ಚೀನಾ ನಿರ್ಮಿತ 59 ಮೊಬೈಲ್ ಅಪ್ಲಿಕೇಶನ್ ಗಳನ್ನು ಕೇಂದ್ರ ಸರಕಾರ ಬ್ಯಾನ್ ಮಾಡಿದ ಬೆನ್ನಲ್ಲೇ ಇಂಟರ್ ನೆಟ್ ಒದಗಿಸುವ ಕಂಪೆನಿಗಳು ಈ ಆ್ಯಪ್ ಗಳ ಸಂಪರ್ಕವನ್ನು ಕಡಿತಗೊಳಿಸುವ ಪ್ರಕ್ರಿಯೆಯನ್ನು ಆರಂಭಿಸಿವೆ. ಈಗಾಗಲೇ ಅಳವಡಿಕೆಯಾಗಿರುವ ಅಪ್ಲಿಕೇಶನ್ ಗಳು ಓಪನ್ ಆಗುವುದಿಲ್ಲ.
ಟಿಕ್ ಟಾಕ್ , ಹೆಲೋ, ವಿ ಚಾಟ್ ಸೇರಿದಂತೆ ಹಲವು ಆ್ಯಪ್ ಗಳನ್ನು ದೇಶದ ಸಾರ್ವಭೌಮತೆ ಮತ್ತು ಭದ್ರತೆಗೆ ಬೆದರಿಕೆ ಒಡ್ಡುತ್ತವೆ ಎಂಬ ಕಾರಣಕ್ಕೆ ಐಟಿ ಕಾಯ್ದೆ 2009 ರ ಐಟಿ ಕಾಯ್ದೆ ಅನ್ವಯ ನಿಷೇಧಿಸಲಾಗಿದೆ. ಈ ಆ್ಯಪ್ ಗಳು ಹೇಗೆ ಗಂಡಾಂತರಕಾರಿ ಎಂಬುದನ್ನು ಅರಿಯೋಣ.
ಹೆಲೋ ಮತ್ತು ಶೇರಿಟ್ ಮತ್ತು ಯುಸಿ ಬ್ರೌಸರ್‌ನಂತಹ ಬ್ರೌಸರ್‌ಗಳು ಸೇರಿದಂತೆ ಚೀನಾದ ಹತ್ತು ಜನಪ್ರಿಯ ಅಪ್ಲಿಕೇಶನ್‌ಗಳಲ್ಲಿ ಕನಿಷ್ಠ ಆರು, ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಕ್ಯಾಮೆರಾ ಮತ್ತು ಮೈಕ್ರೊಫೋನ್ಗಳಿಗೆ ಪ್ರವೇಶವನ್ನು ಒದಗಿಸಲು ಅನುಮತಿ ಕೊಡಲು ಕೇಳುತ್ತವೆ. ಅಂತಹ ಪ್ರವೇಶ ಅಗತ್ಯವಿಲ್ಲದಿದ್ದರೂ ಸಹ, ವೈಯಕ್ತಿಕ ಮಾಹಿತಿಗಳನ್ನೂ ಶೇಖರಿಸುತ್ತಿವೆ ಎಂದು ಒಂದು ಅಧ್ಯಯನ ಪತ್ತೆ ಮಾಡಿದೆ.
ಅಸಲಿಗೆ ಈ ಮಾಹಿತಿಯಿಂದ ಚೀನಾಕ್ಕೆೇನು ಉಪಯೋಗ ಎಂಬ ಸಂಗತಿಗಳನ್ನು ಹುಡುಕುತ್ತಾ ಹೋದರೆ ಅದರ ಅಸಲಿ ಆಟ ಗೊತ್ತಾಗುತ್ತದೆ. ಈ ಅಸಲಿ ಆಟ ಗೊತ್ತಿಲ್ಲದ ನಮ್ಮ ಹುಡುಗರು ಟಿಕ್ ಟಾಕ್ ಮಾಡುತ್ತಾ ಕುಣಿದಿದ್ದೇ ಕುಣಿದಿದ್ದು.
ಮೊದಲನೇ ರೀತಿ :
ಚೀನೀ ಆ್ಯಪ್ಸ್ ಗಳು ನಿಮ್ಮ ಮೊಬೈಲ್ ನಲ್ಲಿ ದಾಖಲಾಗುವ, ಹೆಸರು, ವಯಸ್ಸು, ಮೊಬೈಲ್ ಸಂಖ್ಯೆ, ನಿಮ್ಮ ಕಾಂಟಾಕ್ಟ್ ಡೀಟೇಲ್ಸ್, ನಿಮ್ಮ ಬ್ಯಾಂಕ್ ಅಪ್ಲಿಕೇಶನ್ಸ್ ಗಳ ಮಾಹಿತಿಗಳನ್ನು ಸಂಗ್ರಹಿಸುತ್ತವೆ. ನೀವು ಯಾವುದಾದರೂ ಸೈಟ್ ಅಥವಾ ಆ್ಯಪ್ ಮೂಲಕ ತರಿಸಿದ ಸಾಮಗ್ರಿಗಳ ಸಾರಾಂಶವನ್ನು ನಿಮಗೆ ಗೊತ್ತಿಲ್ಲದೆ ಪಟ್ಟಿ ಮಾಡಿಕೊಳ್ಳುತ್ತವೆ. ನಿಮ್ಮ ತಿಂಗಳ ಹಣ ಖರ್ಚು ಮಾಡುವ ವಿಧಾನ, ನೀವು ಯಾವ ಯಾವ ಸ್ಥಳಗಳಲ್ಲಿ ಸಂಚಾರ ಮಾಡಿದ್ದೀರಾ? ಈ ರೀತಿಯ ಎಲ್ಲಾ ಮಾಹಿತಿಗಳನ್ನು ತೆಗೆದುಕೊಂಡು ಅದಕ್ಕೆ ತಕ್ಕಂತೆ ವಸ್ತುಗಳನ್ನು ತಯಾರಿಸಿ ಅದನ್ನುಭಾರತಕ್ಕೆ ಶಿಪ್ ಮಾಡುತ್ತದೆ . ಇದರಿಂದ ಚೀನಾ ಉತ್ಪಾದಕರು ಒತ್ತಡವಿಲ್ಲದೆ, ಹೆಚ್ಚಿನ ವಸ್ತುಗಳನ್ನು ತಯಾರಿಸಿ ಕಡಿಮೆ ವೆಚ್ಚದಲ್ಲಿ ಹೆಚ್ಚುಲಾಭ ಮಾಡಿಕೊಳ್ಳುತ್ತಾರೆ.
ಎರಡನೇ ರೀತಿ:
ಚೀನೀ ಆಪ್ಸ್ ಗಳಲ್ಲಿ ಸಿಗುವ ಮಾಹಿತಿ ಆಧರಿಸಿ ಸಂಗ್ರಹಿಸುವ ಪರ್ಸನಲ್ ದತ್ತಾಂಶಗಳನ್ನ ಬೇರೆಯವರಿಗೆ ಮಾರಾಟಮಾಡಿ ಅದರಿಂದ ಹಣ ಸಂಗ್ರಹಿಸುವುದು. ಚೀನೀ ಆಪ್ ಗಳಲ್ಲಿ ಹೆಚ್ಚಿನವು ಮಕ್ಕಳು ಉಪಯೋಗಿಸುವ ಗೇಮಿಂಗ್ ಆಪ್ಸ್ . ಅದರ ಮುಖಾಂತರ ಮಕ್ಕಳ ಮನಸನ್ನ ಓದಿನಿಂದ ಹೆಚ್ಚು ಹೆಚ್ಚು ಆಟವಾಡುವ ರೀತಿಯಲ್ಲಿ ಬದಲಿಸುವುದು. ಜೊತೆೆಗೆ
ಹದಿ ಹರೆಯದವರ ಮಾಹಿತಿ ಪಡೆದು, ಅವರಿಗೆ ಬೇಡವಾಗಿದ್ದರೂ ವಯಸ್ಕರ ವಿಷಯಗಳನ್ನು ಸೇರಿಸಿ ಅವರು ಉಪಯೋಗಿಸುವ ಆಪ್ ಗಳಲ್ಲಿ ತುರುಕುವುದು.
ಇದರ ಪರಿಣಾಮ ಸದ್ಯಕ್ಕೆ ಗೊತ್ತಾಗದಿದ್ದರೂ ಮುಂದೆ ಮಕ್ಕಳ, ಯುವಕರ ಹಾಗು ಪ್ರತಿಯೊಬ್ಬ ಬಳೆಕೆದಾರರ ಮನಸ್ಸಿನ ಮೇಲೆ ಆಗುವ ಪರಿಣಾಮ ಅಗಾಧ.
ಚೀನಿ ವಸ್ತುಗಳು ಅಷ್ಟು ಕಡಿಮೆ ಬೆಲೆಗೆ ಸಿಗುವುದಾದರೂ ಯಾಕೆ? ಹೆಚ್ಚು ಗ್ರಾಹಕರು ಇದ್ದಾಗ ಹೆಚ್ಚು ಉತ್ಪಾದನೆ ಅದರಂತೆ ಹೆಚ್ಚು ಲಾಭ!. ಈ ಸೂತ್ರದಮೇಲೆ ಚೀನೀ ಸರ್ಕಾರ ಕೆಲಸ ಮಾಡುತ್ತಿದೆ.
ದೇವರೇ ಓದಿದಾಗ ನಿಜವಾಗಿ ಅಚ್ಚರಿಯಾಯಿತು. ಭಯವೂ ಆಯಿತು. ಯಾವುದು ಉಪಯೋಗಿಸಬೇಕೋ ಯಾವುದು ಬೇಡವೋ ತಿಳಿಯೋದು ಹೇಗೆ. ಸಾಮಾನ್ಯ ಜನರಿಗೆ. ಲೇಖಕರಿಗೆ ವಂದನೆಗಳು