21.7 C
Karnataka
Wednesday, November 27, 2024
    Home Blog Page 43

    ಪುನೀತ್ ರಾಜ್ ಕುಮಾರ್ ನಿಧನ; ಕಣ್ಮರೆಯಾದ ಯುವರತ್ನ

    ಕನ್ನಡ ಚಿತ್ರರಂಗದ ಹೆಸರಾಂತ ಕಲಾವಿದ ಪುನೀತ್ ರಾಜ್ ಕುಮಾರ್ (45) ಹೃದಯಾಘಾತದಿಂದ ನಿಧನರಾಗಿದ್ದಾರೆ. ಕನ್ನಡ ಮೇರು ನಟ ಡಾ. ರಾಜ್ ಕುಮಾರ್ ಅವರ ಕಿರಿಯ ಪುತ್ರ ಪುನೀತ್ ರಾಜ್ ಕುಮಾರ್ 26 ಚಿತ್ರಗಳಲ್ಲಿ ಅಭಿನಯಿಸಿದ್ದರು.

    ಇಂದು ಬೆಳಿಗ್ಗೆ ಜಿಮ್ ನಲ್ಲಿ ವರ್ಕ್ ಔಟ್ ಮಾಡುವಾಗ ತೀವ್ರ ಹೃದಯಾಘಾತಕ್ಕೆ ತುತ್ತಾದ ಅವರನ್ನು ವಿಕ್ರಮ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕೊನೆ ಉಸಿರೆಳೆದರು.

    ತಮ್ಮ ತಂದೆ ರಾಜ್ ಕುಮಾರ್ ಅಭಿನಯದ ಚಿತ್ರಗಳಲ್ಲಿ ಬಾಲ್ಯ ನಟನಾಗಿ ಚಿತ್ರರಂಗ ಪ್ರವೇಶಿಸಿದ ಅವರು ವಸಂತ ಗೀತ (1980), ಭಾಗ್ಯವಂತ (1981),  ಚಲಿಸುವ ಮೋಡಗಳು  (1982), ಎರಡು ನಕ್ಷತ್ರಗಳು  (1983) ಮತ್ತು ಬೆಟ್ಟದ ಹೂವು  (1985) ಚಿತ್ರಗಳಲ್ಲಿ ಅಭಿನಯಿಸಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು. ಅವರ ಬೆಟ್ಟದ ಹೂವು ಚಿತ್ರದ ರಾಮು ಪಾತ್ರದ ಬಾಲನಟನೆಗೆ ರಾಷ್ಟ್ರ ಚಲನಚಿತ್ರ ಪ್ರಶಸ್ತಿಗೆ ಪಾತ್ರರಾದರು.

    ನಾಯಕನಾಗಿ ಅವರ ಮೊದಲ ಚಿತ್ರ ಅಪ್ಪು (2002 ).ಅಭಿ (2003), ಆಕಾಶ್ (2005), ಅರಸು (2007), ಮಿಲನ (2007), ಜಾಕೀ (2010), ಹುಡುಗರು (2011), ಅಣ್ಣಾ ಬಾಂಡ್ (2012) ಮತ್ತು ಪವರ್ (2014) ಸೇರಿದಂತೆ ಇತರ ಯಶಸ್ವಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಇತ್ತೀಚಿನ ಚಿತ್ರ ಯುವರತ್ನ.

    ಪುನೀತ್ ಡಿಸೆಂಬರ್ 1 ,1999 ರಂದು ಅಶ್ವಿನಿ ರೇವಂತ್ ರನ್ನು ವಿವಾಹವಾದರು.ಇವರಿಗೆ ಇಬ್ಬರು ಪುತ್ರಿಯರಿದ್ದಾರೆ ದ್ರಿತಿ ಮತ್ತು ವಂದಿತಾ.ಇವರ ಮೊದಲ ಹೆಸರು ಮಾ.ಲೋಹಿತ್.

    ಬಾಲ ನಟನಾಗಿ ಅಭಿನಯಿಯಿದ ಚಿತ್ರಗಳು

    1. ಪ್ರೇಮದ ಕಾಣಿಕೆ
    2. ಭಾಗ್ಯವಂತ
    3. ಎರಡು ನಕ್ಷತ್ರಗಳು
    4. ಬೆಟ್ಟದ ಹೂವು
    5. ಚಲಿಸುವ ಮೋಡಗಳು
    6. ಶಿವ ಮೆಚ್ಚಿದ ಕಣ್ಣಪ್ಪ
    7. ಪರಶುರಾಮ್
    8. ಯಾರಿವನು
    9. ಭಕ್ತ ಪ್ರಹ್ಲಾದ
    10. ವಸಂತ ಗೀತ

    ನಾಯಕ ನಟನಾಗಿ

    ಸಂಖ್ಯೆವರ್ಷಚಿತ್ರದ ಹೆಸರುನಿರ್ದೇಶನಸಂಗೀತ
    ೨೦೦೨ಅಪ್ಪುಪುರಿ ಜಗನಾಥ್ಗುರುಕಿರಣ್
    ೨೦೦೩ಅಭಿದಿನೇಶ್ ಬಾಬುಗುರುಕಿರಣ್
    ೨೦೦೪ವೀರ ಕನ್ನಡಿಗಮೆಹರ್ ರಮೇಶ್ಚಕ್ರಿ
    ೨೦೦೪ಮೌರ್ಯಎಸ್. ನಾರಾಯಣ್ಗುರುಕಿರಣ್
    ೨೦೦೫ಆಕಾಶ್ಮಹೇಶ್ ಬಾಬುಆರ್.ಪಿ.ಪಟ್ನಾಯಕ್
    ೨೦೦೫ನಮ್ಮ ಬಸವವೀರಾ ಶಂಕರ್ಗುರುಕಿರಣ್
    ೨೦೦೬ಅಜಯ್ಮೆಹರ್ ರಮೇಶ್ಮಣಿಶರ್ಮ
    ೨೦೦೭ಅರಸುಮಹೇಶ್ ಬಾಬುಜೋಶ್ವ ಶ್ರೀಧರ್
    ೨೦೦೭ಮಿಲನಪ್ರಕಾಶ್ಮನೋಮೂರ್ತಿ
    ೧೦೨೦೦೮ಬಿಂದಾಸ್ಡಿ .ರಾಜೇಂದ್ರ ಬಾಬುಗುರುಕಿರಣ್
    ೧೧೨೦೦೮ವಂಶಿಪ್ರಕಾಶ್ಆರ್.ಪಿ.ಪಟ್ನಾಯಕ್
    ೧೨೨೦೦೯ರಾಜ್ ದ ಶೋಮ್ಯಾನ್ಪ್ರೇಮ್ವಿ.ಹರಿಕೃಷ್ಣ
    ೧೩೨೦೦೯ಪೃಥ್ವಿಜೇಕಬ್ ವರ್ಗೀಸ್ಮಣಿಕಾಂತ್ ಕದ್ರಿ
    ೧೪೨೦೧೦ರಾಮ್ಕೆ.ಮಾದೇಶ್ವಿ.ಹರಿಕೃಷ್ಣ
    ೧೫೨೦೧೦ಜಾಕಿಸೂರಿವಿ.ಹರಿಕೃಷ್ಣ
    ೧೬೨೦೧೧ಹುಡುಗರುಕೆ.ಮಾದೇಶ್ವಿ.ಹರಿಕೃಷ್ಣ
    ೧೭೨೦೧೧ಪರಮಾತ್ಮಯೋಗರಾಜ್ ಭಟ್ವಿ.ಹರಿಕೃಷ್ಣ
    ೧೮೨೦೧೨ಅಣ್ಣ ಬಾಂಡ್ಸೂರಿವಿ.ಹರಿಕೃಷ್ಣ
    ೧೯೨೦೧೨ಯಾರೇ ಕೂಗಾಡಲಿಸಮುದ್ರಖಣಿವಿ.ಹರಿಕೃಷ್ಣ
    ೨೦೨೦೧೪ನಿನ್ನಿಂದಲೇಜಯಂತ್ ಸಿ ಪರಾಂಜಿಮಣಿಶರ್ಮ
    ೨೧೨೦೧೫ಮೈತ್ರಿಗಿರಿರಾಜ್.ಬಿ.ಎಂಇಳೆಯರಾಜ
    ೨೨೨೦೧೫ಪವರ್ ಸ್ಟಾರ್ಕೆ.ಮಾದೇಶ್ತಮನ್ ಎಸ್. ಎಸ್
    ೨೩೨೦೧೫ಧೀರ ರಣ ವಿಕ್ರಮಪವನ್ ಒಡೆಯರ್ವಿ.ಹರಿಕೃಷ್ಣ
    ೨೪೨೦೧೬ಚಕ್ರವ್ಯೂಹಶರವಣನ್.ಎಂತಮನ್ ಎಸ್. ಎಸ್
    ೨೫೨೦೧೬ದೊ‍ಡ್ಮನೆ ಹುಡುಗದುನಿಯಾ ಸೂರಿವಿ.ಹರಿಕೃಷ್ಣ
    ೨೬೨೦೧೭ರಾಜಕುಮಾರಸಂತೋಷ್ ಆನಂದ್ ರಾಮ್ವಿ.ಹರಿಕೃಷ್ಣ
    ೨೭೨೦೧೭ಅಂಜನಿ ಪುತ್ರಹರ್ಷರವಿ ಬಸ್ರುರೂ
    ೨೮


    29
    ೨೦೧೯

    2020
    ನಟಸಾರ್ವಭೌಮ

    ಯುವರತ್ನ


    ಕಿರುತೆರೆಯಲ್ಲಿ

    new education policy 2021: ಮಾರ್ಚ್ ಹೊತ್ತಿಗೆ ಇಡೀ ಶಿಕ್ಷಣ ವ್ಯವಸ್ಥೆಯ ಡಿಜಿಟಲ್ ರೂಪಾಂತರ

    BELLARY OCT 28

    ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನದ ಅನ್ವಯಿಕತೆಯ ಮೂಲಕ ಕ್ರಾಂತಿಕಾರಕ ಬದಲಾವಣೆಗಳನ್ನು ತರುತ್ತಿದ್ದು, ಮುಂಬರುವ ಮಾರ್ಚ್ ಹೊತ್ತಿಗೆ ರಾಜ್ಯದ ಇಡೀ ಶಿಕ್ಷಣ ವ್ಯವಸ್ಥೆಯನ್ನು ಡಿಜಿಟಲ್ ಆಗಿ ರೂಪಾಂತರಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ -Dr.C.N.Ashwatha Narayana-ಹೇಳಿದ್ದಾರೆ.

    ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ-Vijayanagara Sri Krishnadevaraya University- ಮತ್ತು ನಾಸ್ಕಾಂ -NASSCOM-ನಡುವಿನ ಒಡಂಬಡಿಕೆಗೆ ಮತ್ತು ಎನ್ಇಪಿ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಗುರುವಾರ ಮಾತನಾಡಿದ ಅವರು, ಇದರಿಂದಾಗಿ ವಿದ್ಯಾರ್ಥಿಗಳು ಮತ್ತು ಬೋಧಕರಿಗೆ ಸ್ಕಿಲ್ಸ್ ಪಾಸ್ ಪೋರ್ಟ್, ಸ್ಕಿಲ್ಸ್ ವ್ಯಾಲೆಟ್ ಮತ್ತು ಬ್ಯಾಡ್ಜಸ್ ನಂತಹ ಜಾಗತಿಕ ಗುಣಮಟ್ಟದ ಕೌಶಲ್ಯಗಳು ಉಚಿತವಾಗಿ ಸಿಗಲಿವೆ ಎಂದರು. ಈ ಕಾರ್ಯಾಗಾರವು ಇಲ್ಲಿನ ಬಳ್ಳಾರಿ ಎಂಜಿನಿಯರಿಂಗ್ ಸಂಸ್ಥೆ ಮತ್ತು ಮ್ಯಾನೇಜ್‌ಮೆಂಟ್ ಸಂಸ್ಥೆಯ ಆಶ್ರಯದಲ್ಲಿ ನಡೆಯಿತು.

    ಶಿಕ್ಷಣದಲ್ಲಿ ಉತ್ಕೃಷ್ಟತೆ ಸಾಧಿಸದೆ ನಮಗೆ ಉಳಿಗಾಲವಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು, ನಾಸ್ಕಾಂನ `ಫ್ಯೂಚರ್ ಸ್ಕಿಲ್ಸ್ ಪ್ರೈಮ್’ ವೇದಿಕೆ ಸೇರಿದಂತೆ ಇತರ ಮೂಲಗಳಿಂದ ಈ ಶೈಕ್ಷಣಿಕ ವರ್ಷದಿಂದಲೇ 10 ಸಾವಿರ ಶಿಕ್ಷಕರಿಗೆ ಡಿಜಿಟಲ್ ತರಬೇತಿ ಕೊಡಲಾಗುವುದು. ಇನ್ಫೋಸಿಸ್ ಸಂಸ್ಥೆ ಮತ್ತು ಧಾರವಾಡದ ಉನ್ನತ ಶಿಕ್ಷಣ ಅಕಾಡೆಮಿ ಮೂಲಕವೂ 3 ಸಾವಿರ ಶಿಕ್ಷಕರಿಗೆ ಇಂತಹ ವಿಶ್ವ ಗುಣಮಟ್ಟದ ತರಬೇತಿಯನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು.

    ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಕೇವಲ ಎರಡು ವರ್ಷಗಳಲ್ಲಿ 3.50 ಲಕ್ಷ ಕಲಿಕಾ ಸಾಮಗ್ರಿ ಸಿದ್ಧಪಡಿಸಲಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಎಲ್ಲಿದ್ದರೂ ನಿರಂತರವಾಗಿ ಕಲಿಯಬಹುದಾಗಿದೆ. ಬಹುಶಿಸ್ತೀಯ ಕಲಿಕೆಯ ಮಾದರಿಯನ್ನು ಪ್ರಪ್ರಥಮವಾಗಿ ಅಳವಡಿಸಿಕೊಂಡಿರುವ ರಾಜ್ಯದತ್ತ ಇಡೀ ಭಾರತವೇ ನೋಡುತ್ತಿದೆ ಎಂದು ಸಚಿವರು ನುಡಿದರು.

    ಕರ್ನಾಟಕವೇ ಇವತ್ತು ದೇಶದ ಜ್ಞಾನ ಮತ್ತು ಆರ್ಥಿಕ ರಾಜಧಾನಿಯಾಗಿದ್ದು, ಅಮೆರಿಕದಂತೆ ಉಜ್ವಲ ಅವಕಾಶಗಳ ಆಡುಂಬೊಲವಾಗಿದೆ. ಈ ವಿಚಾರದಲ್ಲಿ ನಾವು ಮುಂಬೈಯನ್ನು ಹಿಂದಿಕ್ಕಿದ್ದೇವೆ. ಸಂಶೋಧನೆ ಮತ್ತು ಆವಿಷ್ಕಾರಗಳ ತೊಟ್ಟಿಲಾಗಿರುವ ರಾಜ್ಯದ ಶಿಕ್ಷಣ ಕ್ಷೇತ್ರದತ್ತ ಈಗ ಇಡೀ ವಿಶ್ವವೇ ನೋಡುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

    ಎನ್ಇಪಿ ಗುರಿಯಂತೆ ಪ್ರತಿಯೊಬ್ಬ ಶಿಕ್ಷಿತನಿಗೂ ಉದ್ಯೋಗ ಸಿಗಬೇಕು, ಇಲ್ಲವೇ ಉದ್ಯೋಗದಾತನಾಗಬೇಕು. ಈ ನಿಟ್ಟಿನಲ್ಲಿ ಅನುಭವನಿಷ್ಠ ಕಲಿಕೆ, ಪ್ರಾಯೋಗಿಕತೆ, ನಾಯಕತ್ವ, ಕೌಶಲ್ಯ ಮತ್ತು ಪ್ರಾಜೆಕ್ಟ್ ಆಧರಿತ ಕಲಿಕೆಯನ್ನು ಜಾರಿಗೆ ತರಲಾಗಿದೆ. ಜೊತೆಗೆ ವಿದ್ಯಾರ್ಥಿಗಳ ಆಂತರಿಕ ಮೌಲ್ಯಮಾಪನ ಆಯಾಯ ತರಗತಿಗಳಲ್ಲೇ ನಡೆಯಲಿದೆ ಎಂದು ಅಶ್ವತ್ಥನಾರಾಯಣ ಹೇಳಿದರು.

    ಎಂಜಿನಿಯರಿಂಗ್ ನಲ್ಲಿ ಈಗಾಗಲೇ ಆಂತರಿಕ ಮೌಲ್ಯಮಾಪನವನ್ನು ಪ್ರತೀ ವಿಷಯಕ್ಕೆ 50 ಅಂಕಗಳಿಗೆ ಹೆಚ್ಚಿಸಲಾಗಿದೆ. ಪದವಿ ಶಿಕ್ಷಣದಲ್ಲೂ ಇದೇ ವ್ಯವಸ್ಥೆ ಜಾರಿಯಾಗಲಿದೆ. ಇದರನ್ವಯ, 45 ನಿಮಿಷಗಳ ಬೋಧನೆ ಮತ್ತು 15 ನಿಮಿಷಗಳ ಆಂತರಿಕ ಮೌಲ್ಯಮಾಪನ ಎಲ್ಲೆಡೆ ಬರಲಿದೆ. ಇದರ ಜತೆಗೆ ಅತ್ಯುತ್ತಮ ವಿದೇಶೀ ವಿ.ವಿ.ಗಳೊಂದಿಗೆ ಸಹಭಾಗಿತ್ವಕ್ಕೆ ಉತ್ತೇಜನ ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು.

    ಕಾರ್ಯಕ್ರಮದಲ್ಲಿ ಸಚಿವ ಶ್ರೀರಾಮುಲು, ಶಾಸಕ ಸೋಮಶೇಖರ ರೆಡ್ಡಿ, ಎಂಎಲ್ ಸಿ ಕೆ.ಸಿ.ಕೊಂಡಯ್ಯ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಪಿ., ಕೃಷ್ಣದೇವರಾಯ ವಿವಿ ಕುಲಪತಿ ಪ್ರೊ.ಸಿದ್ದು ಪಿ.ಅಲಗೂರ,  ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯ ನಿರ್ವಾಹಕ ನಿರ್ದೇಶಕ ಗೋಪಾಲಕೃಷ್ಣ ಜೋಶಿ, ಬಿಐಇಟಿ ಅಧ್ಯಕ್ಷ ಯಶವಂತ್ ಭೂಪಾಲ್ ಉಪಸ್ಥಿತರಿದ್ದರು

    ಮಾತಾಡ್ ಮಾತಾಡ್ ಕನ್ನಡ;ಲಕ್ಷ ಕಂಠಗಳ ಗೀತ ಗಾಯನ

    ಇಂದು ಕರ್ನಾಟಕದ ರಾಜಧಾನಿ ಬೆಂಗಳೂರಿನ ಆಡಳಿತ ಶಕ್ತಿಕೇಂದ್ರ ವಿಧಾನಸೌಧದ ಮುಂಭಾಗ ಹಿಂದೆಂದೂ ಕಂಡು ಕೇಳರಿಯದ ಇತಿಹಾಸಕ್ಕೆ ಸಾಕ್ಷಿಯಾಯಿತು.

    ವಿಧಾನಸೌಧದ ಎಲ್ಲ ಮೆಟ್ಟಿಲುಗಳ ಮೇಲೆ ಬಣ್ಣಬಣ್ಣದ ಉಡುಗೆ-ತೊಡುಗೆ ತೊಟ್ಟ ಪುರುಷರು ಮಹಿಳೆಯರು ಅಧಿಕಾರಿಗಳು ಸಿಬ್ಬಂದಿ ವರ್ಗದವರು, ಆರಕ್ಷಕ ಅಧಿಕಾರಿಗಳು ಆರಕ್ಷಕ ಸಿಬ್ಬಂದಿ ಹೀಗೆ ಯಾವ ಭೇದ ಭಾವಗಳಿಲ್ಲದೆ, ಶಿಷ್ಟಾಚಾರಗಳ ಹಂಗಿಲ್ಲದೆ ಒಟ್ಟಿಗೆ ನಿಂತು ಕನ್ನಡದ ಗೀತೆಗಳನ್ನು ಹಾಡುವ ಮೂಲಕ ಕನ್ನಡಕ್ಕಾಗಿ ನಾವು ಅಭಿಯಾನ ಒಂದು ಚರಿತ್ರಾರ್ಹ ಘಟನೆಯಾಗಿ ದಾಖಲಾಯಿತು.

    ಬೆಳಿಗ್ಗೆ ಸರಿಯಾಗಿ ಹನ್ನೊಂದು ಗಂಟೆಗೆ ವಿಧಾನ ಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನಿಲ್ ಕುಮಾರ್ ಅವರು ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಿರ್ಮಿಸಲಾಗಿದ್ದ ಬೃಹತ್ ಪರದೆಯ ಮುಂದೆ ನಿಂತು ಕನ್ನಡ ಗೀತ ಗಾಯನದ ಮಹತ್ತರ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಅವರ ಜೊತೆಯಲ್ಲಿ ಇದೇ ಮೊದಲ ಬಾರಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಗಳನ್ನು ಒಳಗೊಂಡಂತೆ ಎಲ್ಲಾ ಹಿರಿಯ ಭಾರತೀಯ ಆಡಳಿತ ಸೇವೆಯ ಹಾಗೂ ಕರ್ನಾಟಕ ಆಡಳಿತ ಸೇವೆಯ ಅಧಿಕಾರಿಗಳು. ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂದಿ ವರ್ಗದವರು ಗೀತಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಪೂರ್ವ ಕಾರ್ಯಕ್ರಮವನ್ನಾಗಿ ಮಾಡಲು ಸಹಕರಿಸಿದರು.

    ಹುಬ್ಭಳ್ಳಿಯಲ್ಲಿ ಮುಖ್ಯಮಂತ್ರಿ

    ಹುಬ್ಬಳ್ಳಿಯಲ್ಲಿಂದು ಮಹಾನಗರಪಾಲಿಕೆ ಏರ್ಪಡಿಸಿದ್ದ ಕನ್ನಡ ಸಂಸ್ಕೃತಿ ವೈಭವ, ಕನ್ನಡದ ಶ್ರೇಷ್ಟತೆ ಸಾರುವ ಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸಿದರು.


    ಇದೇ ರೀತಿ ಇಡೀ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರ ತಾಲೂಕು ಕೇಂದ್ರಗಳಲ್ಲಿ ಹಾಗೂ ಎಲ್ಲ ಸರ್ಕಾರಿ ಕಚೇರಿಗಳ ಆವರಣಗಳಲ್ಲಿ ಕನ್ನಡ ಗೀತಗಾಯನ ಕಾರ್ಯಕ್ರಮ ಭಾರಿ ಉತ್ಸಾಹ ,ಸಡಗರ ಸಂಭ್ರಮದಿಂದ ನಡೆಯಿತು.ಒಂದು ಅಂದಾಜಿನ ಪ್ರಕಾರ ಈ ಗೀತಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಸಂಖ್ಯೆ ಸುಮಾರು 18 ಲಕ್ಷ ಎಂದು ವರದಿಗಳು ತಿಳಿಸಿವೆ.


    ಬೆಂಗಳೂರಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆವರಣದಲ್ಲಿ ಹಾಗೆಯೇ ರವೀಂದ್ರ ಕಲಾಕ್ಷೇತ್ರದ ಮುಂಭಾಗದಲ್ಲಿ ಈ ಗೀತಗಾಯನ ಅಭೂತಪೂರ್ವ ಜನಸ್ಪಂದನ ಯೊಂದಿಗೆ ಆಯೋಜನೆಗೊಂಡಿತ್ತು.
    ನೂರಾರು ಗಾಯಕರು ಕಲಾವಿದರು ಸಾಹಿತಿಗಳು ಜನಸಾಮಾನ್ಯರು ಇದರಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

    ವಿಶ್ವವಿಖ್ಯಾತ ಗೋಲ್ ಗುಂಬಜ್ ಮುಂಭಾಗದಲ್ಲಿ 50 ಕಲಾತಂಡಗಳು 250 ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗಿಯಾದರು.
    ಮಂಡ್ಯದ ಸರ್ ಎಂ ವಿ ಕ್ರೀಡಾಂಗಣದಲ್ಲಿ ಮೂರು ಸಾವಿರಕ್ಕೂ ಅಧಿಕ ಮಂದಿ ಈ ಗೀತಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
    ಉಡುಪಿಯ ಶ್ರೀಕೃಷ್ಣ ದೇಗುಲದ ಮುಂಭಾಗ ಮತ್ತು ಹಂಪಿಯ ಐತಿಹಾಸಿಕ ಸ್ಮಾರಕಗಳ ಮುಂದೆ ಅಭೂತಪೂರ್ವ ಕನ್ನಡ ಗೀತೆಗಳ ಮಾರ್ದನಿಸಿದವು.

    ಬೆಂಗಳೂರು ವಿಭಾಗದ 125 ಸ್ಥಳಗಳಲ್ಲಿ 161232ಮಂದಿ ಕನ್ನಡ ಗೀತೆಗಳಿಗೆ ತಮ್ಮ ದನಿಗೂಡಿಸಿದರು.

    ಮೈಸೂರು ವಿಭಾಗದಲ್ಲಿ
    96 ಸ್ಥಳಗಳಲ್ಲಿ 541365ಜನ ಈ ಗೀತ ಗಾಯನದಲ್ಲಿ ಪಾಲ್ಗೊಂಡರು.

    ಬೆಳಗಾವಿ ವಿಭಾಗದ 105 ಸ್ಥಳಗಳಲ್ಲಿ 1074418ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

    ಕಲಬುರ್ಗಿ ವಿಭಾಗದ 60 ಸ್ಥಳಗಳಲ್ಲಿ 77125ಜನ ಈ ಗೀತ ಗಾಯನ ದ ಮಾಧುರ್ಯಕ್ಕೆ ಜೊತೆಯಾದರು.

    ದೆಹಲಿ ಮುಂಬಯಿ ಕಾಸರಗೋಡು ಮತ್ತು ಪುಣೆ ಹೀಗೆ ಹೊರರಾಜ್ಯಗಳಿಂದ 31 ಸ್ಥಳಗಳಲ್ಲಿ 350 ಮಂದಿ ಈ ಗೀತ ಗಾಯನದ ಸಂಭ್ರಮಕ್ಕೆ ಜೊತೆಯಾದರು.

    ಒಟ್ಟಾರೆ ಇದು ದಾಖಲೆಯ ಮೇಲೆ ದಾಖಲೆ ಬರೆದ ಕಾರ್ಯಕ್ರಮವಾಗಿ ಕನ್ನಡ ಸಂಸ್ಕೃತಿಯ ಅಧ್ಯಾಯದಲ್ಲಿ ಅಚ್ಚಳಿಯದೆ ಉಳಿಯಿತು.

    ಇಂದಿನಿಂದ ಐತಿಹಾಸಿಕ ಹಾಸನಾಂಬೆಯ ದರ್ಶನಕ್ಕೆ ಭಕ್ತರಿಗೆ ಅವಕಾಶ

    HASSAN OCT 28

    ಪ್ರಸಿದ್ಧ ಹಾಸನಾಂಬೆ ಹಾಗೂ ಸಿದ್ಧೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಅ.28 ರಿಂದ ನವೆಂಬರ್ 6ರವರೆಗೆ ನಡೆಯಲಿದೆ, ಕೊರೊನಾ ಹಿನ್ನೆಲೆಯಲ್ಲಿ ಜಾತ್ರೆ ಸರಳವಾಗಿ ನಡೆಯಲಿದ್ದು, ಅಕ್ಟೋಬರ್ ಇಂದಿನಿಂದ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಮೊದಲನೇ ದಿನ ಹಾಗೂ ಕೊನೆಯ ದಿನ ಸಾರ್ವಜನಿಕರಿಗೆ ಅವಕಾಶವಿಲ್ಲ.

    ಈ ಬಾರಿ ಹಾಸನಾಂಬೆ ದರ್ಶನಕ್ಕೆ ವಿಶೇಷ ಪಾಸ್ ವ್ಯವಸ್ಥೆ ಕೂಡ ಮಾಡಲಾಗಿದ್ದು, ಒಂದು ಸಾವಿರ, 300 ವಿಶೇಷ ದರ್ಶನ ಟಿಕೆಟ್ ಮೂಲಕ ಅವಕಾಶ ನೀಡಲಾಗಿದೆ.

    ದೇವರ ದರ್ಶನಕ್ಕೆ ಬರುವವರು 2 ಡೋಸ್ ಕೋವಿಡ್ ಲಸಿಕೆ ಹಾಕಿಸಿಕೊಂಡಿರುವುದು ಕಡ್ಡಾಯ. ವ್ಯಾಕ್ಸಿನ್ ಪಡೆದವರಿಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.

    SENSEX ಗರಿಷ್ಠ – ಅವಕಾಶ ಅದ್ಭುತ, ಇದ್ದರೆ ಚಿಂತನೆ ನಿಯಂತ್ರಿತ

    Indian Stock Market- ಷೇರುಪೇಟೆಯ ಹೆಗ್ಗುರುತಾದ ಸೆನ್ಸೆಕ್ಸ್‌ ಈ ವರ್ಷದ ಆರಂಭದಲ್ಲಿ 47,700 ರ ಮಟ್ಟದಲ್ಲಿದ್ದು, ಆಗಿನ ಮಾರ್ಕೆಟ್‌ ಕ್ಯಾಪಿಟಲೈಸೇಷನ್‌ ಮೊತ್ತವು ರೂ.189 ಲಕ್ಷ ಕೋಟಿಯ ಸಮೀಪವಿತ್ತು. ಆ ಸಂದರ್ಭದಲ್ಲಿ ನೋಂದಾಯಿಸಿಕೊಂಡಿದ್ದ ರೀಟೇಲ್‌ ಗ್ರಾಹಕರ ಸಂಖೈ ಮಾತ್ರ ಕೇವಲ 5.89 ಕೋಟಿಯಷ್ಠೆ. ಸಧ್ಯ ಸೆನ್ಸೆಕ್ಸ್‌60,821 ಪಾಯಿಂಟುಗಳಲ್ಲಿದ್ದು, ರೂ.264.39 ಲಕ್ಷ ಕೋಟಿ ಮಾರ್ಕೆಟ್‌ಕ್ಯಾಪಿಟಲೈಸೇಷನ್‌ಹೊಂದಿದೆ.

    ಈ ಭಾರಿ ಬೆಳವಣಿಗೆಯ ಹಿಂದೆ ಅಡಕವಾಗಿರುವ ನಮ್ಮ ದೇಶದ ಜನಶಕ್ತಿ. ನೋಂದಾಯಿತ ಗ್ರಾಹಕರ ಸಂಖ್ಯೆಯು 8.37 ಕೋಟಿಗೆ ಏರಿಕೆಯಾಗಿದೆ. ಇದೇ ರೀತಿಯ ರೀಟೇಲ್‌ ಗ್ರಾಹಕರ ಆಸಕ್ತಿ ಹೆಚ್ಚುತ್ತಾ ಹೋದರೆ ನಮ್ಮ ಷೇರುವಿನಿಮಯ ಕೇಂದ್ರಗಳಲ್ಲಿ ಲಿಸ್ಟಿಂಗ್‌ಆಗಿರುವ ಕಂಪನಿಗಳು ಅತಿ ವಿರಳವಾದಂತಾಗಿ, ಬೇಡಿಕೆಯನ್ನು ಪೂರೈಸಲಸಮರ್ಥವಾಗಿ, ಲಿಸ್ಟಿಂಗ್‌ಆಗಿರುವ ಕಂಪನಿಗಳಿಗೆ ಭಾರಿ ಬೇಡಿಕೆಯನ್ನುಂಟುಮಾಡಿ ಷೇರಿನ ಬೆಲೆಗಳನ್ನು ಮತ್ತಷ್ಟು ಏರಿಕೆಗೊಳಪಡಿಸಲೂಬಹುದು. ಹೊಸದಾಗಿ ನೋಂದಾಯಿಸಿಕೊಂಡಿರುವ ಗ್ರಾಹಕರ ಪಟ್ಟಿಯಲ್ಲಿ ಮಹರಾಷ್ಟ್ರ ಮೊದಲನೇ ಸ್ಥಾನದಲ್ಲಿದ್ದು, ನಂತರದ ಸ್ಥಾನದಲ್ಲಿ ಗುಜರಾತ್‌, ಉತ್ತರ ಪ್ರದೇಶ, ಕರ್ನಾಟಕಗಳು ಇವೆ. ಈ ಹೂಡಿಕೆದಾರರು, ಪೇಟೆಯ ಏರಿಳಿತಗಳಿಗೆ, ಎಷ್ಟರ ಮಟ್ಟಿಗೆ ಸ್ಥಿರವಾಗಿರುತ್ತಾರೆ ಎಂಬುದು ಮುಖ್ಯ.

    ಸೆನ್ಸೆಕ್ಸ್‌60 ಸಾವಿರದ ಗಡಿದಾಟಿ ನಿವೃತ್ತಿಯ ಹಂತ ತಲುಪಿದೆ ಎಂದು ಒಂದೆಡೆ ವಿಶ್ಲೇಷಿಸಬಹುದಾದರೆ, ನಿಫ್ಟಿಯು-NIFFTY- 18 ಸಾವಿರದ ಗಡಿದಾಟಿ ಯೌವನಕ್ಕೆ ಪಾದಾರ್ಪಣೆ ಮಾಡಿದೆ ಎನ್ನುವರು. ಈ ಮಧ್ಯೆ ಪೇಟೆಯು ಇಳಿಕೆಯಾದರೆ ದಣಿವಿನಿಂದ ನಿವೃತ್ತಿ ಎಂದಾದರೆ, ಷೇರುಪೇಟೆ ಏರಿಕೆ ಕಂಡಲ್ಲಿ ಯೌವನದ ಪ್ರಭಾವ ಎನ್ನಬಹುದು. ಅಂದರೆ ಪೇಟೆಯು ಯಾವ ದಿಶೆಯಲ್ಲಿ ಸಾಗಿದರೂ ಅದನ್ನು ವಿಶ್ಲೇಷಿಸಬಹುದಾದ ಪರಿಸ್ಠಿತಿಯಲ್ಲಿ ಈಗಿನ ಪೇಟೆಗಳು ತಲುಪಿವೆ. ಆದರೂ ಕಂಪನಿಗಳ ಷೇರುಗಳ ಬೆಲೆಗಳು ಪ್ರದರ್ಶಿಸುವ ಏರಿಳಿತಗಳು, ಕೆಲವು ಭಾರಿ ರಭಸದ ಏರಿಳಿತಗಳು ಹೂಡಿಕೆಗೆ ಅವಕಾಶಗಳನ್ನು ಕಲ್ಪಿಸಿಕೊಡುತ್ತವೆ.

    sensex -22-10-2021

    ಆದರೆ ಈ ಸಂದರ್ಭದಲ್ಲಿ ಹೂಡಿಕೆಗೆ ಆಯ್ಕೆ ಮಾಡಿಕೊಳ್ಳುವಾಗ ಉತ್ತಮ ಸಾಧನೆಯಾಧಾರಿತವಾದ, ಆಕರ್ಷಕ ಡಿವಿಡೆಂಡ್‌ಗಳನ್ನು ವಿತರಿಸುವ ಹೂಡಿಕೆದಾರ ಸ್ನೇಹಿ ಆಡಳಿತ ಮಂಡಳಿ ಹೊಂದಿರುವ, ಬೆಲೆಗಳು ಕುಸಿತಕಂಡಿರುವ ಕಂಪನಿಗಳನ್ನು ಮಾತ್ರ ಗಮನಿಸಬೇಕು. ನಂತರದಲ್ಲಿ ಆ ಷೇರು ಒದಗಿಸುವ ಲಾಭದತ್ತಲೇ ಗಮಿನವಿರಿಸಿ ನಿರ್ಗಮಿಸುವ / ಲಾಭಗಳಿಕೆಗಾಗಿ ನಗದೀಕರಣ ಮಾಡಿಕೊಳ್ಳುವಂತಿದ್ದಲ್ಲಿ ಮಾತ್ರ ಹೂಡಿಕೆ ಯಶಸ್ಸು ಕಾಣಲು ಸಾಧ್ಯ.

    ಪೇಟೆಯಲ್ಲಿ ಕೆಲವು ದಿನಗಳಲ್ಲಿ ಪ್ರದರ್ಶಿತವಾದ ಕೆಲವು ಏರಿಳಿತಗಳ ಉದಾಹರಣೆಗಳನ್ನು ಪರಿಶೀಲಿಸೋಣ:

    ಲೌರಸ್‌ಲ್ಯಾಬ್ಸ್‌ಲಿಮಿಟೆಡ್:ಈ ಕಂಪನಿಯು ತನ್ನ ಎರಡನೇ ತ್ರೈಮಾಸಿಕದ ಫಲಿತಾಂಶದೊಂದಿಗೆ ಈ ತಿಂಗಳ 28 ರಂದು ಲಾಭಾಂಶ ಪ್ರಕಟಿಸುವ ಕಾರ್ಯ ಸೂಚಿ ಪ್ರಕಟಿಸಿದೆ. ಆದರೆ ಕಳೆದ ಒಂದೇ ವಾರದಲ್ಲಿ ಷೇರಿನ ಬೆಲೆಯು ರೂ.660 ರ ಸಮೀಪದಿಂದ ರೂ.520 ರವರೆಗೂ ಕುಸಿದು ರೂ.537 ರ ಸಮೀಪದಲ್ಲಿದೆ. ಅಂದರೆ ಫಲಿತಾಂಶಕ್ಕೂ ಮುನ್ನ ಈ ರೀತಿ ಕುಸಿತಕ್ಕೊಳಗಾಗಿರುವುದು ಎರಡು ಕಾರಣವಿರಬಹುದು. ಒಂದು ಕಂಪನಿಯ ಸಾಧನೆಯು ಉತ್ತಮವಾಗಿರಲಾರದು ಎಂಬ ಉದ್ದೇಶದಿಂದ ಮಾರಾಟದ ಒತ್ತಡ ಬಂದಿರಬಹುದು, ಇಲ್ಲವೇ ಕಂಪನಿಯ ಸಾಧನೆಯ ಒಳ ಸುದ್ಧಿಯು ಸೋರಿಕೆಯಾಗಿರಬೇಕು, ಪರ್ಯಾಯವಾಗಿ ಸಣ್ಣ ಹೂಡಿಕೆದಾರರ ದಿಕ್ಕು ತಪ್ಪಿಸಲು ಭಾರಿ ಇಳಿಕೆ ಪ್ರದರ್ಶಿಸಿ ನಂತರ ಫಲಿತಾಂಶದ ಕಾರಣ ಏರಿಕೆಗೆ ದಾರಿ ಮಾಡಿಕೊಂಡಿರಲೂ ಬಹುದು. ಕಾದು ನೋಡೋಣ.

    ಇಂಡಿಯನ್‌ ಎನರ್ಜಿ ಎಕ್ಸ್ ಚೇಂಜ್‌ ಲಿಮಿಟೆಡ್:ಹೊಸದಾಗಿ ʼಎಫ್‌ & ಒʼ ಸಮೂಹಕ್ಕೆ ಪ್ರವೇಶ ಪಡೆದ ಈ ಕಂಪನಿಯು ಕಳೆದ ಒಂದು ತಿಂಗಳ ಅವಧಿಯಲ್ಲಿ ರೂ.567 ರ ಸಮೀಪದಿಂದ ರೂ.956 ರವರೆಗೂ ಏರಿಕೆ ಕಂಡು, ರೂ.764 ರಲ್ಲಿ ಕೊನೆಗೊಂಡಿದೆ. ವಿಶೇಷವೆಂದರೆ ಕಂಪನಿಯು ಪ್ರತಿ ಒಂದು ಷೇರಿಗೆ ಎರಡು ಷೇರುಗಳ ಬೋನಸ್‌ ಘೋಷಿಸಿದ ಕಾರಣ ಶುಕ್ರವಾರ ಆರಂಭದಲ್ಲಿ ದಿನದ ಗರಿಷ್ಠ ಆವರಣ ಮಿತಿ ರೂ.833 ರಲ್ಲಿದ್ದು ಸ್ವಲ್ಪ ಸಮಯದ ನಂತರ ರೂ.760 ರವರೆಗೂ ಕುಸಿದು ರೂ.764 ರಲ್ಲಿ ಕೊನೆಗೊಂಡಿದೆ. ಆದರೆ ದಿನದ ಆರಂಭದಲ್ಲಿ ಗರಿಷ್ಠದಲ್ಲಿದ್ದಾಗ ಬೋನಸ್‌ ಷೇರು ಎಂಬ ಮಾಂತ್ರಿಕ ಪದಕ್ಕೆ ಮೋಹಿತರಾದವರಿಗೆ ಬೇಸರ ಮೂಡಿಸುವಂತಾಯಿತು. ಅಂದರೆ ಚಟುವಟಿಕೆಯಲ್ಲಿ ಯಾವುದೇ ಬೆಳವಣಿಗೆಗಳಿಗೆ ಆದ್ಯತೆ ನೀಡದೆ ಕೇವಲ ʼವ್ಯಾಲ್ಯು ಪಿಕ್‌ – ಪ್ರಾಫಿಟ್‌ ಬುಕ್‌ ʼ ಎಂಬುದು ಅನುಕೂಲಕರವೆಂದಾಯಿತು.

    ಇಂಡಿಯಾ ಬುಲ್‌ ಹೌಸಿಂಗ್‌ ಫೈನಾನ್ಸ್ ಲಿಮಿಟೆಡ್:ಈ ಷೇರಿನ ಬೆಲೆಯು ಕಳೆದ ಒಂದು ತಿಂಗಳಿನಿಂದ ರೂ.222 ರ ಸಮೀಪದಿಂದ ರೂ.264 ರವರೆಗೂ ಏರಿಕೆ ಕಂಡು ರೂ.230 ರ ಸಮೀಪಕ್ಕೆ ಹಿಂದಿರುಗಿದೆ. ಸೆಪ್ಟೆಂಬರ್‌ 29 ರಂದು ರೂ.222 ರಲ್ಲಿದ್ದ ಷೇರಿನ ಬೆಲೆ ಅಕ್ಟೋಬರ್‌ 19 ರಂದು ರೂ.264 ರವರೆಗೂ ಜಿಗಿದು, 22 ರಂದು ರೂ.224 ರವರೆಗೂ ಕುಸಿದಿದೆ. ಅಂದರೆ ಸುಮಾರು 20 ದಿನಗಳಲ್ಲಿ ರೂ.42 ರಷ್ಟು ಏರಿಕೆ ಕಂಡು ರೂ.40 ರಷ್ಟು ಇಳಿಕೆ ಕಂಡಿದೆ. ಹಿಂದಿನ ತಿಂಗಳು ಈ ಕಂಪನಿ 1,650 ಕೋಟಿ ಅಮೇರಿಕನ್‌ ಡಾಲರ್‌ ಮೌಲ್ಯದ ಫಾರಿನ್‌ ಕರೆನ್ಸಿ ಕನ್ವರ್ಟಬಲ್‌ ಬಾಂಡ್‌ ಗಳನ್ನು ವಿತರಿಸಿದೆ. ನವೆಂಬರ್‌ 15 ರಂದು ಈ ಕಂಪನಿಯ ವಿಶೇಷ ಸಾಮಾನ್ಯ ಸಭೆ ನಡೆಯಲಿದೆ.

    ಜುಬಿಲಿಯಂಟ್‌ ಇನ್‌ ಗ್ರೇವಿಯಾ ಲಿಮಿಟೆಡ್:ಈ ಕಂಪನಿಯ ಷೇರು ಒಂದೇ ವಾರದಲ್ಲಿ ಪ್ರದರ್ಶಿಸಿದ ಏರಿಳಿತಗಳನ್ನು ಬೆರಗುಗೊಳಿಸುವಂತಹುದಾಗಿದೆ. ಸೋಮವಾರದಂದು ಕಂಪನಿಯ ಷೇರಿನ ಬೆಲೆ ರೂ.877 ರ ವಾರ್ಷಿಕ / ಸರ್ವಕಾಲೀನ ಗರಿಷ್ಠ ತಲುಪಿತು. 19 ರಂದು ಕಂಪನಿಯು ತನ್ನ ಎರಡನೇ ತ್ರೈಮಾಸಿಕ ಫಲಿತಾಂಶ ಪ್ರಕಟಿಸಿತು. ವಹಿವಾಟು ಉತ್ತಮವಾಗಿದ್ದರೂ ಲಾಭಗಳಿಕೆಯು ಸ್ವಲ್ಪ ಕುಸಿತದಲ್ಲಿದೆ ಎಂಬ ಅಂಶದಿಂದ ಷೇರಿನ ಬೆಲೆ ಕುಸಿತಕ್ಕೊಳಗಾಗಿ ರೂ.657 ರವರೆಗೂ ತಲುಪಿ ಶುಕ್ರವಾರ ರೂ.689 ಕ್ಕೆ ಜಿಗಿದು ರೂ.677 ರ ಸಮೀಪ ಕೊನೆಗೊಂಡಿದೆ.

    ಸ್ಟೀಲ್‌ ಅಥಾರಿಟೀಸ್‌ ಆಫ್‌ ಇಂಡಿಯಾ ಲಿಮಿಟೆಡ್:ಈ ಕಂಪನಿಯ ಷೇರಿನ ಬೆಲೆ ಕೇವಲ ಹತ್ತೇ ದಿನಗಳಲ್ಲಿ ರೂ.115 ರ ಸಮೀಪದಿಂದ ರೂ.131 ರವರೆಗೂ ಜಿಗಿದು, ಅಲ್ಲಿಂದ ರೂ.115 ಕ್ಕೆ ಮರಳಿದೆ. ಕಂಪನಿಯ ಆಡಳಿತ ಮಂಡಳಿಯು ಈ ತಿಂಗಳ 29 ರಂದು ತನ್ನ ಎರಡನೇ ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿದೆ ಎಂಬುದನ್ನು ಶುಕ್ರವಾರ ಸಂಜೆ ಪ್ರಕಟಣೆ ಹೊರಬಿದ್ದಿದೆ. ಇದು ಸೋಮವಾರ ಯಾವರೀತಿಯ ಪ್ರಭಾವ ಬೀರಬಹದೆಂಬುದನ್ನು ಕಾದು ನೋಡಬೇಕಾಗಿದೆ.

    ಚಿಂತನೆಗಳನ್ನುಸಕಾರಾತ್ಮಕವಾಗಿರುವಂತೆ ಮಾಡಲು, ರಚನಾತ್ಮಕತೆಯತ್ತ ತೊಡಗಿಸುವುದರೊಂದಿಗೆ ಮಿತವಾದ ಸಂಪಾದನೆ ಗಳಿಸಲು ಸಹ ಸಾಧ್ಯವಿರುವ ಸುಲಭ ಮಾರ್ಗ ಎಂದರೆ ಷೇರುಪೇಟೆ. ಷೇರುಪೇಟೆಯ ಚಟುವಟಿಕೆಗೆ ತೊಡಗಿಸಿಕೊಂಡವರಲ್ಲಿ ಸಾಮಾನ್ಯವಾಗಿ ನಕಾರಾತ್ಮಕವಾದ ಅಭಿಪ್ರಾಯ ಹೊರಬರುವುದು, ಕಾರಣ ನಡೆಸುವ ಚಟುವಟಿಕೆ ಕೇವಲ ಭಾವನಾತ್ಮಕವಾಗಿದ್ದು, ವಾಸ್ತವಿಕತೆಯಿಂದ ದೂರವಿರುವುದಾಗಿದೆ.

    ಷೇರುಪೇಟೆಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರು, ಈಗಿನ ದಿನಗಳಲ್ಲಿ ಹೆಚ್ಚು ಹೆಚ್ಚು ರೀಟೇಲ್‌ ಗ್ರಾಹಕರು, ಗೃಹಿಣಿಯರೂ ಸೇರಿದಂತೆ, ಷೇರುಪೇಟೆಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ
    ಹಿರಿಯ ನಾಗರೀಕರೂ ಸೇರಿ, ಸೀಮಿತವಾದ, ನಿಯಂತ್ರಿತ ರೀತಿಯಲ್ಲಿ, ಯಾವುದೇ ವ್ಯಾಮೋಹಕ್ಕೊಳಗಾಗದೆ ಕೇವಲ ಉತ್ತಮ ಕಂಪನಿಗಳಲ್ಲಿ ಹೂಡಿಕೆ ಮಾಡಿ ಆಕರ್ಷಕ ಲಾಭ ಪಡೆಯುವ ಮೂಲಕ ತಮ್ಮ ದೈಹಿಕ, ಮಾನಸಿಕ, ಬಾಧೆಗಳನ್ನು ಮರೆತು ಆರೋಗ್ಯವನ್ನ ವೃದ್ಧಿಸಿಕೊಂಡ ಹಲವಾರು ಉದಾಹರಣೆಗಳುಂಟು. ಕೇವಲ ಮನಿ ವಿಕಾಸಕ್ಕಿಂತ ಮನೋವಿಕಾಸದೊಂದಿಗೆ ಮನಿ ವಿಕಾಸ ಪಡೆದು ಉತ್ತಮ ಸ್ವಾಸ್ಥ್ಯದೊಂದಿಗೆ ಕಾಸುಗಳಿಕೆಯೂ ಆಗುವುದು. ಇದಕ್ಕೆ ಪೂರಕವಾದ ಶೈಲಿ ಎಂದರೆ ʼವ್ಯಾಲ್ಯು ಪಿಕ್‌ – ಪ್ರಾಫಿಟ್‌ ಬುಕ್‌ ʼ, ಇಲ್ಲಿ ಪೇಟೆಗಳು ಗರಿಷ್ಠದಲ್ಲಿರುವ ಕಾರಣ ಪ್ರಾಫಿಟ್‌ ಬುಕ್‌ ಗೆ ಹೆಚ್ಚು ಆದ್ಯತೆಯಿರಲಿ.

    ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು

    ಸ್ಮರಣಾಂಜಲಿ – ಪೋಲಿಸ್ ಅಮರವೀರ ಭಾವಚಿತ್ರ ಪ್ರದರ್ಶನ

    ಬಳಕೂರು ವಿ ಎಸ್ ನಾಯಕ

    ಅಂದು ಕುಮಾರಕೃಪಾ ರಸ್ತೆಯಲ್ಲಿರುವ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಪ್ರವೇಶಿಸಿದವರಿಗೆ ಒಂದು ಕ್ಷಣ ಭಾವಪರವಶ ರನ್ನಗಿಸುವಂತಿತ್ತು. ಕಾರಣ ಪೊಲೀಸ್ ಸಂಸ್ಮರಣ ದಿನಾಚರಣೆಯ ಅಂಗವಾಗಿ ಪೋಲಿಸ್ ಅಮರವೀರ ಭಾವಚಿತ್ರ ಪ್ರದರ್ಶನ -ಸ್ಮರಣಾಂಜಲಿ -ಕಾರ್ಯಕ್ರಮ ಚಿತ್ರಕಲಾ ಪರಿಷತ್ತಿನ ಕಲಾ ಗ್ಯಾಲರಿಯಲ್ಲಿ ಒಂದು ವಿಶೇಷವಾದ ಕಲಾ ಪ್ರದರ್ಶನವಾಗಿ ಹೊರಹೊಮ್ಮಿತ್ತು.

    ಕರ್ತವ್ಯ ನಿರತರಾಗಿದ್ದಾಗ ಪೊಲೀಸರು ಮಾಡಿದಸರ್ವೋಚ್ಚ ತ್ಯಾಗ ಬಲಿದಾನಗಳನ್ನು ಹೆಮ್ಮೆಯಿಂದ ಸ್ಮರಿಸಲು ಅಮರರಾದ ಪೊಲೀಸ್ ಹುತಾತ್ಮ ರ ಹೆಸರುಗಳನ್ನು ಆ ದಿನ ಈ ಪರೇಡ್ ನಲ್ಲಿ ಓದಲಾಗುತ್ತದೆ. ಮತ್ತು ಹುತಾತ್ಮರ ಗೌರವಕ್ಕಾಗಿ ಮೂರು ಬಾರಿ ಕುಶಾಲ ತೋಪುಗಳನ್ನು ಹರಿಸಲಾಗುತ್ತದೆ . ಈ ವರ್ಷ ಜಾಗತಿಕ ಪಿಡುಗಾಗಿರುವ ಕೋವಿಡ್ -19 ಮಹಾಮಾರಿಯ ವಿರುದ್ಧ ಹೋರಾಟದಲ್ಲಿ ಕರ್ನಾಟಕ ರಾಜ್ಯದಲ್ಲಿ 83 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಹಾಗೂ ಇನ್ನಿತರೆ ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ 17 ಜನ ಹುತಾತ್ಮರಾಗಿರುತ್ತಾರೆ.

    ಈ ವೀರರ ಕರ್ತವ್ಯನಿಷ್ಠೆ ಬಲಿದಾನಗಳನ್ನು ಗೌರವಪೂರ್ಣವಾಗಿ ನೆನೆಯುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಅದಕ್ಕಾಗಿ ಪೊಲೀಸ್ ಸಂಸ್ಮರಣ ದಿನಾಚರಣೆ ಸ್ಮರಣಾಂಜಲಿ ಕಾರ್ಯಕ್ರಮದಲ್ಲಿ ಪೊಲೀಸ್ಮ ಅಮರವೀರರ ಭಾವಚಿತ್ರ ಪ್ರದರ್ಶನವನ್ನು ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ವಿಶಿಷ್ಟ ವಿನೂತನ ವಿಭಿನ್ನವಾಗಿ ಆಯೋಜಿಸಿರುದ್ದು ಎಲ್ಲರ ಗಮನ ಸೆಳೆಯುತ್ತಿದೆ.

    ಕರ್ನಾಟಕದಲ್ಲಿ ಕರ್ತವ್ಯದ ಅವಧಿಯಲ್ಲಿ ವೀರಮರಣವನ್ನಪ್ಪಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳತ್ಯಾಗ ಹಾಗೂ ಬಲಿದಾನಗಳನ್ನು ಸ್ಮರಿಸುವ ಸ್ಮರಣಾಂಜಲಿ ಎಂಬ ಭಾವ ಚಿತ್ರ ಪ್ರದರ್ಶನ ಎರಡನೇ ಬಾರಿ ನಡೆಯುತ್ತಿದೆ. ಇದರ ಮೂಲಕ ಅವರ ತ್ಯಾಗ ಬಲಿದಾನ ಕರ್ತವ್ಯನಿಷ್ಠೆ ನಮನವನ್ನು ಸಲ್ಲಿಸುವ ಕಾರ್ಯಕ್ರಮ ಇದಾಗಿದೆ.

    ಸ್ಮರಣಾಂಜಲಿಪೋಲಿಸ್ ಅಮರವೀರ ರ ಭಾವಚಿತ್ರ ಪ್ರದರ್ಶನದ ಚಿತ್ರಕಲಾ ಪರಿಷತ್ತಿನಲ್ಲಿ ಪ್ರದರ್ಶನಗೊಳ್ಳುತ್ತಿರುವ ಈ ಪ್ರದರ್ಶನವನ್ನು ಚಿತ್ರಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ಪ್ರೊಫೆಸರ್ ಕೆಎಸ್ ಅಪ್ಪಾಜಯ್ಯ ರವರು ಡಿಸೈನ್ ಇನ್ಸ್ಟಾಲೇಷನ್ ( ಸೃಜನಾತ್ಮಕ ವಿನ್ಯಾಸ ಅನಾವರಣಗೊಳಿಸಿದ್ದಾರೆ). ಇವರು ವಿನ್ಯಾಸಗೊಳಿಸಿರುವ ಭಾವಚಿತ್ರ ಪ್ರದರ್ಶನ ಎಲ್ಲರನ್ನೂ ಭಾವಪರವಶರಾಗಿಸುತ್ತದೆ. ಇವರ ಕ್ರಿಯಾಶೀಲತೆ ಕಲಾ ಗ್ಯಾಲರಿಗೆ ಬಂದು ವೀಕ್ಷಿಸುವಂತಹ ಎಲ್ಲರಿಗೂ ಒಂದು ಕ್ಷಣ ಭಾವನಾತ್ಮಕ ಸೆಳೆತ ಸೆಳೆಯುವಂತಿದೆ.

    ಬಿಆರ್ ರವಿಕಾಂತೇಗೌಡ ಜಂಟಿ ಪೊಲೀಸ್ ಆಯುಕ್ತರು( ಸಂಚಾರ ) ಇವರ ಮುಂದಾಳುತ್ವದಲ್ಲಿ ವಿಶೇಷವಾಗಿ ಈ ಪ್ರದರ್ಶನ ಬಂದಿರುವುದು ಇವರ ಉತ್ತಮ ಕಾರ್ಯಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಪೊಲೀಸ್ ಸಮರವೀರ ಭಾವಚಿತ್ರ ಪ್ರದರ್ಶನ ಸ್ಮರಣಾಂಜಲಿ ಕಾರ್ಯಕ್ರಮವು ದಿನಾಂಕ 21-10-2021 ರಿಂದ ಆರಂಭವಾಗಿ 24-10-2021 ರವರೆಗೆ ಪ್ರದರ್ಶನ ನಡೆಯಲಿದ್ದು ಪ್ರತಿಯೊಬ್ಬರೂ ಬಂದು ಪ್ರದರ್ಶನವನ್ನು ವೀಕ್ಷಿಸುವ ಸದವಕಾಶ ದೊರೆಯಲಿದೆ. ಪ್ರವೇಶ ಉಚಿತ


    ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತಿನ ಕಲಾ ಗ್ಯಾಲರಿ
    ಕುಮಾರಕೃಪಾ ರಸ್ತೆ ಬೆಂಗಳೂರು -1

    This image has an empty alt attribute; its file name is V-S-NAIK.jpg

    ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.

    ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆಪರಿಹಾರಕ್ಕೆ ಹೆಚ್ಚುವರಿ ಕಂತು ಬಿಡುಗಡೆಗೆ ಸಂಪುಟ ಅನುಮೋದನೆ

    NEW DELHI OCT 21

    ಪ್ರಧಾನಮಂತ್ರಿ ನರೇಂದ್ರ ಮೋದಿ-Narendra Modi ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, 1.7.2021ರಿಂದ ಪೂರ್ವಾನ್ವಯವಾಗುವಂತೆ ಬಾಕಿ ಇದ್ದ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ (ಡಿಎ)DA ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರ (ಡಿಆರ್)DRಕ್ಕಾಗಿ ಹೆಚ್ಚುವರಿ ಕಂತಿನ ಹಣ ಬಿಡುಗಡೆಗೆ ಅನುಮೋದನೆ ನೀಡಿದೆ. ಬೆಲೆ ಏರಿಕೆಯನ್ನು ಸರಿದೂಗಿಸಲು ಹಾಲಿ ಇರುವ ಶೇ.28ರಷ್ಟು ಮೂಲ ಪಾವತಿ/ ಪಿಂಚಣಿ ದರದಲ್ಲಿ ಶೇ.3ರಷ್ಟು ಹೆಚ್ಚಳವಾಗಲಿದೆ.

    ಈ ಹೆಚ್ಚಳ ಒಪ್ಪಿತ ಸೂತ್ರದಂತೆ ಇರಲಿದೆ, ಅದು 7ನೇ ಕೇಂದ್ರ ವೇತನ ಆಯೋಗದ ಶಿಫಾರಸು ಆಧರಿಸಿದೆ. ತುಟ್ಟಿ ಭತ್ಯೆ ಮತ್ತು ತುಟ್ಟಿ ಪರಿಹಾರ ಎರಡೂ ಸೇರಿ ವಾರ್ಷಿಕ ಬೊಕ್ಕಸದ ಮೇಲೆ 9,488.70 ಕೋಟಿ ರೂ. ಹೊರೆ ತಗುಲಲಿದೆ. ಇದರಿಂದ 47.14 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68.62 ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗಲಿದೆ.

    ಒಂದು ಬಿಲಿಯನ್ ಲಸಿಕೆ ನೀಡಿಕೆಯ ಮಹತ್ವದ ಮೈಲಿಗಲ್ಲು ಸಾಧಿಸಿದ ಭಾರತ

    ದೇಶಾದ್ಯಂತ ನಡೆಯುತ್ತಿರುವ ಬೃಹತ್ ಲಸಿಕಾ ಅಭಿಯಾನದಲ್ಲಿ ಒಟ್ಟು 100 ಕೋಟಿ ಕೋವಿಡ್-19 ಡೋಸ್ ಲಸಿಕೆ ನೀಡುವ ಮೂಲಕ ಭಾರತ ಐತಿಹಾಸಿಕ ಸಾಧನೆ ಮಾಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಟ್ವೀಟ್ ಸಂದೇಶದಲ್ಲಿ,ಈ ಅದ್ಭುತ ಸಾಧನೆ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ದೇಶದ ವೈಜ್ಞಾನಿಕ ಸಮುದಾಯ ಮತ್ತು ಆರೋಗ್ಯ ವೃತ್ತಿಪರರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

    ಈ ಮಹತ್ವದ ಮೈಲಿಗಲ್ಲು ಸಾಧಿಸಿದ್ದಕ್ಕಾಗಿ ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವಿಯಾ ಅವರೂ ಸಹ ದೇಶವನ್ನು ಅಭಿನಂದಿಸಿದ್ದಾರೆ.

    ಕಳೆದ 24 ಗಂಟೆಗಳಲ್ಲಿ 17,561 ಕೋವಿಡ್ ರೋಗಿಗಳು ಗುಣಮುಖರಾಗುವುದರೊಂದಿಗೆ ಈವರೆಗೆ ಒಟ್ಟು (ಸಾಂಕ್ರಾಮಿಕ ಆರಂಭವಾದಾಗಿನಿಂದ ಇಲ್ಲಿಯವರೆಗೆ) 3,34,95,808 ಸೋಂಕಿತರು ಗುಣಮುಖರಾಗಿದ್ದಾರೆ.

    ಅಂತೆಯೇ ಭಾರತದಲ್ಲಿ ಚೇತರಿಕೆ ಪ್ರಮಾಣ ಶೇ.98.15 ತಲುಪಿದೆ. 2020ರ ಮಾರ್ಚ್ ನಿಂದೀಚೆಗೆ ಇದೇ ಮೊದಲ ಬಾರಿ ಅತ್ಯಧಿಕ ಚೇತರಿಕೆ ಪ್ರಮಾಣ ದಾಖಲಾಗಿದೆ.

    ಕೇಂದ್ರ ಮತ್ತು ರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶಗಳ ಸುಸ್ಥಿರ ಹಾಗೂ ಸಾಮೂಹಿಕ ಪ್ರಯತ್ನಗಳ ಪರಿಣಾಮ, ಸತತ 116ನೇ ದಿನವೂ ಸಹ ಸೋಂಕಿತರ ಸಂಖ್ಯೆ 50ಸಾವಿರಕ್ಕಿಂತ ಕಡಿಮೆ ದಾಖಲಾಗಿದೆ.

    ಕಳೆದ 24 ಗಂಟೆಗಳಲ್ಲಿ 18,454 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.

    ಸದ್ಯ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2 ಲಕ್ಷಕ್ಕಿಂತ ಕಡಿಮೆ ಇದೆ ಮತ್ತು ಹಾಲಿ 1,78,831 ಪ್ರಕರಣಗಳಿವೆ. ದೇಶದಲ್ಲಿನ ಒಟ್ಟು ಪಾಸಿಟಿವ್ ಪ್ರಕರಣಗಳಿಗೆ ಹೋಲಿಸಿದರೆ ಸದ್ಯದ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ.0.52ರಷ್ಟು ಮಾತ್ರ, ಇದು 2020ರ ಮಾರ್ಚ್ ನಿಂದೀಚೆಗೆ ಅತಿ ಕಡಿಮೆಯಾಗಿದೆ.

    ದೇಶದಲ್ಲಿ ಪರೀಕ್ಷಾ ಸಾಮರ್ಥ್ಯವನ್ನು ನಿರಂತರವಾಗಿ ವಿಸ್ತರಿಸಲಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 12,47,506 ಪರೀಕ್ಷೆಗಳನ್ನು ನಡೆಸಲಾಗಿದೆ. ಭಾರತ ಈವರೆಗೆ ಒಟ್ಟಾರೆ 59.57 ಕೋಟಿ (59,57,42,218) ಪರೀಕ್ಷೆಗಳನ್ನು ನಡೆಸಿದೆ.

    ದೇಶಾದ್ಯಂತ ಸೋಂಕು ಪರೀಕ್ಷಾ ಸಾಮರ್ಥ್ಯವನ್ನು ವೃದ್ಧಿಸಲಾಗಿದೆ. ವಾರದ ಪಾಸಿಟಿವಿಟಿ ದರ ಶೇ.1.34ರಷ್ಟು ಮಾತ್ರ ಇದೆ, ಸತತ 118ನ ನೇ ದಿನವೂ ಶೇ.3ಕ್ಕಿಂತ ಕಡಿಮೆ ದಾಖಲಾಗಿದೆ. ದಿನದ ಪಾಸಿಟಿವಿಟಿ ದರ ಶೇ. 1.48ರಷ್ಟು ದಾಖಲಾಗಿದೆ. ದಿನದ ಪಾಸಿಟಿವಿಟಿ ದರ ಕಳೆದ 52 ದಿನಗಳಿಂದ ಶೇ.3ಕ್ಕಿಂತ ಕಡಿಮೆ ಇದೆ ಮತ್ತು ಸತತ 135 ದಿನಗಳಿಂದ ಶೇ.5ಕ್ಕಿಂತ ಕಡಿಮೆ ದಾಖಲಾಗಿದೆ.

    IBPS ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಆಫೀಸರ್ ಹುದ್ದೆಗೆ ಅರ್ಜಿ ಕರೆದಿದ್ದಾರೆ; ಡಿಗ್ರಿ ಆದವರಿಗೆ ಅವಕಾಶ

    ಬ್ಯಾಂಕ್  ನಲ್ಲಿ ಅಧಿಕಾರಿ ಯಾಗಬೇಕೆಂದು ಕನಸು ಹೊತ್ತವರಿಗೆ ಇಲ್ಲಿದೆ ಮತ್ತೊಂದು ಸಿಹಿ ಸುದ್ದಿ. ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ ದೇಶದ 11 ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ  ಖಾಲಿ ಇರುವ  ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಸರಿ ಸುಮಾರು  4,135 ಹುದ್ದೆಗಳಿಗೆ  ಪೂರ್ವಭಾವಿ ಹಾಗೂ ಮುಖ್ಯ ಪರೀಕ್ಷೆ,ಸಂದರ್ಶನ ನಡೆಸಲು ತೀರ್ಮಾನಿಸಿದೆ. ಪರಿಶಿಷ್ಟ ಜಾತಿಯವರಿಗೆ 679, ಪರಿಶಿಷ್ಟ ಪಂಗಡದವರಿಗೆ 350, ಹಿಂದುಳಿದ ವರ್ಗದವರಿಗೆ 1102, ಸಾಮಾನ್ಯ ವರ್ಗದವರಿಗೆ 1,600, ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ 404 ಹುದ್ದೆಗಳು  ದೇಶಾದ್ಯಂತ ಮೀಸಲಾಗಿವೆ.

    ರಾಜ್ಯದ  12 ಜಿಲ್ಲಾ ಕೇಂದ್ರಗಳಲ್ಲಿ ಪೂರ್ವಭಾವಿ ಪರೀಕ್ಷೆ ಮತ್ತು 3 ಜಿಲ್ಲಾ ಕೇಂದ್ರಗಳಲ್ಲಿ ಮುಖ್ಯ ಪರೀಕ್ಷೆ ಆನ್ ಲೈನ್ ನಲ್ಲಿ ನಡೆಯಲಿದೆ.

    ಯಾವ ಬ್ಯಾಂಕಿನಲ್ಲಿ ಎಷ್ಟು ಹುದ್ದೆ?

    ಕೆನರಾ ಬ್ಯಾಂಕ್ 650,  ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 912, ಯೂಕೋ ಬ್ಯಾಂಕ್ 440, ಪಂಜಾಬ್ ಎಂಡ್ ಸಿಂಧ್ ಬ್ಯಾಂಕ್ 427,ಇಂಡಿಯನ್ ಓವರ್ಸೀಸ್ ಬ್ಯಾಂಕ್ 98, ಸೆಂಟ್ರಲ್ ಬ್ಯಾಂಕ್ ಆಪ್ ಇಂಡಿಯಾ 620, ಬ್ಯಾಂಕ್ ಆಪ್ ಮಹಾರಾಷ್ಟ್ರ 400, ಬ್ಯಾಂಕ್ ಆಫ್ ಇಂಡಿಯಾ 588 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವುದಾಗಿ ಪ್ರಕಟಿಸಿವೆ.

    ಶೈಕ್ಷಣಿಕ ಅರ್ಹತೆ:

    ಮಾನ್ಯತೆ ಪಡೆದ ವಿಶ್ವವಿದ್ಯಾಲಯ ದಿಂದ ಯಾವುದೇ ವಿಷಯದಲ್ಲಿ ಪದವಿ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಸಮಾನ ಅರ್ಹತೆ. ಒಂದು ವೇಳೆ ಸಂದರ್ಶನಕ್ಕೆ ಕರೆ ಬಂದರೆ, ಅವರು 10 ನೇ ನವೆಂಬರ್ 2021 ಅಥವಾ ಅದಕ್ಕಿಂತ ಮೊದಲು ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದಕ್ಕೆ ಪುರಾವೆಗಳನ್ನು ಒದಗಿಸಬೇಕು.

    ಅರ್ಜಿ ಸಲ್ಲಿಕೆ ವಿಧಾನ: ಆನ್ ಲೈನ್.

    ಅರ್ಜಿ ಸಲ್ಲಿಕೆ ದಿನಾಂಕ: ಅಕ್ಟೋಬರ್ 20 ರಿಂದ ನವೆಂಬರ್ 10 ರವರೆಗೆ.

    ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನಿಮ್ಮ ಆಯ್ಕೆಯ ಬ್ಯಾಂಕಿನ ಆದ್ಯತೆಯ ಆದೇಶವನ್ನು ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಳವಡಿಸಲಾಗಿದೆ. ಅಭ್ಯರ್ಥಿಗಳು ಈ ಹಂತದಲ್ಲಿ ಅವರ ಬ್ಯಾಂಕ್ ಗಳ ಆದ್ಯತೆಯ ಕ್ರಮವನ್ನು ಅಗತ್ಯವಾಗಿ ಸೂಚಿಸಬೇಕು.

    ಯಾವ್ಯಾವ ಬ್ಯಾಂಕ್ ಗಳಲ್ಲಿ ಎಷ್ಟೆಷ್ಟು ಹುದ್ದೆಗಳಿವೆ ಹಾಗೂ ನಮ್ಮ ರಾಜ್ಯದಲ್ಲಿ ಶಾಖೆಗಳಿವೆಯಾ ಎಂಬುದರ ಮೇಲೆ ನಿಮ್ಮ ಆದ್ಯತೆಯ ಆಯ್ಕೆ ಇರಲಿ. ಒಮ್ಮೆ ನೀವು ಆಯ್ಕೆಯಾದರೆ ಬ್ಯಾಂಕ ಬದಲಾವಣೆಗೆ/ಸ್ಥಳ ಬದಲಾವಣೆ ಗೆ  ಯಾವುದೇ ವಿನಂತಿಯನ್ನು ನಂತರದ ದಿನಗಳಲ್ಲಿ ಪರಿಗಣಿಸಲಾಗುವುದಿಲ್ಲ. ಆಯ್ಕೆ ಪ್ರಕ್ರಿಯೆಯ ಹಂತದಲ್ಲಿ ಅಥವಾ ಅಪಾಯಿಂಟ್‌ಮೆಂಟ್‌ನ ನಂತರ ನಿಮ್ಮ ಕೈಬರಹದ ಘೋಷಣೆ ಹಾಗೂ ನಿಮ್ಮ ಕೈಬರಹ ದಲ್ಲಿ  ಭಿನ್ನವಾಗಿರುವುದು ತಜ್ಞರ ವಿಶ್ಲೇಷಣೆಯಲ್ಲಿ ಕಂಡುಬಂದರೆ, ಅಭ್ಯರ್ಥಿಯ ಉಮೇದುವಾರಿಕೆಯನ್ನ ರದ್ದುಗೊಳಿಸಲಾಗುವುದು. ಹೀಗಾಗಿ ಅರ್ಜಿ ಸಲ್ಲಿಸುವ ಹಂತದಲ್ಲಿಯೇ ಬಹಳ ಎಚ್ಚರಿಕೆಯಿಂದ ಅರ್ಜಿ ಸಲ್ಲಿಸುವುದು ಒಳಿತು.

    ಪರೀಕ್ಷಾ ಪ್ರಕ್ರಿಯೆ:

    ಮೊದಲ ಹಂತ: ಆನ್ಲೈನ್ ಪೂರ್ವಭಾವಿ ಪರೀಕ್ಷೆ – ಡಿಸೆಂಬರ್ 04 ಹಾಗೂ 11 ಡಿಸೆಂಬರ್ 2021

    ಎರಡನೇ ಹಂತ: ಆನ್ಲೈನ್ ಮುಖ್ಯ ಪರೀಕ್ಷೆ – ಜನವರಿ, 2022

    ಮೂರನೇ ಹಂತ: ಸಂದರ್ಶನ ಫೆಬ್ರವರಿ /ಮಾರ್ಚ್,2022

    ವಯೋಮಿತಿ:

    01.10.2021 ಕ್ಕೆ, 21 ವರ್ಷಕ್ಕಿಂತ ಕಡಿಮೆ ಇರಬಾರದು. ಮತ್ತು 1.10.2021 ಕ್ಕೆ 30 ವರ್ಷಗಳಿಗಿಂತ ಹೆಚ್ಚಿರಬಾರದು.ಅಂದರೆ 21 ವರ್ಷದಿಂದ 30 ವರ್ಷದೊಳಗಿನವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅಂದರೆ ಅಭ್ಯರ್ಥಿಗಳು 02.10.1991 ಕ್ಕಿಂತ ಮುಂಚಿತವಾಗಿ ಮತ್ತು 01.10.2001 ಕ್ಕಿಂತ ನಂತರ ಜನಿಸಿರಬಾರದು. (ಎರಡೂ ದಿನಾಂಕಗಳು ಒಳಗೊಂಡಂತೆ)

    ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ವಿಕಲಚೇತನರಿಗೆ 10 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

    ಶುಲ್ಕಪಾವತಿ:

    ನೋಂದಣಿ ನಂತರ ಅಭ್ಯರ್ಥಿಗಳು ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್/ ಇಂಟರ್ನೆಟ್ ಬ್ಯಾಂಕಿಂಗ್ ಬಳಸಿ ಆನ್‌ಲೈನ್ ಮೋಡ್ ಮೂಲಕ ಅಗತ್ಯವಾದ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

    ಅರ್ಜಿ ಶುಲ್ಕ:

    850 ರೂ. ಉಳಿದೆಲ್ಲ ಅಭ್ಯರ್ಥಿಗಳಿಗೆ [inclusive of GST](ಎಸ್‌ಸಿ/ಎಸ್‌ಟಿ/PWBD/ EXSM ಅಭ್ಯರ್ಥಿಗಳಿಗೆ 175 ರೂ.[ inclusive of GST]

    ಆನ್ಲೈನ್ನಲ್ಲಿಯೇ ಅರ್ಜಿ ಶುಲ್ಕವನ್ನೂ ಪಾವತಿಸಬೇಕಿರುತ್ತದೆ.

    ನೆನಪಿಡಿ: ಒಬಿಸಿ ವರ್ಗಕ್ಕೆ ಸೇರಿದ ಆದರೆ ಕೆನೆ ಪದರದ ಅಡಿಯಲ್ಲಿ ಬರುವ ಅಭ್ಯರ್ಥಿಗಳು ಒಬಿಸಿ ಮೀಸಲಾತಿಗೆಅರ್ಹರಾಗಿರುವುದಿಲ್ಲ.ಅವರು ಆನ್‌ಲೈನ್ ಅರ್ಜಿ ನಮೂನೆಯಲ್ಲಿ ತಮ್ಮ ವರ್ಗವನ್ನು ಸಾಮಾನ್ಯ ಎಂದು ಸೂಚಿಸಬೇಕು. ಅಭ್ಯರ್ಥಿಯು ಕಾಲಕಾಲಕ್ಕೆ ಭಾರತ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಕೆನೆರಹಿತ ಲೇಯರ್ (Non cremy layer) ಷರತ್ತಿನೊಂದಿಗೆ  OBC ಪ್ರಮಾಣಪತ್ರವನ್ನು ಹೊಂದಿರಬೇಕು.

    ಬಾರಿಯ ಬದಲಾವಣೆಗಳೇನು?:

    ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವರ್ಷದಿಂದ ವರ್ಷಕ್ಕೆ ಕೆಲವು ಬದಲಾವಣೆಗಳು ಸಾಮಾನ್ಯ. ಹಾಗೆಯೇ ಈ ಬಾರಿಯ ಬದಲಾವಣೆಗಳು ಕೆಳಗಿನಂತಿವೆ:

    ಈ ಬಾರಿ ಅರ್ಜಿ ಸಲ್ಲಿಸುವಾಗ ಪರೀಕ್ಷೆಗೆ ನೀವು ತರುವ ಐಡಿ ಪ್ರೂಫ್‌ನ ಸಂಖ್ಯೆ ನೀಡುವುದು ಕಡ್ಡಾಯ ಹಾಗೂ ಅದು ನೀವು ಅರ್ಜಿ ಸಲ್ಲಿಸಿದ ಹೆಸರಿನೊಂದಿಗೆ ಹೊಂದಾಣಿಕೆಯಾಗಿರಬೇಕು. ಈ ಬಾರಿ ಪ್ರಿಲಿಮ್ಸ್ ಪರೀಕ್ಷೆಯ ಪ್ರವೇಶ ಪತ್ರವನ್ನು ಪರೀಕ್ಷಾ ಕೇಂದ್ರದಲ್ಲಿ ಸಂಗ್ರಹಿಸಲಾಗುವುದಿಲ್ಲ. ಬದಲಾಗಿ ಇದನ್ನು ಪರೀಕ್ಷಾ ಕೇಂದ್ರದ ಸಿಬ್ಬಂದಿಯಿಂದ ಧೃಡಪಡಿಸಿಕೊಳ್ಳುವ ಅಗತ್ಯವಿದೆ. ಮೇನ್ಸ್ ಪರೀಕ್ಷೆಗೆ ಅರ್ಹಗೊಂಡ ಅಭ್ಯರ್ಥಿಗಳು ಮೇನ್ಸ್ ಪರೀಕ್ಷೆಯ ಪ್ರವೇಶ ಪತ್ರದೊಂದಿಗೆ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ದೃಢೀಕರಣಗೊಂಡ ಪ್ರವೇಶ ಪತ್ರವನ್ನು ಕೂಡ ಸಲ್ಲಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ನೋಡಬಹುದು. ಕನಿಷ್ಟ 8 ಭಾವಚಿತ್ರವನ್ನು (ಅಭ್ಯರ್ಥಿಯು ಕಾಲ್-ಲೆಟರ್‌ನಲ್ಲಿ ಅಂಟಿಸಿದಂತೆಯೇ) ಹಾಗೂ  ಪ್ರಿಲಿಮ್ಸ್ ಹಾಗೂ ಮೇನ್ಸ್ ನ ಕರೆ ಪತ್ರದ  ಝೆರಾಕ್ಸ ಪ್ರತಿಯನ್ನು ಅಥವಾ ಹೆಚ್ಚುವರಿ ಪ್ರಿಂಟ್ ತೆಗೆದಿಟ್ಟುಕೊಳ್ಳಿ. ಕೊನೆಯಲ್ಲಿ ಅದರ ಪ್ರತಿಯನ್ನು ಬ್ಯಾಂಕ್ ಗಳಿಗೆ ಸೇರುವಾಗ ನೀಡಬೇಕು ಎಂಬುದನ್ನು ಮರೆಯಬೇಡಿ.

    ನಂತರದ ದಿನಗಳಲ್ಲಿ ವೆಬ್ ಸೈಟ್ ನಲ್ಲಿ ಸಿಗುವುದಿಲ್ಲ.

    ಅಭ್ಯರ್ಥಿಗಳು ಒಂದು ಹೆಚ್ಚುವರಿ ಛಾಯಾಚಿತ್ರವನ್ನು (ಅಭ್ಯರ್ಥಿಯು ಕಾಲ್ ಲೆಟರ್‌ನಲ್ಲಿ ಅಂಟಿಸಿದಂತೆಯೇ) ಜೊತೆಗೆ ಕರೆ ಪತ್ರ ಮತ್ತು ಇತರ ಅಗತ್ಯ ದಾಖಲೆಗಳೊಂದಿಗೆ “ಮಾಹಿತಿ ಕೈಪಿಡಿ” ಮತ್ತು ಕರೆ ಪತ್ರದಲ್ಲಿ ಸೂಚಿಸಿದ ಮಾಹಿತಿಯಂತೆ ತೆಗೆದುಕೊಂಡು ಹೋಗಬೇಕು.

    ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳ ನೋಂದಣಿ:

    .ಅಭ್ಯರ್ಥಿಗಳ ನೋಂದಣಿಯನ್ನು ಫೋಟೋ ಕ್ಯಾಪ್ಚರ್ ಮೂಲಕ ಮಾಡಲಾಗುವುದು.

    ಬಿ.ಅಭ್ಯರ್ಥಿಯನ್ನು ಪರೀಕ್ಷಾ ಕೇಂದ್ರದಲ್ಲಿ ನಿಲ್ಲಿಸಿ ಛಾಯಾಚಿತ್ರ ತೆಗೆಯಲಾಗುವುದು.

    ಸಿ. ಅಭ್ಯರ್ಥಿಗಳಿಗೆ ಸೀಟ್ ನಂಬರ್ ನೀಡಲಾಗುತ್ತದೆ.

    ಡಿ. ರಫ್ ಶೀಟ್,(ಗಳನ್ನು) ಪ್ರತಿ ಕ್ಯಾಂಡಿಡೇಟ್ ಡೆಸ್ಕ್ ನಲ್ಲಿ ಇರಿಸಲಾಗಿರುತ್ತದೆ. ಪರೀಕ್ಷೆಯ ಕೊನೆಯಲ್ಲಿ ಅಭ್ಯರ್ಥಿಗಳಿಗೆ  ಸೂಚಿಸಿದಂತೆ ನಿಗದಿತ ಡ್ರಾಪ್ ಬಾಕ್ಸ್‌ನಲ್ಲಿ ರಫ್ ಶೀಟಗಳನ್ನು ಹಿಂತಿರುಗಿಸಬೇಕು.

    ಮುಖ್ಯ ಪರೀಕ್ಷೆಗೆ  ಸ್ಟ್ಯಾಂಪ್ ಮಾಡಿದ ಫೋಟೊ ಕಾಪಿ ಯನ್ನು ತರದೇ ಇರುವ ಅಭ್ಯರ್ಥಿಗಳನ್ನು ಪರೀಕ್ಷೆಗೆ ಹಾಜರಾಗಲು ಅನುಮತಿಸಲಾಗುವುದಿಲ್ಲ.

    ನೇಮಕ ಹೇಗೆ?

    ಮೊದಲ ಹಂತದಲ್ಲಿ ಪೂರ್ವ ಭಾವಿ ಪರೀಕ್ಷೆ (ಪ್ರಿಲಿಮ್ಸ್) ನಡೆಯಲಿದೆ. ಬೆಳಗಾವಿ, ಬೆಂಗಳೂರು, ಬೀದರ್,ದಾವಣಗೆರೆ, ದಾರವಾಡ ಕಲಬುರಗಿ, ಹಾಸನ, ಹುಬ್ಬಳ್ಳಿ, ಮಂಡ್ಯ,ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿಯಲ್ಲಿ ಪೂರ್ವಭಾವಿ ಪರೀಕ್ಷೆ ಪರೀಕ್ಷಾ ಕೇಂದ್ರಗಳಿರಲಿವೆ. ಪೂರ್ವಭಾವಿ ಪರೀಕ್ಷೆ ಒಂದು ಗಂಟೆಗಳ ಕಾಲ ನಡೆಯಲಿದ್ದು,(ಪ್ರತಿ ಪತ್ರಿಕೆಗೂ  20 ನಿಮಿಷಗಳಂತೆ  ಒಟ್ಟಾರೆ 60 ನಿಮಿಷಗಳು) 100 ಅಂಕಗಳಿಗೆ ಕೇಳಲಾಗುತ್ತದೆ. (ಅಂದರೆ ಪ್ರತಿ ಪ್ರಶ್ನೆಗೆ ಒಂದೊಂದು ಅಂಕ ನಿಗದಿಯಾಗಿರುತ್ತದೆ) ಇದರಲ್ಲಿ ಇಂಗ್ಲೀಷ್ ಲಾಂಗ್ವೇಜಗೆ 30, ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್ ಗೆ 35 ಹಾಗೂ ರೀಸನಿಂಗ್ ಎಬಿಲಿಟಿಯ 35 ಪ್ರಶ್ನೆಗಳಿರಲಿವೆ. ಪ್ರತಿ ಪರೀಕ್ಷೆಯಲ್ಲೂ ಕನಿಷ್ಟ ಅಂಕ ಗಳಿಸಬೇಕೆಂಬ ನಿಯಮವಿದೆ. ಅದರೆ ಒಟ್ಟಾರೆ ಹೆಚ್ಚು ಅಂಕ ಗಳಿಸುವುದು ಮುಖ್ಯ.(ಆಯಾ ವರ್ಗಗಳಿಗೆ ಇರುವ ಹುದ್ದೆಗಳ ಸಂಖ್ಯೆ ಗಿಂತ 10 ಪಟ್ಟು ಹೆಚ್ಚು ಅಭ್ಯರ್ಥಿಗಳನ್ನ ಮುಖ್ಯ ಪರೀಕ್ಷೆಗೆ ಆಯ್ಕೆ ಮಾಡುವುದರಿಂದ 1:10 ಅನುಪಾತ)

    ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮುಂದಿನ ಹಂತದ ಅಂದರೆ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆಯುತ್ತಾರೆ. ಮುಖ್ಯ ಪರೀಕ್ಷೆಯು ಬೆಂಗಳೂರು, ಹುಬ್ಬಳ್ಳಿ ಮತ್ತು ಮಂಗಳೂರಿನಲ್ಲಿ ಮಾತ್ರ ನಡೆಯಲಿದ್ದು, ಪರೀಕ್ಷೆಗಳು ಎರಡು ಹಂತಗಳಲ್ಲಿ ನಡೆಯಲಿದೆ. ನಿಗದಿತ ದಿನದಂದು ಆನ್ ಲೈನ್‌ನಲ್ಲಿಯೇ ಎರಡೂ ಲಿಖಿತ ಪರೀಕ್ಷೆಗಳು ನಡೆಯಲಿವೆ. ಮುಖ್ಯ ಪರೀಕ್ಷೆಯು ಮೂರು ಗಂಟೆ ಗಳ ಕಾಲ ನಡೆಯಲಿದ್ದು, 155 ಪ್ರಶ್ನೆಗಳನ್ನು  200 ಅಂಕಗಳಿಗೆ ಕೇಳಲಾಗುತ್ತದೆ.

    I. Reasoning & Computer Aptitude 45 ಪ್ರಶ್ನೆ  60 ಅಂಕಗಳು 60 ನಿಮಿಷಗಳು,

    II.General/ Economy/ Banking Awareness 40 ಪ್ರಶ್ನೆ 40 ಅಂಕಗಳು 35 ನಿಮಿಷಗಳು,

    III. English Language 35 ಪ್ರಶ್ನೆ 40 ಅಂಕಗಳು 40 ನಿಮಿಷಗಳು,

    VI.Data Analysis & Interpretation 35 ಪ್ರಶ್ನೆ 60 ಅಂಕಗಳು 45 ನಿಮಿಷಗಳು,

    ಹೀಗೆ ಒಟ್ಟಾರೆ 155 ಪ್ರಶ್ನೆಗಳಿಗೆ 200 ಅಂಕಗಳು ನಿಗದಿಯಾಗಿದ್ದು ಹಾಗೂ 180 ನಿಮಿಷದ ಸಮಯ ನಿಗದಿಪಡಿಸಲಾಗಿದೆ. ಇಂಗ್ಲೀಷ್ ಭಾಷೆ ಒಂದನ್ನು ಹೊರತುಪಡಿಸಿ ಮತ್ತೆಲ್ಲಾ ಪ್ರಶ್ನೆಗಳು ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಇರುತ್ತದೆ. ತಪ್ಪು ಉತ್ತರ ಗುರುತಿಸಿದಲ್ಲಿ, ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಳಲ್ಲಿ ಆಯಾ ವಿಷಯಕ್ಕೆ ಪ್ರತಿ ಪ್ರಶ್ನೆಗೆ ನಿಗದಿ ಪಡಿಸಿದ ಅಂಕದ 0.25 ಅಂಕವನ್ನು  ಋಣಾತ್ಮಕ ಮೌಲ್ಯಮಾಪನದ ನಿಯಮದಂತೆ ಗಳಿಸಿದ ಅಂಕದಿಂದ ಕಳೆಯಲಾಗುತ್ತದೆ. ಪ್ರಶ್ನೆಯನ್ನು ಬರೆಯಲು ಪ್ರಯತ್ನಿಸದೆ ಹಾಗೆಯೆ ಬಿಟ್ಟರೆ, ಅಂದರೆ ಯಾವುದೇ ಉತ್ತರವನ್ನು ಗುರುತಿಸಲಾಗಿಲ್ಲದಿದ್ದರೆ ಅಂತಹ ಭ್ಯರ್ಥಿಗಳಿಗೆ, ಆ ಪ್ರಶ್ನೆಗೆ ಯಾವುದೇ ರೀತಿಯ ಋಣಾತ್ಮಕ ಮೌಲ್ಯಮಾಪನದ ನಿಯಮದಂತೆ ದಂಡವಿರುವುದಿಲ್ಲ.

    (ಮೇನ್ಸ್) ಮುಗಿಯುತ್ತಿದ್ದಂತೆಯೇ ಡಿಸ್ಸ್ಕ್ರಿಟ್ಟಿವ್ ಟೆಸ್ಟ್ ಇಂಗ್ಲೀಷ್ ಭಾಷೆಗೆ (Letter Writing & Essay- with two questions)ಸಂಬಂಧಿಸಿದಂತೆ 25 ಅಂಕಗಳಿಗೆ ನಡೆಸಲಾಗುತ್ತದೆ. ಅವಧಿ 30 ನಿಮಿಷಗಳು. ಅಭ್ಯರ್ಥಿಗಳು ಕಂಪ್ಯೂಟರ್ ನಲ್ಲಿಯೇ ಉತ್ತರವನ್ನು ಬರೆಯಬೇಕು.

    ಇಂಗ್ಲಿಷ್ ಭಾಷೆಯ ವಿವರಣಾತ್ಮಕ ಪೇಪರ್ (ಪತ್ರ ಬರವಣಿಗೆ ಮತ್ತು ಪ್ರಬಂಧ) ಅನ್ನು ಸ್ವಯಂಚಾಲಿತ ಸ್ಕೋರಿಂಗ್ ಮೂಲಕ ಮೌಲ್ಯಮಾಪನ ಮಾಡಲಾಗುತ್ತದೆ. ಬರವಣಿಗೆಯ ಪ್ರಾವೀಣ್ಯತೆಗೆ ಸಂಬಂಧಿಸಿದಂತೆ ವೈಶಿಷ್ಟ್ಯಗಳನ್ನು ಗುರುತಿಸುವುದು ಇದರ ಕಾರ್ಯವಿಧಾನವಾಗಿದೆ. ಆಂಗ್ಲ ಭಾಷೆಯಲ್ಲಿ ಹಾಗೂ ಬರವಣಿಗೆಯಲ್ಲಿ ಪರೀಕ್ಷೆ ಬರೆಯುವವರ ಪ್ರಾವೀಣ್ಯತೆಯನ್ನು ವಸ್ತುನಿಷ್ಠ ರೀತಿಯಲ್ಲಿ ಮೌಲ್ಯಮಾಪನ ಮಾಡುವ ವಿಶಿಷ್ಟ ವಿಧಾನವಾಗಿದೆ.

    ಈ ಎರಡೂ ಪರೀಕ್ಷೆಗಳಲ್ಲಿ ಬ್ಯಾಂಕ್ ನಿಗದಿಪಡಿಸಿದಷ್ಟು ಅಂಕ ಪಡೆದವರು ಮಾತ್ರ ಮೂರನೇ ಹಂತಕ್ಕೆ ಅರ್ಹರಾಗುತ್ತಾರೆ.

    ಅಭ್ಯರ್ಥಿಯು ಆನ್‌ಲೈನ್ ಮುಖ್ಯ ಪರೀಕ್ಷೆಯ ಪ್ರತಿ ಪರೀಕ್ಷೆಯಲ್ಲಿ ಕನಿಷ್ಠ ಅಂಕ ಪಡೆದಿರಬೇಕು ಮತ್ತು ಸಂದರ್ಶನಕ್ಕೆ ಶಾರ್ಟ್‌ಲಿಸ್ಟ್ ಎಂದು ಪರಿಗಣಿಸಬೇಕಾದ ಕನಿಷ್ಠ ಒಟ್ಟು ಅಂಕಗಳನ್ನು ಗಳಿಸಿರಬೇಕು.ಕನಿಷ್ಠ ಅಂಕಗಳು ಖಾಲಿ ಹುದ್ದೆಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ. ಮತ್ತು ಅವುಗಳ ಮೇಲೆ ಕಟ್-ಆಫ್‌ಗಳನ್ನು ನಿರ್ಧರಿಸಲಾಗುವುದು ಮತ್ತು ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.

    ಸಂದರ್ಶನಕ್ಕಾಗಿ ಶಾರ್ಟ್‌ಲಿಸ್ಟ್ ಮಾಡಲಾದ ಅಭ್ಯರ್ಥಿಗಳಿಗೆ ಸಂದರ್ಶನ ಪ್ರಕ್ರಿಯೆ, ಪೂರ್ಣಗೊಳಿಸುವ ಮೊದಲು ಆನ್‌ಲೈನ್ ಮುಖ್ಯ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಅಭ್ಯರ್ಥಿಗಳೊಂದಿಗೆ ಹಂಚಿಕೊಳ್ಳಲಾಗುವುದಿಲ್ಲ.

    ಸಂದರ್ಶನದ ಸಂದರ್ಭದಲ್ಲಿ ‘ಒಬಿಸಿ’ ವರ್ಗದ  ಅಡಿಯಲ್ಲಿ ಹಂತ -3 ಕ್ಕೆ ಅರ್ಹತೆ ಪಡೆದ ಅಭ್ಯರ್ಥಿಗಳು ಒಬಿಸಿ ಪ್ರಮಾಣಪತ್ರವನ್ನು ‘ಕೆನೆರಹಿತ ಪದರ'(‘Non-Creamy layer’) ಷರತ್ತನ್ನು ಒಳಗೊಂಡಿರುವುದನ್ನು ಸಲ್ಲಿಸಬೇಕಾಗುತ್ತದೆ. EWS ವರ್ಗದ ಅಡಿಯಲ್ಲಿ ಹಂತ -3 ಕ್ಕೆ ಅರ್ಹತೆ ಪಡೆದ ಅಭ್ಯರ್ಥಿಗಳು 2020-21ರ ಆರ್ಥಿಕ ವರ್ಷದ ಒಟ್ಟು ವಾರ್ಷಿಕ ಆದಾಯದ ಆಧಾರದ ಮೇಲೆ EWS ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ.

    ಆಯ್ಕೆ ಪಟ್ಟಿ:

    ಅಂತಿಮ ಸುತ್ತಿಗೆ ಆಯ್ಕೆಯಾದ ಅಭ್ಯರ್ಥಿಗಳು ಹಂತ-II ಮತ್ತು ಹಂತ-III ಎರಡರಲ್ಲೂ ಪ್ರತ್ಯೇಕವಾಗಿ ಅರ್ಹತೆ ಪಡೆದಿರಬೇಕು.ಸಂದರ್ಶನಕ್ಕೆ ನಿಗದಿಪಡಿಸಿಲಾದ ಒಟ್ಟು ಅಂಕಗಳು 100. ಸಂದರ್ಶನದಲ್ಲಿ ಕನಿಷ್ಠ ಅರ್ಹತಾ ಅಂಕಗಳು 40% (35% SC/ST/OBC/PWBD ಅಭ್ಯರ್ಥಿಗಳಿಗೆ). ಆನ್‌ಲೈನ್ ಮುಖ್ಯ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಪಡೆದ ಅಂಕಗಳನ್ನು ಕ್ರಮವಾಗಿ 80:20 ಅನುಪಾತದ ಆಧಾರದ ಮೇಲೆ ಮೆರಿಟ್ ಪಟ್ಟಿ ತಯಾರಿಸಿ, ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

    ಅರ್ಜಿ ಸಲ್ಲಿಸಲು ಹಾಗೂ

    ನೋಂದಣಿಗೆ ಬಳಸಬೇಕಾದ ಲಿಂಕ್:

    Authorised Website: www.ibps.in

    ಕಾಂಗ್ರೆಸ್, ಬಿಜೆಪಿ ಪರ್ಸೆಂಟೇಜ್‌ ಸರಕಾರಗಳು: ಎಚ್‌ಡಿಕೆ ಟೀಕಾ ಪ್ರಹಾರ

    KALABURGI OCT 19

    ವ್ಯಾಪಕ ಭ್ರಷ್ಟಾಚಾರದಲ್ಲಿ ಮುಳುಗಿರುವ ರಾಷ್ಟ್ರೀಯ ಪಕ್ಷಗಳ ಸರಕಾರಗಳು ಪರ್ಸೆಂಟೇಜ್‌ ಸರಕಾರಗಳಾಗಿದ್ದು, ಸ್ವತಃ ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳೇ ಪರಸ್ಪರ ಆರೋಪ ಮಾಡಿಕೊಳ್ಳುತ್ತಿವೆ. ಈ ಮೂಲಕ ಆ ಪಕ್ಷಗಳ ಭ್ರಷ್ಟಮುಖ ಜನರ ಮುಂದೆ ಅನಾವರಣಗೊಂಡಿದೆ ಎಂದು ಮಾಜಿ ಮುಖ್ಯಮಂತ್ರಿಗಳಾದ ಎಚ್.‌ಡಿ.ಕುಮಾರಸ್ವಾಮಿ ಅವರು ಹೇಳಿದರು.

    ಸಿಂಧಗಿ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ತೆರಳಲು ಇಂದು ಬೆಳಗ್ಗೆ ಕಲಬುರಗಿಗೆ ಆಗಮಿಸಿದ ಅವರು ಮಾಧ್ಯಮಗಳ ಜತೆ ಮಾತನಾಡಿದರು.

    ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರು 10% ಸರಕಾರ ಎಂದು ಕರೆಯುತ್ತಿದ್ದರು. ಈಗ ಅವರದ್ದೇ ಪಕ್ಷದ ಸರಕಾರವನ್ನು ಕಾಂಗ್ರೆಸ್‌ ಪಕ್ಷದವರು 20% ಸರಕಾರ ಎಂದು ಕರೆಯುತ್ತಿದ್ದಾರೆ ಎಂದು ಅವರು ಲೇವಡಿ ಮಾಡಿದರು.

    ಜನರ ಹಣ ಲೂಟಿ ಹೊಡೆಯುವುದರಲ್ಲಿ ಹಾಗೂ ಪರ್ಸೆಂಟೇಜ್‌ ತೆಗೆದುಕೊಳ್ಳುವುದರಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳ ನಡುವೆ ದೊಡ್ಡ ಪೈಪೋಟಿಯೇ ಇದೆ ಎಂದು ಕುಮಾರಸ್ವಾಮಿ ಅವರು ಟೀಕಾ ಪ್ರಹಾರ ನಡೆಸಿದರು.

    ಪೊಲೀಸ್‌ ವಸತಿ ಸಮುಚ್ಛಯವೇ ಬೀಳುತ್ತಿದೆ:ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಇದ್ದಾಗ ಬೆಂಗಳೂರಿನಲ್ಲಿ 150 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಪೊಲೀಸ್‌ ವಸತಿ ಸಮುಚ್ಛಯ ಈಗ ಬೀಳುವ ಹಂತದಲ್ಲಿದೆ. ಕಳಪೆ ಕಾಮಗಾರಿ, ಪರ್ಸಂಟೇಜ್‌ ವ್ಯವಹಾರ ಇತ್ಯಾದಿ ಅಕ್ರಮಗಳಿಂದ ರಾಜ್ಯವನ್ನು ರಕ್ಷಣೆ ಮಾಡುವ ಪೊಲೀಸ್‌ ಕುಟುಂಬಗಳು ಅಪಾಯಕ್ಕೆ ಸಿಲುಕಿವೆ ಎಂದು ಮಾಜಿ ಮುಖ್ಯಮಂತ್ರಿಗಳು ಆಕ್ರೋಶ ವ್ಯಕ್ತಪಡಿಸಿದರು.

    ನಾಡನ್ನು ಕಾಪಾಡುವ ಪೊಲೀಸ್‌ ಸಿಬ್ಬಂದಿ ವಾಸ ಮಾಡುವ ಕ್ವಾಟ್ರಸ್‌ ನಿರ್ಮಾಣದಲ್ಲಿ ಕಳಪೆ, ಅವ್ಯವಹಾರ ನಡೆದಿದೆ ಎಂದರೆ ಉಳಿದ ಯೋಜನೆಗಳ ಕಥೆ ಏನು? ಎಷ್ಟು ಅಕ್ರಮ ನಡೆದಿದೆ? ಎಷ್ಟು ಪರ್ಸೆಂಟೇಜ್‌ ವ್ಯವಹಾರವಾಗಿದೆ ಎಂಬುದು ಜನರಿಗೆ ಗೊತ್ತಾಗಲಿ ಎಂದು ಅವರು ಹೇಳಿದರು.

    ಕರ್ನಾಟಕಕ್ಕೆ ರಾಷ್ಟ್ರೀಯ ಪಕ್ಷಗಳು ಏನು ಮಾಡಿವೆ ಎಂಬುದು ಜನರಿಗೆ ಚೆನ್ನಾಗಿ ಅರ್ಥವಾಗಿದೆ. ಇನ್ನು ಮುಂದೆಯಾದರೂ ಜನರು ಎಚ್ಚೆತ್ತುಕೊಂಡು ನಾಡಿನ ಬಗ್ಗೆ ಕಾಳಜಿ ಇರುವ ಜೆಡಿಎಸ್‌ ಪಕ್ಷವನ್ನು ಬೆಂಬಲಿಸಲಿ ಎಂದು ಕೋರಿದರು.

    error: Content is protected !!