂಜಿಸಿ, ಪ್ರಸಾದ ಸ್ವೀಕರಿಸಿ, ಮಣಿಯನ್ನು ಹುಡುಕುತ್ತಾ ಕಾಡಿಗೆ ಹೊರಟ. ಆಗ ಅವನಿಗೆ ಸಿಂಹ ಪ್ರಸೇನನನ್ನು ಕೊಂದ್ದದ್ದು, ಸಿಂಹವನ್ನು ಜಾಂಬವಂತ ಕೊಂದಿದ್ದು ಹೆಜ್ಜೆ ಗುರುತುಗಳಿಂದ ತಿಳಿಯಿತು. ಮಣಿ ಹುಡುಕುತ್ತಾ ಅವನು ತನ್ನ ಸಹಚರರೊಂದಿಗೆ ಕರಡಿಯ ಗುಹೆಗೂ ಬಂದ. ಎಲ್ಲರನ್ನೂ ಹೊರಗೆ ನಿಲ್ಲಿಸಿ ತಾನೊಬ್ಬನೇ ಕರಡಿಯ ಗುಹೆ ಹೊಕ್ಕ. ಕ್ಷತ್ರಿಯನಾದ ತಾನು ಹೋರಾಡಿಯೇ ಈ ಮಣಿಯನ್ನು ಪಡೆಯುತ್ತೇನೆ ಎಂದು ಹೇಳಿ ಪಂಚಜನ್ಯವನ್ನು ಊದಿದ.
ಹೊರಗೆ ಹೋಗಿದ್ದ ಜಾಂಬವಂತ ಗುಹೆಗೆ ಮರಳಿ, ದ್ವಾರಕ್ಕೆ ದಪ್ಪ ಕಲ್ಲ ಬಂಡೆಯನ್ನು ಅಡ್ಡ ಇಟ್ಟು, ಕೃಷ್ಣನೊಂದಿಗೆ ಕಾಳಗಕ್ಕೆ ನಿಂತ.ಹೊರಗೆ ನಿಂತಿದ್ದವರು 7 ದಿನ ಕಾದರೂ ಕೃಷ್ಣ ಬಾರದಿದ್ದಾಗ ಕೃಷ್ಣ ಸತ್ತಿರಬೇಕು ಎಂದು ತಿಳಿದು ಹಿಂತಿರುಗಿದರು. ಸತತವಾಗಿ 15 ದಿನ ಯುದ್ಧ ನಡೆಯಿತು. ತ್ರೇತಾಯುಗದ ರಾಮನ ಭಂಟನಾಗಿದ್ದ ಜಾಂಬವಂತನೂ ಸೋಲಲಿಲ್ಲ. ದ್ವಾಪರದಲ್ಲಿ ಕೃಷ್ಣಾವತಾರದಲ್ಲಿದ್ದ ನಾರಾಯಣನೂ ಸೋಲಲಿಲ್ಲ. ಕಡೆಗೆ ಕೃಷ್ಣ ಪರಮಾತ್ಮ ಶ್ರೀರಾಮನಾಗಿ ಜಂಬವಂತನಿಗೆ ದರ್ಶನ ನೀಡಿದ. ತನ್ನ ತಪ್ಪನ್ನು ಅರಿತ ಜಾಂಬವಂತ ತನ್ನ ಮಗಳು ಹಾಗೂ ಕನ್ಯಾಮಣಿಯಾದ ಜಾಂಬವತಿಯನ್ನು ಕೃಷ್ಣನಿಗೆ ಕೊಟ್ಟು ಮದುವೆ ಮಾಡಿ, ಶಮಂತಕ ಮಣಿ ಕೊಟ್ಟು, ಆನಂದದಿಂದ ಕಳುಹಿಸಿಕೊಟ್ಟ. ಕೃಷ್ಣ ಶಮಂತಕ ಮಣಿಯಾಂದಿಗೆ ಮರಳಿದಾಗ ಜನರು ತಮ್ಮ ತಪ್ಪನ್ನು ಮನ್ನಿಸುವಂತೆ ಕೃಷ್ಣನನ್ನು ಕೋರಿದರು.ಚೌತಿಯ ಚಂದ್ರ ದರ್ಶನ ದೇವಾನು ದೇವತೆಗಳನ್ನೂ ಬಿಟ್ಟಿಲ್ಲ ಎನ್ನುತ್ತದೆ ಕತೆ. ಅಕಸ್ಮಾತ್ ಚೌತಿಯ ಚಂದ್ರ ದರ್ಶನವಾಗಿದ್ದರೂ, ಈ ಕತೆ ಕೇಳಿದರೆ ಅಥವಾ ಓದಿದರೆ, ಜನರಿಗೆ ದೋಷಕ್ಕೆ ಪರಿಹಾರ ಸಿಗುತ್ತದೆ ಎನ್ನುತ್ತದೆ ಪುರಾಣ.
ಆ ದೋಷ ಪರಿಹಾರಾರ್ಥವಾಗಿ ಸಿಂಹಃ ಪ್ರಸೇನ್ನಂ ಅವಧಿ, ಸಿಂಹೌ ಜಾಂಬವತಾ ಹತಃ, ಸುಕುಮಾರಕ ಮಾರೋದ, ತವಶ್ಯೇಷ ಶಮಂತಕಃ
ಏಕ ದಂತಾಯ ವಿದ್ಮಹೇ, ವಕ್ರ ತುಂಡಾಯ ಧೀಮಹೆ, ತನ್ನೋ ದಂತಿ: ಪ್ರಚೋದಯಾತ್..
ವಕ್ರ ತುಂಡ ಮಹಾ ಕಾಯ ಕೋಟಿ ಸೂರ್ಯ ಸಮಪ್ರಭ, ನಿರ್ವಿಘ್ನಂ ಕುರುಮೆ ದೇವ ಸರ್ವಕಾರ್ಯೇಷು ಸರ್ವದ..
ಅ ಗಜಾನನ ಪದ್ಮಾರ್ಕಂ ಗಜಾನನ ಮಹಾರ್ನಿಶಂ, ಅನೇಕ ದಂತಂ ಭಕ್ತಾನಾಂ ಏಕ ದಂತಂ ಉಪಾಸ್ಮಹೆ…
ಎಂಬ ಶ್ಲೋಕವನ್ನು ಪದೇ ಪದೇ ಪಠಿಸ ಬೇಕು ಎನ್ನುತ್ತಾರೆ ಹಿರಿಯರು.
ಎಂ.ವಿ. ಶಂಕರಾನಂದ ಅವರು ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಪ್ನಬುಕ್‌ಹೌಸಿನಲ್ಲಿ ಸಂಪಾದಕರಾಗಿ, ಚೆನ್ನೈನ ಪ್ರಕಾಶನ ಸಂಸ್ಥೆ ಸುರಾ ಬುಕ್ಸ್ (ಪ್ರೈ)ಲಿ.ನಲ್ಲಿ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದಲ್ಲಿ ಐವತ್ತಕ್ಕೂ ಹೆಚ್ಚಿನ ಸ್ವತಂತ್ರ, ಅನುವಾದ, ಸಂಪಾದನಾ ಕೃತಿಗಳ ರಚನೆ ಇವರ ಹೆಗ್ಗಳಿಕೆ. ಮಧುಗಿರಿ, ಗೌರಿಬಿದನೂರು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಓಂಶಕ್ತಿ ಸಾಹಿತ್ಯ ಪ್ರಶಸ್ತಿ ಮತ್ತು ಹೇಮಂತ ಸಾಹಿತ್ಯ ಪುರಸ್ಕಾರಗಳನ್ನು ಪಡೆದಿರುವ ಇವರು ಹಲವು ರಾಜ್ಯಮಟ್ಟದ, ಪ್ರಾದೇಶಿಕ ಪತ್ರಿಕೆಗಳ ಅಂಕಣಕಾರರೂ ಆಗಿದ್ದಾರೆ.2022 ನೇ ಸಾಲಿನ ತುಮಕೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ
ಅಮೆಜಾನ್ ಪ್ರೈಮ್ ವಿಡಿಯೋಸ್ ನಲ್ಲಿ ಬಿಡುಗಡೆಯಾಗಿರುವ ಶಶಾಂಕ್ ನಿರ್ದೇಶನದ ಕೌಸಲ್ಯ ಸುಪ್ರಜಾ ರಾಮ ಚಿತ್ರವನ್ನು ಹೆಸರಾಂತ ನಿರ್ದೇಶಕ ಬಿ ಎಸ್ ಲಿಂಗದೇವರು ಕಂಡ ಬಗೆ ಇದು.
ಹೆಣ್ಣೆಂದರೆ, ಅಡುಗೆ ಮನೆಗೆ ಸೀಮಿತ, ಆಕೆಗೆ ಜವಾಬ್ದಾರಿ ಇಲ್ಲ, ಗಂಡ್ಸೇ ಎಲ್ಲವನ್ನೂ ನಿಭಾಯಿಸುವುದು ಎಂಬ ಧಿಮಾಕಿನಲ್ಲಿರುವ ಪುರುಷ ಪ್ರಧಾನ ಈ ಜಗತ್ತಿನೆದುರು ಸದಾ ಕಾಲ ತನ್ನ ದರ್ಪ ಅಹಂಕಾರವನ್ನು ತೀರಿಸಲು ಹೆಣ್ಣೊಂದು ಬೇಕು ಅನ್ನುವುದು ಬಹಳ ಹಿಂದಿನಿಂದಲೂ ನಡೆಸಿಕೊಂಡು ಬಂದ ಪದ್ಧತಿ ಇರಬಹುದೇನೋ? ಪುರಾಣದ ಕಾಲಘಟ್ಟದಿಂದಲೂ ಹೆಣ್ಣು ಪಾತ್ರಗಳು ಅರಮನೆಯಲ್ಲಿ ಇದ್ದರೂ ಕೂಡ ಒಂದು ರೀತಿಯ ಶೋಷಣೆಗೆ ಒಳಗಾದ ಪಾತ್ರಗಳೇ ಆಗಿದ್ದವು. ಉದಾಹರಣೆಗೆ ಕುಂತಿ, ದ್ರೌಪದಿ, ಸೀತೆ, ಉರ್ಮಿಳೆ ಎಲ್ಲರೂ ನೋವು ಸಂಕಷ್ಟಗಳಿಗೆ ಒಳಗಾದವರೆ? ಬಹುಶಃ ಅಂದಿನಿಂದ ಇಂದಿನವರೆಗೂ ಉತ್ತರ ಸಿಕ್ಕಿಲ್ಲ ಎಂಬ ಭಾವನೆ ನನ್ನದು. ಈ ಹಿನ್ನೆಲೆಯಲ್ಲಿ ಕೌಸಲ್ಯ ಸುಪ್ರಜಾ ರಾಮ ಸಿನಿಮಾ ತುಂಬಾ ಮುಖ್ಯವಾದ ಸಿನಿಮಾ.
ಕೃಷ್ಣ ಆಗಾಧವಾಗಿ ರಾಧೆಯನ್ಶು ಪ್ರೀತಿಸಿದರೂ ಕರ್ತವ್ಯದ ಹಿನ್ನೆಲೆಯಲ್ಲಿ ಬೃಂದಾವನದಿಂದ ಮಥುರೆಗೆ ಬರುತ್ತಾನೆ. ಇಲ್ಲಿ ರಾಧೆಯ ನೋವು ಕೃಷ್ಣನಿಗೆ ಮುಖ್ಯ ಆಗಲಿಲ್ಲ. ರಾಮನೇ ಸರ್ವಸ್ವ ಎಂದು ನಂಬಿದ ಸೀತೆಯನ್ನೇ ಸಂಶಯಿಸುತ್ತಾನೆ ರಾಮ! ಇಲ್ಲಿ ರಾಮನ ಸಂಶಯ ಗಂಡಸಿನ ಪುರುಷಹಂಕಾರಕ್ಕೆ ಉದಾಹರಣೆಯಾದರೆ ಈ ಅಧುನಿಕ ಯುಗದ ಕೌಸಲ್ಯ ಸುಪ್ರಜಾ ರಾಮ ಸಿನಿಮಾದ ರಾಮ ತನ್ನನ್ನು ಆಗಾಧವಾಗಿ ಪ್ರೀತಿಸುವ, ಆರಾಧಿಸುವ ಶಿವಾನಿಯನ್ನು ಅದೇ ಪುರುಷಹಂಕಾರದಿಂದ ದೂರ ಮಾಡಿಕೊಳ್ಳುತ್ತಾನೆ. ಪ್ರತಿಬಾರಿ ಹೆಣ್ಣು ಶೋಕದ ಪ್ರತಿರೂಪವಾಗಿ ಬಿಂಬಿತವಾಗುವ ಹಿನ್ನೆಲೆಯಲ್ಲಿ ಸಿನಿಮಾದ ಈ ಘಟ್ಟ , ನಿರ್ದೇಶಕನ ಆಶಯ ಏನು ಎಂಬುದು ನಮಗೆ ತಿಳಿಯಲು ಸಹಾಯ ಮಾಡುತ್ತದೆ. ಶಿವಾನಿಯ ಪಾತ್ರ ಪೋಷಣೆ ಮತ್ತು ಬೆಳವಣಿಗೆ ಸ್ವಾಗತಾರ್ಹ. ಆ ಬೆಳವಣಿಗೆ ಏನು ಅನ್ನುವುದನ್ನು ನೀವು ಸಿನಿಮಾದಲ್ಲಿಯೇ ನೋಡಿ. ಶಿವಾನಿಯ ಪಾತ್ರಧಾರಿ ಬೃಂದಾ ಆಚಾರ್ಯ ನಟನೆ ಶ್ಲಾಘನೀಯ.
ರಾಮನ ಪಾತ್ರ ಪೋಷಣೆಯು ತಾಯಿಯ ಸಾವಿನ ನಂತರ ತಿರುವ ಪಡೆಯುತ್ತದೆ. ಆ ತಿರುವಿನ ಘಟ್ಟದಲ್ಲಿ ಅದ್ಭುತವಾದ ಸಾಹಿತ್ಯ, ಸಂಗೀತ ಮತ್ತು ದೃಶ್ಯ ಸಂಯೋಜನೆಯ ಈ ಕೆಳಗಿನ ಹಾಡು ಪ್ರೇಕ್ಷಕರನ್ನು ಭಾವನಾತ್ಮಕವಾಗಿಸುವಲ್ಲಿ ಯಶಸ್ವಿಯಾಗಿದೆ.
ಯಾರೋ ಕರೆದ ಹಾಗೆ ಹೋದೆ ಏಕೆ ಹೀಗೆ, ನಾಳೆ ಬರದ ಹಾಗೆ ಹೋದೆ ಎಲ್ಲಿ ಹೀಗೆ, ನೀ ಕೊಟ್ಟ ಎಲ್ಲಾ ಪ್ರೀತಿ ವಾತ್ಸಲ್ಯದ ಋಣಭಾರ ಹೊತ್ತು ನಾನು ಇರಲಿ ಹೇಗೆ ? ಮರಳಿ ಬಾ ಮರಳಿ ಬಾ ಮರಳಿ ಬಾ ನನ್ನಮ್ಮ ಕೇಳಿಸಿಕೋ ಈ ಕರೆಯಮ್ಮ ಮರಳಿ ಬಾ ನನ್ನಮ್ಮ
ನೋವೆಲ್ಲಾ ನೀ ನುಂಗಿ ನಗುವ ಕೊಟ್ಟೆ ನಿನ್ನೆಲ್ಲಾ ಆಸೆಗಳ ನನಗೇ ಬಿಟ್ಟೆ ನಿನ್ನಾ ತ್ಯಾಗವ ಹೇಗೆ ಮರೆಯಲಿ, ಅಮ್ಮಾ ಎಂದು ನಾ ಯಾರ ಕೂಗಲಿ ಬರುವಾಗ ನೋವ ಕೊಟ್ಟು ಬಂದೆ ಎಂದು ನನಗೀಗ ಅದನೇ ನೀನು ಬಿಟ್ಟೇ ಏನು ಮರಳಿ ಬಾ ಮರಳಿ ಬಾ ಮರಳಿ ಬಾ ನನ್ನಮ್ಮ ಕೇಳಿಸಿಕೋ ಕರೆಯಮ್ಮ ಮರಳಿ ಬಾ ನನ್ನಮ್ಮ
ಯಾರೋ ಕರೆದ ಹಾಗೆ ಹೋದೆ ಏಕೆ ಹೀಗೆ, ನಾಳೆ ಬರದ ಹಾಗೆ
ಈ ಸಾಹಿತ್ಯ ಹಾಗೇ ಓದಿದಾಗ ಆಗುವ ಅನುಭವಕ್ಕಿಂತಲೂ ಸಿನಿಮಾದಲ್ಲಿ ಹೆಚ್ಚು ಗಾಢವಾದ ಪ್ರಭಾವ ಬೀರುತ್ತದೆ. ಅಮ್ಮ ಮಗನ ಬಾಂಧವ್ಯವನ್ನು ಹೇಳುವ ಈ ಹಾಡು ನನಗೆ ಇಷ್ಟ ಆಯ್ತು.
ರಾಮನ ಅಮ್ಮ ಕೌಸಲ್ಯ ತೀರಿಹೋದ ನಂತರ ಬರುವ ಸಿದ್ದೇಗೌಡರ ಸೊಸೆ ಮುತ್ತು ಲಕ್ಮೀ ಪ್ರವೇಶದಿಂದ ಸಿನಿಮಾದ ಮೊದಲ ಭಾಗದಲ್ಲಿ ಎತ್ತಿದ ಅನೇಕ ಪ್ರಶ್ನೆಗಳಿಗೆ ಉತ್ತರಾರ್ದದಲ್ಲಿ ಉತ್ತರ ನೀಡುತ್ತಾ ಸಾಗುತ್ತಾರೆ ನಿರ್ದೇಶಕ ಶಶಾಂಕ್. ಮುತ್ತು ಲಕ್ಮೀ ಮತ್ತು ರಾಮನ ಮದುವೆ Marriage for Convenience ಗೋಸ್ಕರ!
ತಾನು ಯಾಕೆ ಈ ಮದುವೆಗೆ ಒಪ್ಪಿಕೊಂಡೆ ಮತ್ತು ನಾನು ಯಾಕೆ ಕುಡಿಯಲು ಆರಂಭಿಸಿದೆ ಎನ್ನುವುದನ್ನು ಮತ್ತುಲಕ್ಷ್ಮಿ ಮತ್ತು ಗಂಡ ರಾಮನ ಬಳಿಯ ಈ ಸಂಭಾಷಣೆ ಕ್ಷಣ ಕಾಲ ನಮ್ಮನ್ನು ಚಿಂತನೆ ಮಾಡುವಂತೆ ಮಾಡುತ್ತದೆ.
ಮುತ್ತು ಲಕ್ಮೀ: ಹೆಣ ನೋಡಿದ್ರೆ ಭಯ ಆಗುತ್ತೆ ಅಂತ ಕುಡಿಯೋಕೆ ಶುರುಮಾಡಿದ ನಾನು ಈ ಹೊತ್ತು ಈ ಮಟ್ಟಕ್ಕೆ ಬಂದು ನಿಂತಿದ್ದೀನಿ ಅಂದ್ರೇ.. ನನ್ನ ಈ ಪರಿಸ್ಥಿತಿಗೆ ಕಾರಣ ಯಾರು ರಾಮ? …
ಭಯ ಆಗುತ್ತೆ ಅಂತ ಹೇಳಿದ್ರು, ಕೇಳದೆ ಮ್ಯಾನಿಪುಲೇಟ್ ಮಾಡಿದ ಅಪ್ಪನ? ಇಲ್ಲ, ಹೆಣ ಇಟ್ಟುಕೊಂಡು ಪಾಠ ಮಾಡೋ ಸಿಸ್ಟಮಾ? What an Irony ಸತ್ತಿರುವವರು ಬದುಕಿರುವವರಿಗೆ ಪಾಠ ಆಗ್ತಾರಂತೆ.
ಆಗ ಮೌನಕ್ಕೆ ಶರಣಾಗುವ ರಾಮ ಗಮನ ಸೆಳೆಯುತ್ತಾನೆ.
ತಾಯಿಯಾಗಿರುವ, ಹೆಂಡತಿಯಾಗಿರುವ, ಸಹೋದರಿಯಾಗಿರುವ ಹೆಣ್ಣು, ಪುರುಷ ಪ್ರಧಾನವಾದ ಈ ಆಧುನಿಕ ಸಂದರ್ಭದಲ್ಲಿ ತನ್ನ ಅಸ್ಮಿತೆಯನ್ನು ಹೇಗೆ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಾಳೆ ಎನ್ನುವುದೇ ಕೌಸಲ್ಯ ಸುಪ್ರಜಾ ರಾಮ ಸಿನಿಮಾ. ಮಚ್ಚು, ಲಾಂಗ್, ಸುತ್ತಿಗೆಯಿಂದ ಚಚ್ಚಿಸಿಕೊಂಡ ಪ್ರೇಕ್ಷಕ ಸುಸ್ತಾಗಿದ್ದು ಮತ್ತು ಹೊಸತನ್ನು ಬಯಸುವವನಿದ್ದರೆ ಕೌಸಲ್ಯ ಸುಪ್ರಜಾ ರಾಮ ಸಿನಿಮಾ ಖಂಡಿತ ನೋಡಬಹುದಾದ ಸಿನಿಮಾ.
ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್, ರಂಗಾಯಣ ರಘು, ಸುಧಾ ಬೆಳವಾಡಿ, ನಾಗಭೂಷಣ ಮತ್ತು ಎಲ್ಲಾ ಕಲಾವಿದರು ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಕನಸಿನ ಭತ್ತಕ್ಕೆ ಗೋಣಿಯಾಂತಂತೆ– ನಯಸೇನನ ವಿಡಂಬನಾತ್ಮಕ ಕಾವ್ಯ ‘ಧರ್ಮಾಮೃತ’ದಲ್ಲಿ ಬರುವ ಮಾತಿದು. ಕನ್ನಡಿಯೊಳಗಿನ ಗಂಟು ಎಂಬ ನುಡಿಗಟ್ಟನ್ನು ಇದಕ್ಕೆ ಪೂರಕವಾಗಿ ತೆಗೆದುಕೊಳ್ಳಬಹುದು.
ಕನ್ನಡಿಯೊಳಗಿನ ಗಂಟು ನಮ್ಮ ಸಮಕ್ಷಮ ಇದ್ದರೂ ಅದನ್ನು ನೋಡಬಹುದೆ ವಿನಃ ಅದರ ಅನುಭೂತಿ ಪಡೆಯಲು ಸಾಧ್ಯವಿಲ್ಲ ಅದು ಬರೀ ಭ್ರಾಮಕ ಹಾಗೆಯೇ ಕನಸಿನಲ್ಲಿ ಭತ್ತದ ರಾಶಿಯನ್ನೆ ಕಂಡರೆ ಅದನ್ನು ಚೀಲದಲ್ಲಿ ತುಂಬಿಸಿಕೊಳ್ಳಲು ಸಾಧ್ಯವಿಲ್ಲ. ಸಿಕ್ಕಂತೆ ಅಷ್ಟೇ ಅನುಭವಿಸಲು ಬಾರದು. ಇದು ಹೇಗೆ ಅಂದರೆ ತಾನೇ ಬಾಯಲ್ಲಿ ಕಚ್ಚಿಕೊಂಡ ಮೂಳೆಯನ್ನು ನೀರಿನ ಬಿಂಬದಲ್ಲಿ ನೋಡಿ ಅದನ್ನೂ ಬಯಸ ಹೋಗಿ ಇರುವುದನ್ನು ಕಳೆದುಕೊಂಡು ನಿರಾಸೆ ಅನುಭವಿಸಿದ ನಾಯಿಯಂತಾಗುತ್ತದೆ.
ಕನಸುಗಳು ಇರಬೇಕು ಆದರೆ ಕನಸಿನ ಕೋಟೆಯಲ್ಲಿಯೇ ಬಂಧಿಯಾಗಬಾರದು. ನಾವು ಕಂಡ ಕನಸನ್ನು ವಾಸ್ತವದಲ್ಲಿ ಈಡೇರಿಸಿಕೊಳ್ಳುವ ಛಲ ಇರಬೇಕು. . ಪುರಂದರದಾಸರು ಕನ್ನಡಿಯೊಳಗಿನ ಗಂಟ ಕಂಡು ಕಳ್ಳ ಕನ್ನವಿಕ್ಕುವನ ವಶವಹುದೇ? ಎಂದಿದ್ದಾರೆ ಇದು ಒಂದು ಭ್ರಾಮಕ ಸ್ಥಿತಿಯನ್ನು ಹೇಳುತ್ತದೆ. ವಾಸ್ತವದ ತಿಳಿವಿರಬೇಕೆಂಬುದು ಮುಖ್ಯ.
‘ಕನಸಿನ ಭತ್ತಕ್ಕೆ ಗೋಣಿಯಾಂತಂತೆ’ ಎಂಬ ಮಾತನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡುವಂತಿಲ್ಲ. ದೂರದ ಬೆಟ್ಟ ನುಣ್ಣಗೆ ಕೈಗೆ ಸಿಗದ ದ್ರಾಕ್ಷಿ ಹುಳಿ ಎಂದು ತೀರ್ಮಾನಕ್ಕೂ ಬರಬಾರದು ಅದರ ಬೆನ್ನು ಹತ್ತ ಬೇಕು ಅಂದರೆ ಪರಿಶ್ರಮ ಪಡ ಬೇಕು . ಆಗ ಪ್ರತಿಫಲ ಸಿಗುತ್ತದೆ . ಆದರೆ ಸಿಕ್ಕೇ ಸಿಗುವುದು ಅನ್ನುವ ಹುಂಬತನವಿರಬಾರದು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಅಂದರೆ ಅಭಾವದಲ್ಲೂ ಅನುಭಾವ ಪಡೆಯುವ ಜೀವ ಚೈತನ್ಯ ಇರಬೇಕು. ಇರುವುದನ್ನು ಬಿಟ್ಟು ಸಿಗದೆ ಇರುವುದರ ಕಡೆಗೆ ನಮ್ಮ ಮನಸ್ಸು ಹೊರಳುವುದು ಇದನ್ನೆ ಗೊಪಾಲಕೃಷ್ಣ ಅಡಿಗರು ಇದ್ದುದೆಲ್ಲವ ಬಿಟ್ಟು ಇರದುದರರೆಡೆಗೆ ತುಡಿವುದೇ ಜೀವನ ಎಂದಿರುವುದು.
ಭ್ರಾಮಕ ಸ್ಥಿತಿಯಿಂದ ಹೊರ ಬಂದು ಅಸಾಧ್ಯವನ್ನು ಸಾಧ್ಯ ಮಾಡಿಕೊಳ್ಳಬೇಕು ಸಮಸ್ಯೆಗಳಿಗೆ ಮುಖಾಮುಖಿಯಾಗಬೇಕು ಅದನ್ನು ಹೊರತು ಪಡಿಸಿ ವಾಮಮಾರ್ಗ ಸಂಚಾರ ವ್ಯರ್ಥ ಎಂಬುದನ್ನು ಕನಸಿನ ಭತ್ತಕ್ಕೆ ಗೋಣಿಯಾಂತಂತೆ ಎಂಬ ಮಾತು ಹೇಳುತ್ತದೆ.
ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ
ದೇಶದ ಪ್ರತಿಷ್ಠಿತ ಬ್ಯಾಂಕ್ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿ ಐ) ನಲ್ಲಿ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಅಪ್ರೆಂಟಿಸ್ ಶಿಪ್(ಉದ್ಯೋಗ ತರಬೇತಿ) ಹುದ್ದೆಗಳಿಗೆ ಅಪ್ರೆಂಟಿಸ್ ಕಾಯಿದೆ 1961 ಅಡಿಯಲ್ಲಿ ಅಪ್ರೆಂಟಿಸ್‌ಗಳಾಗಿ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಒಂದು ರಾಜ್ಯದಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದು.ಈ ಯೋಜನೆಯಡಿಯಲ್ಲಿ ಅಭ್ಯರ್ಥಿಗಳು ಒಮ್ಮೆ ಮಾತ್ರ ಪರೀಕ್ಷೆಗೆ ಹಾಜರಾಗಬಹುದು. ಇದು ಒಂದು ವರ್ಷದ ಉದ್ಯೋಗ ತರಬೇತಿ ಯಾಗಿದೆ.ಈ ಹಿನ್ನೆಲೆಯಲ್ಲಿ, ಬ್ಯಾಂಕಿಂಗ್ ವಲಯದಲ್ಲಿ ಉದ್ಯೋಗ ಪಡೆಯಲು ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗೆ ನೀಡಲಾದ ಮಾಹಿತಿ ಆಧರಿಸಿ ಅರ್ಜಿ ಸಲ್ಲಿಸಬಹುದು.
ಕೇಂದ್ರಾಡಳಿತ ಪ್ರದೇಶಗಳ ಸಹಿತ ಅನೇಕ ರಾಜ್ಯಗಳಲ್ಲಿ ಅಪ್ರೆಂಟಿಸ್ ಶಿಪ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು. ಒಟ್ಟು ಹುದ್ದೆಗಳ ಸಂಖ್ಯೆ 6160. ಈ ಪೈಕಿ ಕರ್ನಾಟಕದಲ್ಲಿ 175 ಹುದ್ದೆಗಳಿದ್ದು 71 ಸಾಮಾನ್ಯ ವಿಭಾಗ, ಎಸ್ಸಿ 28, ಎಸ್ಟಿ 12, ಒಬಿಸಿ 47 ಹಾಗೂ ಆರ್ಥಿಕವಾಗಿ ಹಿಂದುಳಿದವರಿಗಾಗಿ 17 ಹುದ್ದೆಗಳನ್ನು ಮೀಸಲಿರಿಸಲಾಗಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆ?
ಜಿಲ್ಲಾವಾರು ಹುದ್ದೆಗಳ ಸಂಖ್ಯೆ ಹೀಗಿದೆ:
ಬಾಗಲಕೋಟ-6, ಬಳ್ಳಾರಿ-9, ಬೆಳಗಾವಿ-8, ಬೆಂಗಳೂರು ಗ್ರಾಮಾಂತರ-2, ಬೆಂಗಳೂರು Urban-3,ಬೀದರ್-8, ಚಾಮರಾಜ ನಗರ-7, ಚಿಕ್ಕಮಗಳೂರು-4, ಚಿಕ್ಕಬಳ್ಳಾಪುರ-5, ಚಿತ್ರದುರ್ಗ-3, ದಕ್ಷಿಣ ಕನ್ನಡ-6, ದಾವಣಗೆರೆ-6, ಧಾರವಾಡ-3,ಗದಗ-3 ,ಹಾಸನ-8, ಹಾವೇರಿ-4 ,ಕಲ್ಬುರ್ಗಿ-8, ಕೊಡಗು-1,ಕೋಲಾರ-4, ಕೊಪ್ಪಳ-6, ಮಂಡ್ಯ-10,ಮೈಸೂರು-8,ರಾಯಚೂರು-8, ರಾಮನಗರ-4,ಶಿವಮೊಗ್ಗ-6, ತುಮಕೂರು-18,ಉಡುಪಿ-3,ಉತ್ತರಕನ್ನಡ-5,ವಿಜಯಪುರ-4,ಯಾದಗಿರಿ-5
ಅರ್ಜಿಸಲ್ಲಿಕೆಯವಿಧಾನ:
ಎಸ್‌ಬಿಐ ನ ಅಧೀಕೃತ ವೆಬ್‌ಸೈಟ್ https://bank.sbi/web/careers ಲಾಗಿನ್ ಮಾಡಿಕೊಂಡು ಆನ್‌ಲೈನ್ ನಲ್ಲಿಯೆ ಸೂಕ್ತ ಮಾಹಿತಿಗಳನ್ನ ಭರ್ತಿ ಮಾಡಬೇಕು ಹಾಗೂದಾಖಲೆಗಳ ಪ್ರತಿಗಳನ್ನು ಲಗತ್ತಿಸಬೇಕು ಲಿಖಿತ ಧೃಢೀಕರಣ ಅಪ್ ಲೋಡ್ ಮಾಡಿ ಶುಲ್ಕ ಪಾವತಿಸಬೇಕು.
ಶೈಕ್ಷಣಿಕ ಅರ್ಹತೆ ಏನಿರಬೇಕು?:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಅಂದರೆ ಕಲೆ, ವಾಣಿಜ್ಯ ವಿಜ್ಞಾನ ಅಥವಾ ಇನ್ನಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.
ವಯೋಮಿತಿ:
01.08.2023 ಕ್ಕೆ, 20 ವರ್ಷಕ್ಕಿಂತ ಕಡಿಮೆ ಇರಬಾರದು. ಮತ್ತು 28 ವರ್ಷಗಳಿಗಿಂತ ಹೆಚ್ಚಿರಬಾರದು. ಅಂದರೆ 20 ವರ್ಷದಿಂದ 28 ವರ್ಷದೊಳಗಿನವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅಭ್ಯರ್ಥಿಯು 02.08.1995 ಕ್ಕಿಂತ ಮೊದಲು ಮತ್ತು 01.08.2023 ಕ್ಕಿಂತ ನಂತರ ಹುಟ್ಟಿರಬಾರದು( ಎರಡೂ ದಿನಾಂಕಗಳು ಒಳಗೊಂಡಂತೆ) ಸರಕಾರದ ನಿಯಮದಂತೆ ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಿಗೆ/ ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ/ ಮತ್ತು ವಿಕಲಚೇತನರಿಗೆ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.
ಅರ್ಜಿಶುಲ್ಕವೆಷ್ಟು?:
ಸಾಮಾನ್ಯ, ಒಬಿಸಿ ಮತ್ತು ಆರ್ಥಿಕ ದುರ್ಬಲ ವರ್ಗದ ಅಭ್ಯರ್ಥಿಗಳಿಗೆ 300 ರೂ. ಹಾಗೂ ಎಸ್ಸಿ/ ಎಸ್ ಟಿ /ವಿಶೇಷ ಚೇತನ ಅಭ್ಯರ್ಥಿಗಳಿಗೆ ಸಂಪೂರ್ಣ ವಿನಾಯಿತಿ ನೀಡಲಾಗಿದೆ.
ರಾಜ್ಯದಲ್ಲಿ ಪರೀಕ್ಷಾ ಕೇಂದ್ರಗಳೆಲ್ಲಿ?
ರಾಜ್ಯದಲ್ಲಿ 9 ಪರೀಕ್ಷಾ ಕೇಂದ್ರಗಳಿವೆ: ಬೆಂಗಳೂರು, ಬೆಳಗಾವಿ, ಕಲಬುರಗಿ ಹುಬ್ಬಳ್ಳಿ-ಧಾರವಾಡ, ಮಂಗಳೂರು, ಮೈಸೂರು, ಶಿವಮೊಗ್ಗ ಹಾಗೂ ಉಡುಪಿ
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಸೆಪ್ಟೆಂಬರ್ 21, 2023
ಆನ್ ಲೈನ್ ನಲ್ಲಿ ಪರೀಕ್ಷೆ ನಡೆಯುವ ದಿನಾಂಕ: ಅಕ್ಟೋಬರ್/ನವೆಂಬರ್, 2023.
ಕನ್ನಡದಲ್ಲಿ ಪರೀಕ್ಷೆ:
ಕರ್ನಾಟಕದ ಅಭ್ಯರ್ಥಿಗಳು ಹಿಂದಿ ಅಥವಾ ಇಂಗ್ಲಿಷ್ ಜೊತೆಗೆ ಕನ್ನಡ ಭಾಷೆಯಲ್ಲೂ ಪರೀಕ್ಷೆ ಬರೆಯುವ ಅವಕಾಶವನ್ನು ಎಸ್ ಬಿ ಆಯ್ ನೀಡಿದೆ. ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವಾಗ ಭಾಷೆ ನಮೂದಿಸಬೇಕು. (ಪರೀಕ್ಷಾ ಸಂದರ್ಭದಲ್ಲಿ ಬದಲಾವಣೆಗೆ ಅವಕಾಶವಿಲ್ಲ ಎಂಬುದನ್ನ ಮರೆಯದಿರಿ.)
ನೆನಪಿಡಿ:
ಲಿಖಿತ ದೃಢೀಕರಣ:
ಕೈಬರಹದ ಘೋಷಣೆಯ ಪಠ್ಯ ಈ ರೀತಿಯಲ್ಲಿ ಬರೆದು ಅಪ್ಲೋಡ್ ಮಾಡಬೇಕು,_______ (ಅಭ್ಯರ್ಥಿಯ ಹೆಸರು),ಈ ಮೂಲಕ ಅರ್ಜಿಯಲ್ಲಿ ಸಲ್ಲಿಸಿದ ಎಲ್ಲಾ ಮಾಹಿತಿಯು ಸರಿಯಾಗಿದೆ.ನಿಜ ಮತ್ತು ಮಾನ್ಯವಾಗಿದೆ ಎಂದು ಘೋಷಿಸುತ್ತೇನೆ. ಅಗತ್ಯವಿದ್ದಾಗ ನಾನು ಪೂರಕ ದಾಖಲೆಗಳನ್ನು ಪ್ರಸ್ತುತಪಡಿಸುತ್ತೇನೆ.”
ಮೇಲೆ ತಿಳಿಸಿದ ಕೈಯಲ್ಲಿ ಬರೆದ ಲಿಖಿತ ಘೋಷಣೆಯು ಅಭ್ಯರ್ಥಿಯ ಕೈ ಬರಹದಲ್ಲಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಇರಬೇಕು ಮತ್ತು ಕ್ಯಾಪಿಟಲ್ ಲೆಟರ್ಸ್‌ನಲ್ಲಿ ಇರಬಾರದು. ಇದನ್ನು ಬೇರೆಯವರು ಅಥವಾ ಬೇರೆ ಯಾವುದೇ ಭಾಷೆಯಲ್ಲಿ ಬರೆದಿದ್ದರೆ, ಅರ್ಜಿಯನ್ನು ಅಮಾನ್ಯವೆಂದು ಪರಿಗಣಿಸಲಾಗುತ್ತದೆ. ಕ್ಯಾಪಿಟಲ್ ಲೆಟರಗಳಲ್ಲಿ ಹಾಕಿದ ಸಹಿಯನ್ನು ಸ್ವೀಕರಿಸಲಾಗುವುದಿಲ್ಲ. ಎಡ ಹೆಬ್ಬೆರಳಿನ ಗುರುತು ಸರಿಯಾಗಿ ಸ್ಕ್ಯಾನ್ ಮಾಡಬೇಕು ಮತ್ತು ಮಸುಕಾಗಿರಬಾರದು.
ಅಪ್ರೆಂಟಿಸ್ಶಿಪ್ನಲ್ಲಿಆಯ್ಕೆಯಾದರೆಲಾಭವೇನು?
ಅಪ್ರೆಂಟಿಸ್ ಗಳಾಗಿ ನೇಮಕಗೊಂಡರೆ ಅದು ಬ್ಯಾಂಕ್‌ನಲ್ಲಿ ಉದ್ಯೋಗ ನೀಡಿದೆ ಎಂದರ್ಥವಲ್ಲ. ಭವಿಷ್ಯದಲ್ಲಿ ಬ್ಯಾಂಕ್‌ನಲ್ಲಿ ಉದ್ಯೋಗ ಪಡೆಯಲು ಇದು ಸಹಾಯವಾಗುತ್ತದೆ.
ಕಾಲಕಾಲಕ್ಕೆ ತಿದ್ದುಪಡಿ ಮಾಡಿದಂತೆ ಬ್ಯಾಂಕಿನ ನೇಮಕಾತಿ ನೀತಿಯ ಪ್ರಕಾರ ಜೂನಿಯರ್ ಅಸೋಸಿಯೇಟ್‌ಗಳ ನೇಮಕಾತಿಯಲ್ಲಿ ಅಪ್ರೆಂಟಿಸ್‌ಗಳಿಗೆ weightage /ಕೆಲ ಸಡಿಲಿಕೆಯನ್ನು ನೀಡಲಾಗುತ್ತದೆ. ಅಪ್ರೆಂಟಿಸ್‌ಶಿಪ್ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಮತ್ತು ಅಭ್ಯರ್ಥಿಯ ಸಂಪೂರ್ಣ ತರಬೇತಿ ಅವಧಿಯಲ್ಲಿ ತೃಪ್ತಿದಾಯಕ ನಡವಳಿಕೆಗೆ ಒಳಪಟ್ಟಿರುವ ಅಪ್ರೆಂಟಿಸ್‌ಗಳಿಗೆ ಜೂನಿಯರ್ ಅಸೋಸಿಯೇಟ್‌ಗಳ ನೇಮಕಾತಿಯಲ್ಲಿ ಸಡಿಲಿಕೆಯನ್ನು ನೀಡಲಾಗುವುದು. ಅಪ್ರೆಂಟಿಸ್‌ಶಿಪ್ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಕೌಶಲ್ಯ ಮೌಲ್ಯಮಾಪನ ಪರೀಕ್ಷೆ (ಟ್ರೇಡ್ ಪರೀಕ್ಷೆ) ಮತ್ತು ಜಂಟಿ ರಾಷ್ಟ್ರೀಯತೆಯ ಅಪ್ರೆಂಟಿಸ್ ಶಿಪ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. SBI-NSDC/ BFSI-SSC ಜಂಟಿಯಾಗಿ ನೀಡಿದ ಅಪ್ರೆಂಟಿಸ್‌ಶಿಪ್ ಪ್ರಮಾಣಪತ್ರ ಅಗತ್ಯ.
ತರಬೇತಿಯಅವಧಿ: ಒಂದುವರ್ಷತರಬೇತಿಯ ಅವಧಿಯಲ್ಲಿ ಅಭ್ಯರ್ಥಿಗಳಿಗೆ ತಿಂಗಳಿಗೆ 15,000 ರೂ. ಸ್ಟೈಪೆಂಡ್ ನೀಡಲಾಗುತ್ತದೆ. ಇದರ ಹೊರತಾಗಿ ಯಾವುದೇ ಭತ್ಯೆಯನ್ನು ನೀಡಲಾಗುವುದಿಲ್ಲ.
ಭಾಷಾವಾರುನೇಮಕಾತಿ:
ರಾಜ್ಯದ ಸೀಟುಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳುಓದುವುದು,ಬರೆಯುವುದು, ಮಾತನಾಡುವುದು ಮತ್ತು ಅರ್ಥಮಾಡಿಕೊಳ್ಳುವುದರಲ್ಲಿ ಪ್ರವೀಣ ರಾಗಿರಬೇಕು ಕನ್ನಡ ಸ್ಥಳೀಯ ಜ್ಞಾನದ ಪರೀಕ್ಷೆ ಆಯ್ಕೆ ಪ್ರಕ್ರಿಯೆಯ ಭಾಗವಾಗಿ ನಡೆಸಲಾಗುವುದು. ಆನ್‌ಲೈನ್ ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದ ನಂತರ ಇದನ್ನು ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆಯಲು ವಿಫಲರಾದ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲಾಗುವುದಿಲ್ಲ.10ನೇ ಅಥವಾ 12ನೇ ತರಗತಿಯ ಮಾರ್ಕ್ ಶೀಟ್/ಪ್ರಮಾಣ ಪತ್ರದಲ್ಲಿ ಅಭ್ಯರ್ಥಿಗಳು ನಿರ್ದಿಷ್ಟ ಪಡಿಸಿದ ಸ್ಥಳೀಯ ಭಾಷೆಯನ್ನು ಅಧ್ಯಯನ ಮಾಡಿದ್ದರೆ ಭಾಷೆಯ ಪರೀಕ್ಷೆಗೆ ಒಳಗಾಗುವ ಅಗತ್ಯವಿಲ್ಲ ಈ ಕಾರಣದಿಂದ. ಅಭ್ಯರ್ಥಿಗಳನ್ನು ಸ್ಥಳೀಯ ಭಾಷೆಯ ನಿರರ್ಗಳತೆ ಆಧಾರದಲ್ಲಿ ಕೂಡ ನೇಮಕಾತಿ ನಡೆಸಲಾಗುತ್ತಿದೆ ಎಂದು ಎಸ್‌ಬಿಐ ತಿಳಿಸಿದೆ.
ಆಯ್ಕೆಹೇಗಿರಲಿದೆ?
ಆನ್ಲೈನ್ ನಲ್ಲಿ ಲಿಖಿತ ಪರೀಕ್ಷೆ ಮತ್ತು ಸ್ಥಳೀಯ ಭಾಷಾ ಪರೀಕ್ಷೆ ದಾಖಲೆ ಪರಿಶೀಲನೆ,ವೈದ್ಯಕೀಯ ಪರೀಕ್ಷೆ, ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯುತ್ತದೆ. ಆನ್‌ಲೈನ್ ಪರೀಕ್ಷೆಯಲ್ಲಿ ಜನರಲ್ /ಫೈನಾನ್ಶಿಯಲ್ ಅವೇರ್ನೆಸ್, ಜನರಲ್ ಇಂಗ್ಲಿಷ್, ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್ ಹಾಗೂ ರೀಸನಿಂಗ್ ಎಬಿಲಿಟಿ ಮತ್ತು ಕಂಪ್ಯೂಟರ್ ಅಪ್ಟಿಟ್ಯೂಡ್ ವಿಷಯಗಳಿಗೆ ತಲಾ 25 ಅಂಕಗಳಂತೆ 25 ಪ್ರಶ್ನೆಗಳನ್ನು ನೀಡಲಾಗುತ್ತದೆ. ಇದನ್ನು ಬರೆಯಲು ಪ್ರತಿ ಪತ್ರಿಕೆಗೆ 15 ನಿಮಿಷಗಳಂತೆ ಒಟ್ಟಾರೆ 1 ಗಂಟೆಯ ಅವಧಿ ನೀಡಲಾಗುತ್ತದೆ. ಇಂಗ್ಲಿಷ್‌ನಲ್ಲಿ ಪ್ರಶ್ನೆ ಇರುತ್ತದೆ. ಅಭ್ಯರ್ಥಿಗಳು ಕನ್ನಡ, ಇಂಗ್ಲಿಷ್ ಅಥವಾ ಹಿಂದಿ ಯಾವುದೇ ಮಾಧ್ಯಮದಲ್ಲಿ ಪರೀಕ್ಷೆ ಬರೆಯಬಹುದಾಗಿದೆ. ಆಬ್ಜೆಕ್ಟಿವ್ ಮಾದರಿಯಲ್ಲಿ ಪರೀಕ್ಷೆ ನಡೆಯಲಿದ್ದು ತಪ್ಪು ಉತ್ತರಕ್ಕೆ ¼ ರಷ್ಟು ಋಣಾತ್ಮಕ ಮೌಲ್ಯ ಮಾಪನದಂತೆ ಅಂಕದ ಕಡಿತ ಕೂಡ ಇರಲಿದೆ.
ಗಮನಿಸಿ
ಒಮ್ಮೆ ಆಯ್ಕೆ ಮಾಡಿದ ಬಳಿಕ ಪರೀಕ್ಷಾ ಕೇಂದ್ರ ಬದಲಾಯಿಸಲು ಅವಕಾಶವಿಲ್ಲ
ಸ್ವಂತ ಖರ್ಚಿನಲ್ಲಿಯೇ ಅಭ್ಯರ್ಥಿಗಳು ನೇಮಕ ಪ್ರಕ್ರಿಯೆಗಳಿಗೆಹಾಜರಾಗಬೇಕು.
ಪರೀಕ್ಷೆಯಲ್ಲಿ ತೇರ್ಗಡೆಯಾದ ಬಳಿಕ
ವೈದ್ಯಕೀಯ ಪರೀಕ್ಷೆಯಲ್ಲಿ ಅರ್ಹತೆ
ಪಡೆಯುವುದು ಕಡ್ಡಾಯ.
ಅಂತಿಮವಾಗಿ ದಾಖಲಾತಿ ಪರಿಶೀಲನೆ ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತದೆ
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ವೆಬ್ ವಿಳಾಸ sbi.co.in.
ಬ್ಯಾಂಕ್ ನಲ್ಲಿ ಅಧಿಕಾರಿ ಯಾಗಬೇಕೆಂದು ಕನಸು ಹೊತ್ತವರಿಗೆ ಇಲ್ಲಿದೆ ಮತ್ತೊಂದು ಸಿಹಿ ಸುದ್ದಿ, ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ ದೇಶದ 11 ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಸರಿ ಸುಮಾರು 3,049 ಹುದ್ದೆಗಳಿಗೆ ಪೂರ್ವಭಾವಿ ಹಾಗೂ ಮುಖ್ಯ ಪರೀಕ್ಷೆ,ಸಂದರ್ಶನ ನಡೆಸಲು ತೀರ್ಮಾನಿಸಿದೆ. ಪರಿಶಿಷ್ಟ ಜಾತಿಯವರಿಗೆ 462, ಪರಿಶಿಷ್ಟ ಪಂಗಡದವರಿಗೆ 234, ಹಿಂದುಳಿದ ವರ್ಗದವರಿಗೆ 829, ಸಾಮಾನ್ಯ ವರ್ಗದವರಿಗೆ 1,224 ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ 300 ಹುದ್ದೆಗಳು ದೇಶಾದ್ಯಂತ ಮೀಸಲಾಗಿವೆ.
ರಾಜ್ಯದ 13 ಜಿಲ್ಲಾ ಕೇಂದ್ರಗಳಲ್ಲಿ ಪೂರ್ವಭಾವಿ ಪರೀಕ್ಷೆ ಮತ್ತು 3 ಜಿಲ್ಲಾ ಕೇಂದ್ರಗಳಲ್ಲಿ ಮುಖ್ಯ ಪರೀಕ್ಷೆ ಆನ್ ಲೈನ್ ನಲ್ಲಿ ನಡೆಯಲಿದೆ.
ಯಾವ ಬ್ಯಾಂಕಿನಲ್ಲಿ ಎಷ್ಟು ಹುದ್ದೆ?
Sr. No.
Participating Bank
SC
ST
OBC
EWS
UR
TOTAL
1
BANK OF INDIA
33
16
60
22
93
224
2
CANARA BANK
75
37
135
50
203
500
3
CENTRAL BANK OF INDIA
300
150
540
200
810
2000
4
PUNJAB NATIONAL BANK
30
15
54
20
81
200
5
PUNJAB&SIND BANK
24
16
40
8
37
125
total
462
234
829
300
1224
3049
ಕೆನರಾ ಬ್ಯಾಂಕ್ 500, ಪಂಜಾಬ್ ಎಂಡ್ ಸಿಂಧ ಬ್ಯಾಂಕ್ 125 , ಸೆಂಟ್ರಲ್ ಬ್ಯಾಂಕ್ ಆಪ್ ಇಂಡಿಯಾ 2000, ಬ್ಯಾಂಕ್ ಆಫ್ ಇಂಡಿಯಾ 224 ಪಂಜಾಬ್ ನ್ಯಾಷನಲ್ ಬ್ಯಾಂಕ್ 200 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವುದಾಗಿ ಪ್ರಕಟಿಸಿವೆ.
ಶೈಕ್ಷಣಿಕ ಅರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯ ದಿಂದ ಯಾವುದೇ ವಿಷಯದಲ್ಲಿ ಪದವಿ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಸಮಾನ ಅರ್ಹತೆ.
ಒಂದು ವೇಳೆ ಸಂದರ್ಶನಕ್ಕೆ ಕರೆ ಬಂದರೆ, ಅವರು 21 ನೇ ಅಗಸ್ಟ್ 2023 ಅಥವಾ ಅದಕ್ಕಿಂತ ಮೊದಲು ಪದವಿ ಪರೀಕ್ಷೆಯಲ್ಲಿ ಉತ್ತೀರ್ಣ ರಾಗಿರುವುದಕ್ಕೆ ಪುರಾವೆಗಳನ್ನು ಒದಗಿಸಬೇಕು.
ಅರ್ಜಿ ಸಲ್ಲಿಕೆ ವಿಧಾನ: ಆನ್ ಲೈನ್.
ಅರ್ಜಿ ಸಲ್ಲಿಕೆ ದಿನಾಂಕ: ಅಗಸ್ಟ್ 1 ರಿಂದ ಅಗಸ್ಟ್ 21 ರವರೆಗೆ.
ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನಿಮ್ಮ ಆಯ್ಕೆಯ ಬ್ಯಾಂಕಿನ ಆದ್ಯತೆಯ ಆದೇಶವನ್ನು ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಳವಡಿ ಸಲಾಗಿದೆ. ಅಭ್ಯರ್ಥಿಗಳು ಈ ಹಂತದಲ್ಲಿ ಅವರ ಬ್ಯಾಂಕ್ ಗಳ ಆದ್ಯತೆಯ ಕ್ರಮವನ್ನು ಅಗತ್ಯವಾಗಿ ಸೂಚಿಸಬೇಕು.
ಯಾವ್ಯಾವ ಬ್ಯಾಂಕ್ ಗಳಲ್ಲಿ ಎಷ್ಟೆಷ್ಟು ಹುದ್ದೆಗಳಿವೆ ಹಾಗೂ ನಮ್ಮ ರಾಜ್ಯದಲ್ಲಿ ಶಾಖೆಗಳಿವೆಯಾ ಎಂಬುದರ ಮೇಲೆ ನಿಮ್ಮ ಆದ್ಯತೆಯ ಆಯ್ಕೆ ಇರಲಿ. ಒಮ್ಮೆ ನೀವು ಆಯ್ಕೆಯಾದರೆ ಬ್ಯಾಂಕ ಬದಲಾವಣೆಗೆ/ಸ್ಥಳ ಬದಲಾವಣೆಗೆ ಯಾವುದೇ ವಿನಂತಿಯನ್ನು ನಂತರದ ದಿನಗಳಲ್ಲಿ ಪರಿಗಣಿಸಲಾ ಗುವುದಿಲ್ಲ. ಆಯ್ಕೆ ಪ್ರಕ್ರಿಯೆಯ ಹಂತದಲ್ಲಿ ಅಥವಾ ಅಪಾಯಿಂಟ್‌ಮೆಂಟ್‌ನ ನಂತರ ನಿಮ್ಮ ಕೈಬರಹದ ಘೋಷಣೆ ಹಾಗೂ ನಿಮ್ಮ ಕೈಬರಹ ದಲ್ಲಿ ಭಿನ್ನವಾಗಿರುವುದು ತಜ್ಞರ ವಿಶ್ಲೇಷಣೆಯಲ್ಲಿ ಕಂಡುಬಂದರೆ, ಅಭ್ಯರ್ಥಿಯ ಉಮೇದುವಾ ರಿಕೆಯನ್ನ ರದ್ದುಗೊಳಿ ಸಲಾಗುವುದು. ಹೀಗಾಗಿ ಅರ್ಜಿ ಸಲ್ಲಿಸುವ ಹಂತದಲ್ಲಿಯೇ ಬಹಳ ಎಚ್ಚರಿಕೆಯಿಂದ ಅರ್ಜಿ ಸಲ್ಲಿಸುವುದು ಒಳಿತು.
ಪೂರ್ವಭಾವಿ ಪರೀಕ್ಷೆಗೆ ತರಬೇತಿ:
ಐಬಿಪಿಎಸ್ ವತಿಯಿಂದ ಎಸ್.ಸಿ/ಎಸ್.ಟಿ/ ಅಲ್ಪಸಂಖ್ಯಾತ ಅಭ್ಯರ್ಥಿಗಳು ಮಾಜಿ ಸೈನಿಕರು ವಿಕಲಚೇತನ ಅಭ್ಯರ್ಥಿಗಳಿಗೆ ಉಚಿತ ಪರೀಕ್ಷಾ ತರಬೇತಿ ನೀಡಲಾಗುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವಾಗಲೇ ಅಭ್ಯರ್ಥಿಗಳು ಕೋರಿಕೆ ಸಲ್ಲಿ ಸಬೇಕಾಗುತ್ತದೆ. ತರಬೇತಿ ಸ್ಥಳದ ಖರ್ಚು ವೆಚ್ಚ ಹಾಗೂ ಪ್ರಯಾಣದ ಖರ್ಚು ವೆಚ್ಚವನ್ನು ಅಭ್ಯರ್ಥಿಗಳ ಭರಿಸಬೇಕಾಗುತ್ತದೆ.
ಪರೀಕ್ಷಾ ಪ್ರಕ್ರಿಯೆ:
ಮೊದಲ ಹಂತ: ಆನ್ಲೈನ್ ಪೂರ್ವಭಾವಿ ಪರೀಕ್ಷೆ – ಅಕ್ಟೋಬರ್ 2023
ಎರಡನೇ ಹಂತ: ಆನ್ಲೈನ್ ಮುಖ್ಯ ಪರೀಕ್ಷೆ – ನವೆಂಬರ್, 2023
ಮೂರನೇ ಹಂತ:ಸಂದರ್ಶನ ಜನವರಿ/ಫೆಬ್ರವರಿ,2024
ವಯೋಮಿತಿ:
01.08.2023 ಕ್ಕೆ, 20 ವರ್ಷಕ್ಕಿಂತ ಕಡಿಮೆ ಇರಬಾರದು. ಮತ್ತು 30 ವರ್ಷಗಳಿಗಿಂತ ಹೆಚ್ಚಿರಬಾರದು. ಅಂದರೆ 20 ವರ್ಷದಿಂದ 30 ವರ್ಷದೊಳಗಿನವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅಂದರೆ ಅಭ್ಯರ್ಥಿಗಳು 02.08.1993 ಕ್ಕಿಂತ ಮುಂಚಿತವಾಗಿ ಮತ್ತು 01.08.2003 ಕ್ಕಿಂತ ನಂತರ ಜನಿಸಿರಬಾರದು. (ಎರಡೂ ದಿನಾಂಕಗಳು ಒಳಗೊಂಡಂತೆ)
ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ವಿಕಲಚೇತನರಿಗೆ 10 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.
ಕ್ರೆಡಿಟ್ ಇತಿಹಾಸ:
(i) ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಅವರು ಆರೋಗ್ಯಕರ ಕ್ರೆಡಿಟ್ ಇತಿಹಾಸವನ್ನು ಹೊಂದಿರಬೇಕು. ಮತ್ತು ಬ್ಯಾಂಕ್ ಗೆ ಸೇರುವ ಸಮಯದಲ್ಲಿ ಕನಿಷ್ಠ CIBIL ಸ್ಕೋರ್ 650 ಅಥವಾ ಅದಕ್ಕಿಂತ ಹೆಚ್ಚಿರುವುದನ್ನು ಖಚಿತ ಪಡಿಸಿ ಕೊಳ್ಳಬೇಕು. ಕನಿಷ್ಠ ಕ್ರೆಡಿಟ್ ಸ್ಕೋರ್ ಭಾಗವಹಿಸುವ ಬ್ಯಾಂಕ್ ಗಳ ನೀತಿಯ ಪ್ರಕಾರ ಇರುತ್ತದೆ, ಕಾಲಕಾಲಕ್ಕೆ ಅವುಗಳನ್ನ ತಿದ್ದುಪಡಿ ಮಾಡಲಾಗುತ್ತದೆ.
(ii) ಸೇರುವ ದಿನಾಂಕದ ಮೊದಲು CIBIL ಸ್ಥಿತಿಯನ್ನು ನವೀಕರಿಸದ ಅಭ್ಯರ್ಥಿಗಳು, CIBIL ಸ್ಥಿತಿಯನ್ನು ನವೀಕರಿಸಬೇಕು ಅಥವಾ CIBIL ನಲ್ಲಿ ಪ್ರತಿಕೂಲವಾಗಿ ಪ್ರತಿಬಿಂಬಿತವಾಗಿರುವ ಖಾತೆಗಳಿಗೆ ಸಂಬಂಧಿಸಿದಂತೆ ಯಾವುದೇ ಬಾಕಿ ಉಳಿದಿಲ್ಲ ಎಂದು ಸಾಲದಾತರಿಂದ NOC ಗಳನ್ನು ಪಡೆಯಬೇಕು. ವಿಫಲವಾದರೆ ಆಫರ್ ಪತ್ರವನ್ನು ಹಿಂಪಡೆಯಲಾಗುತ್ತದೆ / ರದ್ದುಗೊಳಿಸಲಾಗುತ್ತದೆ.
ಸೂಚನೆ: ಯಾವುದೇ ಬ್ಯಾಂಕ್ ಖಾತೆಯನ್ನು ಹೊಂದಿರದ ಅಭ್ಯರ್ಥಿಗಳು CIBIL ಸ್ಥಿತಿಯನ್ನು ಒದಗಿಸುವ ಅಗತ್ಯವಿಲ್ಲ.
ಶುಲ್ಕಪಾವತಿ:
ನೋಂದಣಿ ನಂತರ ಅಭ್ಯರ್ಥಿಗಳು ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್/ ಇಂಟರ್ನೆಟ್ ಬ್ಯಾಂಕಿಂಗ್ ಬಳಸಿ ಆನ್‌ಲೈನ್ ಮೋಡ್ ಮೂಲಕ ಅಗತ್ಯವಾದ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಅರ್ಜಿ ಶುಲ್ಕ:
850 ರೂ. ಉಳಿದೆಲ್ಲ ಅಭ್ಯರ್ಥಿಗಳಿಗೆ [ಜಿ ಎಸ್ ಟಿ ಸೇರಿ] (ಎಸ್‌ಸಿ/ಎಸ್‌ಟಿ/PWBD/ EXSM ಅಭ್ಯರ್ಥಿಗಳಿಗೆ 175 ರೂ.[ ಜಿ ಎಸ್ ಟಿ ಸೇರಿ] ಆನ್‌ಲೈನ್ ನಲ್ಲಿಯೇ ಅರ್ಜಿ ಶುಲ್ಕವನ್ನೂ ಪಾವತಿಸ ಬೇಕಿರುತ್ತದೆ.
ನೆನಪಿಡಿ: ಒಬಿಸಿ ವರ್ಗಕ್ಕೆ ಸೇರಿದ ಆದರೆ ಕೆನೆ ಪದರದ ಅಡಿಯಲ್ಲಿ ಬರುವ ಅಭ್ಯರ್ಥಿಗಳು ಒಬಿಸಿ ಮೀಸಲಾತಿಗೆ ಅರ್ಹರಾಗಿರುವುದಿಲ್ಲ. ಅವರು ಆನ್‌ಲೈನ್ ಅರ್ಜಿ ನಮೂನೆಯಲ್ಲಿ ತಮ್ಮ ವರ್ಗವನ್ನು ಸಾಮಾನ್ಯ ಎಂದು ಸೂಚಿಸಬೇಕು. ಅಭ್ಯರ್ಥಿಯು ಕಾಲಕಾಲಕ್ಕೆ ಭಾರತ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಕೆನೆರಹಿತ ಲೇಯರ್ (Non cremy layer) ಷರತ್ತಿನೊಂದಿಗೆ OBC ಪ್ರಮಾಣಪತ್ರವನ್ನು ಹೊಂದಿರಬೇಕು.
ಈ ಬಾರಿಯ ಬದಲಾವಣೆ ಗಳೇನು?:
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವರ್ಷದಿಂದ ವರ್ಷಕ್ಕೆ ಕೆಲವು ಬದಲಾವಣೆಗಳು ಸಾಮಾನ್ಯ. ಹಾಗೆಯೇ ಈ ಬಾರಿಯ ಬದಲಾವಣೆಗಳು ಕೆಳಗಿನಂತಿವೆ:
ಈ ಬಾರಿ ಅರ್ಜಿ ಸಲ್ಲಿಸುವಾಗ ಪರೀಕ್ಷೆಗೆ ನೀವು ತರುವ ಐಡಿ ಪ್ರೂಫ್‌ನ ಸಂಖ್ಯೆ ನೀಡುವುದು ಕಡ್ಡಾಯ ಹಾಗೂ ಅದು ನೀವು ಅರ್ಜಿ ಸಲ್ಲಿಸಿದ ಹೆಸರಿನೊಂದಿಗೆ ಹೊಂದಾಣಿಕೆಯಾಗಿರಬೇಕು. ಈ ಬಾರಿ ಪ್ರಿಲಿಮ್ಸ್ ಪರೀಕ್ಷೆಯ ಪ್ರವೇಶ ಪತ್ರವನ್ನು ಪರೀಕ್ಷಾ ಕೇಂದ್ರದಲ್ಲಿ ಸಂಗ್ರಹಿಸ ಲಾಗುವುದಿಲ್ಲ. ಬದಲಾಗಿ ಇದನ್ನು ಪರೀಕ್ಷಾ ಕೇಂದ್ರದ ಸಿಬ್ಬಂದಿಯಿಂದ ಧೃಡಪಡಿಸಿ ಕೊಳ್ಳುವ ಅಗತ್ಯವಿದೆ. ಮೇನ್ಸ್ ಪರೀಕ್ಷೆಗೆ ಅರ್ಹಗೊಂಡ ಅಭ್ಯರ್ಥಿಗಳು ಮೇನ್ಸ್ ಪರೀಕ್ಷೆಯ ಪ್ರವೇಶ ಪತ್ರದೊಂದಿಗೆ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ದೃಢೀಕರಣಗೊಂಡ ಪ್ರವೇಶ ಪತ್ರವನ್ನು ಕೂಡ ಸಲ್ಲಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ನೋಡಬಹುದು. ಕನಿಷ್ಟ 8 ಭಾವಚಿತ್ರವನ್ನು (ಅಭ್ಯರ್ಥಿಯು ಕಾಲ್-ಲೆಟರ್‌ನಲ್ಲಿ ಅಂಟಿಸಿದಂತೆಯೇ) ಹಾಗೂ ಪ್ರಿಲಿಮ್ಸ್ ಹಾಗೂ ಮೇನ್ಸ್ ನ ಕರೆ ಪತ್ರದ ಜೆರಾಕ್ಸ್ ಪ್ರತಿಯನ್ನು ಅಥವಾ ಹೆಚ್ಚುವರಿ ಪ್ರಿಂಟ್ ತೆಗೆದಿಟ್ಟುಕೊಳ್ಳಿ. ಕೊನೆಯಲ್ಲಿ ಅದರ ಪ್ರತಿಯನ್ನು ಬ್ಯಾಂಕ್ ಗಳಿಗೆ ಸೇರುವಾಗ ನೀಡಬೇಕು ಎಂಬುದನ್ನು ಮರೆಯಬೇಡಿ.
ನಂತರದ ದಿನಗಳಲ್ಲಿ ವೆಬ್ ಸೈಟ್ ನಲ್ಲಿ ಸಿಗುವುದಿಲ್ಲ.
ಅಭ್ಯರ್ಥಿಗಳು ಒಂದು ಹೆಚ್ಚುವರಿ ಛಾಯಾಚಿತ್ರವನ್ನು (ಅಭ್ಯರ್ಥಿಯು ಕಾಲ್ ಲೆಟರ್‌ನಲ್ಲಿ ಅಂಟಿಸಿದಂತೆಯೇ) ಜೊತೆಗೆ ಕರೆ ಪತ್ರ ಮತ್ತು ಇತರ ಅಗತ್ಯ ದಾಖಲೆಗಳೊಂದಿಗೆ “ಮಾಹಿತಿ ಕೈಪಿಡಿ” ಮತ್ತು ಕರೆ ಪತ್ರದಲ್ಲಿ ಸೂಚಿಸಿದ ಮಾಹಿತಿಯಂತೆ ತೆಗೆದುಕೊಂಡು ಹೋಗಬೇಕು.
ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳ ನೋಂದಣಿ:
ಎ.ಅಭ್ಯರ್ಥಿಗಳ ನೋಂದಣಿ ಯನ್ನು ಫೋಟೋ ಕ್ಯಾಪ್ಚರ್ ಮೂಲಕ ಮಾಡಲಾಗುವುದು.
ಬಿ.ಅಭ್ಯರ್ಥಿಯನ್ನು ಪರೀಕ್ಷಾ ಕೇಂದ್ರದಲ್ಲಿ ನಿಲ್ಲಿಸಿ ಛಾಯಾಚಿತ್ರ ತೆಗೆಯಲಾಗುವುದು.
ಸಿ.ಅಭ್ಯರ್ಥಿಗಳಿಗೆ ಸೀಟ್ ನಂಬರ್ ನೀಡಲಾಗುತ್ತದೆ.
ಡಿ.ರಫ್ ಶೀಟ್,(ಗಳನ್ನು) ಪ್ರತಿ ಕ್ಯಾಂಡಿಡೇಟ್ ಡೆಸ್ಕ್ ನಲ್ಲಿ ಇರಿಸಲಾಗಿರುತ್ತದೆ. ಪರೀಕ್ಷೆಯ ಕೊನೆಯಲ್ಲಿ ಅಭ್ಯರ್ಥಿಗಳಿಗೆ ಸೂಚಿಸಿದಂತೆ ನಿಗದಿತ ಡ್ರಾಪ್ ಬಾಕ್ಸ್‌ನಲ್ಲಿ ರಫ್ ಶೀಟ್ ಗಳನ್ನು ಹಿಂತಿರುಗಿಸಬೇಕು.
ಮುಖ್ಯ ಪರೀಕ್ಷೆಗೆ ಸ್ಟ್ಯಾಂಪ್ ಮಾಡಿದ ಫೋಟೊ ಕಾಪಿಯನ್ನು ತರದೇ ಇರುವ ಅಭ್ಯರ್ಥಿಗಳನ್ನು ಪರೀಕ್ಷೆಗೆ ಹಾಜರಾಗಲು ಅನುಮತಿಸಲಾಗುವುದಿಲ್ಲ.
ನೇಮಕ ಹೇಗೆ?
ಮೊದಲ ಹಂತದಲ್ಲಿ ಪೂರ್ವ ಭಾವಿ ಪರೀಕ್ಷೆ (ಪ್ರಿಲಿಮ್ಸ್) ನಡೆಯಲಿದೆ.
ಬೆಳಗಾವಿ, ಬೆಂಗಳೂರು, ಬೀದರ್, ಚಿಕ್ಕಬಳ್ಳಾಪುರ ದಾವಣಗೆರೆ, ದಾರವಾಡ ಕಲಬುರಗಿ, ಹಾಸನ, ಹುಬ್ಬಳ್ಳಿ, ಮಂಡ್ಯ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿಯಲ್ಲಿ ಪೂರ್ವಭಾವಿ ಪರೀಕ್ಷಾ ಕೇಂದ್ರಗಳಿರಲಿವೆ. ಪೂರ್ವಭಾವಿ ಪರೀಕ್ಷೆ ಒಂದು ಗಂಟೆಗಳ ಕಾಲ ನಡೆಯಲಿದ್ದು,(ಪ್ರತಿ ಪತ್ರಿಕೆಗೂ 20 ನಿಮಿಷಗಳಂತೆ ಒಟ್ಟಾರೆ 60 ನಿಮಿಷಗಳು) 100 ಅಂಕಗಳಿಗೆ ಕೇಳಲಾಗುತ್ತದೆ. (ಅಂದರೆ ಪ್ರತಿ ಪ್ರಶ್ನೆಗೆ ಒಂದೊಂದು ಅಂಕ ನಿಗದಿಯಾಗಿರುತ್ತದೆ) ಇದರಲ್ಲಿ ಇಂಗ್ಲೀಷ್ ಲಾಂಗ್ವೇಜಗೆ 30, ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್ ಗೆ 35 ಹಾಗೂ ರೀಸನಿಂಗ್ ಎಬಿಲಿಟಿಯ 35 ಪ್ರಶ್ನೆಗಳಿರಲಿವೆ. ಪ್ರತಿ ಪರೀಕ್ಷೆಯಲ್ಲೂ ಕನಿಷ್ಟ ಅಂಕ ಗಳಿಸಬೇಕೆಂಬ ನಿಯಮವಿದೆ. ಅದರೆ ಒಟ್ಟಾರೆ ಹೆಚ್ಚು ಅಂಕಗಳಿಸುವುದು ಮುಖ್ಯ. (ಆಯಾ ವರ್ಗಗಳಿಗೆ ಇರುವ ಹುದ್ದೆಗಳ ಸಂಖ್ಯೆಗಿಂತ 10 ಪಟ್ಟು ಹೆಚ್ಚು ಅಭ್ಯರ್ಥಿಗಳನ್ನ ಮುಖ್ಯ ಪರೀಕ್ಷೆಗೆ ಆಯ್ಕೆ ಮಾಡುವುದರಿಂದ 1:10 ಅನುಪಾತ)ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮುಂದಿನ ಹಂತದ ಅಂದರೆ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆಯುತ್ತಾರೆ. ಮುಖ್ಯ ಪರೀಕ್ಷೆಯು ಬೆಂಗಳೂರು, ಹುಬ್ಬಳ್ಳಿ-ದಾರವಾಡ ಮತ್ತು ಮಂಗಳೂರಿನಲ್ಲಿ ಮಾತ್ರ ನಡೆಯಲಿದ್ದು, ಪರೀಕ್ಷೆಗಳು ಎರಡು ಹಂತಗಳಲ್ಲಿ ನಡೆಯಲಿದೆ. ನಿಗದಿತ ದಿನದಂದು ಆನ್ ಲೈನ್‌ನಲ್ಲಿಯೇ ಎರಡೂ ಲಿಖಿತ ಪರೀಕ್ಷೆಗಳು ನಡೆಯಲಿವೆ. ಮುಖ್ಯ ಪರೀಕ್ಷೆಯು ಮೂರು ಗಂಟೆ ಗಳ ಕಾಲ ನಡೆಯಲಿದ್ದು, 155 ಪ್ರಶ್ನೆಗಳನ್ನು 200 ಅಂಕಗಳಿಗೆ ಕೇಳಲಾಗುತ್ತದೆ.
I. Reasoning & Computer Aptitude 45 ಪ್ರಶ್ನೆ 60 ಅಂಕಗಳು 60 ನಿಮಿಷಗಳು,
II.General/ Economy/ Banking Awareness 40 ಪ್ರಶ್ನೆ 40 ಅಂಕಗಳು 35 ನಿಮಿಷಗಳು,
III. English Language 35 ಪ್ರಶ್ನೆ 40 ಅಂಕಗಳು 40 ನಿಮಿಷಗಳು,
ಹೀಗೆ ಒಟ್ಟಾರೆ 155 ಪ್ರಶ್ನೆಗಳಿಗೆ 200 ಅಂಕಗಳು ನಿಗದಿಯಾಗಿದ್ದು ಹಾಗೂ 180 ನಿಮಿಷದ ಸಮಯ ನಿಗದಿಪಡಿಸಲಾಗಿದೆ. ಇಂಗ್ಲೀಷ್ ಭಾಷೆ ಒಂದನ್ನು ಹೊರತುಪಡಿಸಿ ಮತ್ತೆಲ್ಲಾ ಪ್ರಶ್ನೆಗಳು ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಇರುತ್ತದೆ. ತಪ್ಪು ಉತ್ತರ ಗುರುತಿಸಿದಲ್ಲಿ, ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಳಲ್ಲಿ ಆಯಾ ವಿಷಯಕ್ಕೆ ಪ್ರತಿ ಪ್ರಶ್ನೆಗೆ ನಿಗದಿ ಪಡಿಸಿದ ಅಂಕದ 0.25 ಅಂಕವನ್ನು ಋಣಾತ್ಮಕ ಮೌಲ್ಯಮಾಪನದ ನಿಯಮದಂತೆ ಗಳಿಸಿದ ಅಂಕದಿಂದ ಕಳೆಯಲಾಗುತ್ತದೆ. ಪ್ರಶ್ನೆಯನ್ನು ಬರೆಯಲು ಪ್ರಯತ್ನಿಸದೆ ಹಾಗೆಯೆ ಬಿಟ್ಟರೆ, ಅಂದರೆ ಯಾವುದೇ ಉತ್ತರವನ್ನು ಗುರುತಿಸಲಾಗಿಲ್ಲದಿದ್ದರೆ ಅಂತಹ
ಅಭ್ಯರ್ಥಿಗಳಿಗೆ, ಆ ಪ್ರಶ್ನೆಗೆ ಯಾವುದೇ ರೀತಿಯ ಋಣಾತ್ಮಕ ಮೌಲ್ಯಮಾಪನದ ನಿಯಮದಂತೆ ದಂಡವಿರುವುದಿಲ್ಲ.
(ಮೇನ್ಸ್) ಮುಗಿಯುತ್ತಿದ್ದಂತೆಯೇ ಡಿಸ್ಸ್ಕ್ರಿಟಿವ್ ಟೆಸ್ಟ್ ಇಂಗ್ಲೀಷ್ ಭಾಷೆಗೆ (Letter Writing & Essay- with two questions)ಸಂಬಂಧಿಸಿದಂತೆ 25 ಅಂಕಗಳಿಗೆ ನಡೆಸಲಾಗುತ್ತದೆ. ಅವಧಿ 30 ನಿಮಿಷಗಳು. ಅಭ್ಯರ್ಥಿಗಳು ಕಂಪ್ಯೂಟರ್ ನಲ್ಲಿಯೇ ಉತ್ತರವನ್ನು ಬರೆಯಬೇಕು.
ಇಂಗ್ಲಿಷ್ ಭಾಷೆಯ ವಿವರಣಾತ್ಮಕ ಪೇಪರ್ (ಪತ್ರ ಬರವಣಿಗೆ ಮತ್ತು ಪ್ರಬಂಧ) ಅನ್ನು ಸ್ವಯಂಚಾಲಿತ ಸ್ಕೋರಿಂಗ್ ಮೂಲಕ ಮೌಲ್ಯಮಾಪನಮಾಡಲಾಗುತ್ತದೆ. ಬರವಣಿಗೆಯ ಪ್ರಾವೀಣ್ಯತೆಗೆ ಸಂಬಂಧಿಸಿದಂತೆ ವೈಶಿಷ್ಟ್ಯಗಳನ್ನು ಗುರುತಿಸುವುದು ಇದರ ಕಾರ್ಯವಿಧಾನವಾಗಿದೆ. ಆಂಗ್ಲ ಭಾಷೆಯಲ್ಲಿ ಹಾಗೂ ಬರವಣಿಗೆಯಲ್ಲಿ ಪರೀಕ್ಷೆ ಬರೆಯುವವರಪ್ರಾವೀಣ್ಯತೆ ಯನ್ನು ವಸ್ತುನಿಷ್ಠ ರೀತಿಯಲ್ಲಿ ಮೌಲ್ಯಮಾಪನ ಮಾಡುವ ವಿಶಿಷ್ಟ ವಿಧಾನವಾಗಿದೆ.
ನೆನಪಿಡಿ:ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಇಲ್ಲ.
ಈ ಎರಡೂ ಪರೀಕ್ಷೆಗಳಲ್ಲಿ ಬ್ಯಾಂಕ್ ನಿಗದಿಪಡಿಸಿದಷ್ಟು ಅಂಕ ಪಡೆದವರು ಮಾತ್ರ ಮೂರನೇ ಹಂತಕ್ಕೆ ಅರ್ಹರಾಗುತ್ತಾರೆ.
ಅಭ್ಯರ್ಥಿಯು ಆನ್‌ಲೈನ್ ಮುಖ್ಯ ಪರೀಕ್ಷೆಯ ಪ್ರತಿ ಪರೀಕ್ಷೆಯಲ್ಲಿ ಕನಿಷ್ಠ ಅಂಕ ಪಡೆದಿರಬೇಕು ಮತ್ತು ಸಂದರ್ಶನಕ್ಕೆ ಶಾರ್ಟ್‌ಲಿಸ್ಟ್ ಎಂದು ಪರಿಗಣಿಸಬೇಕಾದ ಕನಿಷ್ಠ ಒಟ್ಟು ಅಂಕಗಳನ್ನು ಗಳಿಸಿರಬೇಕು.ಕನಿಷ್ಠ ಅಂಕಗಳು ಖಾಲಿ ಹುದ್ದೆಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ. ಮತ್ತು ಅವುಗಳ ಮೇಲೆ ಕಟ್-ಆಫ್‌ಗಳನ್ನು ನಿರ್ಧರಿಸಲಾಗುವುದು ಮತ್ತು ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.
ಸಂದರ್ಶನಕ್ಕಾಗಿ ಶಾರ್ಟ್‌ಲಿಸ್ಟ್ ಮಾಡಲಾದ ಅಭ್ಯರ್ಥಿಗಳಿಗೆ
ಸಂದರ್ಶನ ಪ್ರಕ್ರಿಯೆ, ಪೂರ್ಣಗೊಳಿಸುವ ಮೊದಲು
ಆನ್‌ಲೈನ್ ಮುಖ್ಯ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಅಭ್ಯರ್ಥಿಗಳೊಂದಿಗೆ ಹಂಚಿಕೊಳ್ಳಲಾಗುವುದಿಲ್ಲ.
ಸಂದರ್ಶನದ ಸಂದರ್ಭದಲ್ಲಿ ‘ಒಬಿಸಿ’ ವರ್ಗದ ಅಡಿಯಲ್ಲಿ ಹಂತ -3 ಕ್ಕೆ ಅರ್ಹತೆ ಪಡೆದ ಅಭ್ಯರ್ಥಿಗಳು ಒಬಿಸಿ ಪ್ರಮಾಣಪತ್ರವನ್ನು ‘ಕೆನೆರಹಿತ ಪದರ'(‘Non-Creamy layer’) ಷರತ್ತನ್ನು ಒಳಗೊಂಡಿರುವುದನ್ನು ಸಲ್ಲಿಸಬೇಕಾಗುತ್ತದೆ. EWS ವರ್ಗದ ಅಡಿಯಲ್ಲಿ ಹಂತ -3 ಕ್ಕೆ ಅರ್ಹತೆ ಪಡೆದ ಅಭ್ಯರ್ಥಿಗಳು 2022-23ರ ಆರ್ಥಿಕ ವರ್ಷದ ಒಟ್ಟು ವಾರ್ಷಿಕ ಆದಾಯದ ಆಧಾರದ ಮೇಲೆ EWS ಪ್ರಮಾಣಪತ್ರವನ್ನು ಸಲ್ಲಿಸ ಬೇಕಾಗುತ್ತದೆ.
ಆಯ್ಕೆ ಪಟ್ಟಿ:
ಅಂತಿಮ ಸುತ್ತಿಗೆ ಆಯ್ಕೆಯಾದ ಅಭ್ಯರ್ಥಿಗಳು ಹಂತ-II ಮತ್ತು ಹಂತ-III ಎರಡರಲ್ಲೂ ಪ್ರತ್ಯೇಕವಾಗಿ ಅರ್ಹತೆ ಪಡೆದಿರಬೇಕು. ಸಂದರ್ಶನಕ್ಕೆ ನಿಗದಿ ಪಡಿಸಲಾದ ಒಟ್ಟು ಅಂಕಗಳು 100. ಸಂದರ್ಶನದಲ್ಲಿ ಕನಿಷ್ಠ ಅರ್ಹತಾ ಅಂಕಗಳು 40% (35% SC/ST/OBC/PWBD ಅಭ್ಯರ್ಥಿಗಳಿಗೆ). ಆನ್‌ಲೈನ್ ಮುಖ್ಯ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಪಡೆದ ಅಂಕಗಳನ್ನು ಕ್ರಮವಾಗಿ 80:20 ಅನುಪಾತದ ಆಧಾರದ ಮೇಲೆ ಮೆರಿಟ್ ಪಟ್ಟಿ ತಯಾರಿಸಿ, ನೇಮಕಾತಿ ಮಾಡಿಕೊಳ್ಳ ಲಾಗುತ್ತದೆ.
ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಇದುವರೆಗೂ ಪ್ರತ್ಯೇಕವಾಗಿಯೇ ಸೀಟು ಹಂಚಿಕೆ ಪ್ರಕ್ರಿಯೆ ನಡೆಸುತ್ತಿದ್ದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ರಸಕ್ತ ಸಾಲಿನಿಂದ (2023-24) ಎಲ್ಲವನ್ನೂ ಒಟ್ಟಿಗೇ, ಒಮ್ಮೆಗೇ ನಡೆಸಲು ತೀರ್ಮಾನಿಸಿದೆ.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮತ್ತು ಅನಗತ್ಯ ವಿಳಂಬವನ್ನು ತಪ್ಪಿಸುವ ಉದ್ದೇಶದಿಂದ ಈ ಸುಧಾರಣಾ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್, ಪಶುವೈದ್ಯ, ಕೃಷಿ, ನರ್ಸಿಂಗ್, ಅರ್ಕಿಟೆಕ್ಟ್ ಹಾಗೂ ಫಾರ್ಮಸಿ ಕೋರ್ಸ್ ಗಳ ಪ್ರವೇಶಕ್ಕೆ ಸಂಯೋಜಿತ ಸೀಟು ಹಂಚಿಕೆ {Combined Seat Allotment) ಪ್ರಕ್ರಿಯೆಯನ್ನು ನಡೆಸಲಾಗುತ್ತದೆ. ಹೀಗೆ ಮಾಡುತ್ತಿರುವುದು ಇದೇ ಮೊದಲು ಎಂದು ಅವರು ವಿವರಿಸಿದ್ದಾರೆ.
ಪ್ರತ್ಯೇಕ ಸೀಟು ಹಂಚಿಕೆ ಪ್ರಕ್ರಿಯೆಯಿಂದಾಗಿ ಸಾಕಷ್ಟು ಅನಾನುಕೂಲಗಳು ಇದ್ದವು. ಒಬ್ಬ ಅಭ್ಯರ್ಥಿ ಒಮ್ಮೆಗೇ ಒಂದಕ್ಕಿಂತ ಹೆಚ್ಚು ಕೋರ್ಸ್ ಗಳಲ್ಲಿ ಸೀಟು ಪಡೆದು, ನಂತರ ಆತ ಯಾವುದಾದರು ಒಂದಕ್ಕೆ ಪ್ರವೇಶ ಪಡೆಯುವವರೆಗೂ ಉಳಿದ ಕೋರ್ಸ್ಗಳಲ್ಲಿನ ಸೀಟು ಬೇರೆಯ ಅಭ್ಯರ್ಥಿಗಳಿಗೆ ಲಭ್ಯವಾಗುತ್ತಿರಲಿಲ್ಲ. ಇದರಿಂದ ಪ್ರತಿಭಾವಂತರಿಗೆ ಆಯ್ಕೆ ಸುತ್ತಿನಲ್ಲಿ ಸೀಟು ಕೈತಪ್ಪುತ್ತಿತ್ತು ಎಂದು ಅವರು ಹೇಳಿದ್ದಾರೆ.
ಅಭ್ಯರ್ಥಿಗಳು ಯಾವುದೇ ಕೋರ್ಸ್ಗಳಿಗೆ ಪ್ರವೇಶ ಬಯಸಿದ್ದಲ್ಲಿ ಸೀಟ್ ಮ್ಯಾಟ್ರಿಕ್ಸ್ ಪ್ರಕಾರ ಶುಲ್ಕ ಮತ್ತು ಲಭ್ಯವಿರುವ ಸೀಟುಗಳನ್ನು ಪರಿಶೀಲಿಸಿ, ನಂತರ ತಮ್ಮ ಆದ್ಯತೆಯನುಸಾರ ಸೀಟುಗಳ ಆಪ್ಷನ್ ಎಂಟ್ರಿ ಮಾಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಹೊಸ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತೆ?
ಅಭ್ಯರ್ಥಿಯು ಆಪ್ಷನ್ ಎಂಟ್ರಿ ಮಾಡುವಾಗ ತನ್ನ ಮೊದಲ ಆದ್ಯತೆಯ ಕೋರ್ಸ್ ಗಳನ್ನು ಮೊದಲು ದಾಖಲಿಸಬೇಕು. ಒಂದು ವೇಳೆ ಮೊದಲ ಆದ್ಯತೆಯ ಕೋರ್ಸ್ ಸಿಗದಿದ್ದರೆ ಅದರ ನಂತರದ ಆಯ್ಕೆಯ ಕೋರ್ಸ್ ಯಾವುದು ಎನ್ನುವುದನ್ನು ಎರಡನೇ ಆದ್ಯತೆಯಾಗಿ ದಾಖಲಿಸಬೇಕು. ಉದಾಹರಣೆಗೆ ವೈದ್ಯಕೀಯ ಕೋರ್ಸ್ ಬೇಕೆಂದು ಮೊದಲ ಆದ್ಯತೆ ನೀಡುವ ಅಭ್ಯರ್ಥಿ, ಒಂದು ವೇಳೆ ಅದು ಸಿಗದಿದ್ದಾಗ ತನ್ನ ಆದ್ಯತೆ ಎಂಜಿನಿಯರಿಂಗ್ ಎನ್ನುವುದನ್ನು ದಾಖಲಿಸಬೇಕು. ಆಗ ವೈದ್ಯಕೀಯ ಸೀಟು ಸಿಗದಿದ್ದಾಗ ನಂತರದ ಆದ್ಯತೆಯಾದ ಎಂಜಿನಿಯರಿಂಗ್ ನಲ್ಲಿ ಸೀಟು ಹಂಚಿಕೆ ಆಗುತ್ತದೆ. ಇದೇ ರೀತಿ ಸೀಟ್ ಮ್ಯಾಟ್ರಿಕ್ಸ್ ಪ್ರಕಾರ ಎಷ್ಟು ಕೋರ್ಸ್ ಗಳು ಇವೆಯೊ ಅಷ್ಟೂ ಕೋರ್ಸ್ಗಳಿಗೆ ಆದ್ಯತೆಯನುಸಾರ ಆಪ್ಷನ್ ಎಂಟ್ರಿ ಮಾಡುವುದರ ಮೂಲಕ ಸೀಟು ಪಡೆಯಬಹುದು ಎಂದು ಅವರು ವಿವರಿಸಿದರು.
ಅಭ್ಯರ್ಥಿಯ ಮೆರಿಟ್, ಮೀಸಲಾತಿ ಹಾಗೂ ಆಪ್ಷನ್ ಎಂಟ್ರಿ ಆಧಾರದ ಮೇಲೆ ಮೊದಲ ಸುತ್ತಿನ ಸೀಟು ಹಂಚಿಕೆ ನಡೆಯುತ್ತದೆ. ಕೆಲ ಅಭ್ಯರ್ಥಿಗಳಿಗೆ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಎರಡೂ ಕೋರ್ಸ್ ಗಳಲ್ಲಿ ಸೀಟು ದೊರೆಯುವ ಸಾಧ್ಯತೆ ಇರುತ್ತದೆ. ಅಂತಹವರು ಚಾಯ್ಸ್ ಎಂಟ್ರಿ ಸ್ಕ್ರೀನ್ ನಲ್ಲಿ ಇವೆರಡರಲ್ಲಿ (ವೈದ್ಯಕೀಯ ಅಥವಾ ಎಂಜಿನಿಯರಿಂಗ್) ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ ಚಲನ್ ಮೂಲಕ ಶುಲ್ಕ ಪಾವತಿಸಿ ಆಡ್ಮಿಷನ್ ಆರ್ಡ್ರನ್ನು ಆನ್ ಲೈನ್ ಮೂಲಕ ಪಡೆದು ಸಂಬಂಧಪಟ್ಟ ಕಾಲೇಜಿಗೆ ವರದಿ ಮಾಡಿಕೊಳ್ಳಬೇಕಾಗುತ್ತದೆ. ಬಳಿಕ ಅದನ್ನು ಕಾಲೇಜಿನ ಪೋರ್ಟಲ್ ನಲ್ಲಿ ತಪ್ಪದೇ ಅಪ್ ಡೇಟ್ ಮಾಡಿಸಬೇಕು. ಒಂದು ವೇಳೆ ಹಾಗೆ ಮಾಡದಿದ್ದರೆ ಸದರಿ ಸೀಟು ಖಾಲಿ ಇದೆ ಎಂದು ಭಾವಿಸಿ, ಅದನ್ನು ಮುಂದಿನ ಸುತ್ತಿನ ಹಂಚಿಕೆಗೂ ಬಳಸಿಕೊಳ್ಳುವ ಅಪಾಯ ಇರುತ್ತದೆ.
ಎರಡನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಅಭ್ಯರ್ಥಿಯು ಮಾಡಿರುವ ಆಪ್ಷನ್ ಎಂಟ್ರಿ ಪ್ರಕಾರ ಯಾವುದಾದರೊಂದು ಕೋರ್ಸ್ ನಲ್ಲಿ (ವೈದ್ಯಕೀಯ, ಎಂಜಿನಿಯರಿಂಗ್, ಪಶುವೈದ್ಯ ಇತ್ಯಾದಿ) ಸೀಟು ಪಡೆಯಬೇಕು.ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್ ಗಳಲ್ಲಿ ಎರಡನೇ ಸುತ್ತಿನ ಸೀಟು ಹಂಚಿಕೆ ನಂತರ ಕಡ್ಡಾಯವಾಗಿ ತಮಗೆ ಹಂಚಿಕೆಯಾದ ಸೀಟಿಗೆ ಶುಲ್ಕ ಪಾವತಿಸಿ, ಪ್ರವೇಶ ಪಡೆಯಬೇಕು. ಇಲ್ಲದಿದ್ದರೆ ಸದರಿ ಸೀಟುಗಳನ್ನು ದಂಡದ ಮೊತ್ತ ಪಾವತಿಸಿ ರದ್ದುಪಡಿಸಬೇಕು. ಎರಡನೇ ಸುತ್ತಿನಲ್ಲಿ ವೈದ್ಯಕೀಯ ಸೀಟು ಹಂಚಿಕೆಯಾದ ಅಭ್ಯರ್ಥಿಗಳಿಗೆ ಮಾಪ್ಅಪ್ ಸುತ್ತಿನಲ್ಲಿ ಭಾಗವಹಿಸಲು ಅರ್ಹತೆ ಇರುವುದಿಲ್ಲ. ಆದರೆ ಎರಡನೇ ಸುತ್ತಿನಲ್ಲಿ ದಂತ ವೈದ್ಯಕೀಯ ಸೀಟು ದೊರೆತ ಅಭ್ಯರ್ಥಿಗಳು ಸೀಟನ್ನು ರದ್ದುಪಡಿಸದೇ ವೈದ್ಯಕೀಯ ಕೋರ್ಸ್ ನ ಮಾಪ್ ಅಪ್ ಸುತ್ತಿನಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ.
ಎಂಜಿನಿಯರಿಂಗ್ ಸೀಟುಗಳಿಗೆ ಮೂರನೇ ಸುತ್ತಿನವರೆಗೂ ಭಾಗವಹಿಸಬಹುದು. ಆದರೆ ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆಯಾದಲ್ಲಿ ಶುಲ್ಕು ಪಾವತಿಸುವುದು ಕಡ್ಡಾಯವಾಗಿರುತ್ತದೆ. ಮೂರನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಜಾಯ್ಸ್-3 ಕೊಟ್ಟಿರುವ ಅಭ್ಯರ್ಥಿಗಳು ಹಾಗೂ ಯಾವುದೇ ಸೀಟು ಹಂಚಿಕೆಯಾಗದ ಅಭ್ಯರ್ಥಿಗಳ ಮೊದಲೆರಡು ಸುತ್ತಿನಲ್ಲಿ ಮಾಡಿದ್ದ ಆಪ್ಷನ್ ಎಂಟ್ರಿಗಳನ್ನು ಡಿಲೀಟ್ ಮಾಡಲಾಗಿರುತ್ತದೆ. ಅಭ್ಯರ್ಥಿಯು ಮೂರನೇ ಸುತ್ತಿಗೆ ಹೊಸದಾಗಿ ಆಪ್ಷನ್ ಎಂಟ್ರಿ ಮಾಡಬೇಕು. ಮೂರನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟನ್ನು ರದ್ದುಪಡಿಸಲು ಎಲ್ಲ ವರ್ಗದ ಅಭ್ಯರ್ಥಿಗಳು ಶುಲ್ಕದ ಐದು ಪಟ್ಟು ದಂಡ ಕಟ್ಟಬೇಕಾಗುತ್ತದೆ. ಹೀಗಾಗಿ ಅಭ್ಯರ್ಥಿಗಳು ಎಚ್ಚರಿಕೆಯಿಂದಲೇ ಮೂರನೇ ಸುತ್ತಿನ ಆಪ್ಷನ್ ಎಂಟ್ರಿ ಮಾಡಬೇಕು.
ಮಾಪ್ಅಪ್ ಸುತ್ತು: ಎರಡನೇ ಸುತ್ತಿನಲ್ಲಿ ಎಂಜಿನಿಯರಿಂಗ್, ನರ್ಸಿಂಗ್, ಆರ್ಕಿಟೆಕ್ಟರ್, ಪಶುವೈದ್ಯಕೀಯ, ಕೃಷಿ – ಸೀಟು ದೊರೆತ ಅಭ್ಯರ್ಥಿಗಳು ದಂಡ ಪಾವತಿಸಿ, ತಮ್ಮ ಸೀಟನ್ನು ರದ್ದುಪಡಿಸಿದ ನಂತರವೇ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ನ ಮಾಪ್ಅಪ್ ಸುತ್ತಿನಲ್ಲಿ ಭಾಗವಹಿಸಬಹದು. ಅದೇ ರೀತಿ ಎರಡನೇ ಸುತ್ತಿನಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಸೀಟುಗಳು ಹಂಚಿಕೆಯಾದ ಅಭ್ಯರ್ಥಿಗಳು ಸದರಿ ಸೀಟುಗಳನ್ನು ದಂಡ ಪಾವತಿಸಿ ರದುಪಡಿಸಿದ ನಂತರ ಎಂಜಿನಿಯರಿಂಗ್ ಮಾಪ್ಅಪ್ ಸುತ್ತಿನಲ್ಲಿ ಭಾಗವಹಿಸಬಹುದು.